X

ಕರುನಾಡಿನ ವೀರವನಿತೆಯರಾದ ರಾಣಿ ಚೆನ್ನಮ್ಮ, ಒನಕೆ ಓಬವ್ವಳಂತಹ ಕೆಚ್ಚೆದೆಯ ಸೇನಾನಿಗಳನ್ನ ಅವಮಾನಿಸಿ ಚಿತ್ರ ತೆಗೆದರೆ ಕನ್ನಡ ಚಿತ್ರರಂಗಕ್ಕೆ ಕೋಪ ಬರಲ್ವಾ? ರಾಣಿ ಪದ್ಮಿನಿಯ ಕಥೆಯೂ ಅದೇ ಆಗಿದೆ!!!

ಕರುನಾಡಿನ ವೀರವನಿತೆಯರಾದ ರಾಣಿ ಚೆನ್ನಮ್ಮ, ಒನಕೆ ಓಬವ್ವಳಂತಹ ಕೆಚ್ಚೆದೆಯ ಸೇನಾನಿಗಳನ್ನ ಅವಮಾನಿಸಿ ಅಥವ ಅವರ ಚಾರಿತ್ರ್ಯವಧೆ ಮಾಡುವಂತ ಚಿತ್ರವನ್ನ ಮಾಡಿದರೆ ಕನ್ನಡ ಚಿತ್ರರಂಗಕ್ಕೆ ಕೋಪ ಬರಲ್ವಾ?

ಹೀಗೊಂದು ಕನ್ನಡ ಚಲನಚಿತ್ರವನ್ನ ಮಾಡೋ ತಾಕತ್ತು ಕನ್ನಡ ಚಿತ್ರರಂಗಕ್ಕಿದೆಯಾ?

ಹೀಗೇನಾದರೂ ಚಿತ್ರ ನಿರ್ಮಾಣ ಮಾಡಿದರೆ ಚಿತ್ರ ನಿರ್ಮಾಪಕನ ಮನೆಯ ಸಮೇತ ಚಿತ್ರತಂಡವನ್ನೂ ಕನ್ನಡಿಗರು ಸುಟ್ಟು ಹಾಕ್ತಾರೆ.

ರಾಣಿ ಚೆನ್ನಮ್ಮ ದೇಶಕ್ಕಾಗಿ ಬ್ರಿಟಿಷರ ಜೊತೆ ಕಾದಾಡಿ ವೀರಮರಣವನ್ನಪ್ಪಿದ ವೀರ ಮಹಿಳೆ, ಒನಕೆ ಓಬವ್ವ ಶತ್ರು ಚಿತ್ರದುರ್ಗ ಕೋಟೆಯಲ್ಲಿ ಕೋಳಿಯನ್ನ ಕತ್ತರಿಸಿದ ಹಾಗೆ ಹೈದರಾಲಿಯ ಸೈನ್ಯದ ರುಂಡ ಚಂಡಾಡಿದ್ದ ವೀರವನಿತೆಯಾಗಿದ್ದಳು.

ಆದರೆ ಅವರ ಬಗ್ಗೆ ಕೆಟ್ಟದಾಗಿ ಅಥವ ಚಾರಿತ್ರ್ಯವಧೆಯಾಗುವಂತಹ ಕನ್ನಡ ಸಿನೆಮಾ ಮಾಡಿದರೆ ಚಿತ್ರ ತಂಡದ ಜೊತೆ ಜೊತೆಗೆ ಥಿಯೇಟರ್ ಗಳೂ ಬೆಂಕಿಗಾಹುತಿಯಾಗಿಬಿಡ್ತಾವೆ.

ಯೆಸ್, ಈ ವಿಷ್ಯ ಈಗ್ಯಾಕೆ ಪ್ರಸ್ತಾಪ ಮಾಡ್ತಿದೀನಿ ಅನ್ಕೊಂಡ್ರಾ? ಇವತ್ತು ಪೇಪರ್ ಓದ್ತಿರಬೇಕಾದ್ರೆ ಕನ್ನಡ ಚಿತ್ರರಂಗದ ಕುರಿತಾದ ಒಂದು ಸುದ್ದಿ ನೋಡ್ದೆ, ಆ ಸುದ್ದಿಯಲ್ಲಿ “ಪದ್ಮಾವತಿ ಚಿತ್ರ ಬಿಡುಗಡೆಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ನೀಡುತ್ತದೆ. ಅಗತ್ಯಬಿದ್ದಲ್ಲಿ ದಿನವಿಡೀ ಚಿತ್ರೀಕರಣ ಸ್ಥಗಿತಗೊಳಿಸಲು ಸಿದ್ಧರಿದ್ದೇವೆ” ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಹೇಳಿಕೆಯೊಂದನ್ನ ನೀಡಿದ್ದರು.

