X

ಏಷ್ಯಾದಲ್ಲೇ ಅತೀ ಉದ್ದವಾದ ಸುರಂಗ ರಸ್ತೆಯ ಬೆನ್ನಲ್ಲೇ ಮೋದಿ ಸರ್ಕಾರ ಇನ್ನೊಂದು ಸುರಂಗ ಮಾರ್ಗಕ್ಕೆ ನೀಡಿದೆ ಗ್ರೀನ್ ಸಿಗ್ನಲ್!!

ಭಾರತದ ಚೊಚ್ಚಲ ವಿಶ್ವದರ್ಜೆಯ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಏಷ್ಯಾದ ಮೊದಲ ದ್ವಿಮುಖ ಪಥದ ಸುರಂಗ ಮಾರ್ಗವನ್ನು ಲೋಕರ್ಪಣೆ ಮಾಡಿದ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲೇಹ್ ನಡುವೆ ಸರ್ವಋತು ರಸ್ತೆ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಹೌದು… ಏಷ್ಯಾದಲ್ಲೇ ಅತೀ ಉದ್ದವಾದ ರಸ್ತೆ ಸುರಂಗ ಮಾರ್ಗವನ್ನು ಭಾರತದಲ್ಲಿ ಈಗಾಗಲೇ ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವಾಗಿದ್ದಲ್ಲದೇ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ 286 ಕಿಮೀ ಉದ್ದದ ಚತುಷ್ಪಥ ರಸ್ತೆ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡಿತ್ತು. ಆದರೆ ಇದೀಗ ನರೇಂದ್ರ ಮೋದಿಯ ಸರ್ಕಾರವು ಇನ್ನೊಂದು ಸುರಂಗ ಮಾರ್ಗದ ಮಹತ್ತರವಾದ ಯೋಜನೆಯನ್ನು ಕೈಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ!!

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲೇಹ್ ನಡುವೆ ಸರ್ವಋತು ರಸ್ತೆ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾದ ಜೋಜಿಲಾ ಪಾಸ್ ಸುರಂಗ ನಿರ್ಮಾಣ ಯೋಜನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 6809 ಕೋಟಿ ರೂಪಾಯಿಗಳ ಈ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೇ, ಈ ಸುರಂಗ ಮಾರ್ಗವು 14.2 ಉದ್ದ ಇರಲಿದ್ದು, ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿರಲಿದೆ ಎನ್ನುವ ವಿಚಾರವು ಇದೀಗ ತಿಳಿದು ಬಂದಿದೆ!!

ಹಾಗಾಗಿ ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಜೋಜಿಲಾ ಪಾಸ್ ಅನ್ನು ಕೇವಲ 15 ನಿಮಿಷಗಳಲ್ಲಿ ದಾಟಬಹುದಾಗಿದೆ. ಅಷ್ಟೇ ಅಲ್ಲದೇ, ಈ ಮೊದಲು ಜೋಜಿಲಾ ಪಾಸ್ ದಾಟಲು 3 ರಿಂದ 4 ಗಂಟೆ ಸಮಯ ಬೇಕಾಗುತ್ತಿತ್ತು ಎಂದು ಕೇಂದ್ರ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗಾಗಿ ಈ ಯೋಜನೆಯಿಂದಾಗಿ ಜೋಜಿಲಾ ಪಾಸ್ ದಾಟಲು ಕೆಲವೇ ಕೆಲವು ನಿಮಿಷಗಳಲ್ಲಿ ಇನ್ನು ಮುಂದೆ ಸಾಧ್ಯವಾಗಲಿದ್ದು, ಮುಂಬರುವ ಅಡೆ ತಡೆಗಳಿಗೆ ಪೂರ್ಣವಿರಾಮ ಬೀಳಲಿರುವುದಂತೂ ಖಂಡಿತಾ….

ಈಗಾಗಲೇ ಭಾರತದ ಚೊಚ್ಚಲ ವಿಶ್ವದರ್ಜೆಯ ಸುರಂಗ ಎಂಬ ಖ್ಯಾತಿಗೆ ಪಾತ್ರರಾಗಿರುವ ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವು ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ ಎನ್ನುವುದು ತಿಳಿದ ವಿಚಾರ.

ಆದರೆ, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲೇಹ್ ನಡುವೆ ಸರ್ವಋತು ರಸ್ತೆ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿರುವ ಮೋದಿ ಸರ್ಕಾರವು ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಜೋಜಿಲಾ ಪಾಸ್ ಇನ್ನು ಮುಂದೆ ಕೇವಲ 15 ನಿಮಿಷಗಳಲ್ಲಿ ದಾಟ ಬಹುದಾಗಿದೆ. ಈ ಮೊದಲು ಜೋಜಿಲಾ ಪಾಸ್ ದಾಟಲು 3 ರಿಂದ 4 ಗಂಟೆ ಸಮಯ ಬೇಕಾಗಿದ್ದು, ಇನ್ನು ಮುಂದೆ ಯಾವುದೇ ಸಮಯದಲ್ಲಿ ಬೇಕಾದರೂ ಅತೀ ಬೇಗನೇ ತಲುಪಬಹುದಾಗಿದೆ.

ಇನ್ನು, ಶ್ರೀನಗರ ಮತ್ತು ಲೇಹ್ ನಡುವಿನ ಹೆದ್ದಾರಿಯು ಚಳಿಗಾಲದಲ್ಲಿ ಜೋಜಿಲಾ ಪಾಸ್ ಬಳಿ ಭಾರೀ ಹಿಮಪಾತದಿಂದಾಗಿ ವರ್ಷದ 5 ತಿಂಗಳು ಮುಚ್ಚಲ್ಪಟ್ಟಿರುತ್ತದೆ. ಇದರಿಂದಾಗಿ ಕಾರ್ಗಿಲ್ ಸೇರಿದಂತೆ ಲಡಾಕ್ ನ ಇತರ ಪ್ರದೇಶಗಳು ರಾಜಧಾನಿಯಿಂದ ಸಂಪರ್ಕ ಕಳೆದುಕೊಳ್ಳುತ್ತವೆ. ಸೇನೆ ಕಾರ್ಗಿಲ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ವಾಯು ಮಾರ್ಗವನ್ನು ಮಾತ್ರ ನೆಚ್ಚಿಕೊಳ್ಳಬೇಕಿದೆ.

6809 ಕೋಟಿ ರೂಪಾಯಿಗಳ ಈ ಯೋಜನೆಯ ಈ ಸುರಂಗ ಮಾರ್ಗವು 14.2 ಉದ್ದ ಇರಲಿದ್ದು, ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿರಲಿದೆ. ಅಷ್ಟೇ ಅಲ್ಲದೇ, ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಜೋಜಿಲಾ ಪಾಸ್ ಅನ್ನು ಕೇವಲ 15 ನಿಮಿಷಗಳಲ್ಲಿ ದಾಟಬಹುದು ಅನ್ನೋದೇ ಸಂತಸದ ವಿಚಾರ!!

– ಅಲೋಖಾ

Editor Postcard Kannada:
Related Post