X

ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೂ, ಸಿದ್ಧರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಲಾರರೇ?!

ಹೌದು! ಕಳೆದ ಒಂದಷ್ಟು ದಿನಗಳಿಂದಲೂ ಸಹ, ಈ ಸುದ್ದಿ ಹರಿದಾಡುತ್ತಿದೆ! ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸದ ಗೆದ್ದರೆ, ಖಂಡಿತವಾಗಿಯೂ ಸಹ ಯಾವುದೇ ಕಾರಣಕ್ಕೂ ಪ್ರಸ್ತುತ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಬಾರದೆಂದು ಈಗಾಗಲೇ ದೆಹಲಿ ಹೈ – ಕಮಾಂಡ್ ನಿರ್ಧರಿಸಿದೆ ಎಂದು ಈಗಾಗಲೇ ಬಹಳಷ್ಟು ಚರ್ಚೆಗಳು ನಡೆಯುತ್ತಲಿದೆಯಷ್ಟೇ!

ಬಹುಷಃ ರಾಷ್ಟ್ರೀಯ ಕಾಂಗ್ರೆಸ್ ಗೂ ಸಿದ್ಧರಾಮಯ್ಯರವರ ಆಡಳಿತ ನೋಡಿ ಸಾಕಾಗಿರಬೇಕು!

ದೆಹಲಿಯ ಹೈ ಕಮಾಂಡ್ ಈ ನಿರ್ಧಾರ ತೆಗೆದುಕೊಳ್ಳುವುದೇ ಆದರೆ, ಬಹಳಷ್ಟು ಕಾರಣಗಳಿವೆ! ಯಾವುದೇ ಒಂದು ಪಕ್ಷ ಸೋಲುತ್ತೇನೆ ಎನ್ನಿಸಿದಾಗ ಗೆಲ್ಲುವುದಕ್ಕೇನು ಬೇಕಾದರೂ ಮಾಡುವೆ ಎನ್ನುವ ಮನಃಸ್ಥಿತಿ ತಲುಪುತ್ತದೆ! ಅದೇ ಕಾಂಗ್ರೆಸ್ ಗಾಗಿರುವಂತಹದ್ದಷ್ಟೇ! ಪಕ್ಷದ ಅಸ್ತಿತ್ವಕ್ಕೆ ಒಂದು ಕ್ಷೇತ್ರವನ್ಬಾದರೂ ಉಳಿಸಿಕೋ ಎಂಬಂತಾಗಿದೆ!

ಸಿದ್ಧರಾಮಯ್ಯನವರಿಗೆ ಮುಂದಿನ ಬಾರಿ ಅವಕಾಶ ಕೊಡದೇ ಇರಲು ಬಹಳ ಕಾರಣಗಳಿವೆ ಬಿಡಿ!

1. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕರ್ನಾಟಕದಲ್ಲಿ ಯಾವ ಅಭಿವೃದ್ಧಿಯೂ ಇಲ್ಲ!
2. ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ‌್ದಾರೆ!
3. ತುಷ್ಟೀಕರಣಕ್ಕಾಗಿ ‘ಭಾಗ್ಯಗಳ ಮೇಲೆ ಭಾಗ್ಯ’ ಕೊಟ್ಟು ರಾಜ್ಯದ ಬೊಕ್ಕಸವನ್ನು ಗುಡಿಸಿ ಸಾರಿಸಿರುವುದಲ್ಲದೇ, ಪ್ರತಿ ಕನ್ನಡಿಗನ ಮೇಲೂ ಸಾಲವಿದೆ!
4. ಬರೋಬ್ಬರಿ 21 ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹತ್ಯೆ!
5. ಡಿನೋಟಿಫಿಕೇಶನ್ ನ ಹಗರಣ!
6, ದಕ್ಷ ಅಧಿಕಾರಿಗಳ ವರ್ಗಾವಣೆಯ ಜೊತೆ, ಆತ್ಮಹತ್ಯೆ ಭಾಗ್ಯವನ್ನು ಕರುಣಿಸಿರುವುದು!
7. ಅಪ್ರಾಮಾಣಿಕ ಸಚಿವರ ಸಮರ್ಥನೆ.
8. National Intelligence ವರದಿಯನ್ನೂ ತಿರಸ್ಕರಿಸಿ, ಪಿಎಫ್ ಐ ಹಾಗೂ ಎಸ್ ಡಿ ಪಿಐ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ.
9. ಸರಕಾರದ 25 ಕ್ಕೂ ಹೆಚ್ಚು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ!
10. ಹಿಂದೂಗಳ ಭಾವನೆಗೆ ಪದೇ ಪದೇ ಧಕ್ಕೆ ತಂದಿರುವುದು.
11. ಟಿಪ್ಪೂ ಜಯಂತಿ ಆಚರಣೆ ಬಹುದೊಡ್ಡ ಮೈನಸ್ ಪಾಯಿಂಟ್!

ಹೀಗೆ ಅದೆಷ್ಟೋ ಕಾರಣಗಳನ್ನಿಟ್ಟು ಸಿದ್ಧರಾಮಯ್ಯರವರನ್ನು ತಿರಸ್ಕರಿಸಬಹುದು! ಸುಲಭವಾಗಿ! ಇದಲ್ಲದೇ, ಸಿದ್ಧರಾಮಯ್ಯರವರನ್ನು ಬಿಟ್ಟು
ಸಬಲವಾಗಿರುವ ಮುಖ್ಯಮಂತ್ರಿ ಅಭ್ಯರ್ಥಿ ಜಿ.ಪರಮೇಶ್ವರ್! ಕಾಂಗ್ರೆಸ್ ಗೀಗ ಇರುವುದು ಪರಮೇಶ್ವರ್ ಎಂಬ ಆಶಾ ಕಿರಣ ಮಾತ್ರ!

