X

ಪೋಸ್ಟ್ ಕಾರ್ಡಿನಿಂದ ನಿಖರವಾದ ಚುನಾವಣಾ ಪೂರ್ವ ಸಮೀಕ್ಷೆ! ಗುಜರಾತಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಲಾಭವಾಗಲಿದೆ! ಆದರೆ. . . .

ಪೋಸ್ಟ್ ಕಾರ್ಡ್ ತಂಡದ ನಿರಂತರ ಸಮೀಕ್ಷೆ!

ಗುಜರಾತ್ ನ ವಿಧಾನ ಸಭಾ ಚುನಾವಣೆ ಈಗಷ್ಟೇ ಮುಗಿದಿದೆ! 182 ಅಭ್ಯರ್ಥಿಗಳ ಭವಿಷ್ಯ ಈಗಾಗಲೇ ಮತ ಯಂತ್ರದಲ್ಲಿ ಭದ್ರವಾಗಿದೆ! ಚುನಾವಣೆಗೂ ಮುನ್ನ ರಾಜಕೀಯ ದಿಗ್ಗಜರು ಪ್ರಚಾರಾರ್ಥವಾಗಿ ಈ ಸಲ ಹೊಸದಾದ ಪರೀಕ್ಷೆಗಳನ್ನೂ ನಡೆಸಿ ಕೊನೆಗೆ ಚುನಾವಣೆಗೆ ರಂಗು ತಂದಿದ್ದಾರೆ!

ಇವತ್ತಿನಿಂದ, ಯಾರು ಗೆಲ್ಲಬಹುದು ಅಥವಾ ಯಾರು ಸೋಲಬಹುದು ಎಂಬ ಊಹಾಪೋಹಗಳಿಗೆ ತಕ್ಕನಾಗಿ ಚರ್ಚೆಗಳು, ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಸಮೀಕ್ಷಾ ಚರ್ಚೆಗಳು ಏರ್ಪಡಲಿದೆ! ಅದೇ ರೀತಿ, ಮಾಧ್ಯಮಗಳ ಸಮೀಕ್ಷೆಯ ಪ್ರಕಾರ, ಈ ಸಲವೂ ಗುಜರಾತ್ ನಲ್ಲಿ ಬಿಜೆಪಿಯೇ ಆಡಳಿತದ ಗದ್ದುಗೆ ಏರಲಿದೆ! ಮತ್ತೊಮ್ಮೆ, ಸೋ ಕಾಲ್ಡ್ ಶಿವಭಕ್ತ ರಾಹುಲ್ ಗಾಂಧಿ, ಮತ್ತೆ ರಾಜಕೀಯ ಭವಿಷ್ಯದಲ್ಲಿ ಮಾಮೂಲಿನಂತೆ ಸೋಲನ್ನನುಭವಿಸಲಿದ್ದಾನೆ! ಆದರೆ, ಈಗ ಪ್ರಶ್ನೆ ಇರುವುದು ಎಷ್ಟು ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ ಹಾಗೂ ಕಾಂಗ್ರೆಸ್ ನ ಪಾಲಾಗಲಿದೆ ಎಂಬುದು ಮಾತ್ರವೇ!

ಬಿಜೆಪಿ ಹೇಗಿದ್ದರೂ.. ಸಹ 93 – 105 ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲಿದೆ ಎಂಬುದು ಗೊತ್ತೇ ಇದೆ! ಕಾಂಗ್ರೆಸ್ 60 – 65 ಸ್ಥಾನಗಳನ್ನು ಗೆಲ್ಲಬಹುದೇನೋ. ಇತರೆ 10-15 ಕ್ಷೇತ್ರಗಳಲ್ಲಿ ಗೆಲ್ಲಬಹುದು.

ಪೋಸ್ಟ್ ಕಾರ್ಡ್ ತಂಡ ನಿರಂತರವಾಗಿ 93ವಿಧಾನ ಸಭಾ ಕ್ಷೇತ್ರಗಳ 85000 ಮತದಾರರ ಜೊತೆ ಸಮೀಕ್ಷೆ ನಡೆಸಿದೆ!!