ಅರೇ ಗೋವಿಂದು!! ನಿಮಗೆ ರಾಣಿ ಪದ್ಮಾವತಿಯ ಇತಿಹಾಸವಾದರೂ ಗೊತ್ತಾ? ಅಲ್ಲಾವುದ್ದೀನ್ ಖಿಲ್ಜಿ ಎಂಥಾ ಮತಾಂಧ, ವಿಕೃತಕಾಮಿ, ಸಲಿಂಗಕಾಮಿ ಆಗಿದ್ದ ಅನ್ನೋದರ ಇತಿಹಾಸದ ಅರಿವಾದರೂ ಇದೆಯಾ?

ನಿಮಗೆಲ್ಲಾ ಚಿತ್ರ ಮಾಡಿ ದುಡ್ಡು ಮಾಡೋದಷ್ಟೇ ಗೊತ್ತು.. ಆದರೆ ಇತಿಹಾಸದ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲ ಅನ್ನೋದು ನಿಮ್ಮ ಸ್ಟೇಟಮೆಂಟ್ ನೋಡಿದರೇ ಗೊತ್ತಾಗುತ್ತೆ.

ನಿಮ್ಮ ಚಿತ್ರರಂಗಕ್ಕಾಗಿ ನಮ್ಮ ಕಡೆಯಿಂದ ಇತಿಹಾಸದ ಪಾಠ ಮಾಡಸ್ತೀವಿ ಕೇಳಿ!!

ಕ್ರೂರತೆ, ಕ್ರೂರ ಭಯೋತ್ಪಾದನೆ, ಭಯೋತ್ಪಾದಕ, ಸಲಿಂಗಕಾಮಿ, ವಿಕೃತ ಕಾಮಿ ಅಲ್ಲಾವುದ್ದೀನ್ ಖಿಲ್ಜಿ ಬಗ್ಗೆ ಅಧ್ಯಯನ ಮಾಡುವಾಗ ಮುಖ್ಯವಾಗಿ ಮೂವರು ಹಿಂದೂ ಮಹಿಳೆಯರ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು.

1. ಕಮಲಾದೇವಿ — ಗುಜರಾತ್ ನ ರಾಜ ಕರ್ಣದೇವನ ಪಟ್ಟದರಸಿ. ಅಲ್ಲಾವುದ್ದೀನ್ ನ ಗುಜರಾತ್ ದಂಡಯಾತ್ರೆಯಲ್ಲಿ ರಾಜ ಕರ್ಣದೇವನನ್ನು ಸೋಲಿಸಿದ. ಅಲ್ಲದೇ ಜೊತೆಗೆ ಅವನ ಹೆಂಡತಿ ಕಮಲಾದೇವಿಯನ್ನು ಸೆರೆಹಿಡಿಯಲಾಯ್ತು. ಆದ್ರೆ ಕರ್ಣದೇವ ತನ್ನ ಪುತ್ರಿ ದೇವಲದೇವಿ ಯ ಜೊತೆ ಪರಾರಿಯಾಗಿ ದೇವಗಿರಿಯ ರಾಜ ರಾಮಚಂದ್ರ ದೇವ ನ ಹತ್ರ ಆಶ್ರಯ ಪಡೆದ..

ಯಾವಾಗಲೂ ಮಹಿಳೆಯರನ್ನು ಭೋಗದ ವಸ್ತುವಾಗಿ ನೋಡುತ್ತಿದ್ದ ಈ ಖಿಲ್ಜಿ ಈ ಅಪ್ರತಿಮ ಸುಂದರಿಯಾಗಿದ್ದ ಕಮಲಾದೇವಿಯನ್ನು ತನ್ನ ಜನಾನ/ಹರಾಮ್ ಗೆ ಕಳುಹಿಸುವ ಆದೇಶವನ್ನು ನೀಡಿದ್ದ.

ಯಾವ ಪಾಪವೋ, ಕೆಟ್ಟ ಘಳಿಗೆಯೋ, ಈ ಕಮಲಾದೇವಿ ತನ್ನ ಆತ್ಮ, ಜೀವನದ ಮೌಲ್ಯಕ್ಕಿಂತ, ಗೌರವಕ್ಕಿಂತ, ಪ್ರಾಣಕ್ಕೆ ಹೆಚ್ಚು ಬೆಲೆ ಕೊಟ್ಟು ಯಾವುದೇ ಪ್ರತಿರೋಧ ತೋರದೆ ಸ್ವತಃ ಅಲಾವುದ್ದೀನ್ ಗೆ ತನ್ನಷ್ಟಕ್ಕೆ ತಾನು ಅರ್ಪಿಸಲು ಸಿದ್ಧಳಾದಳು. ಹರ್ಷಗೊಂಡ ಖಿಲ್ಜಿ ಅವಳನ್ನು ಮಲ್ಲಿಕಾ ಎಂದು ಹೆಸರು ಬದಲಿಸಿ ತನ್ನ ಜನಾನಾದಲ್ಲಿ ಇಟ್ಟುಕೊಂಡ.

