X

ಬಿಗ್ ಬ್ರೇಕಿಂಗ್!! ಇಲಿಯಾಸ್ ಹತ್ಯೆಯ ಹಿಂದೆ ಸಚಿವ ಖಾದರ್ ಕೈವಾಡ? ಇಲಿಯಾಸ್ ಪತ್ನಿಯಿಂದ ಮತ್ತೊಂದು ಸ್ಪೋಟಕ ಸುದ್ಧಿ! ಸತ್ಯ ಒಪ್ಪಿಕೊಂಡರಾ ಕಾಂಗ್ರೆಸ್ ಸಚಿವ?!

ಅದೇನೊ ರಾಜ್ಯ ಕಾಂಗ್ರೆಸ್ ಸರ್ಕಾರದ ಆಹಾರ ಸಚಿವ ಯುಟಿ ಖಾದರ್ ಅವರ ಟೈಮ್ ಸರಿಯಾಗಿಲ್ಲ ಅಂತ ಕಾಣ್ಸುತ್ತೆ. ಕರಾವಳಿಯಲ್ಲಿ ನಡೆಯುವ ಎಲ್ಲಾ ಕೊಲೆ ಪ್ರಕರಣಗಳಲ್ಲಿ ತಗಲಾಕಿಕೊಂಡು ಸಿಕ್ಕಿಬೀಳುತ್ತಾರೆ. ಮೊನ್ನೆ ಮೊನ್ನೆ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲೂ ತಗಲಾಕಿಕೊಂಡಿದ್ದ ಆಹಾರ ಸಚಿವ ಯುಟಿ ಖಾದರ್ ನಂತರ ಹತ್ಯೆಯಾದ ನಟೋರಿಯಸ್ ರೌಡಿ ಇಲಿಯಾಸ್ ಹತ್ಯೆ ಪ್ರಕರಣದಲ್ಲೂ ಈ ಸಚಿವರ ಹೆಸರೇ ಕೇಳಿ ಬರುತ್ತಿದೆ.

ಅವನ್ಯಾರು ಗೊತ್ತೇ ಇಲ್ಲ ಎಂದಿದ್ದ ಸಚಿವರಿಗೆ ಚಾಟಿ ಬೀಸಿದ್ದ ಇಲಿಯಾಸ್ ಪತ್ನಿ…

“ಹತ್ಯೆಯಾದ ರೌಡಿ ಇಲಿಯಾಸ್ ಯಾರೆಂಬುವುದು ನನಗೆ ಗೊತ್ತೇ ಇಲ್ಲ. ನನಗೂ ಆತನಿಗೂ ಯಾವುದೇ ಸಂಬಂಧವಿಲ್ಲ. ಅವನು ಕಾಂಗ್ರೆಸ್ ಪಕ್ಷದವನೇ ಅಲ್ಲ. ನನ್ನನ್ನೂ ಅವನನ್ನೂ ಒಟ್ಟಾಗಿ ತಾಳೆ ಹಾಕಿ ನೋಡಬೇಡಿ” ಎಂದೇ ಮಾಧ್ಯಮಗಳ ಮುಂದೆ ಈ ಖಾದರ್ ಸಾಹೇಬ್ರು ಹೇಳಿಕೊಂಡೇ ಬರುತ್ತಿದ್ದರು. ಆದರೆ ಈ ಖಾದರ್ ಸಾಹೇಬ್ರ ಈ ಹೇಳಿಕೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಇಲಿಯಾಸ್ ಪತ್ನಿ ಫರ್ಝಾನ ಚಾಟಿ ಏಟು ನೀಡಿದ್ದಳು. “ಚುನಾವಣೆ ಬಂದಾವಾಗ ನಮ್ಮ ಮನೆಯ ಬಾಗಿಲಿಗೆ ಬಂದು ಬಾಗಿಲು ಕಾಯುತ್ತಿದ್ದ ಸಚಿವ ಖಾದರ್ ಸಾಹೇಬ್ರು ಹಾಗೂ ಕಾಂಗ್ರೆಸ್ ಮುಖಂಡರು ಈಗ ಇಲಿಯಾಸ್
ಅಂದರೆ ಯಾರು ಅಂತಾನೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರ ಈ ಮಾತಿನ ಅರ್ಥವೇನು.? ಚುನಾವಣೆಯ ಸಮಯದಲ್ಲಿ ನಮ್ಮ ಮನೆಗೆ ಬಂದು ನನ್ನ ಗಂಡನ ಬಳಿ ಸಹಾಯವನ್ನು ಬೇಡಿದ್ದು ಸುಳ್ಳೇ” ಎಂದು ಪ್ರಶ್ನಿಸಿದ್ದಳು.

