X

ನಿಜವಾಗಿಯೂ ಆ ಮೂವರೂ ಕ್ರಾಂತಿಕಾರಿಗಳು ತಮ್ಮ ಪ್ರಾಣ ಭಾರತಮಾತೆಗೆ ಅರ್ಪಿಸಿದ್ದು ನೇಣಿಗೆ ಕೊರಳೊಡ್ಡಿಯಾ? ಅಥವ ಅವರನ್ನ ಬ್ರಿಟಿಷರು ಶೂಟ್ ಮಾಡಿ ಸಾಯಿಸಿದ್ದರಾ? ಆ Operation TrojanHorse ಬಗ್ಗೆ ನಿಮಗೆಷ್ಟು ಗೊತ್ತು?

ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಸೆಣಸಿ ಭಾರತಮಾತೆಯನ್ನ ಬ್ರಿಟಿಷ್ ಕಬಂಧಬಾಹುವಿನಿಂದ ರಕ್ಷಿಸಲು ಆರೂವರೆ ಲಕ್ಷ ಜನ ಪ್ರಾಣತೆತ್ತರು. ಆ ಆರೂವರೆ ಲಕ್ಷ ಜನರ ಹೆಸರನ್ನೂ ನಮಗೆ ತಿಳಿಯದೆ ಕೇವಲ ಗಾಂಧಿ ನೆಹರು ಅಂತ ಅವರ ಹೆಸರುಗಳನ್ನೇ ವರ್ಷಪೂರ್ತಿ ಗುನುಗುಡುತ್ತ ಲಕ್ಷಾಂತರ ವೀರಯೋಧರನ್ನ ಮರೆಯುವಂತೆ ಮಾಡಿದ ಸಾಧನೆ ನೆಹರುವಿಗೇ ಸಲ್ಲುತ್ತದೆ.

ಆ ಆರೂವರೆ ಲಕ್ಷ ಜನ ಕ್ರಾಂತಿಕಾರಿಗಳನ್ನ ಮನದಲ್ಲಿ ನೆನೆಯುತ್ತ ಅವರ ಅತೃಪ್ತ ಆತ್ಮಗಳಿಗೆ ಶಾಂತಿ ಕೋರುತ್ತ ಮುಂದೆಯಾದರೂ ಅವರ ಬಗ್ಗೆ ಭಾರತೀಯರು
ತಿಳಿದುಕೊಳ್ಳುವಂತಾಗಲಿ.

ಇರಲಿ. ಮಾರ್ಚ್ 23, 1931 ರಂದು ಭಗತ್ ಸಿಂಗ್, ಸುಖದೇವ್, ರಾಜಗುರು ರನ್ನ ಬ್ರಿಟಿಷರು ನೇಣುಗಂಬಕ್ಕೇರಿಸಿದ್ದರು ಅನ್ನೋದು ನಮಗೆಲ್ಲ ತಿಳಿದ ವಿಷಯವೇ.

ಆದರೆ ನಿಜವಾಗಿಯೂ ಆ ಮೂವರೂ ಕ್ರಾಂತಿಕಾರಿಗಳು ತಮ್ಮ ಪ್ರಾಣ ಭಾರತಮಾತೆಗೆ ಅರ್ಪಿಸಿದ್ದು ನೇಣಿಗೆ ಕೊರಳೊಡ್ಡಿಯಾ? ಅಥವ ಅವರನ್ನ ಬ್ರಿಟಿಷರು ಶೂಟ್ ಮಾಡಿ ಸಾಯಿಸಿದ್ದರಾ?

ಇಂಥದ್ದೊಂದು ಅನುಮಾನ ಅಥವ ಇತಿಹಾಸದ ಗರ್ಭದಲ್ಲಿ ಅಡಗಿಹೋಗಿರುವ ಸತ್ಯವನ್ನ Some Hidden Facts:Martyrdom of Shaheed Bhagat Singh ಪುಸ್ತಕದಲ್ಲಿ ಬಿಚ್ಚಿಡಲಾಗಿದೆ.