Party Seats won
BJP 98-105
Congress 60-65
Others 10-15
Total 182

ಇಷ್ಟಕ್ಕೂ ವಾಸ್ತವವೇನು?! ಉಳಿದ ಮುಖ್ಯವಾಹಿನಿಗಳಿಗೆ ಹೋಲಿಸಿದರೆ, ಯಾಕೆ ಪೋಸ್ಟ್ ಕಾರ್ಡ್ ಬಿಜೆಪಿಗೆ ಕಡಿಮೆ ಸ್ಥಾನಗಳನ್ನು ಕೊಟ್ಟಿದೆ ಗೊತ್ತೇ?!

1. ಮೊದಲನೆಯದಾಗಿ, 2014 ರ ನಂತರ, , ಗುಜರಾತ್ ನಲ್ಲಿ ಮೋದಿಯೇ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಮತ್ತು, ಮೋದಿಗೆ ಸಮನಾಗಿ ಗುಜರಾತಿನ ಇವತ್ತಿನ ರಾಜಕೀಯ ಮಂತ್ರಿಗಳಿಂದ ಅಷ್ಟು ಮಟ್ಟದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಗುಜರಾತಿಗಳ ಅಭಿಮತ.

ಮತದಾರರ ಪ್ರಕಾರ ಮೋದಿಯೇ ಪ್ರಧಾನಿಯಾದರೆ ಗುಜರಾತ್ ಅಭಿವೃದ್ಧಿಯಾಗಬಹುದು ಎಂಬ ನಂಬಿಕೆಯೊಂದು ಬಲವಾಗಿದೆ. ಅದಲ್ಲದೆ, 15 ವರ್ಷಗಳ ಕಾಲ ಗುಜರಾತ್ ನ ದಿಕ್ಕನ್ನೇ ಬದಲಿಸುತ್ತ ನಡೆದ ಮೋದಿ ಇನ್ನು ಗುಜರಾತ್ ಗೆ ಮಾತ್ರ ಸೀಮಿತವಲ್ಲ ಎಂಬುದು ಮತದಾರರಲ್ಲಿ ಅಷ್ಟು ಗಂಭೀರತೆಯನ್ನು ಸೃಷ್ಟಿಸದೇ ಇರುವುದು ಕಾರಣ!

2. ಹಾರ್ದಿಕ್ ಪಟೇಲ್ ನ ಜಾತಿಯಾಧಾರಿತ ಮತಗಳು, ಮೀಸಲಾತಿ ಹೋರಾಟ ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿಗೆ ಲಾಭವಾಗಲಿದೆ.

ಪಾಟೀದಾರ ಸಮುದಾಯಕ್ಕೆ ಮೀಸಲಾತಿ ಬೇಕೆಂದು ಹೋರಾಡಿದ ಹಾರ್ದಿಕ್ ಪಟೇಲ್ ನನ್ನು ಇಡೀ ಪಾಟೀದಾರರ ಸಮುದಾಯ ಸ್ವಾಗತಿಸಿತ್ತು. ಅಲ್ಲದೇ, ಮುಂದಿನ ರಾಜಕೀಯ ನಾಯಕನೇ ಹಾರ್ದಿಕ್ ಎಂಬಂತೆ ಬಿಂಬಿಸಲ್ಪಟ್ಟಿತ್ತು. ಇನ್ನೂ ಆತನ ಬಗ್ಗೆ ಭರವಸೆ ಇಟ್ಟುಕೊಂಡಿರುವ ಕೆಲ ಪಾಟೀದಾರರಿಂದ ಕಾಂಗ್ರೆಸ್ ಗೆ ಲಾಭವಿದೆ

3. ರಾಹುಲ್ ಗಾಂಧಿಯನ್ನಿಟ್ಟುಕೊಂಡು ರಾಜಕೀಯವಾಗಿ ಗುಜರಾತ್ ನಲ್ಲಿ ತಳವೂರಬಹುದು ಎಂದುಕೊಂಡಿದ್ದ ಕಾಂಗ್ರೆಸ್ ಗೆ ದೇವಸ್ಥಾನಕ್ಕೆ ಮೇಲಿಂದ ಮೇಲೆ ಅಲೆದ ಶಿವ ಭಕ್ತನಿಂದ ಲಾಭವಾಗಲಿದೆ!!. ಅಲ್ಲದೇ, ಅಂದುಕೊಂಡಿದ್ದಕ್ಕಿಂತ ಒಂದು ಕ್ಷೇತ್ರ ಗೆದ್ದರೂ, ಅದು ರಾಹುಲ್ ಗಾಂಧಿಯ ಗೆಲುವು ಎಂದೇ ಬಿಂಬಿತವಾಗಲಿದೆ.

