X

ಉಚಿತವಾಗಿ ಆಂಬುಲೆನ್ಸ್ ಸರ್ವೀಸ್ ನೀಡುವ ಕರೀಮುಲ್ಲಾ ಹಕ್ ನನ್ನು ನೋಡಿದ ಕೂಡಲೇ ಮೋದಿ ಮಾಡಿದ್ದೇನು ಗೊತ್ತೇ?! ದಿಗ್ಭ್ರಮೆಗೊಳಿಸಿತ್ತು ಮೋದಿಯ ನಡೆ!

ಪ್ರತೀ ವರುಷ, ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಯ ಭವನದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ! ವಿಜೃಂಭಣೆಯಿಂದ ನಡೆಯುವ ಸಂಭ್ರಮಕ್ಕೆ, ಬಹುತೇಕ ಸಂಸದರು, ಮಂತ್ರಿಗಳು, ಪದ್ಮಶ್ರೀ ವಿಜೇತರು ಸೇರುತ್ತಾರೆ! ವರ್ಷಕ್ಕೊಮ್ಮೆ ನಡೆಯುವ ಈ ಸಂಭ್ರಮಾಚರಣೆಯೆನ್ನುವುದು ಘನತೆ ಗೌರವದ ಪ್ರತೀಕ!

ಯಾವಾಗ, ಮೋದಿ ಪ್ರಧಾನಿಯಾದರೋ, ಇಡೀ ಕಾರ್ಯಕ್ರಮದಲ್ಲಿ.ಮೋದಿಯೇ ಕಂಗೊಳಿಸತೊಡಗಿದರು! ಮೋದಿ ಕಾಣಲು ಸಿಗುತ್ತಾರೆಂಬುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಣವಾಯಿತು! ಸಾಮಾನ್ಯವಾಗಿ, ಸುರಕ್ಷತಾ ಪ್ರೋಟೋಕಾಲ್ ಗಳನ್ನೆಲ್ಲ ಇಂತಹ ಸಂದರ್ಭದಲ್ಲಿ ಪ್ರಧಾನಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲರೊಂದಿಗೂ, ಸಾಮಾನ್ಯರಂತಿದ್ದು ಬಿಡುತ್ತಾರೆ ಮೋದಿ!

ಈ ಬಾರಿಯೂ ಸಹ, ಪದ್ಮಶ್ರೀ ವಿಜೇತರ ಜೊತೆ ಮಾತು ಕಥೆ ನಡೆಸುತ್ತ, ಅಭಿಮಾನಿಸುತ್ತ ನಿಂತಿದ್ದ ಮೋದಿಗೆ ತಕ್ಷಣವೇ ಒಬ್ಬ ಪದ್ಮಶ್ರೀ ವಿಜೇತರೊಬ್ಬರು ಕಣ್ಣಿಗೆ ಕಂಡಿದ್ದಾರೆ! ಅವರೇ ಕರೀಮುಲ್ ಹಕ್! ಪಶ್ಚಿಮ ಬಂಗಾಳದಲ್ಲಿ ಉಚಿತವಾಗಿ ಆಂಬುಲೆನ್ಸ್ ನ ಸೇವೆ ನೀಡುವವರು!

ಹಾ! ಕರೀಮುಲ್ ಹಕ್ ಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದೇ ಒಂದು ವಿಶೇಷ ಕಾರಣಕ್ಕಾಗಿ! ಕಳೆದ ಅದೆಷ್ಟೋ ವರ್ಷಗಳಿಂದ ಹಳ್ಳಿಯ ಜನರಿಗೆ ಉಚಿತವಾಗಿ ಆಂಬುಲೆನ್ಸ್ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಕರೀಮುಲ್!

ಪಶ್ಚಿಮ ಬಂಗಾಳದ ಜಲ್ ಪಾಯಿಗುರಿ ಜಿಲ್ಲೆಯ ಧಾಲಾಭರಿ ಹಳ್ಳಿಯಲ್ಲಿ ಕರೀಮುಲ್ಲ ‘ಬೈಕ್ ಆಂಬುಲೆನ್ಸ್ ದಾದಾ’ ಎಂದೇ ಪರಿಚಿತರಾಗಿರುವವರು! 50 ವರ್ಷ ವಯಸ್ಸಿನ ಕರೀಮುಲ್ಲ, ಟೀ ಮಾರುವವರು! ಆದರೆ, ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದೇ ಇರುವ ಕಾರಣದಿಂದ ಉಚಿತವಾಗಿ ಬೈಕ್ ಆಂಬುಲೆನ್ಸ್ ಸೇವೆ ಆರಂಭಿಸಿದವರು! ಕರೀಮುಲ್ಲಾರ ಹಳ್ಳಿಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ
ಹಳ್ಳಿಯ ಜನರು ಸಾವನ್ನಪ್ಪುವಾಗ, ಕರೀಮುಲ್ಲರು ತಮ್ಮ ಬೈಕನ್ನೇ ಆಂಬುಲೆನ್ಸಾಗಿ ಪರಿವರ್ತಿಸಿ ಬಿಟ್ಟರು!

ಕರೀಮುಲ್ಲರವರು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು! “ನನ್ನ ತಾಯಿಯೂ ಕೂಡ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ನರಳಾಡಿದ್ದಳು. ಸಹಾಯಕ್ಕೆ ಕಂಡವರ ಮನೆ ಬಾಗಿಲು ಬಡಿದರೂ ಪ್ರಯೋಜನವಾಗಿರಲಿಲ್ಲ!”

