X

ಕಾಂಗ್ರೆಸ್ ನಾಯಕರಿಗೀಗ ಮಹಾಸಂಕಟ! ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿದ್ದ 5000 ಮಾರಣಹೋಮದ ಪ್ರಕರಣಕ್ಕೆ ಜೀವ ತುಂಬಿರುವ ಸರ್ವೋಚ್ಛ ನ್ಯಾಯಾಲಯ!

ಹಾ! ಇಂದಿರಾ ಗಾಂಧಿಯ ಹತ್ಯೆಯಾದ ನಂತರ, ಸಿಖ್ ವಿರೋಧಿ ನೀತಿಯನ್ನಿಟ್ಟುಕೊಂಡು, 1984 ರಲ್ಲಿ ಗೈಯ್ಯಲಾದ ಸಿಖ್ ಮಾರಣಹೋಮಕ್ಕೆ ಸಂಬಂಧಪಟ್ಟ 186 ಮೊಕದ್ದಮೆಗಳನ್ನು ಮತ್ತೆ ತನಿಖೆ ನಡೆಸುವಂತೆ ಆಗ್ರಹಿಸಿದೆ ಸರ್ವೋಚ್ಛ ನ್ಯಾಯಾಲಯ! ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ, ವಿಶೇಷ ತನಿಖಾ ದಳವೊಂದನ್ನು ಪ್ರಸ್ತುತ ಪಡಿಸಿದ್ದು, 3000 ಕ್ಕೂ ಹೆಚ್ಚು ಸಿಖ್ ರ ಮಾರಣಹೋಮ ಗೈಯ್ಯಲಾಗಿತ್ತು ದೆಹಲಿಯಲ್ಲಿ! ಅದಲ್ಲದೇ, ಇಡೀ ಭಾರತದಾದ್ಯಂತ 8000 ಸಿಖ್ ರನ್ನು ಹತ್ಯೆ ಮಾಡಲಾಗಿತ್ತು!

ಇಷ್ಡು ವರ್ಷಗಳ ನಂತರ ಮೊಕದ್ದಮೆ ಮತ್ತೆ ತನಿಖೆಗೆ ಬಂದಿರುವುದು ಯಾಕೆ ಗೊತ್ತಾ?!

ವಾಸ್ತವದಲ್ಲಿ, 1984 ಕ್ಕೆ ಸಂಬಂಧಪಟ್ಟ ಹಾಗೆ, ಪ್ರಕರಣಗಳಿದ್ದದ್ದು 293 ರಷ್ಟಾದರೂ, ಆಗಿದ್ದ ತನಿಖಾ ದಳ ಯಾವುದೇ ತನಿಖೆಗಳನ್ನು ಮಾಡದೇ ಬರೋಬ್ಬರಿ 186 ಮೊಕದ್ದಮೆಗಳಿಗೆ ಅಂತ್ಯ ಹಾಡಿತ್ತು. ತದನಂತರ, ಯಾವ ಪ್ರಕರಣಗಳಿಗೂ ಸರಿಯಾಗಿ ನ್ಯಾಯವನ್ನೂ ಒದಗಿಸಿರಲಿಲ್ಲ!

ಆದರೆ, ಸೆಪ್ಟೆಂಬರ್ 2017, ಸರ್ವೋಚ್ಛ ನ್ಯಾಯಾಲಯ ರಾಧಾಕೃಷ್ಣ – ಪಾಂಚಾಲ್ ಅಧಯಕ್ಷತೆಯಲ್ಲೊ ತನಿಖಾ ದಳವನ್ನು ರಚಿಸಿದ್ದಲ್ಲದೇ, ಮೂಲ ತನಿಖಾ ದಳ ಅಂತ್ಯ ಕಾಣಿಸಿದ ಪ್ರಕರಣಗಳನ್ನು ಮರುಪರೀಕ್ಷೆ ಮಾಡುವಂತೆ ಸೂಚಿಸಿತ್ತು.

ಮೂರು ದಿನಗಳ ತನಕ ಜೈಲಿನಿಂದ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು!

ಹಾ! ಇಂದಿರಾ ಗಾಂಧಿ ಹತ್ಯೆಯಾಗುತ್ತಿದ್ದ ಹಾಗೆ, ಮೂರು ದಿನಗಳ ಕಾಲ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು ಕೈದಿಗಳನ್ನು! ಜೊತೆಗೆ ಸಿಕ್ಕಷ್ಟು ಸಿಖ್ಖರನ್ನು ಕೊಲ್ಲಿ ಎಂದೂ ಆಜ್ಞೆ ಮಾಡಲಾಗಿತ್ತು.

