X

ತ್ರಿವರ್ಣ ಧ್ವಜದ ವಿಚಾರದಲ್ಲಿ ಸವಾಲು ಹಾಕಿದರೆ ಯಾವ ತ್ಯಾಗಕ್ಕೂ ಸಿದ್ದ ಎಂದು ದೇಶಪ್ರೇಮಿಗಳು ತೋರಿಸಿದ್ದು ಹೇಗೆ ಎಂದು ಗೊತ್ತಾದರೆ ಖಂಡಿತಾ ಬೆರಗಾಗುವಿರಿ…!

ಕೆಚ್ಚೆದೆಯಿಂದ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ!!

ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುವ ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ತದನಂತರದಲ್ಲಿ ಮಗದೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯ ಕೇಂದ್ರಬಿಂದುವಾಗಿದ್ದೂ ಗೊತ್ತೇ ಇದೆ!! ಆದರೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಸವಾಲಿಗೆ ಪ್ರತಿಕ್ರಿಯಿಸಿ ಕೆಚ್ಚೆದೆಯಿಂದ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

‘ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಭಾರತದ್ದು ಎನ್ನುವ ಮಾತು ಹಾಗಿರಲಿ; ಧೈರ್ಯವಿದ್ದರೆ ಮೊದಲು ನೀವು ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ನೋಡೋಣ’ ಎಂದು ಕೇಂದ್ರ ಸರಕಾರಕ್ಕೆ ಸವಾಲೊಡ್ಡುವ ಮೂಲಕ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದರು.

ಈ ಹಿಂದೆ, 2014ರ ವೇಳೆ ಎನ್‍ಸಿಪಿ ಮುಖಂಡ ಫಾರೂಕ್ ಅಬ್ದುಲ್ಲ ‘ಮೋದಿಗೆ ಮತ ಹಾಕಿದವರು ಸಮುದ್ರಕ್ಕೆ ಬೀಳಬೇಕು’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು!! ಇದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶ ನೀಡಿದಂತಾಗುತ್ತದೆ. ಪ್ರಜ್ಞಾವಂತ ಮತದಾರರ ದಾರಿ ತಪ್ಪಿಸುವ ಉದ್ದೇಶದಿಂದ ಅವಹೇಳನಕಾರಿ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲ ಅವರನ್ನು ಬಂಧಸಿ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಲಾಗಿತ್ತು!! ಆದರೆ ಈ ಬಾರಿ ”ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಒತ್ತಟ್ಟಿಗಿರಲಿ, ಮೊದಲು ಶ್ರೀನಗರದ ಹೃದಯ ಭಾಗದಲ್ಲಿರುವ ಲಾಲ್ ಚೌಕ್‍ನಲ್ಲಿ ರಾಷ್ಟ್ರ ಧ್ವಜ ಹಾರಿಸಿ ನೋಡುವ,” ಎಂದು ಕೇಂದ್ರ ಸರಕಾರಕ್ಕೆ ಸವಾಲೆಸೆದಿದ್ದರು.
“ನರೇಂದ್ರ ಮೋದಿ ಸರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವೆವು ಎಂದು ಕೊಚ್ಚಿಕೊಳ್ಳುತ್ತದೆ. ಆದರೆ ಅದಕ್ಕೆ ಮೊದಲು ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿ ತೋರಿಸಲಿ” ಎಂದು ಫಾರೂಕ್ ಸವಾಲೊಡ್ಡಿದರು. “ಹೀಗೆ ಹೇಳುವ ಮೂಲಕ ನೀವು ಭಾರತೀಯರ ಭಾವನೆಗಳಿಗೆ ನೋವುಂಟು ಮಾಡುತ್ತಿರುವಿರಲ್ಲ” ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, “ಭಾರತೀಯ ಭಾವನೆ ಅಂದ್ರೆ ಏನು? ನಾನು ಭಾರತೀಯನಲ್ಲ ಎಂಬುದು ನಿಮ್ಮ ಆಲೋಚನೆಯಾ?’ ಎಂದು ಫಾರೂಕ್ ತಿರುಗೇಟು ನೀಡಿದರು.

“ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದು’ ಎಂದು ಹೇಳುವ ಮೂಲಕ ವಿವಾದಕ್ಕೆ ಕಿಡಿ ಹಚ್ಚಿದ್ದ ಅಬ್ದುಲ್ಲಾ, ರಜೆಯಲ್ಲಿ ತೆರಳಿದ ಸೇನಾ ಜವನಾನೋರ್ವನನ್ನು ಉಗ್ರರು ಈಚೆಗೆ ಕೊಂದ ಘಟನೆಯ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ, “ಈ ಪ್ರಶ್ನೆಯನ್ನು ನೀವು ಕೇಂದ್ರ ಸರಕಾರಕ್ಕೆ ಕೇಳಬೇಕು; ಯಾಕೆಂದರೆ ನೋಟು ಅಪನಗದೀಕರಣದ ಬಳಿಕ ಕಾಶ್ಮೀರಕ್ಕೆ ಶಾಂತಿ ಮರಳಿದೆ ಎಂದವರು ಹೇಳಿಕೊಳ್ಳುತ್ತಾರೆ’ ಎಂದು ಅಬ್ದುಲ್ಲ ಕಟಕಿಯಾಡಿದ್ದರು!!

