X

ನಾನು ಹಿಂದೂವೇ ಅಲ್ಲ ಎಂದಿದ್ದ ಮುಖ್ಯಮಂತ್ರಿಗಳು ಈಗ ಪರಮೇಶ್ವರನಿಗೆ ಹೊತ್ತ ಹರಕೆ ಏನು ಗೊತ್ತಾ?! ಚುನಾವಣಾ ಹೊಸ್ತಿಲಲ್ಲಿ ಮುಖ್ಯಮಂತ್ರಿಗಳ ಅದ್ಭುತ ಪ್ಲಾನಿಂಗ್!!

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವ ಗಿಮಿಕ್ಸ್ ಗಳನ್ನು ತಾಳೆ ಹಾಕುತ್ತಾ ಹೋದರೆ ಹಿಂದೂಗಳ ಮೇಲಿಲ್ಲದ ಪ್ರೀತಿ ಒಮ್ಮೆಲೆ ಬಂದಂತೆ ಕಾಣುತ್ತೆ!! ಈಗಾಗಲೇ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್‍ಗೆ, ಅಲ್ಪಸಂಖ್ಯಾತರ ಅತಿಯಾದ ವ್ಯಾಮೋಹದಿಂದ ಹೊರಬರುವಂತೆ ಸ್ಪಷ್ಟ ಸಂದೇಶ ನೀಡಿದ್ದಲ್ಲದೇ “ಸಾಫ್ಟ್ ಹಿಂದುತ್ವ”ವನ್ನು ಅನುಸರಿಸುವಂತೆ ಹೇಳಿದ್ದು, ಇದೀಗ ತಮ್ಮ ನಾಯಕ ಹೇಳಿದ ಮಾತಿನಂತೆ ಸಿದ್ದರಾಮಯ್ಯನವರು ಈ ತಂತ್ರವನ್ನು ಹೆಣೆಯಲು ಸಜ್ಜಾಗಿದ್ದಾರೆ.

ಹೌದು… ಈಗಾಗಲೇ ಹಿಂದುತ್ವಕ್ಕೆ ಅರ್ಥವೇ ಇಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕರು ಇದೀಗ ಹಿಂದುತ್ವವನ್ನು ಅಪ್ಪಿ ಹಿಡಿಯಲು ಹೊರಟಿದ್ದು, ರಾಹುಲ್ ಗಾಂಧಿ ಗುಜರಾತ್ ಚುನಾವಣೆ ವೇಳೆ ತೋರಿಸಿದ್ದ “ಸಾಫ್ಟ್ ಹಿಂದುತ್ವ”ವನ್ನು ಕರ್ನಾಟಕದಲ್ಲಿಯೂ ಪ್ರಯೋಗಿಸಲು ಹೊರಟಿದ್ದಂತೆ ತೋರುತ್ತದೆ. ಇದಕ್ಕೊಂದು ತಾಜ ಉದಾಹರಣೆ ಎಂಬಂತೆ ಗುರುವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಯ್ಯನವರು ಈ ವೇಳೆ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿರುವ ಬೆಳ್ಳಿ ಉಡುಗೊರೆಗಳನ್ನು ದೇವರಿಗೆ ಅರ್ಪಿಸಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿಯೂ “ಸಾಫ್ಟ್ ಹಿಂದುತ್ವ”…….!!

ಗುಜರಾತ್ ಚುನಾವಣಾ ಆಧಾರದಲ್ಲೇ ಇತರೆ ಚುನಾವಣೆಗಳಲ್ಲಿ ಸೆಣೆಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದ್ದು, ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿ ಟೆಂಪಲ್ ರನ್ ಭಾರಿ ಸುದ್ದಿಯಾಗಿತ್ತು. ಆದರೆ, ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಿಗೆ ತೆರಳಿದ್ದು ಗೌಣವಾಗಿ, ಹಿಂದೂ ದೇಗುಲಗಳಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ವಿಶೇಷ ಫೆÇೀಕಸ್ ಆಗುವಂತೆ ಸ್ವತಃ ಕಾಂಗ್ರೆಸ್ ನೋಡಿಕೊಂಡಿತ್ತು. ಹಿಂದುಗಳ ಮತದ ಮೂಲಕ ಗುಜರಾತ್ ಅನ್ನು ಭದ್ರಕೋಟೆ ಮಾಡಿಕೊಂಡಿದ್ದ ಬಿಜೆಪಿಗೆ ಸವಾಲೊಡುವ ಕಾಂಗ್ರೆಸಿನ ತಂತ್ರದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿತು. ಇದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹಿಂದುಗಳ ಬಗ್ಗೆ ಮೃದು ಧೋರಣೆ ತಳೆಯುವಂತೆ ಮಾಡಿದೆಯೆಂದು ಹೇಳಲಾಗುತ್ತಿದೆ.

