X

ದಲಿತ ಓಲೈಕೆಗೆ ಸಿದ್ದರಾಮಯ್ಯನವರು ಮಾಡಿದ ಖತರ್ನಾಕ್ ಪ್ಲಾನ್ ಗೆ ಸಾಲುಮರದ ತಿಮ್ಮಕ್ಕ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?!

ಸಿದ್ದರಾಮಯ್ಯ ಸರ್ಕಾರ ಬರೀ ಸುಳ್ಳು ಪೊಳ್ಳು ಭರವಸೆ ನೀಡುತ್ತಾ ಅದೆಷ್ಟು ಮಂದಿ ಮುಗ್ಧ ಜನರಿಗೆ ಬಲೆ ಬೀಸಿದ್ದಾರೋ ಗೊತ್ತಿಲ್ಲ. ಆದರೆ ಇಳಿ ವಯಸ್ಸಿನಲ್ಲೂ ತನ್ನ ಕಾಯಕವನ್ನು ಬಿಡದೇ, ನಿರಂತರವಾಗಿ ಮರಗಳ ರಕ್ಷಣೆಗೆ ಮುಂದಾಗುತ್ತಿರುವ ಪರಿಸರ ಪ್ರೇಮಿಯಾಗಿರೋ ಸಾಲು ಮರದ ತಿಮ್ಮಕ್ಕನಿಗೂ ಸುಳ್ಳು ಪೊಳ್ಳು ಭರವಸೆ ನೀಡಿದ್ದು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತಿಮ್ಮಕ್ಕ ಗರಂ ಗೊಂಡಿದ್ದಾರಲ್ಲದೇ ಈ ಬಗ್ಗೆ ತಿರುಗೇಟು ನೀಡಿದ್ದಾರೆ.

ಹೌದು… ಪರಿಸರ ಅದರಲ್ಲೂ ಮರ ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರುವವರೇ ಸಾಲು ಮರದ ತಿಮ್ಮಕ್ಕನವರು. ಇವರ ಬಗ್ಗೆ ತಿಳಿದೇ ಇಲ್ಲ ಅನ್ನೋ ಜನ ಬಹಳ ಕಡಿಮೆ. ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕನವರು ಮರಗಳನ್ನೇ ತನ್ನ ಮಕ್ಕಳೆಂದು ಪೂಜಿಸಿದವರು!! ಹಾಗಾಗಿ ನಾಲ್ಕು ಕಿಲೋಮೀಟರ್ ಉದ್ದಕ್ಕೂ ಮರ ನೆಟ್ಟಿರುವ ಇವರು ಪೃಕೃತಿ ಮಾತೆಯನ್ನೇ ಬೆಳೆಸಿ ಪೆÇೀಷಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ.

ಸಾಲು ಸಾಲಾಗಿರೋ ಮರಗಳು. ಮರಗಳನ್ನೇ ತನ್ನ ಜೀವನಾಡಿ ಎಂಬಂತೆ ಪ್ರೀತಿ ಮಾಡೋ ಮಹಿಳೆ!! ಮರಗಳ ರಕ್ಷಣೆಗಾಗಿ ತನ್ನ ಪ್ರಾಣ ಬಿಡೋಕ್ಕೂ ಸಿದ್ದರಿರುವ ಇವರು ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರಲ್ಲದೇ, ಎಲ್ಲರಿಗೂ ಚಿರಪರಿಚಿತ.. ಸಾಲುಮರದ ತಿಮ್ಮಕ್ಕ ಅಂದ್ರೆ ಸಾಕು ಅಭಿಮಾನ ಮೂಡಿಬರುತ್ತೆ. ಇಳಿ ವಯಸ್ಸಿನಲ್ಲೂ ತನ್ನ ಕಾಯಕವನ್ನು ಬಿಡದೇ, ನಿರಂತರವಾಗಿ ಮರಗಳ ರಕ್ಷಣೆಗೆ ಮುಂದಾಗಿದ್ದಾರೆ.