2. ದೇವಲದೇವಿ — ಕರ್ಣದೇವ ಹಾಗೂ ಕಮಲಾದೇವಿಯ ಅಪ್ರತಿಮ ಸುಂದರ ಪುತ್ರಿ. ಕರ್ಣದೇವ, ತನ್ನ ಸೋಲಿನ ನಂತರ, ಪುತ್ರಿಯ ಜೊತೆ ದೇವಗಿರಿಯ ಅರಸ ರಾಕ್ಮಚಂದ್ರ ದೇವ ನ ಹತ್ತಿರ ಆಶ್ರಯ ಪಡೆದಿದ್ದ. ಮುಂದೆ ತನ್ನ ಮಗಳನ್ನು, ರಾಮಚಂದ್ರ ದೇವನ ಪಿತೃ ಶಂಕರದೇವನ ಜೊತೆಗೆ ಮದುವೆ
ಮಾಡಿಕೊಟ್ಟ. ದೇವಳದೇವಿ ಶಂಕರದೇವನ ಜೊತೆ ಚೆನ್ನಾಗಿಯೇ ಇದ್ಲು.

ಇತ್ತ ಖಿಲ್ಜಿಯ ಜನಾನದಲ್ಲಿ ಇದ್ದ ಕಮಲಾದೇವಿ, ಪುತ್ರಿಯನ್ನು ಕಾಣಬೇಕು ಎಂಬ ಹಂಬಲವೋ ಅಥವಾ ತಾನು ಖಿಲ್ಜಿಯ ಮೇಲೆ ಪ್ರಭುತ್ವ, ಅಬ್ಯಾನ ಆತ್ಮವಿಶ್ವಾಸ ಗಳಿಸಲೋ ಏನೋ, ಅಲ್ಲವುದ್ದೀನ್ ಖಿಲ್ಜಿ ಗೆ ಪುತ್ರಿಯ ಸೌಂದರ್ಯದ ಬಗ್ಗೆ, ಅವಳ ಅಸ್ತಿತ್ವ ಹಾಗೂ ಇರುವಿಕೆ ನಗ್ಗೆ ಸವಿಸ್ತೃತವಾಗಿ ಎಲ್ಲವನ್ನೂ ಹೇಳಿಕೊಂಡಳು. ಇದನ್ನು ಕೇಳಿದ ಖಿಲ್ಜಿ ತನ್ನ ದಂಡನಾಯಕ ಮಲ್ಲಿಕಾಫುರ್(ಇವನನ್ನ ಗುಜರಾತ್ ದಾಳಿಯಲ್ಲಿ ಸೆರೆಹಿಡಿದು ನಪುಂಸಕ ಮಾಡಲಾಗಿತ್ತು. ಈ ಮೂಲತಃ ಬ್ರಾಹ್ಮಣನಾಗಿದ್ದ)ನನ್ನ ಕಳಿಸಿದ..

ಈ ಆಕ್ರಮಣದ ನಂತರ ದೇವಗಿರಿ ಖಿಲ್ಜಿ ಸೈನ್ಯಕ್ಕೆ ಸೋಲುಣಬೇಕಾಯಿತು.. ದೇವಲದೇವಿಯನ್ನು ಸೆರೆಹಿಡಿದು ಖಿಲ್ಜಿಯ ಜನಾನಾಗೆ ತರಲಾಯ್ತು.

ಅಪ್ರತಿಮ ಸುಂದರಿಯಾಗಿದ್ದ ದೇವಲದೇವಿಯನ್ನು ಬಲವಂತವಾಗಿ ಇಸ್ಲಾಂ ಗೆ ಮತಾಂತರ ಮಾಡಿ, ಖಿಲ್ಜಿ ತನ್ನ ಮಗನಾದ ಖಿಜರ್ಖಾನ್ ಜೊತೆ ಬಲವಂತವಾಗಿ ವಿವಾಹ ಮಾಡಿಕೊಡಲಾಯ್ತು.

ನೆನಪಿರಲಿ, ಇದೆ ಖಿಜರ್ಖಾನ್ ನ ಕಾರಣದಿಂದ ಜೋಹರ್ ರಾಣಿ ಪದ್ಮಿನಿ ಹಾಗೂ ಅವಳ ಸಂಗಡಿಗರು ಜೋಹಾರ್ ಅನ್ನು ಸ್ವೀಕಾರ ಮಾಡಿದ್ರು. ಇದಲ್ಲದೆ ಈ ಖಿಜರ್ಖಾನ್ 30,000 ರಾಜಪುಟರನ್ನು ಕೊಲೆ ಮಾಡಿದ್ದಾಗಿ, ಚಿತ್ತೋರ್ ನ ಕೋಟೆಯನ್ನು ಖಿಜಾರಾಬಾದ್ ಅಂತ ಬದಲಾವಣೆ ಮಾಡಲಾಗಿತ್ತು.

