X

ತನ್ನವರನ್ನೆಲ್ಲಾ ಕಳೆದುಕೊಂಡು ಒಬ್ಬಂಟಿಗನಾಗಿದ್ದ ಈ ವೀರಯೋಧ, 20 ಮಂದಿ ಪಾಕ್ ಸೈನಿಕರನ್ನು ಸುಟ್ಟು ಬೂದಿ ಮಾಡಿ ಕಾರ್ಗಿಲ್ ಗೆದ್ದಿದ್ದ!!

ಈ ದೇಶದ ದೊಡ್ಡಮಗನ ಕಥೆ ಎಂಥವರನ್ನು ಕೂಡ ಒಂದು ಕ್ಷಣ ಭಾವುಕರನ್ನಾಗಿ ಮಾಡುತ್ತೆ!!

ಜುಲೈ ಬಂತೆಂದರೆ ಕಾರ್ಗಿಲ್ ನೆನಪುಗಳು ಇನ್ನೂ ಹೆಚ್ಚಾಗಿ ಮನಸ್ಸಿನಲ್ಲಿ ರೋಷ, ಕಿಚ್ಚು, ನಮ್ಮ ಸೈನಿಕರ ಬಗೆಗೆ ಹೆಮ್ಮೆ, ಮಡಿದವರ ಬಗೆಗೆ ಗೌರವ, ಅವರ ಕುಟುಂಬದ ಮೇಲೆ ಅನುಕಂಪ, ವಿಜಯ ದಿವಸದ ಸಂತಸ ಎಲ್ಲವೂ ಒಟ್ಟಿಗೆ ಮೂಡುತ್ತದೆ. ಯುದ್ದಕ್ಕೆ ಬಂದ ಪಾಕಿಸ್ತಾನವನ್ನು ನಮ್ಮ ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ನೆನಪು ಇದೆಯಲ್ಲಾ? ಅದು ಯಾವತ್ತೂ ಕೂಡ ಅಳಿಸಲು ಅಸಾಧ್ಯ!!

ಆದರೆ ಈ ದೇಶದ ದೊಡ್ಡಮಗನ ಕಥೆ ಎಂಥವರನ್ನು ಕೂಡ ಒಂದು ಕ್ಷಣ ಭಾವುಕರನ್ನಾಗಿ ಮಾಡುತ್ತೆ!! ಕಾರ್ಗಿಲ್ ದಿವಸ್ ಅಂದರೆ ಕೇವಲ ನಾವು ಯುದ್ದವನ್ನು ಗೆದ್ದ ದಿನ ಎಂದು ಖುಷಿ ಪಡುತ್ತೇವೆ. ಆದರೆ ಅದೆಷ್ಟೋ ತಾಯಂದಿರು ತಮ್ಮ ದೇಶಕ್ಕೋಸ್ಕರ ಮಕ್ಕಳನ್ನೇ ತ್ಯಾಗ ಮಾಡಿದ್ದಾರೆ ಅವರ ನೋವನ್ನು ಸಂಭ್ರಮಿಸುವುದು ತರವಲ್ಲ!! ಆ ವೀರ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಮಗ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ, ಮತ್ತೊಬ್ಬ ಮಗ ಅಮೋಲ್ ಕಾಲಿಯಾ.

