X
    Categories: ಅಂಕಣ

ಬಡವರ ಪಾಲಿಗೆ ವರದಾನವಾಗಲಿರುವ ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ” (ಪಿ.ಎಮ್.ಎಸ್.ಬಿ.ವೈ)

ಒಂದು ಕುಟುಂಬದಲ್ಲಿ ದುಡಿಯುವ ವ್ಯಕ್ತಿಯೊಬ್ಬ ಅಪಘಾತದಲ್ಲಿ ಮೃತಪಟ್ಟರೆ ಅಥವಾ ದೇಹದ ಯಾವುದೋ ಅಂಗವನ್ನು ಕಳೆದುಕೊಂಡು ಅಂಗವೈಕಲ್ಯತೆಗೆ ತುತ್ತಾದರೆ ಆ ಒಂದು ಕುಟುಂಬವು ಜೀವನ ಪರ್ಯ0ತ ಬಡತನದ ಬೇಗೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬರುತ್ತದೆ!! ಅಲ್ಲದೇ, ವಯಸ್ಸಿನ ಕಾರಣದಿಂದ ದುಡಿಯುವ ಶಕ್ತಿಯನ್ನು ಕಳೆದುಕೊಂಡು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಕುಳಿತುಕೊಂಡರೆ ಅ ಇಡೀ ಕುಟುಂಬವೇ ದಿಕ್ಕು ಇಲ್ಲದೆ ಬೀದಿಪಾಲಾಗುವ ಸಂದರ್ಭವೂ ಬರುತ್ತದೆ. ಆದರೆ ಅಂತಹ ಪರಿಸ್ಥಿತಿಗಳು ದೂರವಾಗಲೇಂದೇ ಪ್ರಧಾನಿ ಮೋದಿಯವರ ಮಹತ್ವದ ಯೋಜನೆಗಳಲ್ಲಿ ಒಂದಾದ ಸುರಕ್ಷಾ ವಿಮಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ.

ಹೌದು….ಬಡವರ-ಮಧ್ಯಮವರ್ಗದವರ ಪಾಲಿಗೆ ವರದಾನವಾಗಲಿರುವ ಈ ಯೋಜನೆ ಕೇಂದ್ರ ಸರಕಾರದ ಅತ್ಯುನ್ನತ ಯೋಜನೆಗಳಲ್ಲೊಂದು!! ಇದು ದೇಶದ
ಪ್ರತಿಯೊಬ್ಬ ನಾಗರಿಕರ ವಿಮೆ ಸುರಕ್ಷತೆಯನ್ನು ನೀಡುವ ಸಲುವಾಗಿ ಜಾರಿ ತರಲಾದ ಯೋಜನೆಯಾಗಿದೆ. ಹಣಕಾಸು ಭದ್ರತೆ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎನ್ನುವುದು ಭಾರತದಲ್ಲಿನ ನೂತನ ಪರಿಕಲ್ಪನೆಯಾಗಿರುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರದ ಸುರಕ್ಷಾ ವಿಮಾ ಯೋಜನೆ ಕೂಡ ನೂತನ ಯೋಜನೆಯಾಗಿದ್ದು, ಎಲ್ಲ ವ್ಯಕ್ತಿಗಳು ಈ ವಿಮೆಯನ್ನು ಮಾಡಿಸಬಹುದಾಗಿದೆ.

ಏನಿದು ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ(ಪಿ.ಎಮ್.ಎಸ್.ಬಿ.ವೈ).!!!

ಭಾರತದ ಪ್ರತಿಯೊಬ್ಬ ಪ್ರಜೆಗೂ ಅಪಘಾತ ಇನ್ಸೂರೆನ್ಸ್ ಕವರ್ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅಪಘಾತ, ಆಕಸ್ಮಿಕ ಸಾವು ಇಲ್ಲವೇ
ಅಂಗವೈಕಲ್ಯ ಸಂಭವಿಸಿದಲ್ಲಿ ಅಂತಹ ವ್ಯಕ್ತಿಗಳಿಗೆ ಈ ವಿಮೆ ಪ್ರಯೋಜನಕಾರಿಯಾಗಿದೆ!! ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ(ಪಿ.ಎಮ್.ಎಸ್.ಬಿ.ವೈ), ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ಕೇವಲ 12 ರೂಪಾಯಿ ಪ್ರೀಮಿಯಂ ಕಂತು ತುಂಬಿದರೆ ಅಪಘಾತ ವಿಮೆ ಪಡೆಯಬಹುದು. ಅಪಘಾತದಲ್ಲಿ ವ್ಯಕ್ತಿಯೇನಾದರೂ ಮೃತಪಟ್ಟರೆ ಅವನ ನಾಮಿನಿಗೆ 2ಲಕ್ಷ ರೂಪಾಯಿ ಸಿಗುತ್ತದಲ್ಲದೇ, ಒಂದುವೇಳೆ ಕಣ್ಣು, ಕಾಲು, ಕೈಗಳನ್ನು ಕಳೆದುಕೊಂಡು ಅಂಗವೈಕಲ್ಯವಾದರೆ 1 ಲಕ್ಷ ರೂಪಾಯಿಯ ಪರಿಹಾರ ಮೊತ್ತ ಸಿಗಲಿದೆ.

ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಮಾಡಿಸಲು 18 ವರ್ಷಗಳನ್ನು ಪೂರೈಸಿರಬೇಕು. 18 ರಿಂದ 70 ವರ್ಷದ ನಡುವಿನ ಪ್ರತಿಯೊಬ್ಬರೂ ಈ ವಿಮೆ ಮಾಡಿಸಬಹುದಾಗಿದ್ದು, ಉಳಿತಾಯ ಖಾತೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ!! ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿಮಾ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾನ್ಯ ನಾಗರಿಕರಿಗೆ ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸಿರುವ ಯೋಜನೆ ಇದಾಗಿದೆ!!

ದೇಶದ ಪ್ರತಿಯೊಬ್ಬರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಾರಿಗೆ ತರಲಾಗಿರುವ ಪ್ರಧಾನ ಮಂತ್ರಿ ವಿಮಾ ಯೋಜನೆಯ ಬಗ್ಗೆ ಆರಂಭದಿಂದಲೂ ಸಾಕಷ್ಟು ಪ್ರಚಾರ ನೀಡಲಾಗಿದೆ. ಖುದ್ದು ಕೇಂದ್ರ ಸರ್ಕಾರವೇ ಜಾಹೀರಾತುಗಳ ಮೂಲಕ ಸಾರ್ವಜನಿಕರಲ್ಲಿ ಯೋಜನೆಯ ಕುರಿತಂತೆ ಮಾಹಿತಿ ನೀಡಿದೆ. ಆದರೂ ಕರಪತ್ರಗಳು, ಬ್ಯಾಂಕ್‍ಗಳ ಮೂಲಕವೇ ಎಸ್‍ಎಂಎಸ್ ಸಂದೇಶ ಕಳುಹಿಸುವುದು, ಪ್ರಚಾರ ವಾಹನಗಳ ನೆರವಿನೊಂದಿಗೆ ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ನೀಡಲಾಗುತ್ತಿರುವುದು ಇನ್ನೂ ವಿಶೇಷ!!

ಪ್ರೀಮಿಯಂ ಮೊತ್ತ ಎಷ್ಟು ಗೊತ್ತೇ??

ಸುರಕ್ಷಾ ವಿಮಾ ಯೋಜನೆಯ ಮಾಸಿಕ ಪ್ರೀಮಿಯಂ ಮೊತ್ತ ಕೇವಲ 1 ರೂಪಾಯಿ!! ಅಂದರೆ ವಾರ್ಷಿಕ ಮೊತ್ತವು 12 ರೂಪಾಯಿ ಆಗುತ್ತದೆ. ಪ್ರತಿ ತಿಂಗಳಿಗೆ 1
ರೂಪಾಯಿ ಲೆಕ್ಕದಂತೆ 12 ತಿಂಗಳಿಗೆ 12 ರೂಪಾಯಿಗಳು ವಾರ್ಷಿಕ ಕಂತುವಿನ ರೂಪದಲ್ಲಿ ನಿಮ್ಮ ಉಳಿತಾಯ ಖಾತೆಯಿಂದ ಸುರಕ್ಷಾ ವಿಮಾ ಯೋಜನಾ ಖಾತೆಗೆ ಜಮೆಯಾಗುತ್ತದೆ!! ಇದಷ್ಟೇ ಅಲ್ಲದೇ, ಈ ಯೋಜನೆ ಅಡಿಯಲ್ಲಿ ವಿಮಾದಾರರು ಸೇವಾ ತೆರಿಗೆ ಹೊರತುಪಡಿಸಿ 2 ಲಕ್ಷದವರೆಗೆ ವಿಮಾ ಪರಿಹಾರ ಪಡೆಯುತ್ತಾರೆ. ವ್ಯಕ್ತಿ ಕೈ, ಕಾಲು, ಕಣ್ಣು ಅಥವಾ ದೇಹದ ಯಾವುದೇ ಭಾಗ ಕಳೆದುಕೊಂಡು ಅಂಗವೈಕಲ್ಯ ಅನುಭವಿಸಿದ್ದರೆ ರೂ. 2 ಲಕ್ಷ ವಿಮಾ ಪರಿಹಾರ ಸಿಗಲಿದೆ!!