ಖಿಜರ್ಖಾನ್ ನ ಕೊಲೆಯ ನಂತರ ದುರಾದೃಷ್ಟವಶಾತ್ ದೇವಳದೇವಿ ಮತ್ತೇ ಅಲಾವುದ್ದೀನ್ ನಪುಂಸಕ ಗುಲಾಮ ಗೆಳೆಯ ಗುಲಾಮ ಮಲಿಕ್ ಕಾಫರ್ ನ ಭೋಗದ ವಸ್ತುವಾಗಿ ನಂತರ ಖಿಲ್ಜಿಯ ಇನ್ನೊಬ್ಬ ಮಗ ಮುಬಾರಕ್ ಶಾ ನ ಪತ್ನಿಯಾಗಿ ಇರಬೇಕಾಯ್ತು.

ಇಲ್ಲಿ ಒಂದು ವಿಷಯ ಗಮನಿಸಿ ಗೆಳೆಯರೇ. ಈ ಮುಸ್ಲಿಮರಿಗೆ ಹೆಣ್ಣು ಎಂದರೆ ಕೇವಲ ಭೋಗದ ವಸ್ತು. ಈ ದೇವಲದೇವಿ ಅನುಭವಿಸಿದ ಕಷ್ಟ, ಯಾತನೆ, ಮಾನಸಿಕ ತೊಳಲಾಟ, ಆ ಬೇಗುದಿ ನೆನಸ್ಕೊಂಡ್ರೆ ಹೊಟ್ಟೆ ಉರಿಯುತ್ತೆ. ಮೊದಲು ಶಾಸ್ತ್ರೋಸ್ತ್ರವಾಗಿ ಶಂಕರದೇವನ ಮದ್ವೆ ಆಗಿ ಹೆಂಡತಿ ಆಗಿದ್ದ ಇವಳು ನಂತರ ಖಿಲ್ಜಿಯ ಜನಾನ, ನಂತರ ಖಿಜರ್ಖಾನ್ ನ ಭೋಗದ ವಸ್ತು, ನಂತರ ಮತ್ತೆ ಮಲ್ಲಿಕಾಫರ್ ನ ಭೋಗಕ್ಕೆ, ನಂತರ ಮತ್ತೆ ಮುಬಾರಕ್ ಶಾಹ ನ ತೆಕ್ಕೆಗೆ. ಈ ಹೆಣ್ಣು ಇದೆಲ್ಲ ಯಾವ ಪರಿ ಸಹಿಸಿಕೊಂಡಳೋ..

ಇಷ್ಟೆಲ್ಲ ಬೇಗುದಿ ಅನುಭವಿಸಿದ ದೇವಲದೇವಿ ಖಿಲ್ಜಿಯ ಆಸ್ಥಾನದಲ್ಲಿ ಇದ್ದಿದ್ದ ಖುಸ್ರು ಖಾನ್ ಎಂಬ ನವಯುವಕ(ಹಿಂದೂ ಆಗಿದ್ದ ಈತನನ್ನು
ಮಲ್ಲಿಕಾಫರ್ ಗುಜರಾತ್ನ ದಂಡಯಾತ್ರೆಯಲ್ಲಿ ಬಲವಂತವಾಗಿ ತಂದು ಇಸ್ಲಾಂ ಗೆ ಮತಾಂತರ ಮಾಡಿ, ತನ್ನ ಜನಾನಾದಲ್ಲಿ ಇಟ್ಟುಕೊಳ್ಳಲಾಗಿತ್ತು. ಈತ ಬರಬರುತ್ತ ಮುಬಾರಕ್ ಶಾಹ್ ಗೆ ತುಂಬಾ ಆಪ್ತನಾಗಿದ್ದ, ಗೆಳೆಯನಂತೆ ಇದ್ದ).

ಇದೆಲ್ಲವನ್ನು ಅರಿತಿದ್ದ ದೇವಲದೇವಿ ಈ ಖುಸ್ರು ಖಾನ್ ಜೊತೆ ಸೇರಿ ತನ್ನೊಳಗೆ ಇದ್ದ ಆ ಸನಾತನ ಹಿಂದೂ ಧರ್ಮದ ಅಸ್ಮಿತೆಯನ್ನು ಮತ್ತೆ ಕಾಪಾಡಿಕೊಳ್ಳಲು ವ್ಯವಸ್ಥಿತವಾದ ಯೋಜನೆಯೊಂದನ್ನು ಇದೆ ಖುಸ್ರುಖಾನ್ ಜೊತೆಗೂಡಿ ಮಾಡಿದಳು.

