X

ಪದೇ ಪದೇ ಯೋಗಿಯನ್ನು ಟೀಕಿಸುತ್ತಿರುವ ಸಿದ್ದರಾಮಯ್ಯ.. ಇದರ ಹಿಂದಿದೆ ಘೋರ ರಹಸ್ಯ!!

ರಾಜ್ಯ ಕಾಂಗ್ರೆಸ್ ಸರಕಾರದ ಅವಸ್ಥೆ ಹೇಗಾಗಿದೆ ಎಂದರೆ, ದಿನ ಬೆಳಗಾದರೆ ಸಾಕು ಮೋದಿ ಅಥವಾ ಯೋಗಿಯ ಬಗ್ಗೆ ಜಪ ಮಾಡಲು ಶುರು ಮಾಡುತ್ತದೆ.

ತಮ್ಮ ಹೆಸರು ಮಾಧ್ಯಮದಲ್ಲಿ ಬರಬೇಕಾದರೆ ದಿನೇ ದಿನೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಛಾಳಿಯನ್ನು ಕಾಂಗ್ರೆಸ್ ಮೈಗೂಡಿಸಿಕೊಂಡಿದೆ.

ತಮ್ಮ ಆಡಳಿತದ ಭ್ರಷ್ಟಾಚಾರ ಅನಾಚರಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಸಿದ್ದರಾಮಯ್ಯ ಸರಕಾರ ಇದೀಗ ಉತ್ತರ ಪ್ರದೇಶದ ಆಡಳಿತದ ಬಗ್ಗೆ ಮಾತನಾಡುತ್ತಾ ಇದ್ದಾರೆ.

ಉತ್ತರ ಪ್ರದೇಶ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸರಕಾರ ತನ್ನ ರಾಜ್ಯದಲ್ಲಿ ಆಗುತ್ತಿರುವ ಸಾಲು ಸಾಲು ಕೊಲೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರು ಮೊನ್ನೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಂತೆ ಕಸಿವಿಸಿಗೊಂಡ ಸಿದ್ದರಾಮಯ್ಯನವರು ಪದೇ ಪದೇ ಉತ್ತರ ಪ್ರದೇಶದ ಬಗ್ಗೆ ಗೊಣಗುತ್ತಿದ್ದಾರೆ.

ಯೋಗಿ ಆದಿತ್ಯನಾಥ್ ರನ್ನು ಟೀಕಿಸುವ ಭರದಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವ ಅಪರಾಧಗಳ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯನಿಗೆ 2017ರ ಮಾರ್ಚನಲ್ಲಿ ಅಧಿಕಾರ ವಹಿಸಿಕೊಂಡ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರದಲ್ಲಿ 900 ಎನ್ ಕೌಂಟರ್ ಮಾಡಲಾದ ಮತ್ತು 31 ರೌಡಿಗಳನ್ನು ಹತ್ಯೆ ಮಾಡಿ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡಿದ ವಿಚಾರ ನಮ್ಮ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ…?

ಯೋಗಿ ಆದಿತ್ಯನಾಥ್ ರ ಈ ಕ್ರಮಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರಕಾರ ಆಡಳಿತ ವಹಿಸಿಕೊಂಡ ನಂತರದಲ್ಲಿ 21 ಹಿಂದೂ ಕಾರ್ಯಕರ್ತರ ಬರ್ಬರ ಕೊಲೆಯಾಗಿದೆ.
ರಾಜ್ಯದಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬೂದರಲ್ಲಿ ಸಂಶಯವಿಲ್ಲ.

ಕರಾವಳಿ ಭಾಗದಲ್ಲಂತೂ ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಕೊಲೆಗಳು ನಡೆಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ.

ತನ್ನ ರಾಜ್ಯದಲ್ಲಿ ಇಷ್ಟೊಂದು ಅವಾಂತರಗಳು ನಡೆಯುತ್ತಿದ್ದರು ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಬೇರೆ ರಾಜ್ಯದ ವಿಚಾರವೆತ್ತಿ ತನ್ನ ದುರಾಡಳಿತವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.