ಮಕ್ಕಳಿಲ್ಲದ ತಿಮ್ಮಕ್ಕನಿಗೆ ಮರಗಳೇ ಮಕ್ಕಳು. ಮರಗಳೇ ಈಕೆಗೆ ಉಸಿರು. ಪರಿಸರ ಪ್ರೇಮಿಯಾಗಿರೋ ತಿಮ್ಮಕ್ಕ, ಪತಿ ಬಿಕ್ಕಲು ಚಿಕ್ಕಯ್ಯನೊಂದಿಗೆ ಸೇರಿ ಮಾಗಡಿ ಬಳಿಯ ಹುಲಿಕಲ್ ರಸ್ತೆಯ ಎರಡು ಬದಿಗಳಲ್ಲಿ ಸಾಲಾಗಿ ಸಸಿ ನೆಟ್ಟು ಪೆÇೀಷಿದ್ದರು. ನಂತರ ಈಗ ಸಾಲು ಗಿಡಗಳು ಹೆಮ್ಮರವಾಗಿ ಬೆಳೆದಿದೆ. ಇವ್ರ ಈ ಪ್ರೀತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಪ್ರಶಸ್ತಿಗಳನ್ನ ನೀಡಿ ಗೌರವಿಸಿದೆ. ಆದರೆ ಇದೀಗ ದಲಿತರ ಪರ ಸಮಾಜವಾದಿ ಎಂದೆಲ್ಲಾ ಬೊಬ್ಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಾಲು ಮರದ ತಿಮ್ಮಕ್ಕ ಗರಂ ಗೊಂಡಿದ್ದಾರಲ್ಲದೇ, ಹುಸಿ ಭರವಸೆ ನೀಡಿದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು….. ಈ ಮೊದಲು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಿಮ್ಮಕ್ಕ ಅವರಿಗೆ ರಾಜ್ಯ ಸರ್ಕಾರ ದಲಿತರ ಓಲೈಕೆ ಮಾಡುವ ಉದ್ದೇಶದಿಂದ ತಿಮ್ಮಕ್ಕನವರಿಗೆ ವೈದ್ಯಕೀಯ ವೆಚ್ಚದ ಹೆಸರಿನಲ್ಲಿ ಭರಿಸಿದ್ದ ಹತ್ತು ಲಕ್ಷ ರೂಪಾಯಿ ಹಣವನ್ನು ಸಾಲು ಮರದ ತಿಮ್ಮಕ್ಕ ವಾಪಾಸ್ ನೀಡಲು ಮುಂದಾಗಿದ್ದು, ಈ ಕಾರಣಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ತಿಮ್ಮಕ್ಕನಿಗೆ ಸರ್ಕಾರ ವೈದ್ಯಕೀಯ ವೆಚ್ಚ ಭರಿಸೋದಾಗಿ ಹೇಳಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಸುಳ್ಳು ಭರವಸೆಯನ್ನು ನೀಡಿರೋ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಜೀವನಕ್ಕಾಗಿ 10 ಎಕರೆ ಜಮೀನು ಹಾಗೂ 5 ಕೋಟಿ ಪರಿಹಾರ ನೀಡೋದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಆ ಭರವಸೆಗಳನ್ನು ಈಡೇರಿಲ್ಲ. ಇತ್ತೀಚೆಗೆ ಅಂದರೆ ಅಕ್ಟೋಬರ್ 29 ರಂದು ಸಾಲು ಮರದ ತಿಮ್ಮಕ್ಕನನ್ನು ಸಿಎಂ ಕರೆಸಿ 10 ಲಕ್ಷ ವೈದ್ಯಕೀಯ ವೆಚ್ಚ ಅಂತಾ ಪರಿಹಾರ ಧನ ನೀಡಿದ್ದರು. ಅದರ ಜೊತೆಗೆ ಎಲ್ಲಾ ಭರವಸೆಗಳನ್ನು ಈಡೇರುಸೋದಾಗಿ ಹೇಳಿದ್ದರು. ಇದುವರೆಗೂ ಚೆಕ್ ಹೊರತುಪಡಿಸಿ ಉಳಿದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ ಎಂದು ಸಿಎಂ ವಿರುದ್ದ ಸಾಲುಮರದ ತಿಮ್ಮಕ್ಕ ಗರಂ ಗೊಂಡಿದ್ದಾರೆ.