ಈ ಖುಸ್ರುಖಾನ್ ಕೂಡ ತನ್ನ ಒಳಗಿದ್ದ ಹಿಂದುತ್ವವನ್ನು ಯಾವತ್ತೂ ಮರೆತಿರಲಿಲ್ಲ.. ಅವನಲ್ಲಿ ಆ ಸೇಡಿನ ಕಿಚ್ಚನ್ನು ಈ ದೇವಲದೇವಿ ಮತ್ತೆ ಹೊತ್ತಿಸಿದಳು..

ಈ ರೀತಿಯಾಗಿ ದೇವಲದೇವಿ ಇತ್ತ ಮುಸ್ಲಿಂ ಆಗಿ ಮುಬಾರಕ್ ಶಾಹ್ ಜೊತೆ ಸೇರಿ ಅವನ ವಿಶ್ವಾಸ ಗಳಿಸುತ್ತ, ಆಸ್ಥಾನದ ಆಡಳಿತದಲ್ಲಿ ತನ್ನ ಹಸ್ತಕ್ಷೇಪ, ಛಾಪು ಮುಡಿಸುತ್ತ, ಅತ್ತ ಹಿಂದೂ ಅಸ್ಮಿತೆ ಉಳಿಸುವತ್ತ ಖುಸ್ರುಖಾನ್ ಜೊತೆ ಸೇರಿ ಎಲ್ಲವನ್ನೂ ವ್ಯವಸ್ಥಿತವಾಗಿ ತನ್ನ ಕಾರ್ಯ ಮಾಡುತ್ತಾ ಹೋದಳು. ಅದೂ ಕೂಡ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ.

ಇತ್ತ ಒಂದು ಸರಿಯಾದ ಸಮಯ ನೋಡಿ, ಖುಸ್ರು ಖಾನ್ ದಕ್ಷಿಣದ ದಂಡಯಾತ್ರೆ ಹೊರಟು, ಅಲ್ಲಿ ಎಲ್ಲ ಹಿಂದೂ ರಾಜರುಗಳನ್ನು, ಸಾಮಂತರನ್ನು ಒಂದುಗೂಡಿಸಿ, ನಾನಿದೀನಿ ನೀವೆಲ್ಲರೂ ಒಂದು ದೊಡ್ಡ ಯುದ್ಧಕ್ಕೆ ಎಲ್ಲರನ್ನೂ ಎದಿರಿಸಲು ಸಿದ್ಧರಾಗಿ ಎಂದು ಹುರಿದುಂಬಿಸಿ ಹೇಳಹೊರಟ.

ಅತ್ತ ಮುಬಾರಕ್ ಶಾಹ್ ಗೆ ಮುಸ್ಲಿಂ ಮೌಲ್ವಿಗಳು ಖುಸ್ರುಖಾನ್ ನ ಕುತಂತ್ರಗಳ ಬಗ್ಗೆ ಚಾಡಿ ಹೇಳ್ತಾ ಹೋದ್ರು.

ಆದ್ರೆ ದೇವಲದೇವಿ ಅದನ್ನು ತನ್ನ ಚಾಣಾಕ್ಷತನದಿಂದಲೇ ನಿಭಾಯಿಸುತ್ತ ಹೋದಳು. ಪ್ರಾಣದ ಹಂಗು ತೊರೆದುಎಲ್ಲವನ್ನೂ ಮುಗಿಸಿ ಮರಳಿದ ಖುಸ್ರುಖಾನ್ ಹೇಗೋ ಅಪಾರವಾದ ಸಂಪತ್ತನ್ನು ಮುಬಾರಕ್ ಶಾ ನ ಎದುರು ಇಟ್ಟು, ಇಗೋ ನೋಡು ಇಷ್ಟೆಲ್ಲ ನಿನಗೋಸ್ಕರ ಎಂದು ಅವನನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡ.

ಇದನು ನೋಡಿದ ಮುಬಾರಕ್ ಅವನನ್ನು ಅಪ್ಪಿಕೊಂಡು, ಯಾರು ಏನೇ ಹೇಳಿದ್ರೂ ನಿನ್ನ ಮೇಲೆ ನಂಗೆ ವಿಶ್ವಾಸ ಇತ್ತು ಅಂತ ಹೇಳಿ ಸುಮ್ಮನಾದ.

ಒಂದು ಸರಿಯಾದ ಸಮಯ ನೋಡಿ, ಖುಸ್ರು ಖಾನ್ ಸಾಮ್ರಾಜ್ಯದ ಆಸ್ಥಾನದ ಅನೇಕರನ್ನು ತನ್ನ ಆತ್ಮವಿಶ್ವಾಸಕ್ಕೆ ತೆಗೆದುಕೊಂಡು, ಅನೇಕ ವಿರೋಧಿಗಳನ್ನು ಗೋಜಿಲ್ಲದೆ ಮುಗಿಸಿ, ಕೊನೆಗೊಂದು ದಿನ ಮುಬಾರಕ್ ಶಾಹ್ ನನ್ನು ಕೊಂದು ದೆಹಲಿಯ ಗದ್ದುಗೆ ಏರಿದ.