ಸನ್ 1927 ರಲ್ಲಿ ಬ್ರಿಟಿಷರು ಭಾರತದ ರಾಜಕೀಯ ಸುಧಾರಣೆ ತರಲಿಚ್ಚಿಸಿ ‘ಸೈಮನ್’ ಕಮೀಷನ್ನನ್ನು ತಂದಿದ್ದರು. ಆದರೆ ಭಾರತದ ಕ್ರಾಂತಿಕಾರಿಗಳ್ಲೊಬ್ಬರಾದ
ಲಾಲಾ ಲಜಪತ್ ರಾಯರು ಇದನ್ನ ತೀವ್ರವಾಗಿ ವಿರೋಧಿಸಿ ‘ಗೋ ಬ್ಯಾಕ್ ಸೈಮನ್’ ಚಳುವಳಿ ಆರಂಭಿಸಿದ್ದಾಗ ಬ್ರಿಟಿಷ್ ಪೋಲೀಸರು ಲಾಠಿ ಚಾರ್ಜ್ ನಡೆಸಿದಾಗ ತಲೆಗೆ ತೀವ್ರವಾದ ಗಾಯವಾಗಿ ಲಾಲಾ ಲಜಪತರಾಯರು ನವೆಂಬರ್ 17, 1928 ರಲ್ಲಿ ತೀರಿಹೋದರು.

ಮೊದಲೇ ಕ್ರಾಂತಿಕಾರಿಗಳಾಗಿ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಚಂದ್ರಶೇಖರ ಆಜಾದ್ ರವರು ಲಾಲಾ ಲಜಪತರಾಯರ ಸಾವಿನ ಸೇಡು ತೀರಿಸಿಕೊಳ್ಳಲು ಲಾಠಿ ಚಾರ್ಜ್ ಆದೇಶ ನೀಡಿದ್ದ Superintendent of Police ಜೇಮ್ಸ್ ಸ್ಕಾಟ್ ನ್ನ ಕೊಲ್ಲಲು ಸಂಚು ರೂಪಿಸಿದರು.

ಭಗತ್ ಸಿಂಗ್ ಹಾಗು ಶಿವರಾಮ್ ರಾಜಗುರು ಇಬ್ಬರೂ ಡಿಸೆಂಬರ್ 17, 1928 ರಂದು ಪೋಲಿಸ್ ಸ್ಟೇಷನ್ನಿನ ಹೊರಗೆ ಹೊಂಚು ಹಾಕಿ ಜಾನ್ ಸ್ಯಾಂಡರ್ಸ್ ನ್ನ
ಕೊಂದರು. ಆದರೆ ಗುರಿಯಿದ್ದದ್ದು ಜೇಮ್ಸ್ ಸ್ಕಾಟ್ ನ್ನ ಕೊಲ್ಲೋದು ಆದರೆ ಕೊಂದಿದ್ದು ಜಾನ್ ಸ್ಯಾಂಡರ್ಸ್.

ಯಾರಾದರೇನೂ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಂಡೆವಂತ ಅಲ್ಲಿಂದ ಪರಾರಿಯಾಗಿ ಬ್ರಿಟಿಷರ ವಿರುದ್ಧದ ತಮ್ಮ ಮುಂದಿನ ಕೆಲಸಗಳತ್ತ ಮಗ್ನರಾದರು. ಆದರೆ ಭಾರತದ ಜನ ಯಾಕೆ ಬ್ರಿಟಿಷರ ವಿರುದ್ಧ ಧ್ಬನಿಯೆತ್ತುತ್ತಿಲ್ಲ? ಬ್ರಿಟಿಷರು ಮಾಡುತ್ತಿರೋ ಅನ್ಯಾಯ ಲೂಟಿ ನಮ್ಮ ಜನಗಳಿಗೆ ಯಾಕೆ ಅರ್ಥವಾಗುತ್ತಿಲ್ಲ? ಅವರಿಗೆ ಈ ಸುದ್ದಿ ಮುಟ್ಟಿಸಬೇಕೆಂದರೆ ಕ್ರಾಂತಿಕಾರಿಗಳಾದ ನಾವು ಏನಾದರೂ ಮಾಡಲೇಬೇಕಂತ ಏಪ್ರಿಲ್ 8, 1929 ರಂದು ಪಾರ್ಲಿಮೆಂಟಿನಲ್ಲೇ ಬಾಂಬ್ ಎಸೆದುಬಿಟ್ಟರು.