ಅದೊಂದು ದಿನ ರಾತ್ರಿ ಆ ತಾಯಿಗೊಂದು ದುಃಸ್ವಪ್ನ. ಒಮ್ಮೆಲೇ ಎದ್ದು, ತನ್ನ ಪತಿಯನ್ನು ಎಬ್ಬಿಸುತ್ತಾರೆ. ಕನಸಿನಲ್ಲಿ ಕಂಡದ್ದು ತನ್ನ ಇಬ್ಬರೂ ಮಕ್ಕಳು ಮಿಲಿಟರಿ ಸೇವೆಯಲ್ಲಿದ್ದು, ಕಾರ್ಗಿಲ್ ಯುದ್ಧ ಬೇರೆ ಘೋಷಣೆಯಾಗಿತ್ತು. ಯುದ್ಧದ ಭೀತಿ ಆ ತಂದೆ ತಾಯಿಯ ಮನದಲ್ಲಿ ಮೊಳಗಿದ್ದವು!! ಹೀಗೆ ಸ್ವಪ್ನ ಬಿದ್ದ ಎರಡೇ ದಿನದಲ್ಲಿ ಸುದ್ಧಿ ವಾಹಿನಿಗಳಲ್ಲಿ ಹೀಗೊಂದು ಸುದ್ಧಿ ಪ್ರಸಾರವಾಗುತ್ತದೆ. ಅದೇನೆಂದರೆ, “ಭಾರತೀಯ ಸೈನಿಕರು ಕಾರ್ಗಿಲ್ ಪರ್ವತಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಬಹುದೊಡ್ಡ ವಿಜಯಗಳಿಸಿದ್ದಾರೆ” ಎಂದು.

ತಾಯಿಗೆ ಕನಸು ಬಿದ್ದ ಎರಡು ಮೂರು ದಿನಕ್ಕೆ ಕಾರ್ಗಿಲ್ ಯುದ್ದ ತೀವ್ರಗೊಳ್ಳುತ್ತೆ. ಆ ಸಂದರ್ಭದಲ್ಲಿ ಅಮೋಲ್ ಕಾಲಿಯ ಪತ್ರ ಬರಿತಾನೆ!! “ಅಮ್ಮ… ನನ್ನ ಬಗ್ಗೆ ನೀವೇನು ಚಿಂತಿಸಬೇಡಿ. ಈ ತಿಂಗಳ ಕೊನೆಗೆ ನಾನು ದೆಹಲಿಗೆ ಹಿಂದಿರುಗುತ್ತಿದ್ದೇನೆ. ನಿಮಗೆ ತುಂಬಾ ತುರ್ತಾಗಿದ್ದರೆ ನನ್ನ ಮದುವೆಯನ್ನು ನಿಶ್ಚಯ ಮಾಡಿ” ಎಂದು!! ಆದರೆ ಪತ್ರ ಬರೆದ ದಿನ ನಡೆದ ಕಥೆಯೇ ಬೇರೆ!!

ಅದು 1999ರ ಮೇ ತಿಂಗಳು. ಕಾಶ್ಮೀರದ ಗುಡ್ಡಗಾಡುಗಳಲ್ಲಿ ಓಡಾಡುತ್ತಿದ್ದ ಸಾಮಾನ್ಯ ಕುರಿಗಾಹಿಯೊಬ್ಬ ಭಾರತೀಯ ಸೇನೆ ಬೆಚ್ಚಿಬೀಳುವಂತಹ ವಾರ್ತೆಯೊಂದನ್ನು ಹೊತ್ತು ತಂದಿದ್ದ: “ಗಡಿನಿಯಂತ್ರಣ ರೇಖೆಯ ಆಚೆಯಿಂದ ಪಾಕ್ ಅತಿಕ್ರಮಣಕಾರರು ಭಾರತದೊಳಕ್ಕೆ ನುಸುಳುತ್ತಿದ್ದಾರೆ…” ಸಾಮಾನ್ಯವಾಗಿ ವಿಪರೀತ ಹಿಮಪಾತವಿರುವ ಚಳಿಗಾಲದ ಅವಧಿಯಲ್ಲಿ ಎರಡೂ ದೇಶಗಳ ಸೈನಿಕರು ಕಾರ್ಗಿಲ್, ದ್ರಾಸ್, ಮುಷ್ಕೋ ಕಣಿವೆ ಪ್ರದೇಶಗಳಲ್ಲಿ ಪಹರೆ ಕಾಯುವುದಿಲ್ಲ. ಸುರಕ್ಷಿತ ಸ್ಥಳಗಳಿಗೆ ತಮ್ಮ ನೆಲೆ ಬದಲಾಯಿಸಿಕೊಂಡು ಹಿಮಪಾತ ಕಡಿಮೆಯಾದ ಮೇಲೆ ಮತ್ತೆ ಸ್ವಸ್ಥಾನಕ್ಕೆ ಮರಳುತ್ತಾರೆ. ಉಭಯ ದೇಶಗಳ ನಡುವೆ ಇರುವ ಈ ಅಲಿಖಿತ ಒಪ್ಪಂದವನ್ನೇ ಲಾಭವನ್ನಾಗಿಸಿಕೊಂಡು ನುಸುಳುಕೋರರು ಕಾರ್ಯಾಚರಣೆಗಿಳಿದಿದ್ದರು. ಸೈನ್ಯ ಈ ಸುದ್ದಿಯನ್ನು ಕೇಳಿಯೂ ಸುಮ್ಮನೆ ಕುಳಿತಿರಲು ಸಾಧ್ಯವಿರಲಿಲ್ಲ.