ಸ್ವಲ್ಲ ಗಮನಿಸಿ! ಅಷ್ಟು ದೊಡ್ಡ ಮಟ್ಟದ ಮಾರಣಹೋಮ ಪೋಲಿಸರ ಸಹಕಾರವಿಲ್ಲದೇ ನಡೆದಿರಲು ಸಾಧ್ಯವೇ?! ಇಲ್ಲ! ಯಾರು ರಕ್ಷಕರಾಗಬೇಕಿತ್ತೋ, ಯಾರು ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕಿತ್ತೋ, ಅಂತಹ ಪೋಲಿಸರೇ ಜಗದೀಶ್ ಟೈಟ್ಲರ್ ಮತ್ತು ಎಚ್ ಕೆ ಎಲ್ ಭಗತ್ ರಂತಹ ಹುಚ್ಚರ ಅಡಿಯಲ್ಲಿ ಗಲಭೆಗೆ ಅವಕಾಶ ನೀಡಿ ಸುಮ್ಮನೇ ನಿಂತಿದ್ದರು!

ಮೂರು ದಿನಗಳ ಕಾಲ ಮುಖ್ಯ ಕಾರಾಗೃಹ, ಉಪ ಕಾರಾಗೃಹ ಮತ್ತು ಲಾಕಪ್ ಗಳನ್ನು ತೆರೆದು ಪ್ರತಿ ಕೈದಿಗೂ ಸಹ, ‘ಸಿಖ್ಖರಿಗೆ ಪಾಠ ಕಲಿಸಿ’ ಎಂಬುವ ಅಫೀಮು ತುಂಬಿ ಕಳುಹಿಸಿಕೊಡಲಾಗಿತ್ತೆನ್ನುವುದು ಪ್ರತಿ ಭಾರತೀಯನಿಗೂ ತಿಳಿದಿದೆ!

Congress leader Sajjan Kumar

ಉಹೂಂ! ತಪ್ಪಾಗುತ್ತೆ! ಪೋಲಿಸರೇನೂ ಮಾಡೇ ಇಲ್ಲ ಎಂದರೆ ತಪ್ಪಾಗಿ ಬಿಡುತ್ತದೆ! ಸ್ವರಕ್ಷಣೆಗೋಸ್ಕರ ತಿರುಗಿ ಬಿದ್ದ ಸಿಖ್ಖರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು! ರಕ್ಷಿಸಿಕೊಳ್ಳಲು, ಬೆಂಕಿಯನ್ನೆಬ್ಬಿಸಿದ ಸಿಖ್ಖರು ಅದೆಷ್ಟೋ ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯಬೇಕಾಯಿತು! ಕೈದಿಗಳನ್ನು ಇದೇ ನೆಪದಲ್ಲಿ ಸ್ವತಂತ್ರ್ಯಗೊಳಿಸಿದರೆ, ಏನೂ ಮಾಡದ ಸಿಖ್ಖರನ್ನು ಅಮಾನುಷವಾಗಿ ಹಿಂಸಿಸಿ ಜೈಲಿನಲ್ಲಿಟ್ಟಿದ್ದರು!

ಇಂತಹ ಆಘಾತಕಾರಿ ಮಾಹಿತಿಗಳನ್ನು ನೀಡಿದ್ದು ಬೇರೆ ಯಾರೂ ಅಲ್ಲ! ಜಗಮೋಹನ್ ಸಿಂಗ್ ಕುರ್ಮಿ!

Jagadish Tytler – A psychopath

ಭಾರತದ ನ್ಯಾಯಾಲಯ ಬಿಡಿ! ಯುನೈಟೆಡ್ ಸ್ಟೇಟ್ಸ್ ನ ನ್ಯಾಯಾಲಯವೂ ಭಾರತೀಯ ಕಾಂಗ್ರೆಸ್ ಗೆ ಸಿಖ್ ವಿರೋಧಿಯಾಗಿ ವರ್ತಿಸಿದ್ದಕ್ಕೆ ಸಮನ್ಸ್ ನೀಡಿತ್ತು!