ಇನ್ನು ವಿಮಾದಾರರು ಗುರುತಿನ ದಾಖಲಾತಿಯಾಗಿ ಹಾಗೂ ಖಾತೆಯೊಂದಿಗೆ ಲಿಂಕ್ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಸುರಕ್ಷಾ ವಿಮಾ ಯೋಜನೆಯ ಪ್ರೀಮಿಯಂ ಮೊತ್ತವನ್ನು ಸ್ವಯಂಚಾಲಿತವಾಗಿ ಚಂದಾದಾರರ ಉಳಿತಾಯ ಖಾತೆಗೆ ಜಮೆ ಆಗುತ್ತದೆ!! ಹಣಕಾಸು ಭದ್ರತೆ ಇಲ್ಲದಿರುವ ಹಾಗೂ ವಿಮೆ ರಕ್ಷೆ ಇಲ್ಲದಿರುವ ಹೆಚ್ಚೆಚ್ಚು ಜನರಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅತ್ಯಗತ್ಯವಾಗಿ ಬೇಕು. ಮಧ್ಯಮ ವರ್ಗದ ಜನರು ಕೂಡ ಇಂತಹ ಯೋಜನೆಗಳ ಹೆಚ್ಚೆಚ್ಚು ಲಾಭ ಪಡೆಯಬೇಕು. ಜತೆಗೆ ಸರ್ಕಾರಗಳು ಮಧ್ಯಮ ವರ್ಗದವರಿಗೆ ಸಂಬಂಧಿತ ಉತ್ತಮ ಯೋಜನೆಗಳನ್ನು ರೂಪಿಸುವುದು ಅತೀ ಮುಖ್ಯವಾಗಿದೆ!!

ತಜ್ಞರು ಹೇಳುವ ಪ್ರಕಾರ, ವಿಮಾ ಕವರ್ ಇಲ್ಲದವರಿಗೆ ಇದು ಒಳ್ಳೆಯ ಆಯ್ಕೆಯಾಗಿದ್ದರೂ ಕೂಡ ಮಧ್ಯಮ ವರ್ಗಕ್ಕೆ ಈ ವಿಮಾ ಮೊತ್ತವು ಅರ್ಥಪೂರ್ಣವಲ್ಲ. ವರ್ಷಕ್ಕೆ 6000 ರೂಪಾಯಿಗಳಂತೆ 50 ಲಕ್ಷ ವಿಮಾ ಹಣ ಸಿಗುವಂತಾಗಬೇಕು ಎಂದು ಲ್ಯಾಡರ್ 7 ಸಂಸ್ಥಾಪಕ ಹೇಳಿದ್ದಾರೆ. ಇನ್ನು ಈ ವಿಮೆಯ ಪಾವತಿ ವಿಧಾನವು ಖಾತೆದಾರರರ ಖಾತೆಯಿಂದ ಪ್ರೀಮಿಯಂ ಹಣವನ್ನು ಬ್ಯಾಂಕ್ ನೇರ ಸ್ವಯಂ ಜಮಾ ಮಾಡುತ್ತದೆ!!

ಈ ಯೋಜನೆಯನ್ನು ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿ, ರಾಷ್ಟ್ರೀಯ ವಿಮಾ ಕಂಪನಿ, ಓರಿಯಂಟಲ್ ವಿಮಾ ಕಂ. ಮತ್ತು ಯುನೈಟೆಡ್ ಇಂಡಿಯಾ ವಿಮಾ ಕಂ. ಬ್ಯಾಂಕ್‍ಗಳ ಜೊತೆ ಸಹಯೋಗದೊಂದಿಗೆ ಈ ಯೋಜನೆಯನ್ನು ಆಫರ್ ಮಾಡಲಾಗಿದೆ!!

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ವರದಾನವಾಗಲಿರುವ ಈ ಯೋಜನೆಯ ಮಾಸಿಕ ಪ್ರೀಮಿಯಂ ಕೇವಲ 1 ರೂಪಾಯಿ ಆಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವುದು ಎಲ್ಲರೂ ಅತ್ಯಗತ್ಯ!! ನರೇಂದ್ರ ಮೋದಿಯವರ ಈ ಯೋಜನೆ ಬಡವರ-ಮಧ್ಯಮವರ್ಗದವರ ಪಾಲಿಗೆ ವರದಾನವಾಗಲಿರುವುದು ಮಾತ್ರ ನಿಜ!!

-ಅಲೋಖಾ

Editor Postcard Kannada:
Related Post