ಯಾವತ್ತೂ , ಒಂದು ಹೊಸದಾದ ಬದಲಾವಣೆ ಪ್ರಾರಂಭವಾಗುವುದು ಒಂದೇ ಹೆಜ್ಜೆಯಿಂದ! ಅದೇ ರೀತಿ ಕರೀಮುಲ್ಲಾರೂ ಕೂಡ! ಹಳ್ಳಿಯಲ್ಲಿ ಹೊಸ
ಬದಲಾವಣೆಯಾಗಬೇಕೆಂದು ಯೋಚಿಸಿದ್ದೇ ತಮ್ಮದೇ ಬೈಕನ್ನು ಆಂಬುಲೆನ್ಸಾಗಿ ಪರಿವರ್ತಿಸಿದ್ದಾರೆ!

ಇಂತಹ,ಎಲೆ ಮರೆ ಕಾಯಿಯಂತಹವರನ್ನು ಗುರುತಿಸುತ್ತದೆ ಮೋದಿ ಸರಕಾರ!

ಹಾ! ಮೋದಿ ಸರಕಾರ, ಕರೀಮುಲ್ಲಾರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, 2017 ರ ಸಾಲಿನ ಪದ್ಮಶ್ರೀ ವಿಜೇತರಾಗಿ ಘೋಷಿಸಿದೆ! ನೆನ್ನೆ ರಾಷ್ಟ್ರಪತಿ
ಭವನದಲ್ಲಿ ಯಾವಾಗ ಮೋದಿ ಕರೀಮುಲ್ಲರನ್ನು ನೋಡಿದರೋ, ಗುರುತಿಸಿ ಹತ್ತಿರ ಹೋಗಿ ಮಾತನಾಡಿಸಿದ್ದಾರೆ! ಕರೀಮುಲ್ಲ ಹಕ್ ರು ಮೋದಿಯ ಜೊತೆ ಒಂದು ಸೆಲ್ಫೀ ತೆಗೆದುಕೊಳ್ಳಬೇಕೆಂದು ಆಶಿಸಿ, ಸೆಲ್ಫೀ ತೆಗೆಯಲು ಹೋದಾಗ ಮೊಬೈಲಿನಲ್ಲಿ ಸರಿಯಾಗಿ ಹಕ್ ರವರಿಗೆ ಕ್ಲಿಕ್ಕಿಸಲು ಬರದೇ, ಕೊನೆಗೆ ಮೋದಿಯವರೇ ಸ್ವತಃ ಹಕ್ ರ ಫೋನಿನಿಂದ ಚೆಂದದ ಸೆಲ್ಪೀ ಕ್ಲಿಕ್ಕಿಸಿದ್ದಾರೆ!

ದೀರ್ಘ ಚರ್ಚೆ ನಡೆಸುತ್ತ ನಿಂತಿದ್ದ ಮೋದಿಯನ್ನು ನೋಡಿ ಎಲ್ಲರಿಗೆ ಆಶ್ಚರ್ಯವೋ ಆಶ್ಚರ್ಯ!

ಹಕ್ ಏನು ಹೇಳಿದರು ಗೊತ್ತಾ? !

“ನನಗೆ ಪ್ರಧಾನಿಯ ಜೊತೆಗೊಂದು ಸೆಲ್ಫೀ ಬೇಕಿತ್ತು. ಆದರೆ, ನನಗೆ ಫೋನು ಬಳಸಿ.ಅಷ್ಟಾಗಿ ಗೊತ್ತಿಲ್ಲ. ಪ್ರಧಾನಿ ಮೋದಿಯೇ ನನ್ನ ಫೋನಿನಲ್ಲಿ ಒಂದು
ಸೆಲ್ಫೀ ಕ್ಲಿಕ್ಕಿಸಿ ಕೊಟ್ಟರು! ಅದಾದ ನಂತರ, ತಕ್ಷಣವೇ ನನ್ನ ಆಂಬುಲೆನ್ಸ್ ಸರ್ವೀಸ್ ಬಗ್ಗೆ ವಿಚಾರಿಸಿದರು. ನನ್ನ ಊರಿನಿಂದ ಬೇರೆ ಬೇರೆ ಊರಿಗೆ ಹೋಗಲು ಅನುಕೂಲವಾಗುವ ಸೇತುವೆಯೊಂದರ ನಿರ್ಮಾಣ ಮಾಡಲಾಗಿದೆಯಾ ಎಂದು ವಿಚಾರಿಸಿದರು.. ನಮ್ಮ ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಬೆಳೆಸಲು ಅನುಕೂಲವಾಗುತ್ತದೆ ಎಂದೆ! ಅತೀ ಶೀಘ್ರದಲ್ಲಿ ನಿರ್ಮಾಣಕ್ಕೆ ವ್ಯವಸ್ಥೆಯಾಗುತ್ತದೆ ಎಂದು ವಚನ ನೀಡಿದರು ಮೋದಿ” ಎಂದಿದ್ದಾರೆ ಕರೀಂಮುಲ್ಲ ಹಕ್!

ಅದಲ್ಲದೇ, “ಅವರು ನನ್ನನ್ನು ನೆನಪಿಸಿಕೊಂಡಿದ್ದು ಬಹಳ ಖುಷಿ ತಂದಿದೆ! ನನ್ನ ಊರಿಗೆ ಸೇತುವೆಯೂ ಬೇಗ ನಿರ್ಮಾಣವಾಗಲಿದೆ ಎಂಬ ಪೂರ್ಣ ಭರವಸೆ ಇದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಕರೀಂ!

ನಿಜಕ್ಕೂ ಇಂತಹ ಚಿಕ್ಕ ಚಿಕ್ಕ ಘಟನೆಗಳೆಲ್ಲ ತೀರಾ ಖುಷಿ ಕೊಡುವುದು ಅದರಲ್ಲಡಗಿದ ನಿಷ್ಕಲ್ಮಶತೆಯ ಭಾವದಿಂದಾಗಿಯಷ್ಟೇ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post