 

ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ಕರ್ನಾಟಕದಲ್ಲಿ ಮರಳಿ ಸರಕಾರ ರಚಿಸಲು ಹಿಂದುತ್ವ ಮತ್ತು ರಾಷ್ಟ್ರೀಯ ಚಿಂತನೆಯನ್ನೇ ಬಂಡವಾಳ ಮಾಡಿಕೊಳ್ಳುವ ಸೂಚನೆಯಿದೆ. ರಾಜ್ಯದ ಕರಾವಳಿಯಲ್ಲಿ ನಡೆದ ಕೋಮು ಗಲಭೆಯಿಂದ ಬಿಜೆಪಿಯ ಹಿಂದೂ ಮತಬ್ಯಾಂಕ್ ಭದ್ರವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಾಗಿ ಈ ಬಾರಿ ಹಿಂದುಗಳ ಒಲವು ಗಳಿಸುವುದು ರಾಹುಲ್ ಆದ್ಯತೆಯಾಗಿದೆ.

ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸಿರುವುದು, ಹನುಮ ಜಯಂತಿ ಮೆರವಣಿಗೆ ಅನುಮತಿ ನೀಡದ ಕಾಂಗ್ರೆಸಿನ ಬಗ್ಗೆ ಬಹುಸಂಖ್ಯಾತರ ಮನಸ್ಸಿಗೆ ನೋವು ತಂದಿರುವುದು ಹೈಕಮಾಂಡ್ ಗಮನಕ್ಕೂ ಬಂದಿದೆ. ಹಾಗಾಗಿ ಹಿಂದುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಡೆ-ನುಡಿ ಪ್ರತಿಫಲನಗೊಳ್ಳಬೇಕೆಂದು ರಾಹುಲ್ ಬಯಸಿದ್ದಾರೆ ಎಂದು ಕಾಂಗ್ರೆಸ್‍ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಹಾಗಾಗಿ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರಲ್ಲದೇ, ಈ ವೇಳೆ ಸಿಎಂ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿರುವ ಬೆಳ್ಳಿ ಉಡುಗೊರೆಗಳನ್ನು ದೇವರಿಗೆ ಅರ್ಪಿಸಲು ಮುಂದಾಗಿದ್ದಾರೆ.
ಸಿಎಂ ಸಿದ್ದರಾಮಯ್ಯನವರು 20 ನಿಮಿಷ ಧ್ಯಾನದಲ್ಲಿ ಮಗ್ನ…………!!

ಸಿಎಂ ಸಿದ್ದರಾಮಯ್ಯನವರು ನಿದ್ದೆ ಮಾಡಿದ್ದು ಕೇಳಿದ್ದೇವೆ… ಧ್ಯಾನವನ್ನು ಮಾಡಿದ್ದಾರೆಯೇ ಅಂತ ಕೇಳಿದ್ರೆ ಅಚ್ಚರಿಯಾಗಬಹುದು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯನವರು ಧ್ಯಾನಕ್ಕೂ ಸೈ, ಪೂಜೆಗೂ ಸೈ!!

ಹೌದು…. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸರ್ಕಾರದ ಸಾಧನಾ ಸಮಾವೇಶವನ್ನು ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ತಮ್ಮ ಆಪ್ತರೊಂದಿಗೆ ವಾಸ್ತವ್ಯ ಹೂಡಿದರು. ನಂತರ ಬೆಳಗ್ಗೆ 8 ಗಂಟೆಗೆ ಮಾದಪ್ಪನ ಸನ್ನಿಧಿಗೆ ಹೋಗಿ ಸುಮಾರು 20 ನಿಮಿಷಗಳ ಕಾಲ ಮಾದಪ್ಪನ ಮುಂದೆ ನಿಂತು ಧ್ಯಾನ ಮಾಡಿ, ಇದಾದ ಬಳಿಕ ಸಿಎಂ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಹಿಂದೂಗಳೆಂದರೆ ಸಿಡಿಮಿಡಿಗೊಳ್ಳುತ್ತಿದ್ದ ಸಿ ಎಂ ಸಿದ್ದರಾಮಯ್ಯನವರು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮನುಷ್ಯತ್ವ ಇಲ್ಲ, ಅವರು ರಾಕ್ಷಸೀ ಪ್ರವೃತ್ತಿ ವ್ಯಕ್ತಿತ್ವದವರು ಎಂದೆಲ್ಲಾ ಹೇಳಿದ ಸಿಎಂ ಅವರಿಗಿಂತ ನಾನು ಒಳ್ಳೆಯ ಹಿಂದು ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ ಮೀನೂಟ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತಾನೊಬ್ಬ ಹಿಂದು ಎನ್ನುವುದನ್ನು ಮರೆತು ಬಿಟ್ಟಿದ್ದರೋ ಏನೋ ಗೊತ್ತಿಲ್ಲ ಆದರೆ ಇದೀಗ “ಸಾಫ್ಟ್ ಹಿಂದುತ್ವ”ವನ್ನು ಬಳಸಿಕೊಂಡು ಹಿಂದುಗಳ ಮತ ಓಲೈಕೆಯಲ್ಲಿ ನಿರತರಾಗಿರುವುದು ಮಾತ್ರ ಅಕ್ಷರಶಃ ನಿಜ.

