X
    Categories: ಅಂಕಣ

ಪಾಕಿಸ್ಥಾನದ ವಿರುದ್ಧ ಸುಷ್ಮಾ ಸ್ವರಾಜ್ ಕೆಂಡಾಮಂಡಲ!!! ಏಟಿಗೆ ಎದಿರೇಟು!!!

ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ವಿಚಾರ ಇದೀಗ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಭಾರತ ಕೂಡಾ ಕೊರಿಯಾ ನಡೆಯನ್ನು ಕಟುವಾಗಿ ಟೀಕಿಸಿದೆ.

ಅಮೆರಿಕದ ನ್ಯೂಯಾರ್ಕ್‍ನಲ್ಲಿ ಆಯೋಜನೆಯಾಗಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೂಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ಸನ್ ಹಾಗೂ ಜಪಾನ್ ವಿದೇಶಾಂಗ ಸಚಿವ ಟಾರೋ ಕೋನೋ ಅವರನ್ನು ಭೇಟಿ ಮಾಡಿ ಮೂರು ದೇಶಗಳ ತ್ರಿಪಕ್ಷೀಯ ಸಭೆ ನಡೆಸಿದರು. ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಅಣ್ವಸ್ತ್ರ ಪ್ರಸರಣ ಕುರಿತು ತನಿಖೆ ನಡೆಸುವಂತೆ ಭಾರತ ವಿಸ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಈ ವೇಳೆ ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ವಿರುದ್ಧ ಕಿಡಿಕಾರಿದ ಸುಷ್ಮಾ ಸ್ವರಾಜ್ ಅವರು ಉತ್ತರ ಕೊರಿಯಾದೊಂದಿಗೆ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳೇ ಈಗಿನ ಪರಿಸ್ಥಿತಿಗೆ ಹೊಣೆಗಾರರು ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.

ಅಂತೆಯೇ ಉತ್ತರ ಕೊರಿಯಾ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರಗಳ ನಡುವಿನ ಅಣ್ವಸ್ತ್ರ ಸಂಪರ್ಕ ಕುರಿತು ತನಿಖೆ ನಡೆಸುವಂತೆ ಸುಷ್ಮಾ
ಆಗ್ರಹಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಸ್ತುತ ನಾವು ಎಲ್ಲಾ ಬಗೆಯ ವಿವರವನ್ನೂ ನೀಡಿದ್ದೇವೆ. ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೇನೆ ಅನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಇತ್ತೀಚೆಗೆ ಮೇಲಿಂದ ಮೇಲೆ ಅಣ್ವಸ್ತ್ರ ಹಾಗೂ ಕ್ಷಿಪಣಿಗಳ ಪ್ರಯೋಗ ಮಾಡುತ್ತಿರುವ ಉತ್ತರ ಕೊರಿಯಾವನ್ನು ಟೀಕಿಸುತ್ತಲೆ ಪರೋಕ್ಷವಾಗಿ ಪಾಕ್‍ಗೂ ಟಾಂಗ್ ನೀಡಿದ್ದಾರೆ. ಹೀಗಾಗಿ ಆ ದೇಶದ ಹೆಸರು ಹೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆ ಕುರಿತಂತೆ ಹಾಗೂ ಆ ದೇಶಕ್ಕೆ ನೆರವು ನೀಡುತ್ತಿರುವ ದೇಶಗಳ ವಿರುದ್ಧ ವಿಶ್ವ ಸಮುದಾಯ ಕಠಿಣ ನಿರ್ಧಾರ
ಅಗತ್ಯವಿದೆ ಎಂದು ಹೇಳಿದ್ದಾರೆ. ಇದಲ್ಲದೆ ತ್ರಿಪಕ್ಷೀಯ ಸಭೆಯಲ್ಲಿ ಮೂರು ದೇಶಗಳು ಕಡಲ ಭದ್ರತೆ ಮತ್ತು ಸಂಪರ್ಕದ ಕುರಿತು ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಕ್ಷಣಾ ಸಂಬಂಧ ಹೊಂದುವ ಕುರಿತು ಚರ್ಚಿಸಲಾಯಿತು ಎಂದು ರವೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಅತ್ಯಾಧುನಿಕ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ವಿಷಯವನ್ನು ಉತ್ತರ ಕೊರಿಯಾ ಸೆಪ್ಟೆಂಬರ್ 3 ರಂದು ಬಹಿರಂಗಗೊಳಿಸಿದೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳ ವಿರುದ್ಧ ತೊಡೆ ತಟ್ಟಿರುವ ಉತ್ತರ ಕೊರಿಯಾ ಮೇಲಿಂದ ಮೇಲೆ ಕ್ಷಿಪಣಿ ಹಾಗೂ ಬಾಂಬ್‍ಗಳ ಪರೀಕ್ಷೆಯನ್ನು ನಡೆಸಿಕೊಂಡು ಬರುತ್ತಲೇ ಇದೆ.

ಇಡೀ ವಿಶ್ವವೇ ಅಣ್ವಸ್ತ್ರರಹಿತ ಚಿಂತನೆಯತ್ತ ಹೊರಳುತ್ತಿದ್ದರೆ ಉತ್ತರ ಕೊರಿಯಾದ ನಡೆ ಆ ಚಿಂತನೆಗೇ ದೊಡ್ಡ ಹೊಡೆತವನ್ನು ನೀಡಿದೆ. ಉತ್ತರ ಕೊರಿಯಾ ತನ್ನ
ಅಣ್ವಸ್ತ್ರ ಯೊಜನೆಗಳನ್ನು ಕೈಬಿಡುವ ಮೂಲಕ ತನ್ನ ಪ್ರಾದೇಶಿಕ ಶಾಂತಿಗಾಗಿ ಮಾತ್ರವಲ್ಲದೆ ವಿಶ್ವದ ಶಾಂತಿ ನಿರ್ವಹಣೆಗೂ ಸರಕಾರ ನೀಡಬೇಕಾಗಿದೆ. ಇನ್ನು ಭಾರತ, ಅಮೆರಿಕ, ಜಪಾನ್ ಮಾತ್ರವಲ್ಲದೇ ಉತ್ತರ ಕೊರಿಯಾದ ಮಿತ್ರರಾಷ್ಟ್ರ ಚೀನಾ ಕೂಡಾ ಉತ್ತರ ಕೊರಿಯಾ ನಡೆಯನ್ನು ಬಲವಾಗಿ ಟೀಕಿಸಿದೆ.

ಭಾರತ-ಅಮೆರಿಕಾ ಸೇರಿದಂತೆ ಇಡೀ ಅಂತರಾಷ್ಟ್ರೀಯ ಸಮುದಾಯದ ವಿರೋಧ ಎಚ್ಚರಿಕೆಯ ಹೊರತಾಗಿಯೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾನ್ ಉನ್ ಅವರು ಮತ್ತೆ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಿ ಮತ್ತೆ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಮುಂದಾದರೂ ಕಿಮ್ ಜಾನ್ ಉನ್ ತನ್ನ ಎಚ್ಚರಿಕೆಯ ನಡೆಯೊಂದಿಗೆ ನಡೆಯ ಬೇಕಾಗಿದೆ. ಇಲ್ಲವಾದಲ್ಲಿ ಉಳಿದ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರಕೊರಿಯಾ ನಂತರದ ದಿನಗಳಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು.

Source :Daily Hunt – Read Original Link

-ಶೃಜನ್ಯಾ

Editor Postcard Kannada:
Related Post