23ರ ನವತರುಣ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದ ಆರು ಜನ ಸೈನಿಕರ ತಂಡ ಹೊರಟೇ ಬಿಟ್ಟಿತ್ತು!! ಅಮೋಲ್ ತನ್ನ 40 ಜನ ಸಂಗಡಿಗರೊಂದಿಗೆ 18,000 ಅಡಿ ಎತ್ತರದ ಹಿಮಚ್ಛಾದಿತ ಕಾರ್ಗಿಲ್-ಯಲೋಡೀಯರ್ ಪ್ರದೇಶದಲ್ಲಿ ಶತ್ರು ಪಡೆಯ ಜೊತೆ ಕಾದಾಡಲು ಯುದ್ಧ ವಿಮಾನದಿಂದಿಳಿದರು. ಪರಿಸ್ಥಿತಿಯ ಮಾಹಿತಿ ಕಲೆಹಾಕುತ್ತಾ ಪರ್ವತ ಶಿಖರಗಳನ್ನು ಮೆಲ್ಲಮೆಲ್ಲನೆ ಏರಿದ.

ತದನಂತರದಲ್ಲಿ ಲಡಾಖ್‍ನ ಕಕ್ಸರ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಅವರಿಗಿದ್ದ ಮಾಹಿತಿ ದೃಢಪಟ್ಟಿತು. ಭಾರತದೊಳಕ್ಕೆ ದೊಡ್ಡ ಸಂಖ್ಯೆಯ ನುಸುಳುಕೋರರು ಬಂದು ಅದಾಗಲೇ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡಿದ್ದರು. ಹೆಚ್ಚು ಸಮಯ ಕಳೆಯದೆ ಕಾಲಿಯಾ ಸುಮಾರು 13,000 ಅಡಿ ಎತ್ತರದಲ್ಲಿರುವ ಬಜರಂಗ್ ಪೆÇೀಸ್ಟ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಹಾಗೆಂದು ಸಮಾಧಾನಪಟ್ಟುಕೊಂಡು ನಿಟ್ಟುಸಿರುಬಿಡುವ ಮುನ್ನ ವೈರಿಪಡೆ ಗುಂಡಿನ ಮಳೆ ಆರಂಭಿಸಿಬಿಟ್ಟಿತು. ಕಾಲಿಯಾ ನೇತೃತ್ವದ ತಂಡಕ್ಕೂ ನುಸುಳುಕೋರರಿಗೂ ದೊಡ್ಡ ಕದನವೇ ನಡೆದುಹೋಯಿತು. ಆದರೆ ನೂರಾರು ಸಂಖ್ಯೆಯಲ್ಲಿದ್ದ ವೈರಿಗಳೆಲ್ಲಿ? ಕೇವಲ ಆರು ಮಂದಿಯ ಕಾಲಿಯಾ ತಂಡವೆಲ್ಲಿ? ಅವರ ಬಳಿಯಿದ್ದ ಆಪತ್ಕಾಲೀನ ಮದ್ದುಗುಂಡುಗಳು ಬಹುಬೇಗನೆ ಮುಗಿದುಹೋದವು. ಆಗಲೇ ಬಂದು ಜಮಾಯಿಸಿದ ಪಾಕ್ ಸೈನ್ಯ, ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿಗೈದರು. ದಾಳಿಯಲ್ಲಿ 12 ಜನ ಯೋಧರು ಪ್ರಾಣತೆತ್ತರು.

