X

ಪಾಕ್ ಸೈನಿಕರನ್ನು ಮತ್ತೆ ಅಟ್ಟಾಡಿಸಿ ಯಮಪುರಿಗಟ್ಟುತ್ತಿರುವ ಭಾರತೀಯ ಸೇನೆ! ಪ್ರಕ್ಷುಬ್ಧವಾಗಿರುವ ಜಮ್ಮು-ಕಾಶ್ಮೀರ!

ಭಾರತೀಯ ಸೇನೆ ಈಗ ಜನರಲ್ ಬಿಪಿನ್ ರಾವತ್ ಅಡಿಯಲ್ಲಿ ಚುರುಕಾಗಿ ಕರ್ತವ್ಯ ನಿರ್ವಹಿಸುತ್ತಿದೆ! ಪದೇ ಪದೇ ಪಾಕಿಸ್ಥಾನ ಮಾಡುತ್ತಿರುವ ಕಿರಿಕ್್ಕುಗಳಿಗೆ ‘ಬಂದೂಕಿನಿಂದಲೇ” ಉತ್ತರ ಕೊಡುತ್ತಿರುವ ಭಾರತೀಯ ಸೇನೆ, ಜಮ್ಮು ಕಾಶ್ಮೀರದ ಕಣಿವೆಗಳಲ್ಲಿ ಅಡಗಿರುವ ಉಗ್ರರ ಬೇಟೆಯಾಡುತ್ತ ನಡೆದಿದೆ!

ಮತ್ತೆ ಪ್ರಕ್ಷುಬ್ಧವಾದ ಜಮ್ಮು ಕಾಶ್ಮೀರ!

ಜಮ್ಮು – ಕಾಶ್ಮೀರದಲ್ಲಾಗುತ್ತಿರುವ ಪಾಕಿಗಳ ಹತ್ಯೆ ಬಹುಷಃ ಬೇರೆಲ್ಲಿಯೂ ನಡೆಯುತ್ತಿಲ್ಲ. ಅತ್ತ ನೆರೆ ರಾಷ್ಟ್ರವಾದ ಪಾಕಿಸ್ಥಾನದ ಕುಮ್ಮಕ್ಕಿನಿಂದ ದೇಶದೊಳ ನುಸುಳುವ ಯಗ್ರರೊಂದು ಕಡೆಯಾದರೆ, ಇತ್ತ ದೇಶದೊಳಗಿರುವ ಪಾಕಿಸ್ಥಾನಿಗಳ ರೋದನೆ ಬೇರೆ! ಅದರಲ್ಲಿಯೂ, ಪಾಕ್ ಆಕ್ರಮಿತ ಕಾಶ್ಮೀರವೊಂದು ಶಾಶ್ವತವಾದ ತೊಂದರೆಯೇ ಆಗಿ ಹೋಯಿತು ಭಾರತಕ್ಕೆ! ಅಷ್ಟಾದರೂ, ಸಹ ಭಾರತೀಯ ಸೇನೆ ಕಣ್ಣಲ್ಲಿ ಕಣ್ಣಿಟ್ಟು ಪ್ರಜೆಗಳನ್ನು ಕಾಯುತ್ತಲಿದೆಯಷ್ಟೇ!

ಇವತ್ತು ಬೆಳಗ್ಗೆ ಮತ್ತೆ ಪಾಕ್ ಕದನ ವಿರಾಮವನ್ನು ಉಲ್ಪಂಘಿಸಿದೆ! ಬೆಳಗಿನ ಜಾವವೇ ಗುಂಡು ಹಾರಿಸುತ್ತ ತನ್ನ ಆಟ ಪ್ರಾರಂಭಿಸಿದ ಪಾಕಿಗಳು ಭಾರತದೊಳ ನುಸುಳಿದ್ದಾರೆ! ಬಿಎಸ್ ಫ್ ಚೌಕಿಯ ಮೇಲೆ ಶೆಲ್ ದಾಳಿ ನಡೆಸಿರುವ ಪಾಕಿಗಳಿಗೆ ಐವರು ನಾಗರಿಕರು ಬಲಿಯಾಗಿದ್ದಾರೆ!

