X
    Categories: ಅಂಕಣ

ನಿಮಗ್ಯಾವ ಮಾಧ್ಯಮವೂ ಹೇಳದ ಸತ್ಯವಿದು! ಪ್ರತಿ ಚುನಾವಣೆಯಲ್ಲಿಯೂ ಮೋದಿ ಗುಜರಾತನ್ನು ಗೆಲ್ಲುವುದು ಇದೊಂದೇ ಒಂದು ಕಾರಣಕ್ಕಾಗಿ!

ಎಲ್ಲವನೂ ಹೇಳುವುದಕ್ಕಿಂತ ಮುಂಚೆ ಒಂದಯ ಹದಿನೇಳು ವರುಷ ಹಿಂದಕ್ಕೆ ಹೋಗಲೇ ಬೇಕು! 2001 ನೇ ಇಸವಿಯ ಜನವರಿ 26 ರ ದಿನಕ್ಕೊಮ್ಕೆ
ಮರುಪ್ರಯಾಣ ಮಾಡಲೇಬೇಕು!

ನನಗಾಗ 8 ವರ್ಷ! ನನಗೆ ಅವತ್ತಿನ ದಿನ ಪ್ರಾರಂಭವಾದದ್ದೇ ವಿಲಕ್ಷಣ ರೀತಿಯಲ್ಲಿ! ಇನ್ನೂ ಅರೆ ನಿದ್ರೆಯಲ್ಲಿದ್ದ ನನ್ನನ್ನು ನನ್ನ ಅಮ್ಮ ಎತ್ತಿಕೊಂಡು ಓಡುತ್ತಿದ್ದಳು. ಎಲ್ಲಿಗೆ ಯಾಕಾಗಿ ಅಥವಾ ಏನು ಎಂಬ ಯಾವ ವಿಷಯವೂ ನನ್ನ ಅರಿವಿಗೆ ಬರಲಿಲಲ್ಲ! ನಾನು ನಿದ್ರೆಯ ಮಂಪರಿನಲ್ಲಿದ್ದೆ!

ದೊಡ್ಡದಾದ ಕಿವಿಗಡಚಿಕ್ಕುವ ಶಬ್ದವೊಂದು ನನ್ನನ್ನು ನಿದ್ದೆಯಿಂದ ಸಂಪೂರ್ಣವಾಗಿ ಹೊರಬರುವಂತೆ ಮಾಡಿತು. ಎಚ್ಚರಾದ ಮೇಲೆ ನೋಡಿದರೆ ನಾನು ಮನೆಯ ಹೊರಗಡೆ ಅಮ್ಮನ ತೋಳುಗಳಲ್ಲಿದ್ದೆ! ನೋಡ ನೋಡುತ್ತಿದ್ದಂತೆಯೇ ಒಂದು ಮಗು ಕಟ್ಟಿದ ಮರಳಿನ ಮನೆ ಕುಸಿಯುವಂತೆ ಎದುರಿಗುದ್ದ ಬೃಹದಾಕಾರ ಬಂಗಲೆಯೊಂದು ಎಡದಿಂದ ಬಲಕ್ಕೆ ಓಲಾಡುತ್ತಾ ಕುಸಿದು ಬಿದ್ದಿತು! ನನಗೆ ತದನಂತರ ಅಮ್ಮನ ಪ್ರಾರ್ಥನೆ ಬಿಟ್ಟು ಬೇರೇನೂ ಕೇಳಲಿಲ್ಲ! ಅಮ್ಮನಿಗಾದರೆ ಏನಾಗುತ್ತಿದೆ ಎಂಬುದು ಬಹುಷಃ ಸಂಪೂರ್ಣವಾಗಿ ಅರ್ಥವಾಗಿತ್ತಾದರೂ, ನನಗೆ ಏನೋ ಆಗುತ್ತಲಿದೆ ಎಂಬುದನ್ನು ಬಿಟ್ಟು ಬೇರೇನೂ ಅರ್ಥವಾಗಿರಲಿಲ್ಲ.