ಇಂದು ಮತ್ತೆ ಆಕ್ರೋಷಗೊಂಡ ಫರ್ಝಾನ-ಹತ್ಯೆಯ ಹಿಂದೆ ಖಾದರ್ ಇದ್ದಾರಂತೆ..!!!

ಹೌದು. ಇಂದು ಹತ್ಯೆಗೀಡಾದ ರೌಡಿ ಇಲಿಯಾಸ್‍ನ ಪತ್ನಿ ಫರ್ಝಾನ ಮತ್ತೆ ಆಕ್ರೋಷಗೊಂಡಿದ್ದಾಳೆ. ರಾಜ್ಯದ ಪ್ರತಿಷ್ಟಿತ ಸುಧ್ಧಿ ಸಂಸ್ಥೆಯಾದ ಸುವರ್ಣ ಸುದ್ಧಿ ವಾಹಿನಿ ನಡೆಸಿದ ನೇರ ಸಂವಾದದಲ್ಲಿ ಈ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ. “ನನ್ನ ಗಂಡನ ಜೊತೆಗೆ ಈ ಹಿಂದಿನಿಂದಲೂ ಸಚಿವ ಯುಟಿ ಖಾದರ್ ಅವರಿಗೆ ಸ್ನೇಹ ಇತ್ತು. ಆದರೆ ಇತ್ತೀಚೆಗೆ ರೌಡಿ ಜೊತೆ ಇದ್ದೇನೆ ಎನ್ನುವ ಕಳಂಕ ಹೊತ್ತುಕೊಂಡು ಇರುವುದು ಬೇಡ ಎಂಬ ಕಾರಣ ನೀಡಿ ನನ್ನ ಗಂಡನಿಂದ ದೂರ ಉಳಿದಿದ್ದರು. ಚುನಾವಣಾ ಸಮಯದಲ್ಲಿ ರಿಸ್ಕ್ ಬೇಡ ಎಂಬ ಖತರ್ನಾಕ್ ಐಡಿಯಾ ಅವರದ್ದಾಗಿತ್ತು. ಮಾತ್ರವಲ್ಲದೆ ಅವರು ನನ್ನ ಗಂಡನ ಬೆನ್ನಿಗೆ ಚೂರಿ ಹಾಕಿದ್ದ ಅದೇ ದಾವೂದ್ ಹಾಗೂ ಸಫ್ವಾನ್ ಎಂಬ ಹಂತಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಖಾದರ್ ಸಾಹೇಬ್ರ ಜೊತೆ ಸಹಾಯವನ್ನು ಚಾಚಿಕೊಂಡೇ ಹಂತಕರು ಈ ಕೃತ್ಯವನ್ನು ಮಾಡಿಕೊಂಡಿದ್ದಾರೆ. ಸಚಿವ ಖಾದರ್‍ರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಹೊಗೆ ಬೀಳುತ್ತದೆ. ಆದರೆ ನ್ಯಾಯ ನೀಡಬೇಕಾದ ಪೊಲೀಸರೇ ಖಾದರ್ ಮಾತು ಕೇಳಿ ನನ್ನ ಗಂಡನ ಹತ್ಯೆಯ ಹಿಂದೆ ಕೈ ಜೋಡಿಸಿದ್ದಾರೆ. ನನಗೆ ನ್ಯಾಯ ಬೇಕು. ನನ್ನ ಗಂಡನನ್ನು ಕೊಂದವರನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ. ಯಾಕೆ ಇನ್ನೂ ಬಂಧಿಸಿಲ್ಲ. ಇದಕ್ಕೆಲ್ಲಾ ಕಾಂಗ್ರೆಸ್ ಸಚಿವ ಯುಟಿ ಖಾದರ್ ಅವರೇ ನೇರ ಕಾರಣ” ಎಂದು ಹೇಳಿದ್ದಾರೆ.