ಜನವರಿ ಹದಿನೈದರಿಂದಲೂ ಸಹ, ಪ್ರಕ್ಷುಬ್ಧವಾಗಿರುವ ಜಮ್ಮು – ಕಾಶ್ಮೀರದಲ್ಲಿ, ಬೆಳಗಾಗುವುದೋ ಇಲ್ಲವೋ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ದುರಂತವೇ ಸರಿ! ಈವರೆಗೆ, ಭಾರತೀಯ ಸೇನೆ, 8 – 10 ಪಾಕಿಗಳನ್ನು ಯಮಪುರಿಗಟ್ಟಿದೆ.

ರಾಷ್ಟ್ರೀಯ ಸೇನೆಯ ದಿನವೇ ಏಳು ಪಾಕಿಗಳನ್ನು ಸಂಹರಿಸಿದ್ದ ಭಾರತೀಯ ಸೇನೆ, ಪ್ರತೀ ಬಾರಿ ಪಾಕಿಗಳು ತರಲೆ ತೆಗೆದಾಗ, ಗುಂಡಿನಲ್ಲಿಯೇ
ಉತ್ತರ ಕೊಡುತ್ತಿದ್ದಾರೆ!

ಕಳೆದ ಡಿಸೆಂಬರ್ ನಲ್ಲಿಯೂ ಸಹ, ಪಾಕಿಗಳು ಭಾರತದ ಎರಡು ಸೈನಿಕರನ್ನು ಹತ್ಯೆಗೈದಿದ್ದರ ಫಲವಾಗಿ, ಮೂವರು ಸ್ನಿಪ್ಪರ್ ಗಳು, ನಾಲ್ಕಕ್ಕೂ ಹೆಚ್ಚು ಬಂಕರ್ ಗಳು ಮತ್ತು 20 ಕ್ಕೂ ಹೆಚ್ಚು ಪಾಕಿಗಳನ್ನು ಹತ್ಯೆಗೈದಿದ್ದ ಭಾರತೀಯ ಸೇನೆ, ಪದೇ ಪದೇ ಪಾಕಿಗಳಿಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ.

ಜನರಲ್ ಬಿಪಿನ್ ರಾವತ್ ಅಧಿಕಾರ ಸ್ವೀಕರಿಸಿದ ನಂತರ, “ಕಿತಾಪತಿಗೆ ಬಂದೂಕಿನಲ್ಲಿಯೇ ಉತ್ತರಿಸಿ! ಪರಿಸ್ಥಿತಿಯ ವರದಿ ನೀಡಿ. ಕ್ರಮ ಕೈಗೊಳ್ಳಿ” ಎಂದು ಬಿಟ್ಟಿದ್ದಾರೆ! ದೇಶದ ರಕ್ಷಣಾ ಸಚಿವೆಯಾದ ನಿರ್ಮಲಾ ಸೀತಾರಾಮನ್ ಕೂಡ, ‘ತಕ್ಷಣದ ನಿರ್ಧಾರ ತೆಗೆದುಕೊಂಡರೂ ಸರಿಯೇ! ಒಟ್ಟಾರೆಯಾಗಿ, ದೇಶವನ್ನು ರಕ್ಷಿಸಿ’ ಎಂದಿದ್ದಾರೆ.

ಕಳೆದ ತಿಂಗಳಿನಿಂದಲೂ, ಒಂದಲ್ಲ ಒಂದು ರಗಳೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಭವಿಷ್ಯದಲ್ಲಿ ಮುಂದೇನು ಕಾದಿದೆಯೋ ನೋಡಬೇಕಿದೆ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post