ಆದರೆ ಶತ್ರು ಪಡೆ ಸುತ್ತುವರೆದಿದ್ದರಿಂದ ತಪ್ಪಿಸಿಕೊಳ್ಳಲಾಗಲೇ ಇಲ್ಲ. ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯುವಿನ ಹಾಗೆ ಹೋರಾಡಿದ ಅಮೋಲ್­ಗೆ ಕಾದಾಡುತ್ತಾ ಮಡಿಯುವುದೊಂದೇ ಅವನ ಇರಾದೆಯಾಗಿತ್ತೇ ಹೊರತು, ತಪ್ಪಿಸಿಕೊಳ್ಳುವುದಾಗಿರಲಿಲ್ಲ.

ಅಮೋಲ್­ನ ಮೇಲೂ ಸಹ ಗುಂಡಿನ ಮಳೆಗೈದಿದ್ದರು. ಆತ ನೆಲದಲ್ಲೆ ತೆವಳುತ್ತಾ ಬಂದೂಕಿನಿಂದ ಗುಂಡನ್ನು ಚಲಾಯಿಸುತ್ತಾ 20 ಅತಿಕ್ರಮಣಕಾರರನ್ನು ಆಹುತಿ ತೆಗೆದುಕೊಂಡನು. ಭಾರತೀಯ ತುಕಡಿಗಳು ಅವರ ಸಹಾಯಕ್ಕೆ ಧಾವಿಸುವ ಮುನ್ನವೇ ಪಾಕ್ ಸೇನೆ ಅವರನ್ನು ಸುತ್ತುವರಿದು ಹೊತ್ತೊಯ್ದಾಗಿತ್ತು. ಆಮೇಲೆ ನಡೆದಿದ್ದು ಮಾತ್ರ ಅತ್ಯಂತ ಪೈಶಾಚಿಕ ಘೋರ ಕೃತ್ಯ.

ಇಪ್ಪತ್ತು ದಿನಗಳ ಬಳಿಕ ಪಾಕ್ ಸೇನೆ ಕಾಲಿಯಾ ತಂಡದ ಛಿದ್ರಛಿದ್ರ ಮೃತ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿತು. ಆರು ಮಂದಿ ವೀರಯೋಧರನ್ನು ಅಸಹಾಯಕರನ್ನಾಗಿಸಿ ಅತ್ಯಂತ ಅಮಾನವೀಯ ರೀತಿಯಲ್ಲಿ ಚಿತ್ರಹಿಂಸೆ ನೀಡಿ ವೈರಿಪಡೆ ಕೊಂದುಹಾಕಿತ್ತು. ಅವರ ದೇಹಗಳನ್ನು ಅಲ್ಲಲ್ಲಿ ಸಿಗರೇಟಿನಿಂದ ಸುಡಲಾಗಿತ್ತು; ಕಿವಿಗಳಿಗೆ ಬಿಸಿ ರಾಡ್‍ಗಳನ್ನು ತೂರಿಸಲಾಗಿತ್ತು; ಕಣ್ಣುಗಳನ್ನು ಕಿತ್ತು ತೆಗೆಯಲಾಗಿತ್ತು; ಹಲ್ಲು ಮತ್ತು ಮೂಳೆಗಳನ್ನು ಮುರಿದು ಹಾಕಲಾಗಿತ್ತು; ಮೂಗು ತುಟಿಗಳನ್ನು ಸೀಳಲಾಗಿತ್ತು; ಕೈಕಾಲುಗಳನ್ನು ಅಷ್ಟೇ ಏಕೆ ಗುಪ್ತಾಂಗಗಳನ್ನು ಕತ್ತರಿಸಲಾಗಿತ್ತು.

