X

ಕೆಂಪು ಉಗ್ರರಿಗೆ ಸವಾಲೊಡ್ಡಿ ಕೇರಳಕ್ಕೆ ಲಗ್ಗೆಯಿಟ್ಟ ಮೋಹನ್ ಭಾಗವತ್ ಅಲ್ಲಿ ಆ ಧ್ವಜವನ್ನು ಹಾರಿಸಿಯೇ ಬಿಟ್ಟಿದ್ದಾರೆ. ಯಾತಕ್ಕಾಗಿ ವಿರೋಧ?!

ಅದು ಕೆಂಪು ಉಗ್ರರ ನಾಡು. ಅಲ್ಲಿ ಎಲ್ಲವೂ ಎಡಪಂಥೀಯವಾದ. ಹೆಸರಿಗೆ ಮಾತ್ರ ದೇವರ ನಾಡು ಎಂದು ಕರೆಸಿಕೊಳ್ಳುವ ಆ ರಾಜ್ಯ ಅಕ್ಷರಷಃ ರಕ್ಕಸರ ಬೀಡಾಗಿ ಪರಿವರ್ತನೆಯಾಗಿದೆ. ಸದಾ ದೇವರ ಜಪ ತಪಗಳನ್ನು ಮಾಡಿಕೊಂಡು ಇರಬೇಕಾಗಿದ್ದ ಅಲ್ಲಿನ ಜನರು ಪ್ರತಿದಿನ ರಕ್ತ ಪಾತಗಳಿಗೆ ಬೆದರಿಕೊಂಡು ಬಿಸಿಯುಸಿರಾಡುತ್ತಿರುವ ಸಂದರ್ಭ ಎದುರಾಗಿದೆ.

ಹೌದು. ಆ ರಾಜ್ಯ ಮತ್ಯಾವುದೂ ಅಲ್ಲ. ಹಿಂದೂ ವಿರೋಧಿ ನೀತಿಗಳನ್ನೇ ಅನುಸರಿಸಿಕೊಂಡು, ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಕೇರಳ. ಕುಂಕುಮ ಧಾರಣೆ ಮಾಡಿ, ಕೇಸರೀ ಶಲ್ಯ ಧರಿಸಿದರೆ ಸಾಕು ಅವರ ಕಾಲ ಅಂತ್ಯವಾಯಿತು ಎಂದೇ ಅರ್ಥ. ಅಲ್ಲಿ ಎಲ್ಲವೂ ಕೆಂಪು ಬಣ್ಣದ್ದೇ ಕಾರುಬಾರು. ಒಂದೆಡೆ ಕೆಂಪು ಬಾವುಟ ಹಿಡಿದುಕೊಂಡು ರಾಜ್ಯಭಾರ ಮಾಡುತ್ತಿರುವ ಕಮ್ಯುನಿಸ್ಟರು. ಮತ್ತೊಂದೆಡೆ ಹಿಂದೂಗಳ ಕೆಂಪು ರಕ್ತವನ್ನು ಚೆಲ್ಲಿ ಹತ್ಯೆಗಳ ಮೇಲೆ ಹತ್ಯೆಗಳನ್ನು ಮಾಡುತ್ತಿರುವ ಅದೇ ಕಮ್ಯುನಿಸ್ಟ್ ಪ್ರೇರಿತ ಗೂಂಡಾಗಳು. ಇವಿಷ್ಟು ಮಾತ್ರವಲ್ಲದೆ ಮುಸ್ಲಿಂ ಭಯೋತ್ಪಾದಕರ ಬೆದರಿಕೆಗಳು ಬೇರೆ. ಈ ಎಲ್ಲದರ ಮಧ್ಯೆ ಅಲ್ಲಿ ಹಿಂದೂಗಳು ಬದುಕೋದು ತುಂಬಾನೆ ಕಷ್ಟ.

ಆರ್‍ಎಸ್‍ಎಸ್ ಅಂದರೆ ಕೆಂಡ ಕಾರುವ ಕಮ್ಯುನಿಸ್ಟ್…

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗೌರವಕ್ಕೆ ಪಾತ್ರವಾಗಿರುವ ಅಪ್ರತಿಮ ದೇಶಪ್ರೇಮವುಳ್ಳ ಸಂಘಟನೆ. ಈ ಸಂಘಟನೆಯು ಇಂದು ಜಗತ್ತಿನ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ಭಾರತದ ಕೇರಳ ಎಂಬ ರಾಜ್ಯದಲ್ಲಿ ಈ ಸಂಘಟನೆಯ ಗಣವೇಶ ಧರಿಸಿದರೆ ಸಾಕು ಅಲ್ಲಿನ ಎಡಪಂಥೀಯರಿಗೆ ಎಲ್ಲಿಲ್ಲದ ಉರಿ ಆರಂಭವಾಗುತ್ತದೆ. ಅಲ್ಲಿನ ಕಮ್ಯುನಿಸ್ಟ್ ಸಿದ್ಧಾಂತವೇ ಅಂತಹದ್ದು. ಅಲ್ಲಿ ಬಲಪಂಥೀಯರಿಗೆ ಅವಕಾಶವೇ ಇಲ್ಲ.