ತಿರುಗಿ ಬೀಳಬಹುದೇ ಸಿದ್ಧರಾಮಯ್ಯ?!

ಸಿದ್ಧರಾಮಯ್ಯ ರಾಜಕೀಯಕ್ಕೆ ಕಾಲಿಟ್ಡಿರುವುದು ಕಾಂಗ್ರೆಸ್ ಪಕ್ಷದಿಂದಲ್ಲ! ಒಂದು ಕಡೆ ಸಿಗಲಿಲ್ಲ ಅವಕಾಶ ಎಂದರೆ ಮತ್ತೊಂದು ಕಡೆ ಗೆಲ್ಲುವುದಕ್ಕೆ
ಅವಕಾಶ ನೋಡುವ ಸಿದ್ಧರಾಮಯ್ಯ ಸ್ವತಂತ್ರ್ಯವಾಗಿ ನಿಂತು ಕರ್ನಾಟಕವನ್ನು ಗೆಲ್ಲುತ್ತಾರಾ?! ಯಾಕೆಂದರೆ, ಇತ್ತ ಜೆಡಿಎಸ್ ಗೆ ಹೋದರೆ ಬೆಲೆ ಇಲ್ಲ, ಬಿಜೆಪಿಯವರು ಸೇರಿಸಿಕೊಳ್ಳುವುದಿಲ್ಲ! ಹಠಕ್ಕೆ ಬಿದ್ದರೆ, ಪ್ರಸ್ತುತ ಮುಖ್ಯಮಂತ್ರಿಗಿರುವುದು ಒಂದೇ ಒಂದು ದಾರಿ!

ಅದು ‘ಪಂಜಾಬ್ ನ ಅಮರೀಂದರ್ ಸಿಂಗ್’ ತರಹ ಸ್ವತಂತ್ರ್ಯವಾಗಿ ಹೋರಾಡುವುದು!

ಹಾ! ಅಮರೀಂದರ್ ಸಿಂಗ್ ಮೊದಲು ರಾಜಕೀಯಕ್ಕೆ ಭೇಟಿ ಕೊಟ್ಟಿದ್ದು ರಾಜೀವ್ ಗಾಂಧಿ ಮೂಲಕ! ತದನಂತರ, ಎಲ್ಲಿ ಇಂದಿರಾ ಗಾಂಧಿ ‘ಬ್ಲೂ –
ಸ್ಟಾರ್’ ಎಂದಳೋ, ಅಲ್ಲಿಗೆ ಕಾಂಗಿಗಳ ಮೇಲಿನ ಭಕ್ತಿ ಮುಗಿದಿತ್ತು ಅಮರೀಂದರ್ ಗೆ! ಕಾಂಗ್ರೆಸ್ ನ ಕಡೆಗಣನೆ ಹಾಗೂ ಧರ್ಮಕ್ಕಾದ ಅವಮಾನದಿಂದ, ಸೀದಾ ಪಂಜಾಬ್ ನ ‘ಅಕಾಲಿ ದಳ’ ಸೇರಿದ ಅಮರೀಂದರ್, 1992 ರಲ್ಲಿ ಅದನ್ನೂ ತೊರೆದು ಶಿರೋಮಣಿ ಅಕಾಲಿ ದಳ ವನ್ನು ಸೇರಿದರು! 1998 ರಲ್ಲಿ ಕಾಂಗ‌್ರೆಸ್ ಗೆ ಮತ್ತೆ ಸೇರಿಕೊಂಡ ದಳ, ಪಂಜಾಬ್ ನ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿಯೂ ಕರ್ತವ್ಯ ಸಲ್ಲಿಸಿದ ಸಿಂಗ್, 2002 ರಿಂದ 2007 ರ ತನಕ ಪಂಜಾಬ್ ನ ಮುಖ್ಯಮಂತ್ರಿಯಾಗಿದ್ದರು!

ಮತ್ತೆ ಎರಡನೇ ಸಲ, 2017 ರ ತರಲ್ಲಿ ಪಂಜಾಬ್ ನ ಮುಖ್ಯಮಂತ್ರಿಯಾದ ಅಮರೀಂದರ್ ಸಿಂಗ್, ಸ್ವತಂತ್ರ್ಯವಾಗೇ ಇದ್ದವರು! ಹೈ
ಕಮಾಂಡ್ ಗೂ ಕ್ಯಾರೇ ಎನ್ನದ ಅದ್ಭುತ ವ್ಯಕ್ತಿ ಇವರು! ರಾಹುಲ್ ಗಾಂಧಿಗೂ ಕೂಡ, ಯರ್ರಾಬಿರ್ರಿ ಬಯ್ದಿರುವ ಸಿಂಗ್, ಇವತ್ತಿನ ತನಕವೂ ಸ್ವತಂತ್ರ್ಯವಾಗಿಯೇ ಪಂಜಾಬ್ ಪ್ರಾಂತ್ಯದ ಅಧಿಕಾರವನ್ನು ಹಿಡಿತದಲ್ಲಿಟ್ಡುಕೊಂಡವರು!

ಅದೇ ರೀತಿ, ಸಿದ್ಧರಾಮಯ್ಯನವರೂ ತಿರುಗಿ ಬೀಳುತ್ತಾರಾ?! ನೋಡಬೇಕಿದೆ!

– ಪೃಥು

Editor Postcard Kannada:
Related Post