X

ಕೊಟ್ಟಷ್ಟು ದುಡ್ಡಿಗೆ ನಟನೆ ಮಾಡಿಕೊಂಡಿದ್ದ ಪ್ರಕಾಶ್ ರಾಜ್ ತನ್ನ ಹೇಟ್ ಮೋದಿ ಮತ್ತು ಹೇಟ್ ಹಿಂದೂ ಅಭಿಯಾನಕ್ಕೆ ಕೈ ಜೋಡಿಸಿದ್ದು ಯಾರ ಜೊತೆಗೆ ಗೊತ್ತಾ!?

ಅದೇನೋ ನೋಡಿ! ಇತ್ತೀಚೆಗೆ ಕನ್ನಡ ಚಿತ್ರರಂಗದ ಒಂದಷ್ಟು ನಟನಾಮಣಿಗಳಿಗೆ ಏನಾಗಿದೆಯೋ ಗೊತ್ತಿಲ್ಲ!! ಇದ್ದಕ್ಕಿದ್ದಂತೆ ಕನ್ನಡನಾಡಿನ ಬಗ್ಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ಅದರಲ್ಲಿಯೂ, ಇಷ್ಟು ದಿನ ಇಲ್ಲದಿದ್ದ ರಾಜಕೀಯ ಸೇರುವ ಹಂಬಲ ಈಗ ಪ್ರಾರಂಭವಾಗಿ ಹೋಗಿದೆ! ಹೊಸ ಪಕ್ಷ ಕಟ್ಟುತ್ತೇನೆ ಎನ್ನುವುದೇನು, ನಾನು ಕಾಂಗ್ರೆಸ್ ಎನ್ನುವುದೇನು, ಕನ್ನಡ ನಾಡಿನ ಜನರ ಕನಸೇ ನನ್ನ ಪಕ್ಷದ ಪ್ರಣಾಳಿಕೆ ಎನ್ನುವುದೇನು, ಇದ್ದಕ್ಕಿದ್ದಂತೆ ಮಂಚದಿಂದೆದ್ದು “ಕರ್ನಾಟಕದಲ್ಲೇನಾಗುತ್ತಿದೆ ಎನ್ನುವುದೇನು!! ಬಾಪ್ ರೇ!; ಏನು ಕಾಳಜಿ? ಏನು ಪ್ರೀತಿ!?

ಹಾಸ್ಯಾಸ್ಪದವೇನೆಂದರೆ, ಈ ಎಲ್ಲಾ ನಟರೂ ಸಹ ಕನ್ನಡಿಗರು ಕಾವೇರಿಗೋಸ್ಕರ ಹೋರಾಡುವಾಗ ರಸ್ತೆಗಿಳಿದವರಲ್ಲ.. ಸಾವಿರಗಟ್ಟಲೇ ರೈತರ
ಸಾವಾಗುವಾಗ ಪ್ರಶ್ನಿಸಿದವರಲ್ಲ.. ಅದೂ ಹೋಗಲಿ! ರಾಜ್ಯದಲ್ಲಿ ಕುಲಗೆಟ್ಟ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರೂ ಅಲ್ಲ.. ರಾಜ್ಯದಲ್ಲಿ ಎರಡು ವರ್ಷ ಬರಗೆಟ್ಟ ಸ್ಥಿತಿಯಲ್ಲಿದ್ದ ಸಮಾಜಕ್ಕೆ ಇವರಿಂದ ಯಾವ ಸಾಂತ್ವನವೂ ಸಿಕ್ಕಿಲ್ಲ‌. ಆದರೀಗ? ರಾತ್ರಿ ಬೆಳಗಾಗುವುದರೊಳಗೆ ತತ್ವಜ್ಞಾನಿಗಳಾಗಿ ಹೋಗಿದ್ದಾರೆ ಮಹೋದಯರು! ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವುದೇನು? ದೇಶದ ಬಗ್ಗೆ ಕಾಳಜಿಯೇನು?! ಅಬ್ಬೋ!! ಇದ್ದಕ್ಕಿದ್ದ ಹಾಗೆ ಕರ್ನಾಟಕದ ರಕ್ಷಕರಾಗಿ ಹೋಗಿದ್ದಾರೆ!