ಇವಾಗ ಮತ್ತೆ ದೆಹಲಿಯ ತಕ್ತ್(ಸಿಂಹಾಸನ) ಮತ್ತೆ ಹಿಂದೂ ರಾಣಿಯ ಕಾಲ ಕೆಳಗೆ, ತೆಕ್ಕೆಗೆ ಬಂದುಬಿಟ್ಟಿತು. ಈಗಾಗಲೇ ಎಲ್ಲರನ್ನೂ ತನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಖುಸ್ರುಖಾನ್ ನ ಈ ನಡೆಯನ್ನೂ ಯಾರೂ ಪ್ರಶ್ನಿಸಲಿಲ್ಲ.

ಮುಂದಿನ ಒಂದೂವರೆ ವರ್ಷಗಳ ಕಾಲ ಎಲ್ಲವೂ ಸ್ತಬ್ಧವಾಗಿತ್ತು. ದೇವಲದೇವಿಯ ಈ ತಂತ್ರ, ಧೈರ್ಯ ಕೆಲಸ ಮಾಡಿತ್ತು. ಅವಳನ್ನು ಎಷ್ಟೇ ಹೋಗಳಿದರೂ ಕಮ್ಮಿಯೇ.

ಆದರೆ ಅಲ್ಲಿರುವ ಮುಸ್ಲಿಮ್ ಮೌಲ್ವಿಗಳ ಕುತಂತ್ರದಿಂದ ಖುಸ್ರುಖಾನ್ ನನ್ನ ಕೊಲೆ ಮಾಡಲಾಯ್ತು. ಹೀಗೆ ದೇವಲದೇವಿಯ ಕಥೆಯೂ ಮುಗಿಯಿತು.. ಮೇಲ್ನೋಟಕ್ಕೆ ಮುಸ್ಲಿಂ ಆಗಿದ್ರೂ ಇವರಿಬ್ಬರೂ ತಮ್ಮ ಒಳಗಿದ್ದ ಹಿಂದುತ್ವದ ಜ್ವಾಲೆಯನ್ನು ಯಾವತ್ತೂ ಬಿಟ್ಟುಕೊಟ್ಟಿರಲಿಲ್ಲ.. ದೇವಲದೇವಿಯ ಅಂತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ರೆ ಅವಳ ತಾಯಿಯ ಹಾಗೆ ಪ್ರಾಣಕ್ಕಾಗಿ ತನ್ನತನವನ್ನು ಕಳ್ಕೊಳಿಲ್ಲ..

ದುರಾದೃಷ್ಟವಶಾತ್ ಅವಳ ಬಗ್ಗೆಯ ಇತಿಹಾಸ ಹೆಚ್ಚಿನ ಜನರಿಗೆ ಇನ್ನೂ ಗೊತ್ತೇ ಇಲ್ಲ.

3. ರಾಣಿ ಪದ್ಮಿನಿ — ಸತ್ತ ಶವಗಳನ್ನು ಕೂಡ ಬಿಡದೆ ಭೋಗಿಸಿ ಸಂತೋಷ ಪಡುವ ಕ್ರೌರ್ಯತೆ ಹೊಂದಿದ್ದ  ಅಲ್ಲಾವುದ್ದೀನ್ ನಂತಹ ಭಯೋತ್ಪಾದಕನ ಕೈಗೆ ಸಿಗದೆ, ಗೌರವ ಮತ್ತು ಆತ್ಮಸಮ್ಮಾನಕ್ಕೆ ಆದ್ಯತೆ ನೀಡುತ್ತಿದ್ದ ರಾಣಿ ಪದ್ಮಿನಿ, ಸೆರೆ ಸಿಕ್ಕು ಆತ್ಮಗೌರವವನ್ನು ಕಳೆದುಕೊಳ್ಳುವುದಕ್ಕಿಂತಲೂ ಈ ಜೋಹಾರ್ ಅತ್ಯುತ್ತಮ ಮಾರ್ಗ ಅಂತ ಆಯ್ಕೆ ಮಾಡಿಕೊಂಡದನ್ನು ಈ ಬನ್ಸಾಲ್, ಈ ಲಿಬರಲ್, ಪಟ್ನಾಯಕ್ ಅಂಥವರು, ಈ ಪಡುಕೋಣೆ, ಈಗಾಗಲೇ ಇಸ್ಲಾಂ ಗೆ ಮತಾಂತರ ಆಗ್ತೀನಿ ಅಂತ ಧಮಕಿ ಕೊಡ್ತಾ ಇರೋ ಈ ನಕಲಿ ರಜಪೂತ ರಣವೀರ್ ಇವರಿಗೆಲ್ಲ ಎಲ್ಲಿ ಅರ್ಥ ಆಗ್ಬೇಕು.