ಬೆಚ್ಚಿ ಬಿದ್ದು ಪರೋಕ್ಷವಾಗಿ ಸಂಬಂಧ ಒಪ್ಪಿಕೊಂಡಿದ್ದಾರೆ ಖಾದರ್..!!!

ಆ ಕೂಡಲೇ ಕಾಂಗ್ರೆಸ್ ಸಚಿವ ಯುಟಿ ಖಾದರ್ ಅವರಿಗೆ ಕರೆ ಮಾಡಿದ ಸುವರ್ಣ ನ್ಯೂಸ್ ಖಾದರ್ ಅವರಿಂದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ತಬ್ಬಿಬ್ಬಾದ ಸಚಿವರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. “ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆತ ಯಾರೆಂಬುವುದೇ ನನಗೆ ಗೊತ್ತಿಲ್ಲ. ಆತ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷನಾದ ನಂತರ ನನಗೆ ಪರಿಚಯವಾಗಿದ್ದ. ಆವರೆಗೂ ನನಗೂ ಅವನಿಗೂ ಯಾವುದೇ ಸಂಬಂಧವಿಲ್ಲ. ಆಕೆ ಧುಖಃದಲ್ಲಿ ಏನೇನೋ ಹೇಳುತ್ತಿದ್ದಾಳೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಸುದ್ಧಿವಾಹಿನಿ ಮತ್ತೆ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಉಡಾಫೆಯಾಗಿ ಉತ್ತರಿಸಿದ ಸಚಿವರು, “ನನ್ನನ್ನು ಏನು ಕೇಳುತ್ತೀರಿ. ಹೋಗಿ ಆಕೆಯನ್ನೇ ಕೇಳಿ. ನಾನು ಏನೆಂಬುವುದು ನನ್ನ ಕಾರ್ಯಕರ್ತರಿಗೆ ಗೊತ್ತು. ನನ್ನನ್ನು ಏನೂ ಕೇಳಬೇಡಿ” ಎಂದು ಗದರಿಸಿದ್ದಾರೆ.

ನನಗೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದ ಆಹಾರ ಸಚಿವ ಯುಟಿ ಖಾದರ್ ಇಂದು ಆತ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷನಾದ ನಂತರ ನನಗೆ ಪರಿಚಯವಾಗಿದ್ದ. ಆವರೆಗೂ ಆತನ ಪರಿಚಯ ನನಗೆ ಇರಲಿಲ್ಲ ಎಂದು ಹೇಳುವ ಮೂಲಕ ಆತನ ಜೊತೆಗಿರುವ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಈವರೆಗೂ ಆತನನ್ನು ನಾನು ನೋಡಲೇ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಖಾದರ್ ಸಾಹೇಬ್ರು ಇಂದು ಹತ್ಯೆಗೀಡಾದ ಆ ರೌಡಿ ಇಲಿಯಾಸ್‍ನ ಜೊತೆಗಿರುವ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ಹೀಗೆ ಯುಟಿ ಖಾದರ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಮೃತ ರೌಡಿ ಇಲಿಯಾಸ್ ಪತ್ನಿ ಫರ್ಝಾನ ಇದರ ಹಿಂದೆ ಖಾದರ್ ಕೈವಾಡವೇ ಇದೆ ಎಂದು
ಆರೋಪಿಸಿದ್ದಾಳೆ. ಹಂತಕರೆಲ್ಲರೂ ಯುಟಿ ಖಾದರ್ ಅವರ ಸ್ನೇಹಿತರು ಹೀಗಾಗಿ ಅವರೇ ಇದಕ್ಕೆ ಉತ್ತರ ನೀಡಬೇಕು ಎಂದು ಆರೋಪಿಸಿದ್ದಾಳೆ. ಒಟ್ಟಿನಲ್ಲಿ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಬರುವ ಹೊತ್ತಿಗೆ ಇಷ್ಟೆಲ್ಲಾ ರಾದ್ದಾಂತವಾಗಿರೋದು ಯುಟಿ ಖಾದರ್ ಅವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಂತು ಸುಳ್ಳಲ್ಲ.

-ಹರೀಶ್

Editor Postcard Kannada:
Related Post