“ಫಾರೂಕ್ ಅವರ ಹೇಳಿಕೆ ಇದೀಗ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದು, ನ್ಯಾಷನಲ್ ಕಾನ್ಪರೆನ್ಸ್ ಮುಖಂಡ ಫಾರೂಕ್ ಅವರು ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿಗಳ ಬಲ ಹೆಚ್ಚಿಸುತ್ತಿದ್ದಾರೆ” ಎಂದು ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಆಪಾದಿಸಿದ್ದರು. ಅಷ್ಟೇ ಅಲ್ಲದೇ, ಲಾಲ್ ಚೌಕ್ ಅಷ್ಟೇ ಅಲ್ಲ, ರಾಜ್ಯದ ಮೂಲೆಮೂಲೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ,” ಎಂದು ಅವರು ಸ್ಪಷ್ಟಪಡಿಸಿದ್ದರು.

ಅದರಂತೆಯೇ ಶ್ರೀನಗರದ ಲಾಲ್ ಚೌಕ್ ನಲ್ಲಿ ಕೆಲವು ಯುವಕರು, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಸವಾಲಿಗೆ ಪ್ರತಿಕ್ರಿಯಿಸಿ ಕೆಚ್ಚೆದೆಯಿಂದ ಭಾರತದ ತ್ರಿವರ್ಣವನ್ನು ಧ್ವಜವನ್ನು ಹಾರಿಸಿದ್ದಾರೆ. ಅಷ್ಟೇ ಅಲ್ಲದೇ, ಫಾರೂಕ್ ಅಬ್ದುಲ್ಲಾನ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಶ್ರೀ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಲಾಲ್ ಚೌಕ್ ನಲ್ಲೇ ಭಾರತದ ಧ್ವಜವನ್ನು ಹಾರಾಟ ನಡೆಸಿದ ಯುವಕರು ಸೂಕ್ತ ಪ್ರತ್ಯುತ್ತರವನ್ನು ನೀಡಿದ್ದಾರೆ.

“ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿಲ್ಲ ಎಂದೂ, ತಾವು ಮಾತ್ರ ಸತ್ಯ ಹೇಳುತ್ತಿರುವುದಾಗಿಯೂ, ಪಿಒಕೆ ಬಗ್ಗೆ ತಾವು ಹೇಳುತ್ತಿರುವುದೆಲ್ಲವೂ ಸತ್ಯವಾದುದು” ಎಂದೂ ಫಾರೂಕ್ ಅಬ್ದುಲ್ಲಾ ಇತ್ತೀಚೆಗೆ ಗಂಟಾಘೋಷವಾಗಿ ಸಾರಿ ಇಡೀ ದೇಶದ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ, “ಅವರು (ಕೇಂದ್ರ ಸರಕಾರ) ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಧ್ವಜ ಹಾರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಶ್ರೀನಗರದ ಲಾಲ್ ಚೌಕ್‍ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುವಂತೆ ನಾನವರಿಗೆ ಸವಾಲೆಸೆಯುತ್ತೇನೆ. ಆ ಕೆಲಸ ಮಾಡಲು ಇಲ್ಲೇ ಅವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಪಿಒಕೆ ಬಗ್ಗೆ ಬೇರೆ ಮಾತನಾಡುತ್ತಿದ್ದಾರೆ,” ಎಂದು ಅವರು ಲೇವಡಿ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ, ಕೆಚ್ಚೆದೆಯಿಂದ ಭಾರತದ ತ್ರಿವರ್ಣವನ್ನು ಧ್ವಜವನ್ನು ಶ್ರೀನಗರದ ಲಾಲ್ ಚೌಕ್ ನಲ್ಲಿ ಹಾರಿಸಿದ್ದಾರೆ!! ಅಬ್ದುಲ್ಲಾಗೆ ಬಲವಾದ ಸಂದೇಶವನ್ನು ನೀಡಿದ ಯುವಕರು ರಾಷ್ಟ್ರಿಯ ಧ್ವಜವನ್ನು ಹಾರಾಡಿಸಿ ಭಾರತದ ಪರವಾದ ಪೆÇೀಷಣೆ ಕೂಗಿದ್ದು ಎಲ್ಲರ ಗಮನ ಸೆಳೆಯುವಂತಿತ್ತು. ಏತನ್ಮಧ್ಯೆ, ಶ್ರೀನಗರ ಹೃದಯಭಾಗದಲ್ಲಿರುವ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ಚಜದ ಹಾರಾಟ ಎಲ್ಲಾ ದೇಶ ವಿರೋಧಿ ಜನರಿಗೆ ನೀಡಿದ ಸಂದೇಶ ಎಂದು ಬಿಜೆಪಿ ಶಾಸಕ ರವೀಂದ್ರ ರೈನಾ ಹೇಳಿದ್ದಾರೆ. “ಇದು ಕೊಳಕು ರಾಜಕಾರಣಿಗಳ ಮುಖದ ಮೇಲೆ ಸರಿಯಾದ ಹೊಡೆತ” ಎಂದು ಅವರು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೇ, ರಕ್ಷಣಾ ತಜ್ಞ ಮೇಜರ್ ಜನರಲ್ ಜಿ.ಡಿ ಬಕ್ಷ್ ಮಾತನಾಡಿ, ಕೆಲವು ಯುವಕರು ಇಂತಹ ಧೈರ್ಯದ ನಿರ್ಧಾರವನ್ನು ತೆಗೆದುಕೊಂಡಿದಕ್ಕೆ ಸಂತಸ ಪಟ್ಟಿದ್ದಾರೆ!!
– ಅಲೋಖಾ

 

Editor Postcard Kannada:
Related Post