ನಾನಾಗ ಗಾಂಧಿಧಾಮದಲ್ಲಿದ್ದೆ! 2001 ರಲ್ಲಿ ನಡೆದ ಅತಿ ದೊಡ್ಡ ‘ಭುಜ್’ ಭೂಕಂಪ 40 ಕಿಮೀಗಳಷ್ಟು ವ್ಯಾಪಿಸಿ ಮರಣಸದೃಶವಾಗಿತ್ತು! ಇಡೀ ರಾಜ್ಯವೇ ಅವತ್ತು ಮೃತ್ಯು ಕೂಪದಲ್ಲಿ ತತ್ತರಿಸಿತ್ತು! ಸರಾಸರಿ ಸಾವುಗಳು 14,000 ರಿಂದ 20,000 ರದಷ್ಟಾಗಿವೆಯೆಂದು ಅಂದಾಜಿಸಲಾಗಿತ್ತು. ಬರೋಬ್ಬರಿ 1,70,000 ದಷ್ಟು ಜನ ಗಾಯಾಳುಗಳೆಂದು ಅಂದಾಜಿಸಲಾಗಿತ್ತು. 4,00,000 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದವು. ರಾಜ್ಯಕ್ಕಾದ ನಷ್ಟ ಬರೋಬ್ಬರಿ 7.75 ಬಿಲಿಯನ್ ಡಾಲರ್ ಗಳಷ್ಟು! ಇದನ್ನು ಕಣ್ಣಾರೆ ನೋಡುತ್ತಾ ಬದುಕುಳಿದವರಲ್ಲಿ ನಾನೂ ಒಬ್ಬ!

ಆಗ ಇದೇ ನರೇಂದ್ರ ಮೋದಿಯವರೇ ಇಡೀ ರಾಜ್ಯವನ್ನು ನಿರ್ವಹಿಸುವ ಹೊಣೆಗಾರಿಕೆ ಹೊತ್ತುಕೊಂಡರು! ಮತ‌್ತೆ ಹೊಸದಾಗಿ ಬದುಕು ಕಟ್ಟಿಕೊಡಬೇಕಾದ ಅನಿವಾರ್ಯತೆಯಿತ್ತು. ಇನ್ನೂ ಮುಂದಕ್ಕೆ ಹೇಳುವ ಮುನ್ನ ಒಂದು ಪ್ರಶ್ನೆಯನ್ನಿಡುತ್ತೇನೆ! ನರೇಂದ್ರ ಮೋದಿಯನ್ನು ವಿರೋಧಿಸುವ ಮುನ್ನ ನಿಮಗೇ ಕೇಳಿಕೊಳ್ಳಿ! ನೀವಾಗಿದ್ದರೆ ಇಂತಹ ದೊಡ್ಡದಾದ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಿದ್ದಿರಾ?!

ವಾಸ್ತವವೇನೆಂದರೆ, ಅಂತಹ ಭೀಭತ್ಸ ಪರಿಸ್ಥಿತಿಯಲ್ಲಿಯೂ ರಾಜ್ಯವನ್ನು ಮೇಲೆತ್ತಲು ಯಾವುದೇ ಹಿಂಜರಿಕೆಯೂ ಇಲ್ಲದೆ ಕಟಿಬದ್ಧರಾಗಿ ನಿಂತಿದ್ದು ಅವರ ಚಾರಿತ್ರ್ಯ ಹಾಗೂ ತಾಯ್ನಾಡಿನ ಮೇಲೆ ಇಟ್ಟಂತಹ ಪ್ರೀತಿಗೆ ಹಿಡಿದ ಕನ್ನಡಿಯಷ್ಟೇ!.ನಾನು ಆ ಭೂಕಂಪವನ್ನೂ ನೋಡಿದ್ದೇನೆ, ಜೊತೆ ಜೊತೆಗೆ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದರೂ ಮೇಲೆದ್ದ ರಾಜ್ಯದ ವೈಭವವನ್ನೂ ನೋಡಿದ್ದೇನೆ! ನಾವು ಜಪಾನ್ ಪರಮಾಣು ದಾಳಿಗೊಳಗಾದರೂ ಹೇಗೆ ಮೈ ಕೊಡವಿ ಎದ್ದಿತೆಂಬುದನ್ನು ಸ್ಮರಿಸುವಾಗ, ಒಂದು ಕಾಲದಲ್ಲಿ ಗುಜರಾತ್ ಕೂಡ ಮೋದಿಯವರ ಕೈಯ್ಯಲ್ಲಿ ಹೇಗೆ ಮತ್ತೆ ಚಿಗುರಿತೆಂಬುದನ್ನು ಸ್ಮರಿಸಲೇ ಇಲ್ಲ! ಕೊನೆ ಕೊನೆಗೆ ನಮಗೆ ಭುಜ್ ಭೂಕಂಪದ ನೆನಪೂ ಆಗಲಿಲ್ಲ!

ಮೋದಿ ಹೆಲಿಕಾಪ್ಟರಿನ ಮೇಲೆ ಕುಳಿತು ಟಾಟಾ ಮಾಡಲಿಲ್ಲ!