19 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ಕರ್ನಾಟಕದಲ್ಲಿ ಮತ್ತೊಮ್ಮೆ ಸರಕಾರ ರಚಿಸಲು ಹಿಂದೂತ್ವ ಮತ್ತು ರಾಷ್ಟ್ರೀಯ ಚಿಂತನೆಯನ್ನೇ ಬಂಡವಾಳ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ರಾಜ್ಯದ ಕರಾವಳಿಯಲ್ಲಿ ನಡೆದ ಕೋಮು ಗಲಭೆಯಿಂದ ಬಿಜೆಪಿಯ ಹಿಂದೂ ಮತಬ್ಯಾಂಕ್ ಭದ್ರವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಾಗಿ ಈ ಬಾರಿ ಹಿಂದೂಗಳ ಒಲವು ಗಳಿಸುವುದು ರಾಹುಲ್ ಆದ್ಯತೆಯಾದಂತೆ ಕಾಣುತ್ತಿದೆ.

ಮುಸ್ಲಿಮರಿಂದ ಅಂತರ ಕಾಯ್ದುಕೊಳ್ಳಿ..!! ಮೊದಲ ಪ್ರವಾಸದಲ್ಲೇ ಕರ್ನಾಟಕದ ದೇಗುಲಗಳಿಗೆ ಬೇಟಿ ನೀಡಲಿರುವ ರಾಹುಲ್!!

ಗುಜರಾತ್ ಚುನಾವಣೆಯಲ್ಲಿ ಹಿಂದೂಗಳ ದೇವಸ್ಥಾನಕ್ಕೆ ಬೇಟಿ ನೀಡಿ ಚುನಾವಣಾ ಪ್ರಚಾರ ಆರಂಭಿಸಿದ ರಾಹುಲ್ ಈ ಬಾರಿ ಜನವರಿ 20 ರಿಂದ 22 ವರೆಗೆ ಮೊದಲ ಬಾರಿ ಕರ್ನಾಟಕ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಈ ವೇಳೆ ತಾವು ರ್ಯಾಲಿ ನಡೆಸುವ ಪ್ರದೇಶದ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಚುನಾವಣೆ ವೇಳೆಯೂ ಹಲವು ಮಠ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸುವುದಕ್ಕೂ ಸಿದ್ಧತೆ ನಡೆಸಲು ವೇಣುಗೋಪಾಲ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಯಶಸ್ವಿಯಾಗಿ ಅಲ್ಪಸಂಖ್ಯಾತ ಓಲೈಕೆ ರಾಜಕಾರಣವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು ಭಾಜಪವನ್ನು ಸಮರ್ಥವಾಗಿ ಎದುರಿಸಲು ಹಿಂದೂ ಪರ ನಿಲುವು ತಳೆಯಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಹಾಗಾಗಿ ಅಲ್ಪಸಂಖ್ಯಾತರನ್ನು ದೂರ ಮಾಡದೆ ಅಂತರ ಕಾಯ್ದುಕೊಳ್ಳುವ ತಂತ್ರಕ್ಕೆ ಮೊರೆಹೋಗಲು ಕಾಂಗ್ರೆಸ್ ಉದ್ದೇಶಿಸಿದೆ..!! ಇದು ಗುಜರಾತಿನಲ್ಲಿ ಕೊಂಚ ಮಟ್ಟಿಗೆ ಫಲ ನೀಡಿದೆ ಎಂದು ಕಾಂಗ್ರೆಸ್ ನಂಬಿದೆ. ಕರ್ನಾಟಕದಲ್ಲೂ ಇದೇ ರೀತಿ ರಣತಂತ್ರ ಕಾಂಗ್ರೆಸ್ ಮುಂದುವರಿಸಲಿದೆ. ಈ ಸೂತ್ರವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂಬುದೂ ರಾಹುಲ್ ಸ್ಪಷ್ಟ ಸೂಚನೆಯಾಗಿದೆ ಎಂದು ತಿಳಿದು ಬಂದಿದೆ..!!
ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳನ್ನು ನೀಡಲು ಸಿದ್ಧ ಎಂದ ಸಿಎಂ ಸಿದ್ದು!!