ನಮ್ಮ ಈ ಆಚಾರ ವಿಚಾರಗಳು, ಈ ನಮ್ಮ ಸಂಸ್ಕೃತಿ, ಅವರು ಆರಿಸಿಕೊಂಡ ಕೆಲವು ಕಠಿಣ ಮಾರ್ಗಗಳೇ ನಮ್ಮನ್ನು ಇವತ್ತಿಗೂ ಹಿಂದೂಗಳಾಗಿ ಇಲ್ಲಿ ಉಳಿಸಿದೆ. ಪ್ರಾಣಕ್ಕಿಂತ ಆತ್ಮಗೌರವ ಹೆಚ್ಚು ಎಂದು ಆ ರೀತಿ ಬದುಕಿದ ರಾಣಿ ಪದ್ಮಿನಿಯಂಥ ತಾಯಂದಿರೆ ನಮಗೆ ಆದರ್ಶ.

ಸ್ವಂತ ಲಾಭಕ್ಕಾಗಿ, ತಮ್ಮ ಮಗಳನ್ನೇ ಮಾರುವ, ಅಭಿವ್ಯಕ್ತಿ ಸ್ವಾತಂತ್ರ್ಯದ ಅಹಂನಲ್ಲಿ ಎಲ್ಲವನ್ನೂ ಮರೆತು, ತಮ್ಮನೆ ಮಾರಿಕೊಳ್ಳಲು ಸಿದ್ಧರಾಗಿರುವ, ದಿನಂಪ್ರತಿ ಸಿಕ್ಕ ಸಿಕ್ಕವರ ಜೊತೆ ಆಲೋಚನೆ, ಆಚಾರ ವಿಚಾರ, ಕೆಲವೊಮ್ಮೆ ದೇಹ ಮಾರಿಕೊಳ್ಳುವ, ಯಾವುದೇ ರೀತಿಯ ಇಂದಿನ ಲಿಬರಲ್ ವಾದಿಗಳಿಗೆ, ಕಮ್ಮಿನಿಷ್ಠರಿಗೆ ಇಂದಿಗೂ ಅರ್ಥ ಆಗೋಲ್ಲ.

ನಮಗೆ ಜೋಹರ್ ಘನತೆ ಅರ್ಥ ಆಗಿತ್ತೆ. ರಾಣಿ ಪದ್ಮಿನಿಯ ಆ ಮಾರ್ಗ, ತ್ಯಾಗ ನಾವು ಇವತ್ತಿಗೂ ಗೌರವಿಸ್ತೆವೆ. ನಮಗೆ ರಾಣಿ ಪದ್ಮಿನಿ, ದೇವಲದೇವಿಯ ಆದರ್ಶಗಳು ಮುಖ್ಯ. ಕಮಲಾದೇವಿಯ ಅವಕಾಶವಾದತ್ವ ಅಲ್ಲ(ಬಹುಶ ಅವಳ ಪುತ್ರಿವ್ಯಾಮೋಹ ಅವಳನ್ನು ಹಾಗೆ ಮಾಡಿಸಿತ್ತು ಅನ್ಸುತ್ತೆ).

ಇದೆಲ್ಲವೂ ಇಂದಿನ ಸ್ವಾರ್ಥತ್ಯಾಗದ ಮಾಲೀಕರು, ಸೋ ಕಾಲ್ಡ್ ಸೆಕ್ಯುಕರ್ ವಾದಿಗಳಿಗೆ ಅರ್ಥ ಆಗಲ್ಲ..

ಪ್ರಾಣ ಅಥವಾ ಗೌರವದ ಈ ವ್ಯತ್ಯಾಸವು ನೆನ್ನೆ ಕೂಡಾ ಇತ್ತು, ಇಂದಿಗೂ ಇದೆ ಮತ್ತು ಮುಂದೆಯೂ ಇರುತ್ತೆ, ಮುಂದುವರೀಯುತ್ತಲೇ ಇರುತ್ತೆ. ಮತ್ತು ಪದ್ಮಿನಿ ದೇವಿಯಂತಹ ಮಕ್ಕಳು ನಮ್ಮಂತೆಯೇ ಬದುಕುವವರೆಗೂ ಉಳಿಯುತ್ತದೆ.

ಈ ಜೋಹರ್ ಅನ್ನು , ದೇಹಪ್ರದರ್ಶನವೇ ಬಾಲಿವುಡ್ ಎಂದುಕೊಂಡಿರುವ ಇವರು ಏನನ್ನು ಅರ್ಥಮಾಡಿಕೊಂಡಾರು?

