X

ಗುಜರಾತ್‍ನಲ್ಲಿ ಬಿಜೆಪಿ ಸರಕಾರ ಉರುಳಲಿದೆಯೇ..? ಹಾರ್ದಿಕ್ ಪಟೇಲನ ಶಕುನಿ ತಂತ್ರಕ್ಕೆ ಬಲಿಯಾದರಾ ಡಿಸಿಎಂ ನಿತಿನ್ ಪಟೇಲ್..?!

ಹೇಗಾದರೂ ಮಾಡಿ ಈ ಬಾರಿ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್ ಗುಜರಾತಿನ ಪಾಟೀದಾರ್ ಸಮುದಾಯದ ದಾಳ ಉರುಳಿಸಿದ್ದ ಹಾರ್ದಿಕ್ ಪಾಟೇಲ್‍ನನ್ನು ತನ್ನ ಕೈಗೊಂಬೆಯಾಗಿ ಇರಿಸಿಕೊಂಡು ರಾಜಕೀಯ ಚದುರಂಗದಾಟವನ್ನು ಆಡಿತ್ತು. ಯಾವಾಗ ಹಾರ್ದಿಕ್ ಪಟೇಲ್ ಸಹಿತ ಕಾಂಗ್ರೆಸ್ ನೆಲಕಚ್ಚಿತ್ತೊ ಅಂದಿನಿಂದ ದಿಕ್ಕೇ ತೋಚದ ಹಾಗೆ ನಾಪತ್ತೆ ಯಾಗಿದ್ದರು ಹಾರ್ದಿಕ್ ಹಾಗು ಕಾಂಗ್ರೆಸ್.! ಆದರೆ ಗುಜರಾತ್ ಬಿಜೆಪಿ ಸರಕಾರದ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ತನ್ನ ಮನಸ್ತಾಪವನ್ನು ಬಿಚ್ಚಿಟ್ಟ ತಕ್ಷಣವೇ ಹಾರ್ದಿಕ್ ಪಟೇಲ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಪರೋಕ್ಷ ಆಹ್ವಾನ ನೀಡಿದ್ದು ಉಪ ಮುಖ್ಯ ಮಂತ್ರಿ ನಿತಿನ್ ಪಟೇಲ್‍ಗೆ ಬುಲಾವ್ ನೀಡಿದ್ದಾರೆ..

ಗುಜರಾತ್ ನಲ್ಲಿ ಶತಾಯಗತಾಯ ಬಿಜೆಪಿಯನ್ನು ಹಣಿಯಲೇ ಬೇಕು ಎಂದು ಹುನ್ನಾರ ಹೂಡಿರುವ ಹಾರ್ದಿಕ್ ಪಟೇಲ್ ಇದೀಗ ಮತ್ತೊಂದು ದಾಳ ಉರುಳಿಸಿದ್ದಾರೆ. ಆದರೆ ಹಾರ್ದಿಕ ನಡೆಯ ಹಿಂದೆ ಜನಹಿತಕ್ಕಿಂತ ಕೇವಲ ಅಧಿಕಾರ ದಾಹದ ತಹತಹಿಕೆ ಎದ್ದು ಕಾಣುತ್ತಿದೆ. ಗುಜರಾತ್‍ನ ಬಿಜೆಪಿ ಸರಕಾರ ಉರುಳಿಸುವ ದುಷ್ಟ ಕಾರ್ಯಕ್ಕೆ ಹಾರ್ದಿಕ್ ಕೈ ಹಾಕಿದ್ದಾರೆ.

ಬಿಜೆಪಿ ವಿರುದ್ಧ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಪಾಟೀದಾರ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್, ಇದೀಗ ಅದೇ ಜಾತಿಯ ಕಾರ್ಡ್ ಇಟ್ಟುಕೊಂಡು ಗುಜರಾತ್ ಸರಕಾರವನ್ನು ಬೀಳಿಸುವ ಹುನ್ನಾರ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಮಧ್ಯೆ ಬಿರುಕು ಹುಟ್ಟಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಹಾರ್ದಿಕ್ ಪಟೇಲ್ ಪ್ರಯತ್ನಿಸುತ್ತಿದ್ದಾರೆ.

ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ಏರಲು ಬಿಡಬಾರದು ಎಂದು ಎಷ್ಟೇ ಶ್ರಮಿಸಿದರೂ, ವಿಫಲವಾಗಿದ್ದ ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಮೇವಾನಿ ಇದೀಗ ಸರ್ಕಾರ ಉರುಳಿಸಲು ವಾಮಮಾರ್ಗ ಹಿಡಿದಿದ್ದಾರೆ. ಪಾಟೀದಾರ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಗುಜರಾತ್ ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರನ್ನು ಆಮಿಷ ಒಡ್ಡಿದ್ದಾರೆ. ಬಿಜೆಪಿಯಿದ 10 ಶಾಸಕರನ್ನು ಕರೆದುಕೊಂಡು ಬಂದರೆ ಕಾಂಗ್ರೆಸ್ ಸರ್ಕಾರ ರಚಿಸಿ, ಉನ್ನತ ಹುದ್ದೆ ಒದಗಿಸಲಾಗುತ್ತದೆ ಎಂದು ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

ಅಲ್ಲದೇ ಹಾರ್ದಿಕ್ ಬಿಜೆಪಿಯಲ್ಲಿರುವ ಪಟೇಲ್ ಸಮುದಾಯದ ಶಾಸಕರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಹುನ್ನಾರವನ್ನು ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ. ಪಟೇಲ್ ಜಾತಿಯನ್ನೇ ಇಟ್ಟುಕೊಂಡು ಹಾರ್ದಿಕ್ ಮತ್ತೊಂದು ರಾಜಕೀಯ ದಾಳ ಉರುಳಿಸಿದ್ದಾರೆ. ಅಧಿಕಾರಕ್ಕೇರಲು ಜಾತಿ ಮುಖಂಡರ ತಲೆ ಕೆಡಿಸುವ ವಾಮಮಾರ್ಗವನ್ನು ಹಿಡಿದಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ಹಾರ್ದಿಕ್ ಪಟೇಲ್ ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಹೇಗಾದರೂ ಮಾಡಿ ಗುಜರಾತ್ ನಲ್ಲಿ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಕಾಂಗ್ರೆಸ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿ ಭಾರಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದರ ಮುನ್ನುಡಿಯೇ ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರನ್ನು 10 ಶಾಸಕರೊಂದಿಗೆ ಆಗಮಿಸಿ ಎಂದು ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

ಗುಜರಾತ್ ನ 182 ಸ್ಥಾನಗಳಲ್ಲಿ ಬಿಜೆಪಿ 99 ಸ್ಥಾನ, ಕಾಂಗ್ರೆಸ್ 77 ಸ್ಥಾನ ಮತ್ತು ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಗುಜರಾತ್ ವಿಧಾನಸಭೆ ಗದ್ದುಗೆ ಏರಲು 92 ಸ್ಥಾನಗಳು ಬೇಕು. ಇದೀಗ ಕಾಂಗ್ರೆಸ್ ನ 77, ಪಕ್ಷೇತರ 6 ಸ್ಥಾನ ಮತ್ತು ಬಿಜೆಪಿಯಿಂದ ನಿತೀನ್ ಪಟೇಲ್ 10 ಶಾಸಕರನ್ನು ಕರೆದುಕೊಂಡು ಬಂದರೆ ಸರ್ಕಾರ ರಚಿಸುವ ಲೆಕ್ಕಾಚಾರ ಹಾರ್ದಿಕ್ ಪಟೇಲ್ ಅವರದ್ದು ಎನ್ನಲಾಗಿದೆ.

ಈಗಾಗಲೇ ಸೋತು ಸುಣ್ಣವಾಗಿರುವ ಹಾರ್ದಿಕ್ ಪಟೇಲ್ ಈಗ ಬಿಜೆಪಿಯ ಮನಸ್ತಾಪದ ಲಾಭವನ್ನು ಪಡೆದುಕೊಳ್ಳಲು ಯತ್ನಿಸುತ್ತಿದೆ. ಇದರ ಹಿಂದೆ ಕಾಂಗ್ರೆಸ್ ಎಂಬ ಮುಳುಗುವ ಹಡಗು ಇರುವುದು ನಗ್ನ ಸತ್ಯ. ಪಟೇಲ್ ಸಮುದಾಯದ ಜನರ ಹಿತ ಕಾಪಾಡಲು ಸರಕಾರಕ್ಕೆ ಒತ್ತಡ ಹೇರಬೇಕಿದ್ದ ಹಾರ್ದಿಕ್ ಪಟೇಲ್ ವಾಮಮಾರ್ಗದ ಮೂಲಕ ಆಡಳಿತದ ಗದ್ದುಗೆ ಏರಲು ಪ್ರಯತ್ನಿಸುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಪವಿತ್ರ

Editor Postcard Kannada:
Related Post