ಭಾರತದಲ್ಲೊಂದು ಸಂಪ್ರದಾಯವಿದೆ! ನವನವೀನವಾದ ಸಂಪ್ರದಾಯವದು! ಅದರಲ್ಲಿಯೂ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದೇ, ಆ ಸಂಪ್ರದಾಯಕ್ಕೊಂದು ಕಳೆ ಬಂದಿದೆ! ಏನು ಗೊತ್ತಾ?! ನಿಮಗೆ ಪ್ರಶಸ್ತಿ ಬೇಕೆಂದೆದ್ದಿರೆ, ಎಲ್ಲೋ ಯಾವುದೋ ಸೈಟು ಬೇಕಿದ್ದರೆ, ಅಥವಾ ಹಿಂದೂ ವಿರೋಧಿ ಸರಕಾರಗಳ ಬೆಂಬಲ ಸಿಗಬೇಕಾದರೆ ಭಾರತೀಯ ಜನತಾ ಪಕ್ಷದ ವಿರುದ್ಧ ಯರ್ರಾಬಿರ್ರಿ ತೆಗಳುವುದು. ಮೋದಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ದೇಶ ವನ್ನು ತುಂಡರಿಸುತ್ತೇವೆ ಎಂದು ಪ್ರತಿಭಟನೆ ಮಾಡುವುದು. ಹಿಂದೂ ಧರ್ಮದ ವಿರುದ್ಧ ಕುತಂತ್ರ ಹೂಡಿ ಹಿಂದೂ ಕಸಾರ್ಯಕರ್ತರ ಹತ್ಯೆಗೆ ಪರೋಕ್ಷವಾಗಿ ಬೆಂಬಲಿಸುವುದು! ವ್ಹಾ!! ಕ್ಷಣಿಕ ಕಾಲದ ಬುದ್ಧಿಜೀವಿಗಳಾಗುವ ಇವರೆಲ್ಲರೂ ತಮಗೆ ಬೇಕಾದಷ್ಟು ಸಿಕ್ಕಿದ ತಕ್ಷಣ ಉಸಿರಿಲ್ಲದಂತೆ ಬಿದ್ದಿರುತ್ತಾರೆ! ಅಂತಹ ಒಬ್ಬ ವ್ಯಕ್ತಿ ಪ್ರಕಾಶ್ ರಾಜ್! ಎಲ್ಲಿದ್ದನೋ ಏನೋ? ಕೊಟ್ಟಷ್ಟು ಕಾಸಿಗೆ ನಟನೆ ಮಾಡಿಕೊಂಡಿದ್ದ ನಟನೊಬ್ಬ ಇದ್ದಕ್ಕಿದ್ದಂತೆ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಅಬ್ಬರಿಸಿದ ಹೊಡೆತಕ್ಕೆ ಇಡೀ ಕರ್ನಾಟಕದ ಬಲಪಂಥೀಯರು ಧೂಳಿಪಟವಾಗುತ್ತಾರೆಂದು ಕೊಂಡಿದ್ದಷ್ಟೇ! ಸುಮ್ಮನಿರಲಕಾರದೆ ಎದುರು ಹಾಕಿಕೊಂಡ ಪರಿಣಾಮ, ತಾನೇ ಧೂಳೆದ್ದು ಹೋಗಿದ್ದ. ಅಷ್ಟಾದರೂ ಬಿಡದ ರಾಜ್, ಎಣಿಸಿದ್ದಂತೆ ಮೋದಿ ಮತ್ತು ಯೋಗಿಯ ವಿರುದ್ಧ ವಿಷಕಾರಿದಾಗಲೇ ಅರ್ಥವಾಗಿ ಹೋಗಿತ್ತು! ವೈಯುಕ್ತಿಕ ಲಂಚಕ್ಕೋಸ್ಕರ ಬಾಯಿ ಹರಿಯಬಿಟ್ಟು ಮೂರನ್ನೂ ಬಿಟ್ಟು ನಿಂತಿದ್ದಾನೆಂದು! ಕೊನೆ ಕೊನೆಗೆ ತೀರಾ ಅತಿಯಾಗಿ ಹೋದ ಪ್ರಕಾಶ್ ನ #Just Asking ಎಂಬ ಅಭಿಯಾನಕ್ಕೆ ಭಾರತೀಯರು #Purposely Asking ಎಂಬ ತಿರುಗೇಟು ಕೊಟ್ಟ ಪರಿಣಾಮ ಆ ಅಭಿಯಾನವೊಂದು ಅಲ್್ಲಿಗೇ ನಿಂತಿತ್ತು.