ಇದು ಯಾರ ಜೀವಕ್ಕೂ ಹಾನಿ ಮಾಡುವ ಉದ್ದೇಶವಿರಲಿಲ್ಲ ಆದರೆ ಈ ಸುದ್ದಿ ದೇಶಾದ್ಯಂತ ಸಂಚಲನೆ ಮೂಡಿಸಿ ಎಲ್ಲಾ ಪತ್ರಿಕೆಗಳಲ್ಲೂ ಬಂದರೆ ನಮ್ಮ ಜನಗಳಿಗೆ ಆಗಲಾದರೂ ನಮ್ಮ ಈ ಕೃತ್ಯ ನಮ್ಮ ಜನರನ್ನ ಬಡಿದೆಬ್ಬಿಸುತ್ತೆ ಅನ್ನೋದು ಅವರ ಉದ್ದೇಶವಾಗಿತ್ತು.

ಪಾರ್ಲಿಮೆಂಟಿನಲ್ಲಿ ಬಾಂಬ್ ಎಸೆದ ನಂತರ ಭಗತ್ ಸಿಂಗ್, ರಾಜಗುರು, ಸುಖದೇವ ಮೂವರೂ ಶರಣಾಗತರಾಗುತ್ತಾರೆ.

ಇವರ ವಿರುದ್ಧ ಮೊಕದ್ದಮೆಯಾಗಿ ಮರಣದಂಡನೆ ಶಿಕ್ಷೆಯೂ ಆಗುತ್ತೆ, ಅವರನ್ನ ಮಾರ್ಚ್ 23, 1931 ರಲ್ಲಿ ಗಲ್ಲಿಗೇರಿಸಲಾಯಿತು ಅನ್ನೋದು ನಮಗೆಲ್ಲ ತಿಳಿದ ವಿಷಯವೇ

ಆದರೆ ನಿಜವಾಗಿಯೂ ಅವರಿಗೆ ಗಲ್ಲಿಗೇರಿಸಿ ಕೊಲ್ಲಲಾಗಿತ್ತಾ? ಇಲ್ಲ ಅನ್ನುತ್ತೆ ಇತಿಹಾಸ.

ಯೆಸ್, Some Hidden Facts: Martyrdom of Shaheed Bhagat Singh ಪುಸ್ತಕದಲ್ಲಿ ಇದರ ಉಲ್ಲೇಖವಿದೆ.

ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸುವಾಗ ಅದರದ್ದೇ ಆದ ಕೆಲ ರೂಲ್ಸ್ & ರೆಗುಲೇಷನ್ಸ್ ಇರುತ್ತೆ. ಮರಣದಂಡನೆ ಬೆಳಿಗ್ಗೆಯೇ ಆಗಬೇಕು, ಮರಣದಂಡನೆಗೊಳಗಾಗುವ ವ್ಯಕ್ತಿಯ ಆತನ ಕೊನೆಯ ಆಸೆಯನ್ನ ಪೂರೈಸಬೇಕು.

ಆದರೆ ಅದನ್ನೆಲ್ಲ ಗಾಳಿಗೆ ತೂರಿದ ಬ್ರಿಟಿಷ್ ಅಧಿಕಾರಿಗಳು ರಾತ್ರೋ ರಾತ್ರಿ ಮೂವರನ್ನೂ ಗಲ್ಲಿಗೇರಿಸಲಾಯಿತು.