ಆತ್ಮರಕ್ಷಣೆಗಾಗಿ, ಮಾನಕ್ಕಾಗಿ, ತನ್ನ ಪರಂಪರೆಯ ಅಸ್ಮಿತೆಗಾಗಿ ಖಿಲ್ಜಿಗೆ ತನ್ನ ದೇಹವನ್ನೊಪ್ಪಿಸದ ಆ ರಾಣಿ ಪದ್ಮಾವತಿಯನ್ನ ಖಿಲ್ಜಿಯ ಜೊತೆ ಕಿಸ್ಸಿಂಗ್ ಸೀನ್ ನಲ್ಲಿ ತೋರಿಸುವ ಭನ್ಸಾಲಿಯ ಚಿತ್ರಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡುವುದೂ ಒಂದೇ ನಮ್ಮ ನಾಡಿನ ವೀರಾಂಗಿಣಿಯರಾದ ರಾಣಿ ಚೆನ್ನಮ್ಮ, ಒನಕೆ ಓಬವ್ವಳಂತಹವರ ಚಾರಿತ್ರ್ಯಹರಣ ಮಾಡಿ ಸಿನೆಮಾ ಮಾಡುವುದೂ ಒಂದೇ.

ದೇಶಾದ್ಯಂತ ಪದ್ಮಾವತಿ ಚಿತ್ರಕ್ಕೆ ಹಿಂದುಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೆ ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ತದ್ವಿರುದ್ಧವಾದಂತೆ ಕಾಣುತ್ತಿದೆ.

ಮದರಾಸಿನಲ್ಲಿ ಹುಟ್ಟಿ ಬೆಳೆದ ಈ ನಟರಿಗೆ 1962 ರಲ್ಲಿ ನಡೆದ ಕನ್ನಡ ಪರ ಹೋರಾಟ ತಿಳಿದಿರಲಾರದು. ‘ಕಾಂಚಿ ತಲೈವನ್’ ಎಂಬ ತಮಿಳು ಚಿತ್ರದಲ್ಲಿ ಇಮ್ಮಡಿ ಪುಲಿಕೇಶಿಯನ್ನು ಪಲ್ಲವ ನರಸಿಂಹ ವರ್ಮ ಅವಮಾನಿಸುವ – ಚಾಲುಕ್ಯ ಬಾವುಟವನ್ನು ಕಾಲಿನಲ್ಲಿ ತುಳಿಯುವ ಒಂದು ದೃಶ್ಯವಿತ್ತು.

ಕನ್ನಡ ಸೇನಾನಿ ಮ.ರಾಮಮೂರ್ತಿ ನೇತೃತ್ವದ ಕನ್ನಡ ಹೋರಾಟಗಾರು ಮಿನರ್ವ ಟಾಕೀಸಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

ಆಗ ಎಂ.ಜಿ.ಆರ್.ಆ ದೃಶ್ಯವನ್ನೇ ತೆಗೆಸಿದ್ದರು! ಕನ್ನಡ ಹೋರಾಟಗಾರರು ಅಂದು ಹಾಗೆ ಮಾಡಿದ್ದರಿಂದಲೇ ಕನ್ನಡ ಚಿತ್ರರಂಗ ಒಂದು ಭದ್ರ ನೆಲೆಯನ್ನು ಕಂಡಿದ್ದು. ಅಂತಹ ಸ್ವಾಭಿಮಾನ ರಾಜಾಸ್ಥಾನದವರಿಗೂ ಇದ್ದರೆ ತಪ್ಪೇನು.?

ಕ್ಷಮಿಸಿ!! ರಾಣಿ ಪದ್ಮಿನಿಯ ನೈಜ ಇತಿಹಾಸ ತಿಳಿಸುವುದಕ್ಕಾಗಿ ತಾಯಿ ರಾಣಿ ಚೆನ್ನಮ್ಮ, ಓಬವ್ವಳಂತಹವರ ಹೆಸರು ಉಲ್ಲೇಖಿಸಿ ಅವರ ಇತಿಹಾಸದ ಮೂಲಕ ರಾಣಿ ಪದ್ಮಿನಿಯ ಘನತೆ ಗೌರವ ಎಷ್ಟಿದೆ ಅಂತ ಹೇಳಿದೆ.

ಇಂದು ರಾಣಿ ಪದ್ಮಿನಿಯ ಚಾರಿತ್ರ್ಯವಧೆ ಮಾಡಿ ಚಿತ್ರ ಮಾಡಿದ್ದಾರೆ ನಾಳೆ ಚೆನ್ನಮ್ಮ, ಓಬವ್ವರ ಬಗ್ಗೆಯೂ ಅದೇ ರೀತಿ ಚಿತ್ರ ಮಾಡಬಹುದು.

ಇದನ್ನ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು.

ಈಗ ಕನ್ನಡ ಚಿತ್ರರಂಗದ ನಿರ್ಧಾರದ ಜೊತೆ ನಿಲ್ತಿರೋ ಅಥವ ವಿರೋಧ ಮಾಡ್ತಿರೋ ನಿಮಗೆ ಬಿಟ್ಟದ್ದು…

Editor Postcard Kannada:
Related Post