ಈ ಪ್ರಕಾಶ್ ನ ವಿಷ ಅಲ್ಲಿಗೇ ಮುಗಿಯಲಿಲ್ಲ.. ಯಾವ್ಯಾವಾಗ ಅವಕಾಶ ಸಿಗತೊಡಗಿತೋ, ಮೈಕು ಹಿಡಿದು ಮೋದಿ ಸರಕಾರದ ವಿರುದ್ಧ ಹರಿಹಾಯತ್ತಲೇ ಬಂದ ಪ್ರಕಾಶ್ ರಾಜ್, ಮೋದಿ ಸರಕಾರ ಕೋಮುವಾದಿ ಸರಕಾರ, ಅಲ್ಪಸಂಖ್ಯಾತರ ವಿರೋಧಿ ಸರಕಾರ ಎಂದು ದೇಶದಲ್ಲಿ ತಮಗೆ ಮಾತನಾಡಲಾಗವಂತಹ ವಿಚಾರಗಳನ್ನೆಲ್ಲ ಬಳಸಿ ಪ್ರತಿಯೊಂದಕ್ಕೂ ಮೋದಿಯನ್ನೇ ಹೊಣೆಗಾರರನ್ನಾಗಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ … ಮಾಧ್ಯಮದವರ ಪ್ರಶ್ನೆಗೆ ತನಗ್ಯಾವುದೇ ರಾಜಕೀಯ ಹಂಬಲಗಳಿಲ್ಲ ಎಂದು ಘೋಷಿಸಿಕೊಳ್ಳುವ ಈ ವ್ಯಕ್ತಿ ದೇಶವನ್ನು ಕಾಪಾಡಬೇಕಿದೆ ಎನ್ನುವಾಗ, ಇವನದೇ ಪಕ್ಷ ಕಾಂಗ್ರೆಸ್ಸೊಂದು ಎಪ್ಪತ್ತು ವರ್ಷಗಳ ಕಾಲ ಭಾರತವನ್ನು ತುಳಿದಿದ್ದರ ಬಗ್ಗೆ ಸೊಲ್ಲೆತ್ತುವುದಿಲ್ಲ.. ಬಾರಿ ಬಾರಿಗೂ ಕೂಡ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅರಚುವ ಈತನಿಗೆ ಇವನದೇ ಪಕ್ಷದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಎರಡು ವರ್ಷಗಳ ಕಾಲ ಪ್ರಜಾಪ್ರಭುತ್ವವನ್ನು ಎಡಗಾಲಿನಲ್ಲಿ ಒದ್ದು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಭಾರತೀಯರ ಬದುಕನ್ನು ಹೀನಾಯವಾಗಿಸಿದ್ದರ ಬಗ್ಗೆ ಮಾತನಾಡುವುದು ಸಾಯಲಿ,
ಉಸಿರೂ ಮೇಲೇರುವುದಿಲ್ಲ! ಅದೂ ಹೋಗಲಿ, ತಾನೊಬ್ಬ ಜಾತ್ಯಾತೀತ ಎಂದು ಬೊಬ್ಬರಿಯುವ ಈರ್ವರು ಅಲ್ಲಿ ಗಡಿಯಲ್ಲಿ ಪಾಕಿಗಳ ಅಟ್ಟಹಾಸಕ್ಕೆ ಬಲಿಯಾಗುವ ಸೈನಿಕರ ಬಗ್ಗೆಯಾಗಲೀ, ಅಗೋ ಅಲ್ಲಿ ಜೆ ಎನ್ ಯು ವಿದ್ಯಾರ್ಥಿಗಳು “ಭಾರತವನ್ನು ತುಂಡು ತುಂಡು ಮಾಡುತ್ತೇವೆ” ಎಂದವರ ಬಗೆಗಾಗಲಿ, ಕರ್ನಾಟಕದಲ್ಲಿ ೨೧ ಹಿಂದೂಗಳ ಹತ್ಯೆಯಾದ ಬಗ್ಗೆಯಾಗಲಿ, ಕೇರಳದಲ್ಲಾಗುತ್ತಿರುವ ಹಿಂದೂಗಳ ಮಾರಣ ಹೋಮದ ಬಗೆಗಾಗಲಿ ಮಾತನಾಡುವುದೇ ಇಲ್ಲ.. ಯಾಕೆ ಗೊತ್ತಾ? ಇಂತಹವೆಲ್ಲ ಅವರ ಸಿದ್ಧಾಂತಗೊಳಗಿಲ್ಲ!