ಹಾ! ಮೋದಿ ಅವತ್ತು ಹೆಲಿಕಾಪ್ಟರಿನ ಮೇಲೆ ಕುಳಿತು ಸರ್ವೇ ಮಾಡಲಿಲ್ಲ! ಜನರನ್ನು ನೋಡಿ ಟಾಟಾ ಮಾಡಿ ಹಾಗಿಂದ ಹಾಗೆಯೇ ಹೋಗಲಿಲ್ಲ! ಬದಲಾಗಿ, ಭೂಕಂಪವಾದ ಜಾಗಗಳನ್ನು ಖುದ್ದು ಪರೀಕ್ಷಿಸಿದ್ದರು! ಒಮ್ಮೊಮ್ಮೆ ಬೈಕಿನ ಮೇಲೆ, ಒಮ್ಮೊಮ್ಮೆ ನಡೆಯುತ್ತ,. ಸರಕಾರೀ ನೌಕರರ ಎಲ್ಲಾ ರಜೆಗಳನ್ನೂ ರದ್ದುಗೊಳಿಸಿ 24*7 ಕೆಲಸ ಮಾಡಿದರು! ತಾವೂ ಸಹ ಯಾವುದೇ ಹಬ್ಬಗಳನ್ನೂ ಆಚರಿಸಲಿಲ್ಲ! ರಜೆ ತೆಗೆದುಕೊಳ್ಳಲಿಲ್ಲ! ಪ್ರತಿದಿನವೂ ಅಗತ್ಯಬಿದ್ದ ಎಲ್ಲ
ಕೆಲಸಗಳನ್ನೂ ಮಾಡಿದರು! ಇದನ್ನು ಸ್ವತಃ ಗುಜರಾತ್ ಜನರು ನೋಡಿದ್ದಾರೆ! ಅಭಿನಂದಿಸಿದ್ದಾರೆ!

ಮಾಧ್ಯಮವಂತೂ ಇಂತಹ ವೀರೋಚಿತ ಸಂಗತಿಗಳನ್ನು ಮುಚ್ಚಿಟ್ಟಿತು! ಗುಜರಾತ್ ಮತ್ತೆ ಮೇಲೇಳಬಹುದೆಂಬ ಯಾವ ಆಲೋಚನೆಯೂ ಇರಲಿಲ್ಲ! ಅದೆಷ್ಟೋ ನರಳಾಟ ಕೇಳಬಹುದು! ಅದೆಷ್ಟೋ ಮನೆಗಳ ಅವಶೇಷಗಳ ಕೆಳಗೆ ಹೆಣಗಳು ಸಿಕ್ಕು ನರಳಬಹುದು! ಜೊತೆ ಜೊತೆಗೆ ಮೋದಿ ತವರಲ್ಲಿ ಜಾತಿ ಬೇಧಗಳೆಂಬ ಶೀರ್ಷಿಕೆಯನ್ನಿಟ್ಟಿದ್ದಕ್ಕೂ ಕಥೆಗಳು ಸಿಗಬಹುದು! ಸರಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ! ನಿರಾಶ್ರಿತರಿಗೆ ದಿಕ್ಕಿಲ್ಲ! ಇಂತಹುದೇ ಆಸೆಗಳನ್ನಿಟ್ಟುಕೊಂಡು ಬಂದಿದ್ದ ಮಾಧ್ಯಮಗಳಿಗೆ ಕಾದಿದ್ದು ಮಾತ್ರ ಬಹುದೊಡ್ಡ ನಿರಾಸೆಯಷ್ಟೇ!

ನಿರಾಶ್ರಿತರ ಶಿಬಿರಗಳಲ್ಲಿ ಸಾಮಾಜಿಕ ಕಾರ್ಯಕರ್ತರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು! ಹಿಂದೂ – ಮುಸ್ಲಿಂ ಎನ್ನುವ ಬೇಧವೂ ಇಲ್ಲದೇ, ಪ್ರತಿಯೊಬ್ಬ ಸಂತ್ರಸ್ತನಿಗೂ ಕೂಡ ಒಂದೇ ರೀತಿಯ ಸೌಲಭ್ಯ! ವ್ಯವಸ್ಥೆ ಅವ್ಯವಸ್ಥೆಯಾಗಲೂ ಇಲ್ಲ! ದುರಂತದಿಂದಾದ ಹಾನಿಯನ್ನು ಸರಿಪಡಿಸುವುದಕ್ಕೆ ಬಹುಷಃ ಏಳು ವರ್ಷಗಳು ಬೇಕಾಗಬಹುದೆಂದು ಅಂತರಾಷ್ಟ್ರೀಯ ಬ್ಯಾಂಕ್ ಹೇಳಿಕೆ ನೀಡಿದ್ದನ್ನು ಸುಳ್ಳಾಗಿಸಿದ್ದರು ಮೋದಿ! ಕೇವಲ ನಾಲ್ಕೇ ನಾಲ್ಕು ವರ್ಷಗಳಲ್ಲಿ, ಹಾನಿಗೊಳಗಾದ ಪ್ರದೇಶಗಳನ್ನು ಕೇವಲ ಸರಿಯಾಗಿಸುವುದೊಂದೇ ಅಲ್ಲ! ಬದಲಾಗಿ, ಮುಂಚಿಗಿಂತಲೂ ವೇಗವಾಗಿ ನಿರ್ಮಾಣಗೊಂಡಿತ್ತು ನಗರ! ಜೊತೆಗೆ ಕಾರ್ಯ ಚಟುವಟಿಕೆಗಳೂ!