ಇದಕ್ಕೆ ಅವರು ಕೊಟ್ಟ ಹೆಸರೇ ‘Operation Trojan Horse’

ಗಲ್ಲಿಗೇರಿಸಿದ್ದು ಕೇವಲ ಭಗತ್ ಸಿಂಗ್, ರಾಜಗುರು, ಸುಖದೇವರ ಕುತ್ತಿಗೆ ಮೂಳೆ ಮುರಿದು ಅವರು ನಿಸ್ತೇಜಸ್ಥಿತಿ ತಲುಪಲಿ ಅನ್ನೋ ಉದ್ದೇಶ ಮಾತ್ರವಾಗಿತ್ತೇ ಹೊರತು ಅವರನ್ನ ಕೊಲ್ಲೋದಾಗಿರಲಿಲ್ಲ.

ಜಾನ್ ಸ್ಯಾಂಡರ್ಸನ್ನ ಇದೇ ಮೂವರು ಕ್ರಾಂತಿಕಾರಿಗಳು ಕೊಂದು ಬಿಸಾಡಿದ್ದರಲ್ವೇ ಅದಕ್ಕೆ ಆತನ ಸಂಬಂಧಿಕರಿಗೆ ಈ ಮೂವರೂ ಕ್ರಾಂತಿಕಾರಿಗಳ ಮೇಲೆ
ಕೆಂಡದಂಥ ಕೋಪವಿತ್ತು.

ಆ ಮೂವರನ್ನೂ ಶೂಟ್ ಮಾಡಿ ಕೊಂದು ತನ್ನ ಅಳಿಯನ revenge ತೀರಿಸಿಕೊಳ್ಳಲು ಜಾನ್ ಸ್ಯಾಂಡರ್ಸನ್ ಸಂಬಂಧಿಕರು ಭಗತ್ ಸಿಂಗ್, ರಾಜಗುರು,
ಸುಖದೇವರನ್ನ ಕೇವಲ ಅವರ ಕುತ್ತಿಗೆ ಮೂಳೆ ಮುರಿದು ನಿಸ್ತೇಜ ಸ್ಥಿತಿ ತಲುಪಿಸಲು ಅವರಿಗೆ ನೇಣುಗಂಬಕ್ಕೇರಿಸಲಾಗಿತ್ತು. ನಂತರ ಕೆಲ ಸೆಕೆಂಡುಗಳ ನಂತರ ಇನ್ನೂ ಜೀವಂತವಾಗಿದ್ದ ಆ ಮೂವರನ್ನೂ ನೇಣುಗಂಭದಿಂದ ಕೆಳಗಿಳಸಿ ರಾತ್ರೋ ರಾತ್ರಿ ಮರದ ದಿಮ್ಮಿಗಳಿಂದ ತುಂಬಿದ್ದ ಲಾರಿಗೆ ಈ ಮೂವರನ್ನೂ ತುಂಬಿ ಲಾಹೋರ್ ಕಂಟೋನ್ಮೆಂಟ್ ನ ರಹಸ್ಯ ಸ್ಥಳಕ್ಕೆ ತರಲಾಯಿತು.

ಮೂವರಲ್ಲಿ ಭಗತ್ ಸಿಂಗರಿಗೆ ಪ್ರಜ್ಞೆ ಬಂದಿದ್ದನ್ನ ಕಂಡ ಪಂಜಾಬಿನ ಗವರ್ನರ್ ಆಗಿದ್ದ ಸ್ಯಾಂಡರ್ಸನ್ ಮಾವ “Death Squad” ಮೂಲಕ ಭಗತ್ ಸಿಂಗರ ತಲೆ
ಹಾಗು ಎದೆಗೆ ಗುಂಡಿಟ್ಟು ಸಾಯಿಸಿದ. ನಂತರ ಇನ್ನುಳಿದ ಇಬ್ಬರನ್ನೂ ಶೂಟ್ ಮಾಡಿ ಸಾಯಿಸಲಾಯಿತು.