ಇನ್ನು ಅಮೋಲ್ ಹಾಗೂ ಆತನ 12 ಮಂದಿ ಪರಾಕ್ರಮಿ ಯೋಧರು ವೀರ ಮರಣ ಹೊಂದಿದ್ದರು. ವೀರ ಮರಣ ಹೊಂದಿದ ಅಮೋಲ್ ದೇಹ ಹಿಮಪರ್ವತದಡಿಯಲ್ಲಿ ತತ್­ಕ್ಷಣವೇ ಸಿಗಲಿಲ್ಲ. ಆದರೆ ಆತನ ದೇಹ ಎರಡು ದಿನದ ಬಳಿಕ ಸಿಕ್ಕಿತು. ಅದಾಗಲೇ ಅಮೋಲ್­ನ ಧೈರ್ಯ, ಪರಾಕ್ರಮಗಳ ವೀರಗಾಥೆ ಆತನ ಊರಾದ ದೆಹಲಿ ಸಮೀಪದ ನಂಗಾಲ್ ಪಟ್ಟಣಕ್ಕೆ ತಲುಪಿಯಾಗಿತ್ತು. ಅಮೋಲ್­ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಆ ಸಂದರ್ಭದಲ್ಲಿ, ಆ ಪ್ರದೇಶವೇ ಅದೊಂದು ರೀತಿಯಲ್ಲಿ ಯಾತ್ರಾಸ್ಥಳವೇ ಆಗಿ ಮಾರ್ಪಟ್ಟಿದ್ದಂತೂ ಅಕ್ಷರಶಃ ನಿಜ!!

ಮಗನ ಪರಾಕ್ರಮವನ್ನು ಕೇಳಿದ ತಂದೆ ಎಸ್.ಪಿ.ಶರ್ಮ ಅವರು ಭಾವುಕರಾಗಿ ಬಿಟ್ಟಿದ್ದರು. “ಮನೆಗೆ ಕಿರಿಮಗನಾದ ಅಮೋಲ್ ದೇಶಕ್ಕೆ ಹಿರಿಮಗನಾಗಿ ಬಿಟ್ಟೆ” ಎಂದು ಹೇಳುತ್ತಾ, ಆತನಿಗೆ ಒಂದು ಸಲ್ಯೂಟ್ ಹೊಡೆಯುತ್ತಾರೆಂದರೆ ಆತನ ಪರಾಕ್ರಮ ಅದೆಂತಹದ್ದು!!

ಕಾರ್ಗಿಲ್ ಯುದ್ಧದಲ್ಲಿ ನಿರಂತರ ಹೊರಾಟವು ನಡೆಯುತ್ತ ಸಾಗುತ್ತದೆ!! ಅಷ್ಟೊತ್ತಿಗೆ ಜೂನ್ 13 ಆಗಿರುತ್ತದೆ. ಕಾರ್ಗಿಲ್ ವಲಯದಲ್ಲಿ ನಿರಂತರವಾಗಿ ಶತ್ರುಗಳ ವಿರುದ್ಧ ಹೋರಾಡುತ್ತಿದ್ದ ಸೈನಿಕರಿಗೆ ಅಂದು ಅದೇನೊ ಹೆಚ್ಚಿನ ಹುಮ್ಮಸ್ಸು, ವಿಶ್ವಾಸ. ಆ ಸಂಭ್ರಮವೇ ಬೇರೆಯಾಗಿತ್ತು!! ಆ ಸಂದರ್ಭದಲ್ಲಿ ಭಾರತದ ಇತಿಹಾಸದಲ್ಲೇ ಕೇಳರಿಯದ ಸಂಭ್ರಮದ ದಿನವಾಗಿತ್ತಲ್ಲದೇ ದೇಶದ ಪ್ರಧಾನಿಯೊಬ್ಬರು ಯುದ್ಧಭೂಮಿಗೆ ಭೇಟಿ ಕೊಟ್ಟ ದಿನ ಅದಾಗಿತ್ತು.