4. ನೋಟು ನಿಷೇಧ ಹಾಗೂ ಜಿಎಸ್ ಟಿ ತೆರಿಗೆ ಯಿಂದ ಸ್ವಲ್ಪ ಮಟ್ಟಿಗೆ ಗುಜರಾತಿನ ಗದ್ದುಗೆಗೆ ಸಮಸ್ಯೆಯಾಗಿದೆ. ಯಾಕೆಂದರೆ, ಗುಜರಾತಿನಲ್ಲಿ
ಬಹಳಷ್ಟು ಪಾಲು ಉದ್ಯಮಿಗಳೇ ಇದ್ದದರಿಂದ,.ಹಾಗೂ ಸೂರತ್ ಉದ್ಯಮದ ಕೇಂದ್ರವಾಗಿದ್ದರಿಂದ ಅಕ್ರಮ ಉದ್ಯಮಕ್ಕೆ ತಡೆ ಹಿಡಿದದ್ದೂ ಸತ್ಯ! ಇದೊಂದು ಕಾಂಗ್ರೆಸ್ ಗೆ ಧನಾತ್ಮಕವಾಗಿ ಪರಿಣಮಿಸಬಹುದು. ಯಾಕೆಂದರೆ, ಅಕ್ರಮಕ್ಕೆ ತಡೆ ಬಿದ್ದಿದೆ!

5. ಮುಖ್ಯವಾದ ವಿಚಾರವೇನೆಂದರೆ, ಗುಜರಾತ್ ನಲ್ಲಿ ಸದ್ಯಕ್ಕಿರುವ ಬೃಹತ್ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ ಮಾತ್ರ. ಕಣಕ್ಕಿಳಿದಿರುವ ಈ ಪಕ್ಷಗಳಿಗೆ ಹೋಲಿಸಿದರೆ, ಇತರೆ ಪಕ್ಷಗಳು ಅಷ್ಟು ಗಣನೆಗೆ ಬರುವುದಿಲ್ಲ. ಅಲ್ಲದೇ, ಇತರೆ ಪಕ್ಷ ಗಳಿಸುವ ಸ್ಥಾನಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಬಳಸಲಿದೆ.

ಬೇರೆ ಮಾಧ್ಯಮಗಳು ನೀಡಿದ ಸಮೀಕ್ಷೆ!

 Channels BJP Congress Others
Times Now  109  70  03
Republic TV  108  74  00
 CNN IBN  109  70  03
 India Today  99-113  68-82  1-4
 India News  110-120  65-75  

ಬಿಜೆಪಿಯ ಪರವಾಗಿರುವ ಕೆಲವು ಅಂಶಗಳು!

ಪಾಟೀದಾರ ಮತಗಳನ್ನು ಕಳೆದುಕೊಂಡರೂ, ಬಹುತೇಕ ಮುಸಲ್ಮಾನರ ಮತಗಳು ಬಿಜೆಪಿಗಿದೆ! ತ್ರಿವಳಿ ತಲಾಖ್ ಅಂಶಗಳು ಮುಸಲ್ಮಾನ ಮಹಿಳೆಯರಲ್ಲಿ ಹೊಸ ಭರವಸೆ ಮೂಡಿಸಿದ್ದು, ಕಾಂಗ್ರೆಸ್ ನಲ್ಲಿದ್ದ ಮುಸಲ್ಮಾನ ಮತಗಳು ಬಿಜೆಪಿಗೆ ವರ್ಗಾವಣೆಯಾಗಲಿದೆ.