ಅಷ್ಟೇ ಅಲ್ಲದೇ, “ಎರಡು ತಿಂಗಳಲ್ಲಿ 4 ಬಾರಿ ಆಸ್ಪತ್ರೆಗೆ ದಾಖಲಾಗಿದ್ದೆ ಆಗ ಸಂಸದ ರಾಜೀವ್ ಚಂದ್ರಶೇಖರ್ ಖದ್ದು ಬಂದು ಆಸ್ಫತ್ರೆಯ ವೆಚ್ಚ ಭರಿಸಿದ್ದಾರೆ. ನನಗೆ ವೃದ್ಧಾಪ್ಯ ವೇತನವೂ ಬೇಡ . ನಾನು ಕಳೆದ 3 ತಿಂಗಳಿನಿಂದ ವೃದ್ದಾಪ್ಯ ವೇತನವನ್ನೂ ಸ್ವೀಕರಿಸಿಲ್ಲ. ಮುಂದೆಯೂ ವೃದ್ದಾಪ್ಯ ವೇತನದ ಅವಶ್ಯಕತೆಯಿಲ್ಲ” ಎಂದು ಸರ್ಕಾರದ ವಿರುದ್ಧ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಸಮಾಜವಾದಿ, ಜಾತ್ಯಾತೀತ ಎಂಬಿತ್ಯಾದಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಸ್ವಾಭಿಮಾನಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ಈಗ 80 ವರ್ಷ ವಯಸ್ಸಿನ ಅಸುಪಾಸು. ದೇಹಕ್ಕೆ ವಯಸ್ಸಾದ್ರೂ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಸರಳತೆಯ ಜೊತೆಗೆ ಸಾಧು ಸ್ವಭಾವದ ತಿಮ್ಮಕ್ಕ ಎಲ್ಲರಿಗೂ ಮಾದರಿ. 1991ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ಒಂಟಿ ಜೀವನ ನಡೆಸುತ್ತಿರೋ ತಿಮ್ಮಕ್ಕ ಬಹಳ ಸ್ವಾಭಿಮಾನಿ. ಪತಿಯ ಮರಣದ ನಂತರ ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜದ ಕಾಯಕಕ್ಕೆ ಮುಡಿಪಿಟ್ಟಿದ್ದಾರೆ. ಹಲವು ಸಂಘಟನೆಗಳು ತಿಮ್ಮಕ್ಕರನ್ನು ನೋಡಿಕೊಳ್ಳಲು ಮುಂದೆ ಬಂದರೂ ಅದನ್ನು ತಿರಸ್ಕರಿಸಿದ್ದಾರೆ. ಆಗ ತಿಮ್ಮಕ್ಕ ಹೇಳಿದ ಮಾತು, ನಾನು ನನ್ನ ಪತಿ ಬೆಳೆಸಿರುವ ಸಾಲುಮರಗಳನ್ನ ನೋಡುತ್ತಾ, ಆದ್ರ ನೆರಳಿನಲ್ಲೇ ವಿಹರಿಸುತ್ತಾ ಹುಲಿಕಲ್‍ನಲ್ಲೇ ಇರುತ್ತೇನೆಂದು ಮಹಾತಾಯಿ ತಿಮ್ಮಕ್ಕ ಹೇಳಿದ್ದರು.

ಆದರೆ ತಿಮ್ಮಕ್ಕನನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತನ್ನ ಬಳಿ ಕರೆಸಿ 10 ಲಕ್ಷ ವೈದ್ಯಕೀಯ ವೆಚ್ಚ ಅಂತಾ ಪರಿಹಾರ ಧನ ನೀಡಿದ್ದಲ್ಲದೇ ಅದರ ಜೊತೆಗೆ ಎಲ್ಲಾ ಭರವಸೆಗಳನ್ನು ಈಡೇರುಸೋದಾಗಿ ಹೇಳಿದ್ದರು. ಆದರೆ ಈ ಇಳಿ ಜೀವಕ್ಕೆ ನೀಡಿರುವ ಭರವಸೆಯನ್ನು ಸರ್ಕಾರ ಈಡೇರಿಸದೆ ಸುಳ್ಳು ಭರವಸೆಯ ಮೂಲಕ ಒರ್ವ ಪರಿಸರ ಪ್ರೇಮಿಯನ್ನು ಮೋಸ ಮಾಡಿರೋದು ಮಾತ್ರ ದೊಡ್ಡ ವಿಪರ್ಯಾಸ!!

– ಅಲೋಖಾ

Editor Postcard Kannada:
Related Post