ಹೌದು, ವಾಜಪೇಯಿ ಅವರು ಅಂದು ಕಾರ್ಗಿಲ್ ವಲಯದ ಬರೂ ಗ್ರಾಮಕ್ಕೆ ಭೇಟಿ ನೀಡಿದ ದಿನ ಅದಾಗಿತ್ತು. ಶತ್ರುಗಳಿಗೆ ಇದು ಇಷ್ಟವಿರಲಿಲ್ಲ ಮತ್ತು ಸಹಿಸಲೂ ಆಗಲಿಲ್ಲ. ಪ್ರಧಾನಿಗಳು ಅಲ್ಲಿ ಬರುವ ಮುಂಚೆಯೇ ಎರಡು-ಮೂರು ಕಿ.ಮೀ. ಅಂತರದಲ್ಲಿ ಐದು ಶೆಲ್­ಗಳ ದಾಳಿ.

ಅವರು ಸೈನಿಕರು ಹಾಗೂ ಸ್ಥಳೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಬೇಕಿದ್ದ ವಿಭಾಗೀಯ ಆಯುಕ್ತರ ಕಛೇರಿಯನ್ನು ಸಂಪೂರ್ಣ ಧ್ವಂಸ ಮಾಡಿದ್ದರು. ಆದರೂ ಪ್ರಧಾನಿಗಳು ಅಂಜಲಿಲ್ಲ. ಭಾರತಾಂಬೆಯ ರಕ್ಷಣೆಗಾಗಿ ಹೋರಾಡುತ್ತಿದ್ದ ಧೀರ ಸೈನಿಕರನ್ನು ಉದ್ದೇಶಿಸಿ ಮಾತನಾಡಿ, “ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆಯಿದೆ, ಇಡೀ ಭಾರತ ದೇಶದ ಜನತೆ ನಿಮ್ಮ ಬೆಂಬಲಕ್ಕಿದೆ” ಎಂದರು.

ವಾಜಪೇಯಿ ಅವರು ಯುದ್ಧಕ್ಷೇತ್ರಕ್ಕೆ ನೀಡಿದ ಭೇಟಿ ಸೈನಿಕರಲ್ಲಿ ಇಮ್ಮಡಿ ಉತ್ಸಾಹ ಮೂಡಿಸುವುದಷ್ಟೇ ಅಲ್ಲದೇ ಇಡೀ ದೇಶವಾಸಿಗಳು ಸಂಭ್ರಮಪಟ್ಟರು. ಸ್ವತಃ ರಾಷ್ಟ್ರಪತಿಯವರೇ “ನಿಮ್ಮ ಜೀವನವನ್ನು ಅಪಾಯಕ್ಕೊಡ್ಡಿ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಿರುವುದಕ್ಕೆ ನಮಗೆ ಹೆಮ್ಮೆ ಎನಿಸಿದೆ” ಎಂದು ವಾಜಪೇಯಿಯವರನ್ನು ಶ್ಲಾಘಿಸಿದ್ದಾರೆ!!

ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಕಾರ್ಗಿಲ್ ವಿಜಯ ಅಷ್ಟೊಂದು ಅನಾಯಾಸವಾಗಿಯೇನೂ ಒದಗಿಬರಲಿಲ್ಲ ಎಂಬುದನ್ನು ಮನಗಾಣುವುದು ಮುಖ್ಯ. ಈ ವಿಜಯದ ಹಿಂದೆ ಹತ್ತುಹಲವು ಬಲಿದಾನಗಳ ಕರುಣಾಜನಕ ಕಥೆಗಳಿವೆ. ಐದು ನೂರಕ್ಕೂ ಹೆಚ್ಚು ಕೆಚ್ಚೆದೆಯ ವೀರರು ಈ ಕದನದಲ್ಲಿ ಪ್ರಾಣಾರ್ಪಣೆ ಮಾಡಬೇಕಾಯಿತು. ಸುಮಾರು 1500 ಸೈನಿಕರು ಗಾಯಗೊಂಡರು, ಅನೇಕರು ಶಾಶ್ವತವಾಗಿ ಅಂಗವಿಕಲರಾದರು. ಅದೆಷ್ಟೋ ಮಹಿಳೆಯರು ವಿಧವೆಯರಾದರು, ಅಮ್ಮ-ಅಪ್ಪಂದಿರು ತಮ್ಮ ಭರವಸೆಯ ಕುಡಿಗಳನ್ನು ಕಳೆದುಕೊಂಡರು, ಮಕ್ಕಳು ತಬ್ಬಲಿಗಳಾದರು. ರಕ್ತದಷ್ಟೇ ದುಃಖದ ಕಣ್ಣೀರೂ ಕೋಡಿಯಾಗಿ ಹರಿಯಿತು.