ಕೇವಲ ಒಂದು ವರ್ಗದ ಜನರನ್ನು ಓಲೈಸುವ ಹವ್ಯಾಸ ಬೆಳೆಸಿಕೊಂಡು ಬಂದಿರುವ ಸಿದ್ದರಾಮಯ್ಯನವರು ‘ಹಿಂದೂ ವಿರೋಧಿ’ ಎಂಬೂದನ್ನು ಪದೇ ಪದೇ ಪ್ರದರ್ಶಿಸುತ್ತಾ ಬಂದಿದ್ದಾರೆ.

ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಎಳ್ಳಷ್ಟೂ ಆಸಕ್ತಿ ಇಲ್ಲದ ಸಿದ್ದರಾಮಯ್ಯ ಮತ್ತು ಅವರ ಸಚಿವರು (ಕೆಲ ಆಕಾಂಕ್ಷೆಗಳು) ಇತ್ತೀಚೆಗೆ ಉತ್ತರ ಪ್ರದೇಶದ ಬಗ್ಗೆ ಒಂದಲ್ಲೊಂದು ಹೇಳಿಕೆ ನೀಡಿ ತಮ್ಮ ರಾಜ್ಯದಲ್ಲಾಗುತ್ತಿರುವ ಅನಾಚರಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುವುದರಿಂದಲೇ ಸಿದ್ದರಾಮಯ್ಯನವರು ಇತ್ತೀಚೆಗೆ ಮೋದಿ ಹಾಗು ಯೋಗಿಯ ಹೆಸರೆತ್ತಿ ಜನರ ಗಮನ ಬೇರೆ ಕಡೆಗೆ ಒಯ್ಯುತ್ತಿದ್ದಾರೆ.

ರಾಜ್ಯದ ಹಿತದ್ರಷ್ಠಿಯಿಂದ ಬಿಜೆಪಿ ಯನ್ನು ಅಧಿಕಾರಕ್ಕೆ ತರುವ ನಿಟ್ಡಿನಲ್ಲಿ ಪಕ್ಷದ ನಾಯಕರು ಕರ್ನಾಟಕಕ್ಕೆ ಬರುತ್ತಿರುವುದನ್ನು ಕಂಡು ಹೊಟ್ಟಯಲ್ಲಿ ಚೇಳು ಬಿಟ್ಟುಕೊಂಡಂತೆ ಆಡುತ್ತಿರುವ ಸಿದ್ದರಾಮಯ್ಯನವರು ‘ಇಂಗು ತಿಂದ ಮಂಗನಂತೆ’ ಆಡುತ್ತಿರುವುದು ಹಾಸ್ಯಕ್ಕೀಡಾಗಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನೊಂದು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಲಿಯಬೇಕು.ಆದರೆ ಸಿದ್ದರಾಮಯ್ಯನವರು ಮಾತ್ರ ರಾಜ್ಯದ ಅಭಿವೃದ್ಧಿಯ ಗೋಜಿಗೆ ಹೋಗದೆ ತಮ್ಮಷ್ಟಕ್ಕೇ ತಾವು ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವೇ ಸರಿ.

ಏನೇ ಆಗಲಿ ತಮ್ಮ ಸರಕಾರದ ಭ್ರಷ್ಟತನವನ್ನು ಮುಚ್ಚಿಹಾಕಲು ಈ ಕಾಂಗ್ರೆಸ್ ಯಾವ ರೀತಿಯ ನಾಟಕವಾಡಲೂ ಸಿದ್ದವಿದೆ ಎಂಬೂದು ಮತ್ತೊಮ್ಮೆ ಸಾಬೀತಾಗಿದೆ…!

–ಅರ್ಜುನ್

Editor Postcard Kannada:
Related Post