ಭಾರತದಲ್ಲಾದ ಸಿಖ್ ವಿರೋಧಿ ನಡೆಯೊಂದು ಅಮೇರಿಕಾದಲ್ಲಿದ್ದ ಸಿಖ್ಖರನ್ನು ಕೆರಳಿಸಿದ್ದಲ್ಲದೇ, ಕಾಂಗ್ರೆಸ್ ಪಕ್ಷದ ವಿರುದ್ಧ ಹೊರದೇಶಗಳಲ್ಲಿಯೂ ಅಸಮಾಧಾನ ವ್ಯಕ್ತವಾಗಿತ್ತಷ್ಟೇ! ಅಮೇರಿಕಾದ ಸಿಖ್ಖ್ರ ಹಕ್ಕು ರಕ್ಷಣಾ ಆಯೋಗವೊಂದು, ‘conspiring, aiding and abetting’ ಎಂಬುದರಡಿ ಪೆಟಿಷನ್ ದಾಖಲು ಮಾಡಿದ್ದಲ್ಲದೇ, ಅಮೇರಿಕಾವೂ ಇದನ್ನು ವಿರೋಧಿಸಿ ಸಮನ್ಸ್ ಕಳುಹಿಸಿತ್ತು ಭಾರತೀಯ ಕಾಂಗ್ರೆಸ್ ಗೆ!

ನ್ಯೂಯಾರ್ಕ್ ನಲ್ಲಿದ್ದ ಫೆಡರಲ್ ಡಿಸ್ಟ್ರಿಕ್ಟ್ ನ್ಯಾಯಾಲಯ ಸಮನ್ಸ್ ಕಳುಹಿಸಿತ್ತಷ್ಟೇ! ‘Sikhs for justice” ಎಂಹುದರಡಿ ಪೆಟಿಷನ್ ದಾಖಲಿಸಿದ್ದ ನ್ಯೂಯಾರ್ಕ್ ನ್ಯಾಯಾಲಯದ ನಡೆಯಿಂದ ಭಾರತ ಮುಜುಗರವನ್ನನುಭವಿಸುವಂತಾಗಿತ್ತು.

ಗಲಭೆಯ ಹಿಂದಿದ್ದ ಕಾರಣ ಮತ್ತದೇ ಕಾಂಗ್ರೆಸ್ ?!

ಇದ್ದಕ್ಕಿದ್ದಂತೆ ನಡೆದ ಗಲಭೆಯಲ್ಲ ಎನ್ನುತ್ತಾರೆ, ಕಾನೂನು ಸಲಹೆಗಾರ ಗುರುಪಟ್ವಂತ್ ಸಿಂಗ್ ಪನ್ನುನ್! “ಈ ಗಲಭೆ ನಡೆದ ರೀತಿಯಷ್ಟೂ ಸಹ ಭಾರತ
ಸರಕಾರದ ಕಡೆಗೆ ಬೊಟ್ಟು ಮಾಡಿದ್ದವು ಎಂಬುದನ್ನು ಸ್ವತಃ ಭಾರತವೇ ಒಪ್ಪಿಕೊಂಡಿದೆ ಬಿಡಿ!

ಸೂಕ್ಷ್ಮವಾಗಿ ನೋಡಿದರೆ ಅರ್ಥವಾಗಿಬಿಡುತ್ತದಷ್ಟೇ! ಸಿಖ್ಖರ ಮಾರಣಹೋಮವಾದಾಗ ಇದೇ ಕಾಂಗ್ರೆಸ್ ಸರಕಾರ ಯಾವುದೇ ರೀತಿಯಲ್ಲಿಯೂ ತಡೆ ಹಿಡಿಯದೇ ಸುಮ್ಮನೆ ಕುಳಿತುಕೊಂಡಿದ್ಯಾಕೆ?! ಸ್ವತಃ ರಾಜೀವ್ ಗಾಂಧಿ ಹೇಳಿದ್ದರು! ‘ಇದು ಸಹಜ! ದೊಡ್ಡ ಮತ ಉರುಳಿದಾಗ, ಸಣ್ಣ ಹುಲ್ಲುಗಳು ಸಾಯುವುದು’ ಎಂಬ ಒಂದೇ ವಾಕ್ಯದಲ್ಲಿ ಅರ್ಥವಾಗಿ ಹೋಗುತ್ತದೆ! ಗಲಭೆಯ ಹಿಂದಿದ್ದವರು ಯಾರಾಗಿದ್ದರೆಂದು!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post