ಜಿಗ್ನೇಶ್, ಅಲ್ಪೇಶ್ ಹಾಗೂ ಹಾರ್ದಿಕ್ ಎಂಬ ಯುವ ಕಾಂಗ್ರೆಸ್ ನಾಯಕರಿಂದ ಬಿಜೆಪಿಗೆ ಹೊಡೆತವಿದ್ದಿದ್ದರೂ ಸಹ, ಕೊನೇ ಕ್ಷಣದಲ್ಲಿ ಮಾಡಿಕೊಂಡ ಹಗರಣಗಳಿಂದ ಬಿಜೆಪಿಗೆ ಲಾಭವಾಗಿದೆ! ಹಾರ್ದಿಕ್ ಪಟೇಲ್ ನ ವೀಡಿಯೋ, ರಾಬರ್ಟ್ ವಾದ್ರಾ ಜೊತೆಗಿನ ಭೇಟಿ, ರಾಹುಲ್ ಗಾಂಧಿಯ ಹಣ ತುಂಬಿದ ಬ್ಯಾಗ್ ಗಳ ಉಡುಗೊರೆ ಎಂದೆಲ್ಲ ಹಗರಣದಿಂದಾಗಿ, ಪಾಟೀದಾರ ಸಮುದಾಯಕ್ಕೆ ಹಾರ್ದಿಕ್ ಮೇಲಿದ್ದ ನಂಬಿಕೆ ಮುರಿದಿದ್ದು ಬಿಜೆಪಿಗೆ ಅತಿ ದೊಡ್ಡ ಲಾಭ!

ಕೊನೇ ಕ್ಷಣದಲ್ಲಿ ಹಾರ್ದಿಕ್ ನ ಸೆಕ್ಸ್ ವೀಡಿಯೋ ಬಯಲಾಗಿತ್ತು. ಇಡೀ ಪಾಟೀದಾರರ ಸಮುದಾಯದಲ್ಲಿ ಕೋಲಾಹಲ ಎಬ್ಬಿಸಿದ ವೀಡಿಯೋಗೆ ತಕ್ಕನಾಗಿ, ಪಾಟೀದಾರ ಸಮುದಾಯದವರೇ ಒಂದಷ್ಟು ಮಂದಿ ಹಾರ್ದಿಕ್ ಪಟೇಲ್ ನ ಜನ್ಮಜಾತಕ ಬಿಡಿಸಿಟ್ಟಿದ್ದರು. ಬಿಜೆಪಿಯವರೇ ‘ಡರ್ಟಿ ಪಾಲಿಟಿಕ್ಸ್’ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನ ಆರೋಪಕ್ಕೆ ಗುಜರಾತಿಗಳು ಸರಿಯಾಗಿ ಛೀಮಾರಿ ಹಾಕಿದ್ದರು. ಇದು ಬಿಜೆಪಿಗೆ ಲಾಭವಾಗಿ ಪರಿಣಮಿಸಿತ್ತು.

ಜಿಗ್ನೇಶ್ ಮೇವಾನಿ ಚುನಾವಣೆಯ ಪೂರ್ವದಲ್ಲಿ ಪ್ರಸಿದ್ಧಿ ಗಳಿಸಿದರೂ, ಕೊನೆ ಕೊನೆಗೆ ತನ್ನ ಹಿಂದೂ ವಿರೋಧಿ ಭಾಷಣಗಳಿಂದ ಹಿಂದೂಗಳ ದ್ವೇಷ ಕಟ್ಟಿಕೊಂಡ ಜಿಗ್ನೇಶ್ ಗೆ ಗುಜರಾತಿಗಳಿಂದ ವಿರೋಧ ವ್ಯಕ್ತವಾಯಿತು.

ಅಲ್ಲದೇ, ಗೌರೀ ಲಂಕೇಶ ಹತ್ಯೆಗೆ ಸಂಬಂಧ ಪಟ್ಟ ವಿಚಾರದಲ್ಲಿ, ಪ್ರಧಾನಿ ಮೋದಿಗೆ ಅಶ್ಲೀಶ ಭಾಷೆಯಿಂದ ಪ್ರಶ್ನಿಸಿದ್ದ ಜಿಗ್ನೇಶ್ ಮೇವಾನಿ ಗೆ ಗುಜರಾತಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ಪ್ರತಿಭಟನೆಯನ್ನೂ ನಡೆಸುವಷ್ಟು ತಾರಕಕ್ಕೇರಿದ್ದ ವಿರೋಧ ಬಿಜೆಪಿಗೆ ವರವೇ ಆಯಿತು.