ಇಷ್ಟು ದಿನವೂ ಕೂಡ ಪ್ರಕಾಶ್ ರಾಜ್ ಮೋದಿಯ ವಿರುದ್ಧ ನಿರಂತರವಾಗಿ ವಿಷ ಕಾರುತ್ತ ಬಂದವನೇ! ಬಿಜೆಪಿ ಮತ್ತು ಸ್ವಯಂ ಸೇವಕ ಸಂಘದ ಕಾರ್ಯಕರ್ತರನ್ನು ಅಶ್ಲೀಲ ಶಬ್ದದಿಂದ ಬಯ್ಯುತ್ತ, ಕೊಲೆಗಾರರೆಂದೇ ಬಿರುದು ಕೊಟ್ಟಿದ್ದು ವ್ಯಾಪಕವಾದ ಟೀಕೆಗೊಳಗಾಗಿತ್ತು. ಗೌರೀ ಲಂಕೇಶ್ ಹತ್ಯೆಯ ತನಿಖೆಯನ್ನು ಎಸ್ ಐ ಟಿ ಪೂರ್ಣಗೊಳಿಸುವುದರೊಳಗೇ ಪ್ರಕಾಶ್ ರಾಜ್ ಹತ್ಯಾಕಾರರ್ಯಾರೆಂಬುದನ್ನು ಪತ್ತೆ ಹಚ್ಚಿಬಿಟ್ಟಿದ್ದ! ಅದರಲ್ಲೂ, ಬಲಪಂಥೀಯರನ್ನೇ ಗುರಿಯಾಗಿಸಿ ನೀಡಿದ್ದ ಹೇಳಿಕೆಯನ್ನು ಸ್ವತಃ ಗೌರಿಯ ತಮ್ಮನಾದ ಇಂದ್ರಜಿತ್ ಲಂಕೇಶ್ ಸಹ ಕಾಂಗ್ರೆಸ್ಸಿನ ಎನ್ ಐ ಎ ತನಿಖೆಯಲ್ಲಿ ನನಗೆ ನಂಬಿಕೆಯಿಲ್ಲ ವೆಂದರೂ ಪ್ರಕಾಶ್ ರಾಜ್ ಮಾತ್ರ ಕಾಂಗಿಗಳ ಬಾಯಲ್ಲಿ ಬಿದ್ದ ಹುಚ್ಚನಂತೆ ಅರಚುತ್ತಲೇ ಇದ್ದನಷ್ಟೇ!

ಎಲ್ಲರಿಗೂ ಅಚ್ಚರಿಯಾಗಿತ್ತು!!

ಪ್ರಕಾಶ್ ರಾಜ್ ನಂತಹ ಅದ್ಭುತ ನಟ ಈ ರೀತಿಯ ಮನಃಸ್ಥಿತಿಯನ್ನು ಹೊಂದಿದ್ದಾರಾ ಎಂಬುದೇ ಎಲ್ಲರ ಅಚ್ಚರಿಗೆ ಕಾರಣವಾಗಿತ್ತಷ್ಟೇ! ಅದರಲ್ಲೂ ಸಹ, ಅದೆಷ್ಟೋ ಅಭಿಮಾನಿಗಳು ದಿನ ಕಳೆಯುವುದರಲ್ಲಿ ಪ್ರಕಾಶ್ ರಾಜ್ ವಿರುದ್ಧ ತಿರುಗಿ ಬಿದ್ದರು! ಗೌರೀ ಹತ್ಯೆಯಲ್ಲಿ ರಾಜ್ಯ ಸರಜಾರಕ್ಕೆ ಪ್ರಶ್ನೆ ಮಾಡವ ಬದಲು, ಕೇಂದ್ರ ಸರಕಾರಕ್ಕೆ ಪ್ರಶ್ನೆ ಮಾಡಿ, ಪೂರ್ವಾಪರ ಯೋಚನೆಯಿಲ್ಲದೇ ಮೋದಿಯ ವಿರುದ್ಧ ಹರಿಹಾಯ್ದಿದ್ದ ಪ್ರಕಾಶ್ ರಾಜ್ ಯಾಕೆ ಇದ್ದಕ್ಕಿದ್ದಂತೆ ವಿಷ ಕಾರಿದ್ದೆಂಬುದು ಕೊನೆಗೂ ಬಯಲಾಗಿ ಹೋಗಿದೆ!