ಸಿಎಂ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ನಡೆಸಿದ ವೇಳೆ ಅಧಿಕಾರಿಯೊಬ್ಬರು ಮಾದೇಶ್ವರ ಬೆಟ್ಟದಲ್ಲಿ ಒಂದು ಬೆಳ್ಳಿ ರಥವನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದು, ಇದಕ್ಕಾಗಿ ನಮಗೆ 400 ಕೆಜಿ ಬೆಳ್ಳಿ ಬೇಕು. ಭಕ್ತರಿಂದ ನಮಗೆ ಈಗಾಗಲೇ 800 ಕೆಜಿ ಬೆಳ್ಳಿ ಸಂಗ್ರಹಣವಾಗಿದೆ. ರಥ ತಯಾರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ದಾರೆ.

“ಈ ವೇಳೆ ಸಿಎಂ ಅವರು ನನ್ನ ಬಳಿಯೂ ಸಾಕಷ್ಟು ಬೆಳ್ಳಿ ಇದೆ. ಕಾರ್ಯಕ್ರಮಗಳಲ್ಲಿ ಕೊಟ್ಟ ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳು ಇವೆ. ಅವುಗಳನ್ನು ರಥ ನಿರ್ಮಾಣಕ್ಕೆ ನಾನು ನೀಡುತ್ತೇನೆ” ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇದಲ್ಲದೇ ಸಚಿವೆ ಗೀತಾ ಮಹದೇವಪ್ರಸಾದ್ ಅವರನ್ನು ಕರೆದು, “ಮಲೆಮಹದೇಶ್ವರ ಬೆಟ್ಟದಲ್ಲಿ ಒಂದು ಪ್ಯೂರ್ ಚಿನ್ನದ ರಥ ಮಾಡಿಸಬೇಕು. ತಿರುಪತಿ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ಇರುವ ಚಿನ್ನದ ರಥಕ್ಕಿಂತ ಉತ್ತಮ ಚಿನ್ನದ ರಥ ನಿರ್ಮಾಣ ಮಾಡಬೇಕು. ಈ ಕೆಲಸವನ್ನು ಆದಷ್ಟು ಬೇಗ ಮಾಡಬೇಕು” ಎಂದು ಸೂಚನೆ ನೀಡಿದ್ದಾರೆ.

ಆದರೆ ಈ ಮೊದಲು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ನಾಸ್ತಿಕಪಟ್ಟ ಕಟ್ಟಿಕೊಂಡಿದ್ದ ಸಿದ್ದರಾಮಯ್ಯನವರು ಅಧಿಕಾರ ಮುಗಿಯುತ್ತಿದ್ದಂತೆ ಆಸ್ತಿಕರಾಗುತ್ತಿರುವುದನ್ನು ಕಂಡರೆ ಇವರಿಗೇನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ!! ಯಾಕೆಂದರೆ, ದಸರೆಯಲ್ಲಿ ಶೂ ಹಾಕಿಕೊಂಡು ಪುಷ್ಪಾರ್ಚನೆ ಮಾಡಿದ್ದಲ್ಲದೇ, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆಯೂ ಇದೇ ರೀತಿ ಮಾಡಿದ್ದರು. ಅಷ್ಟೇ ಅಲ್ಲದೇ, ಇತ್ತೀಚೆಗೆ ಮೀನು ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ವಿವಾದಕ್ಕೆ ಕಾರಣರಾಗಿದ್ದರು!! ಆದರೆ ಮಲೈಮಹದೇಶ್ವರ ಬೆಟ್ಟಕ್ಕೆ ಮಾತ್ರ ಪರಮಭಕ್ತರಾಗಿರುವ ಸಿದ್ದರಾಮಯ್ಯ ಅವರು, 2016ರ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ವೇಳೆ ಬೆಟ್ಟಕ್ಕೆ ಬಂದು ಮಾದಪ್ಪನಲ್ಲಿ ಹಾಡು ಹೇಳಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಇದೀಗ ಮತ್ತೆ ಬೆಳ್ಳಿ ಉಡುಗೊರೆಗಳನ್ನು ಕಾಣಿಕೆಯಾಗಿ ನೀಡುತ್ತಿರುವುದನ್ನು ನೋಡಿದಾಗ ಸಿಎಂ ದೈವ ಭಕ್ತಿಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

– ಅಲೋಖಾ

 

Editor Postcard Kannada:
Related Post