ಅಲ್ಲದೇ, ಕೇಂದ್ರ ಸರಕಾರದಲ್ಲಿ ಮೋದಿ ಗದ್ದುಗೆ ಬರಲಿ ಎಂದು ‘ಅಬ್ ಕಿ ಬಾರ್, ಮೋದಿ ಸರಕಾರ್’ ಎಂದು ಅಬ್ಬರಿಸಿದ್ದ ಜನತೆ ಕೇವಲ ಮೋದಿಗೋಸ್ಕರವೇ ರಾಜ್ಯಗಳ ಆಧಾರಿತ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿತ್ತು. ಇದೂ ಸಹ, ಹಿಂದಿನ 2014 ರ ಚುನಾವಣೆಗಳ ಹಾಗಾಗಲಿದೆ ಎಂಬುದು ನಿಖರ ಸುದ್ದಿ.

ಈ ಸಲ ಗುಜರಾತಿನಲ್ಲಿ, ಅಮಿತ್ ಷಾ ಗದ್ದುಗೆ ಇರುವುದರಿಂದ ಮತದಾರರಿಗೆ ಭರವಸೆ ಇದ್ದು, ಗುಜರಾತಿನ ಬೆಳವಣಿಗೆಗೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬ ಖಾತ್ರಿಯಿದೆ.

ರಾಹುಲ್ ಗಾಂಧಿಯನ್ನು ಶಿವಭಕ್ತನಾಗು ಎಂದು ಸೋಮನಾಥ ದೇವಾಲಯಕ್ಕೆ ಕಳಿಸಿದ್ದರೂ, ರಿಜಿಸ್ಟರ್ ಪಟ್ಟಿಯಲ್ಲಿ ಹಿಂದೂಯೇತರನಾಗಿ ಸಹಿ ಹಾಕಿದ್ದರಿಂದ ತೀರಾ ಮುಖಭಂಗವನ್ನು ಅನುಭವಿಸಿದ್ದ ಕಾಂಗ್ರೆಸ್ ತನ್ನ ಹಳೆ ಚಾಳಿಯಂತೆ ಮೋದಿಯನ್ನು ಗುರಿಯಾಗಿಸಿತ್ತು.

ಸಿಟ್ಟಿಗೆದ್ದಿದ್ದ ಗುಜರಾತಿಗಳು ರಾಹುಲ್ ಗಾಂಧಿಯ ಧರ್ಮವನ್ನು ಪ್ರಶ್ನೆ ಮಾಡಿದ್ದಲ್ಲದೇ, ರಾಹುಲರ ಗಾಂಧಿಯ ‘ಜನಿವಾರ ಧರಿಸಿದ ಶಿವಭಕ್ತ’ ಎಂಬ ಬಿರುದೊಂದು ಗುಜರಾತಿಗಳನ್ನು ಕೆರಳಿಸಿತ್ತು.

ಹಿಂದಿನ, ರಾಜ್ಯ ಸಭಾ ಚುನಾವಣೆಯಲ್ಲಿ ಮೋಸ ಮಾಡಿ ಗೆದ್ದ ಕಾಂಗ್ರೆಸ್, ಪಕ್ಷದ ಅಹ್ಮದ್ ಪಟೇಲ್ ನನ್ನು ದಾಳವಾಗಿಸಿದ್ದರೂ, ಕೊನೆಗೆ ಅಹ್ಮದ್ ಪಟೇಲ್
ನ ಹಗರಣಗಳು ಬಯಲಿಗೆ ಬಂದದ್ದಲ್ಲದೇ, ಅಹ್ಮದ್ ರಾಷ್ಟ್ರದ್ರೋಹಿ ಎಂದು ಬಿಂಬಿತನಾಗಿದ್ದರ ಫಲ ಬಿಜೆಪಿಗೆ ಧನಾತ್ಮಕವಾದ ಫಲಿತಾಂಶವನ್ನು ನೀಡಿತ್ತು.

ಇಷ್ಟರ ಮೇಲೂ, ಕಾಂಗ್ರೆಸ್ ಎಷ್ಟೇ ಸ್ಥಾನಗಳನ್ನು ಗಳಿಸಿದರೂ, ಬಿಜೆಪಿಗೆ ಸಮನಾಗಲು ಸಾಧ್ಯವಿಲ್ಲವಾದ್ದರಿಂದ, ಬಿಜೆಪಿಯೇ ಕೊನೆಗೆ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದು ಸತ್ಯವಷ್ಟೇ.

– ಪೃಥು ಅಗ್ನಿಹೋತ್ರಿ

Editor Postcard Kannada:
Related Post