ಕಾರ್ಗಿಲ್ ಯುದ್ದದಲ್ಲಿ, “ಒಂದೋ ನಾನು ತ್ರಿವರ್ಣ ಧ್ವಜವೇರಿಸಿ ಬರುತ್ತೇನೆ. ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬರುತ್ತೇನೆ. ಆದರೆ ನಾನು ಬಂದೇ ಬರುತ್ತೇನೆ…” ಹೀಗೆಂದು ಯುದ್ಧರಂಗಕ್ಕೆ ಹೋಗಿ, ಸಾವನ್ನಪ್ಪಿದ 24 ವರ್ಷದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಶೌರ್ಯದ ಕಥಾನಕ ನಮ್ಮ ಮುಂದಿದೆ.

ಇನ್ನು, ಮದುವೆಯಾಗಿ ನಾಲ್ಕೇ ತಿಂಗಳಿಗೆ ಕನಸು ಕಂಗಳ ಪತ್ನಿಯನ್ನು ಮನೆಯಲ್ಲಿ ಬಿಟ್ಟು ಕಾರ್ಗಿಲ್‍ಗೆ ತೆರಳಿ ಮತ್ತೆರಡು ತಿಂಗಳಲ್ಲಿ ಹೆಣವಾಗಿ ಮರಳಿದ ಜಸ್‍ವಿಂದರ್ ಸಿಂಗ್‍ನ ಬಲಿದಾನದ ಕಥೆಯೂ ನಮ್ಮ ಮುಂದಿದೆ. ಅಷ್ಟೇ ಅಲ್ಲದೇ, “ಯುದ್ಧದಿಂದ ಮರಳಿದ ಕೂಡಲೇ ನೀನು ಹುಡುಕಿದ ಹುಡುಗಿಯನ್ನು ಮದುವೆಯಾಗುತ್ತೇನಮ್ಮ” ಎಂದು ತಾಯಿಗೆ ಭಾಷೆಯಿತ್ತು ಯುದ್ಧಭೂಮಿಯಲ್ಲಿ ಪ್ರಾಣತ್ಯಾಗಗೈದ ಕ್ಯಾಪ್ಟನ್ ಅಮೋಲ್ ಕಾಲಿಯಾ ಅವರ ಹೋರಾಟದ ಯಶೋಗಾಥೆಯೇ ಇದಾಗಿದೆ!!

ದೇಶಕ್ಕೋಸ್ಕರ ಪ್ರಾಣತ್ಯಾಗ ಗೈದ ಅದೆಷ್ಟೋ ವೀರಯೋಧರು ಕಾರ್ಗಿಲ್ ಯುದ್ದದಲ್ಲಿ ಮಡಿದು, ತಂದು ಕೊಟ್ಟ ವಿಜಯದಿಂದಲೇ ಇಂದು ನಾವು ನೆಮ್ಮದಿಯ ಉಸಿರನ್ನು ಬಿಡಲು ಸಾಧ್ಯವಾಗಿದೆ ಎನ್ನುವುದನ್ನು ನಾವು ಯಾವತ್ತು ಮರೆಯಬಾರದು!!!

– ಅಲೋಖಾ

Editor Postcard Kannada:
Related Post