ಇಷ್ಟಾದರೂ. . . . .

ಇಷ್ಟಾದರೂ ಕೂಡ! ಮಾಧ್ಯಮಗಳು ಮೋದಿ ಎಂದರೆ ಗೋಧ್ರಾವನ್ನು ನೆನಪಿಸಿಕೊಂಡು ಗೋಳಿಡುವ ನಾಟಕವಾಡುತ್ತದೆ! ಎಲ್ಲಿ ಮೋದಿಯನ್ನು ಪ್ರಶಂಸಿಸಿದರೆ
ಕಾಂಗ್ರೆಸ್ ನ ಭಕ್ಷೀಸು ತಪ್ಪುತ್ತದೇನೋ ಎಂಬ ಅನುಮಾನದೊಂದಿಗೆ ಅನಿವಾರ್ಯ ಸಮಯದಲ್ಲಿ ಒಂದೇ ವಾಕ್ಯದ ಮುಖ್ಯಾಂಶದೊಂದಿಗೆ ಮುಕ್ತಗೊಳಿಸುತ್ತವೆ!

ನೀವು ಕೇಳಬಹುದು! ಹೇಳಿದ್ದಕ್ಕೆಲ್ಲ ಸಾಕ್ಷಿ ಕೊಡಿರೆಂದು! ಹಾಗಿದ್ದಲ್ಲಿ, ನೀವೇ ಖುದ್ದಾಗಿ ಗುಜರಾತಿಗೆ ಭೇಟಿ ನೀಡಬೇಕಷ್ಟೇ! ಮೋದಿಯ ಕೆಲಸ ನೋಡಬೇಕೆಂದರೆ ಗುಜರಾತಿಗೇ ನೀವು ಹೋಗಿ ನೋಡಬೇಕು! ಅದೆಷ್ಟೇ ಭೂಕಂಪವಾದರೂ ಕೂಡ, ಎಷ್ಟೇ ಹಾನಿಯಾದರೂ ಕೂಡ ಗುಜರಾತ್ ಹೇಗೆ ಮತ್ತೆ ಅಭಿವೃದ್ಧಿಗೊಂಡಿದೆಯೆಂಬುದನ್ನೂ ನೋಡಿದ್ದೇನೆ! ಹೇಗೆ ಮೋದಿಯೇ ಸ್ವತಃ ಕೆಲಸ ಮಾಡಿದ್ದಾರೆಂಬುದನ್ನೂ ಗುಜರಾತ್ ಬಿಟ್ಟ ಕಣ್ಣು ಬಿಡುತ್ತಲೇ ನೋಡಿ ಉದ್ಗರಿಸಿದೆ! ಅದಕ್ಕೇ, ಯಾವೊಬ್ಬ ನಾಯಕನಿಗೂ ಸಾಧ್ಯವಾಗದಂತಹ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಮೋದಿಯಂತಹ ಅದ್ಭುತ ನಾಯಕನನ್ನು ಬೆಂಬಲಿಸುವುದು! ಬರೀ ನಾನೊಬ್ಬನೇ ಅಲ್ಲ, ಗುಜರಾತಿನ ಪ್ರತಿಯೊಬ್ಬ ಪ್ರಜೆಯೂ ಬೆಂಬಲಿಸುವುದು ಇದೇ ಕಾರಣಕ್ಕಾಗಿ!

ಯಾರೇನೇ ಮಾಡಿದರೂ ಸಹ, ಮೋದಿ ಗುಜರಾತಿನಲ್ಲಿ ನಿಸ್ಸಂಶಯವಾಗಿ ಗೆಲ್ಲುವುದು ಬೇರಾವುದೋ ಕಾರಣಕ್ಕಲ್ಲ! ಬದಲಾಗಿ, ಗುಜರಾತಿಗಳ ಅತೀ ಕಷ್ಟದ ಸಮಯದಲ್ಲಿ ಹೆಗಲು ಕೊಟ್ಟು ನಿಂತು ಮೇಲೆತ್ತಿದ್ದನ್ನು ಗುಜರಾತ್ ಮರೆಯಲು ಸಾಧ್ಯವೇ ಇಲ್ಲ ಎಂಬ ಕೃತಜ್ಞತಾ ಭಾವದಿಂದ!

– ಬಿನು ಪಟೇಲ್

Editor Postcard Kannada:
Related Post