ಜೀವ ಕೊಟ್ಟಿದ್ದರು ನೂರಾರು ಮಂದಿ ಕಾರ್ಯಕರ್ತರು…

ಕೇರಳ ಎಂದರೆ ಮೊದಲು ನೆನಪಾಗುತ್ತಿದ್ದದು ದೇವರ ನಾಡು ಎಂದು. ಆದರೆ ಈಗ ಕೇರಳ ಅಂದರೆ ಹಂತಕರ ನಾಡು ಎಂದು ಕುಖ್ಯಾತಿಯನ್ನು ಪಡೆದುಕೊಂಡಿದೆ. ಆರ್‍ಎಸ್‍ಎಸ್‍ನ ಗಣವೇಶ ಧರಿಸಿ ರೋಡಿಗಿಳಿದರೆ ಸಾಕು ಅಲ್ಲಿನ ಎಡಪಂಥೀಯರು ಹಾಗೂ ಮುಸಲ್ಮಾನ ಮೂಲಭೂತವಾದಿಗಳು ಆ ದೇಶ ಭಕ್ತರನ್ನು ಭೀಕರವಾಗಿ ಹತ್ಯೆ ಮಾಡಿ ತಮ್ಮ ತೀಟೆಯನ್ನು ತೀರಿಸುತ್ತಾರೆ. ಒಂದೆಡೆ ಕಮ್ಯುನಿಸ್ಟ್ ಪಕ್ಷದ ಕೆಂಪು ಉಗ್ರರ ಅಟ್ಟಹಾಸ, ಮತ್ತೊಂದೆಡೆ ಮುಸ್ಲಿಂ ಮೂಲಭೂತವಾದಿಗಳ ಭೀಕರತೆ. ಒಟ್ಟಾರೆ ಹಿಂದೂ ಧರ್ಮದವರು ಎಂದು ಎದೆತಟ್ಟಿಕೊಳ್ಳುವ ಯಾವ ಪರಿಸ್ಥಿತಿಯೂ ಅಲ್ಲಿ ನಿರ್ಮಾಣವಾಗೋದೂ ಅಲ್ಲಿ ತುಂಬಾನೇ ಕಷ್ಟ.

ಕೇರಳದಲ್ಲಿ ಪದೇ ಪದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳಾಗುತ್ತಿವೆಯಲ್ಲ, ಆ ಎಲ್ಲಾ ಕೊಲೆಗಳ ಹಿಂದೆ ಇದೇ ರಕ್ತದಾಹಿಗಳಾದ ಕೆಂಪು ಉಗ್ರರರಿದ್ದಾರೆ.

ಕಳೆದ ಬಾರಿಯ ಸ್ವಾತಂತ್ರ್ಯೋತ್ಸವದ ದಿನ ಇದೇ ಮೋಹನ್ ಭಾವತ್ ಅವರು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದ್ದರು. ಆಗ ಕೇರಳದ ಕಮ್ಯುನಿಸ್ಟ್ ಪಾರ್ಟಿ ಮೋಹನ್ ಭಾಗವತ್ ಅವರ ಮೇಲೆ ಆರೋಪ ಮಾಡಿತ್ತು.ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಧಿಕ್ಕರಿಸಿ ಮೋಹನ್ ಭಾಗವತ್ ಅವರು ಧ್ವಜಾರೋಹಣವನ್ನು ಮಾಡಿದ್ದಾರೆಂಬ ಆರೋಪ.

ಇದರಲ್ಲಿ ದೊಡ್ಡ ಷಡ್ಯಂತ್ರವಿದೆ. ಧ್ವಜಾರೋಹಣವನ್ನು ಮಾಡಲು ಬಿಟ್ಟರೆ ದೇಶಪ್ರೇಮಿಗಳು ಒಂದಾಗ್ತಾರೆ. ದೇಶಪ್ರೇಮಿಗಳೆಲ್ಲಾ ಒಂದಾದರೆ ನಮಗೆ ಉಳಿಗಾಲವಿಲ್ಲ. ಇದು ಕಮ್ಯುನಿಸ್ಟರ ಲೆಕ್ಕಾಚಾರ.
ಇದೇ ರೀತಿಯಿಂದಲೇ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್ ಗಳಲ್ಲಿ ಧ್ವಜಾರೋಹಣ ನಡೆಯುವುದನ್ನೇ ನಿಲ್ಲಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ.