ಆದರೆ ನಂತರ ಅವರ ಪೋಸ್ಟಮಾರ್ಟಮ್ ಆದರೆ ಈ ಸುದ್ಧಿ ಹೊರಗೆ ಬಂದು ಜನ ದಂಗೆಯೇಳಬಹುದಂತ ಜನರ ದಿಕ್ಕು ತಪ್ಪಿಸಲು ‘ಹುಸ್ಸೇನಿವಾಲಾ’ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಿರುವಂತೆ ಜನರನ್ನ ನಂಬಿಸಲಾಯಿತು

ಆದರೆ ಈ ಮೂವರ ಶವಗಳನ್ನೂ ರಾವಿ ಸಟ್ಲೇಜ್ ನದಿಯ ತಟದಲ್ಲಿ ಸುಡಲಾಗಿತ್ತು.

ಈ ಸುದ್ದಿ ತಿಳಿದ ಭಗತ್ ಸಿಂಗ್ ಸಹೋದರಿ ರಾವಿ ಸಟ್ಲೇಜ್ ನದಿ ತೀರಕ್ಕೆ ಹೋಗಿ ಅರ್ಧಂಬರ್ದ ಸುಟ್ಟ ಶವಗಳನ್ನ ನೋಡಿದಾಗ ಆಕೆಗೆ ಕಂಡಿದ್ದು ಉದ್ದನೆಯ ಕೈ
ಮೂಳೆ, ಆ ಮೂವರೂ ಕ್ರಾಂತಿಕಾರಿಗಳಲ್ಲಿ ಎತ್ತರವಾಗಿದ್ದವನೇ ತನ್ನ ತಮ್ಮನಂತ ತಿಳಿದಿದ್ದ ಭಗತ್ ಸಹೋದರಿ ಆ ಮೂಳೆ ಹಾಗು ಕಳೆಬರವನ್ನ ತೆಗೆದುಕೊಂಡು
ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಈ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಪಾಲ್ಗೊಂಡು ಭಗತ್ ಸಿಂಗ, ರಾಜಗುರು, ಸುಖದೇವರನ್ನ ನೆನೆದು
ಕಣ್ಣೀರಿಟ್ಟಿದ್ದರಂತೆ.

ಆದರೆ ಈ ಸುದ್ದಿ ಮಾತ್ರ ಹೊರಬರದಂತೆ ಬ್ರಿಟಿಷ್ ಅಧಿಕಾರಿಗಳು ನೋಡಿಕೊಂಡಿದ್ದರು. ಸ್ವಾತಂತ್ರ್ಯ ಸಿಕ್ಕ ನಂತರವೂ ಈ ಸುದ್ದಿ ನಮಗೆ ತಿಳಿದಿರಲೇ
ಇಲ್ಲ.

ಭಗತ್ ಸಿಂಗನ ಕುರಿತಾದ ಮಾಹಿತಿಗಳನ್ನು Some Hidden Facts: Martyrdom of Shaheed Bhagat Singh ಪುಸ್ತಕದಲ್ಲಿ
ಕಾಣಬಹುದು

ಈ ಪುಸ್ತಕವನ್ನ ದಲಿಪ್ ಸಿಂಗ್ ಅಲಹಾಬಾದಿ ಹಾಗು ಕುಲವಂತ್ ಸಿಂಗ್ ಬರೆದಿದ್ದು ಇವರಿಬ್ಬರೂ ಬ್ರಿಟಿಷ್ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದವರು.

ಈ ಪುಸ್ತಕವನ್ನು ಚಂಢೀಗಡನ Unistar books ನವರು Publish ಮಾಡಿದ್ದಾರೆ.

ಇಂತಹ ಅದೆಷ್ಟು ಘಟನೆಗಳು ಇತಿಹಾಸದ ಭೂಗರ್ಭಕ್ಕೆ ಸೇರಿವೆಯೋ!!!

– Vinod Hindu Nationalist

Editor Postcard Kannada:
Related Post