ಈ ಕೆಳಗಿನ ಚಿತ್ರವೊಂದನ್ನು ನೋಡಿ! ನಿಮಗೆಲ್ಲ ಅರ್ಥವಾಗಿ ಹೋಗುತ್ತದೆ!

ನೋಡಿದಿರಾ!? ಏನಾದರೂ ಅರ್ಥವಾಯಿತಾ?! ವಾಸ್ತವವಾಗಿ ಇದೊಂದೇ ಛಾಯಾಚಿತ್ರ ಸಾಕು! ಯಾಕೆ ಪ್ರಕಾಶ್ ರಾಜ್ ವಿಷ ಕಾರುತ್ತಿದ್ದಾನೆಂದು ತಿಳಿಯುವುದಕ್ಕೆ! ಪ್ರಕಾಶ್ ರಾಜ್ ರ ಜೊತೆ ವೇದಿಕೆ ಹಂಚಿಕೊಂಡವರು ಜೆ ಎನ್ ಯುವಿನ ಭಾರತ್ ಬರ್ಬಾದಿ ಗ್ಯಾಂಗ್ ನ ಮಹೋದಯರು! ಇದಾಎ ಎರಡು ವರ್ಷಗಳ ಹಿಂದೆ ಜೆಎನ್ ಯುವಿನ ಆವರಣದಲ್ಲಿ ರಾಷ್ಟ್ರದ್ರೋಹಿ ಘೋಷಣೆ ಕೂಗುತ್ತಾ ನಿಂತವರು!! ರಾಷ್ಟ್ರದ್ರೋಹದ ಆಪಾದನೆ
ಎದುರಿಸುತ್ತರುವ ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖಲೀದ್ ನನ್ನೂ ಕಾಣಬಹುದು!! ಇವೇ ಎರಡು ಮಹೋದಯರು ಭಯೋತ್ಪಾದಕ ಅಫ್ಜಲ್ ಗುರುವಿನ ಕಾರ್ಯಕ್ರಮವನ್ನು ಜೆಎನ್ ಯುವಿನಲ್ಲಿ ಹಮ್ಮಿಕೊಂಡಿದ್ದರು! ವ್ಹಾ! ಇನ್ನೂ ಈಚೆ ಬನ್ನಿ, ಬಾಯಿಬಿಟ್ಟರೆ ಗಬ್ಬು ನಾರುವ ಜಿಗ್ನೇಶ್ ಮೇವಾನಿ!!! ಇನ್ನೊಬ್ಬಳು ತೀಸ್ತಾ ಸೆಟಲ್ವಾಡ್!! ಆತಂಕವಾದಿ ಇಶ್ರತ್ ಜಹಾನ್ ಪರ ಭಾರತದ ವಿರುದ್ಧ ಯುದ್ಧ ಸಾರಿದವಳು!! ಇವೆಲ್ಲವೂ ಸಹ ಪಿಎಫ್ಐ, ಎಸ್ ಡಿಪಿಐ ಅಂತಹ ಉಗ್ರ ಸಂಘಟನೆಗಳಿಗೆ ಅನುದಾನ ನೀಡುವವರು!! ಭೇಷ್! ಪ್ರಕಾಶ್ ರಾಜ್!\