ಕೇರಳದ ಕಮ್ಯನಿಸ್ಟರ ಈಗಿನ ವಿರೋಧಿ ನೀತಿಯನ್ನು ನೋಡಿದರೆ ಕೇರಳವು ಮಣಿಪುರ, ಮಿಜೋರಾಮ್ ಗಳಂತೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಇಂತಹದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಜೀ ಭಾಗವತ್‍ಗೆ ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಮೋಹನ್ ಜೀ ಭಾಗವತ್‍ಗೆ ಅಲ್ಲಿ ತ್ರಿವರ್ಣ ಧ್ವಜ ಹಾರಿಸೋಕೆ ಈ ರಾಜ್ಯದಲ್ಲಿ ವಿರೋಧವಿತ್ತು. ಖಂಡಿತಾ ನಮ್ಮಲ್ಲಿ ಪ್ರಶ್ನೆ ಮೂಡಿಯೇ ಮೂಡುತ್ತದೆ. ಅವರು ಹಾರಿಸಿದ್ದು ತ್ರಿವರ್ಣ ಧ್ವಜವೇ… ಆದರೆ ಕೇರಳದಲ್ಲಿ ಮಾತ್ರ ಈ ಧ್ವಜ ಹಾರಿಸೋಕೆ ತುಂಬಾನೆ ವಿರೋಧವಿತ್ತು. ಅದು ಸಂಘದ ಕಾರ್ಯಕರ್ತರಿಗೆ ಮಾತ್ರ. ಈ ಸವಾಲಿಗೆ ಪ್ರತಿ ಸವಾಲು ಒಡ್ಡಿದವರೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರ ಸಂಘಚಾಲಕ ಮೋಹನ್ ಜೀ ಭಾಗವತ್…

ಯಾವುದೇ ಕಾರಣಕ್ಕೂ ಮೋಹನ್ ಬಾಗವತ್‍ಗೆ ಕೇರಳ ಪ್ರವೇಶಿಸಲು ಅನುಮತಿ ನೀಡೋದಿಲ್ಲ. ಇಲ್ಲಿ ಧ್ವಜ ಹಾರಿಸೋಕ್ಕೆ ಬಿಡೋದಿಲ್ಲಾ ಎಂಬ ನಿಲುವನ್ನು ಕೇರಳ ಸರ್ಕಾರ ಹಾಗೂ ಎಡಪಂಥೀಯ ಸಂಘಟನೆಗಳು ಹೊಂದಿದ್ದವು. ಆದರೆ ಮೋಹನ್ ಜೀ ಭಾಗವತ್ ಈ ಸವಾಲನ್ನು ಸ್ವೀಕರಿಸಿದ್ದರು. ವಿರೋಧದ ನಡುವೆಯೂ ಕೇರಳಕ್ಕೆ ಎಂಟ್ರಿ ಕೊಟ್ಟ ಮೋಹನ್ ಭಾಗವತ್ ಕೆಂಪು ಉಗ್ರರ ನಾಡಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ಒಟ್ಟಿನಲ್ಲಿ ಕೇರಳದ ಕೆಂಪು ಉಗ್ರರ ಕೋಟೆಯಲ್ಲಿ ಕಟ್ಟರ್ ಬಲಪಂಥೀಯ ವಾದದ ನಾಯಕರೊಬ್ಬರು ಇಂದು ಹೊಸ ಇತಿಹಾಸವನ್ನೇ ಬರೆದಿದ್ದಾರೆ. ಅಲ್ಲಿನ ಗೊಡ್ಡು ಬೆದರಿಕೆಗಳಿಗೆ ಭಯ ಪಡದೆ ನೇರಾ ನೇರ ಎದೆಕೊಟ್ಟು ಸವಾಲಿಗೆ ಪ್ರತಿ ಸವಾಲು ಒಡ್ಡಿ ಕಮ್ಯುನಿಸ್ಟರೇ ಬೆಚ್ಚಿ ಬೀಳುವಂತೆ ಮಾಡಿದ್ದರು. ಈ ಮೂಲಕ ದೇಶದ ಯಾವುದೇ ಮೂಲೆಯಲ್ಲೂ ನಾವು ನಮ್ಮ ದೇಶದ ಧ್ವಜವನ್ನು ಹಾರಿಸಲು ಸ್ವಾತಂತ್ರ್ಯವಿದೆ. ಅದು ನಮ್ಮ ಹಕ್ಕು ಎಂದು ಸಾಭೀತುಪಡಿಸಿದ್ದಾರೆ.

 

-ಸುನಿಲ್ ಪಣಪಿಲ

Editor Postcard Kannada:
Related Post