ವಾಸ್ತವ ಅದೇ ನೋಡಿ!! ಇವರ್ಯಾರೂ ಗೌರೀ ಡೇ ಗೆ ಬಂದವರಲ್ಲ! ಗೌರಿಯ ಜನ್ಮದಿನವನ್ನೂ ಆಚರಿಸಲು ಬಂದವರಲ್ಲ! ಬದಲಾಗಿ ಗೌರೀಯ ನೆಪದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೇರದಿರಲಿ ಎಂಬ ಆಶಯವನ್ನಿಟ್ಟು ಗೌರಿಯ ಬಗ್ಗೆ ಮಾತನಾಡುವ ಬದಲು ಮೋದಿಯ ಬಗ್ಗೆಯೇ ಮಾತನಾಡುತ್ತ ತೋಪೆದ್ದು ಹೋದವರು! ಅದರಲ್ಲೂ ನೆನ್ನೆ ಮೋದಿ ಮತ್ತು ಜಶೋದಾಬೇನ್ ವಿರುದ್ಧ ತೀರಾ ಅಶ್ಲೀಲವಾದ ಹೇಳಿಕೆ ಕೊಟ್ಟ ಕನ್ಹಯ್ಯ ಕುಮಾರ್, ಸ್ವಯಂ ಸೇವಕ ಸಂಘದ ಬಗ್ಗೆ ಊಳಿಡುವ ಜಿಗ್ನೇಶ್ ಎಂತಹ ವರಿಗೆ ಸಾರ್ವಜನಿಕವಾಗಿ ಯಾವ ಭಾಷೆಯನ್ನು ಬಳಸಬೇಕು ಎಂಬ ಅರಿವಿಲ್ಲವಾದರೂ ಹೇಳಿಕೊಳ್ಳುವುದು ಮಾತ್ರ ನಾವೆಲ್ಲ ಯುವ ನಾಯಕರೆಂದೇ! ಇಂತಿಪ್ಪ ನಾಯಕರನ್ನು ಪ್ರಕಾಶ್ ರಾಜ್ ರಂತಹ ಸೂಡೋ ಸೆಕ್ಯುಕರ್ ಗಳು ತಂಡವನ್ನಾಗಿ ಮಾಡಿಕೊಂಡು ಪೋಸು ಕೊಡುತ್ತವೆ!! ಅದ್ಯಾವ ಪುರುಷಾರ್ಥಕ್ಕೋ?!

ಅಷ್ಟೇ ಅಲ್ಲವಾ?! ಒಪ್ಪತ್ತಿನ ಗಂಜಿ ಬಂದರೆ ಸಾಕೆಂದು ಜೊಲ್ಲು ಸುರಿಸುವ ಇಂತಹವರ ಜೊತೆ ಸೇರಿದ ಪ್ರಕಾಶ್ ರಾಜ್ ಕೂಡಾ ಸಾಚಾ ಏನಲ್ಲವಾದರೂ, ಅಚ್ಚರಿಯೇ ಇಲ್ಲ ಬಿಡಿ! ತಿಂಗಳ ಕೊನೆಯಲ್ಲಿ ಬೀದಿಯ ಕಾರ್ನರ್ರು ಸೈಟು, ತಿಂಗಳ ಗಂಜಿಗೇನೂ ಕೊರತೆಯಾಗದಿರುವ ಹಾಗೆ ಕಾಂಗ್ರೆಸ್ ಅನುದಾನಿತ ನಟರು ಇವರೆಲ್ಲ. ಮೂಲೋದ್ದೇಶ ದೇಶ ಉದ್ದಾರವಾಗಲಿ ಎಂದಲ್ಲ, ತಮಗೆಷ್ಟು ಸಿಗಬಹುದು ಎಂಬುದು ಒ್ರಕಾಶ್ ರಾಜ್ ರಂತಹವರ ಮನಃ ಸ್ಥಿತಿ ಅಷ್ಟೇ!! ಈಗಲಾದರೂ ಅರ್ಥವಾಯಿತಲ್ಲ!? ಕೊಟ್ಟಷ್ಟು ದುಡ್ಡಿಗೆ ನಟನೆ ಮಾಡುವುದನ್ನು ಬಿಟ್ಟು ಮತ್ತೊಂದಿಷ್ಟು ಎಂಜಲಿಗೆ ಬಾಯಿ ಹಾಕಿದ್ದೇಕೆ ಎಂದು?!
ಮೋದಿ ವಿರೋಧಿ ಮತ್ತು ಹಿಂದೂ ವಿರೋಧಿ ದಿನವನ್ನಾಚರಿಸಿದ ಇಂತಹವಕ್ಕೆ ಸಮಾಜವೇ ಪಾಠ ಕಲಿಸಲಿದೆಯಷ್ಟೇ!!

– ಅಜೇಯ ಶರ್ಮಾ

Editor Postcard Kannada:
Related Post