X

ಬಿಗ್ ಬ್ರೇಕಿಂಗ್: ಮಹದಾಯಿ ವಿವಾದ… ಬಿಜೆಪಿ ಒತ್ತಡಕ್ಕೆ ತಲೆ ಬಾಗಿದ ಸಿದ್ದರಾಮಯ್ಯ!! ರಾಹುಲ್ ಬರುವಾಗ ಬಂದ್ ಬೆದರಿಕೆಗೆ ಬೆಚ್ಚಿ ಬಿದ್ದ ಸಿಎಂ.

ಕೊನೆಗೂ ಭಾರತೀಯ ಜನತಾ ಪಕ್ಷದ ಒತ್ತಡಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ತಲೆ ಬಾಗಿದೆ. ರಾಜ್ಯದ ಜನತೆ ಹಾಗೂ ಭಾರತೀಯ ಜನತಾ ಪಕ್ಷ ನಡೆಸಿದ ಆರೋಪಗಳಿಗೆ ಬೆಚ್ಚಿಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತಮ್ಮ ನಡೆಯಿಂದ ಯೂ ಟರ್ನ್ ಹೊಡೆದಿದ್ದಾರೆ. ಹೋರಾಟದ ಕಿಚ್ಚನ್ನು ಹೊತ್ತಿಸಿದ್ದ ಮಹದಾಯಿ ನದಿ ನೀರಿನ ವಿಚಾರವಾಗಿ ನಡೆಯುತ್ತಿದ್ದ ವಾಕ್‍ಪ್ರಹಾರಗಳು ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿದ್ದೆ. ಮೊನ್ನೆ ತಾನೇ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸುವ ವೇಳೆಯೇ ಬಂದ್ ಘೋಷಣೆ ಮಾಡಿದ್ದ ಕಾಂಗ್ರೆಸ್‍ಗೆ ಬಿಜೆಪಿ ಸವಾಲೊಡ್ಡಿತ್ತು. ಈ ಸವಾಲಿಗೆ ಮಂಡಿಯೂರಿದ ಸಿದ್ದರಾಮಯ್ಯ ಈಗ ತಮ್ಮ ನಡೆಯಲ್ಲಿ ಕೊಂಚ ಬದಲಾವಣೆಯನ್ನು ತಂದಿದ್ದಾರೆ.

ರಾಹುಲ್ ಆಗಮನದಂದು ಬಂದ್‍ಗೆ ಬೆಚ್ಚಿ ಬಿದ್ದ ಕಾಂಗ್ರೆಸ್…

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಬಂದ ದಿನದಂದು ಕನ್ನಡ ಪರ ಸಂಘಟನೆಗಳ ಜೊತೆಗೂಡಿ ರಾಜ್ಯ ಬಂದ್‍ಗೆ ಕರೆ ಕೊಟ್ಟಿತ್ತು ರಾಜ್ಯ ಕಾಂಗ್ರೆಸ್ ಸರ್ಕಾರ. ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪ್ರೇರಿತ ಬಂದ್‍ಗೆ ಬೆಂಬಲ ನೀಡಿರಲಿಲ್ಲ. ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರು ಬರುವ ದಿನವೇ ಬಂದ್‍ಗೆ ಕರೆ ನೀಡಿದ್ದ ಕಾಂಗ್ರೆಸ್‍ಗೆ ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರು ಸಖತ್ತಾಗಿ ಸವಾಲೆಸೆದಿದ್ದರು.

ರಾಹುಲ್ ಗಾಂಧಿ ಫೆಬ್ರವರಿ 10ರಿಂದ ರಾಜ್ಯಕ್ಕೆ ಆಗಮಿಸಲಿದ್ದಾರೆ. ಆ ಸಮಯದಲ್ಲಿ ನಾವೂ ರಾಜ್ಯ ಬಂದ್‍ಗೆ ಕರೆ ನೀಡುತ್ತೇವೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಮಹದಾಯಿ ವಿಚಾರವಾಗಿ ಧ್ವನಿ ಎತ್ತಬೇಕು. ಮಹದಾಯಿ ವಿಚಾರವಾಗಿ ತಮ್ಮ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ನಾವು ರಾಜ್ಯ ಬಂದ್‍ಗೆ ಕರೆ ಕೊಡುತ್ತೇವೆ. ರಾಹುಲ್ ಆಗಮನವನ್ನು ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರು ಬೆದರಿಕೆಯನ್ನು ಒಡ್ಡಿದ್ದರು. ಕಮಲ ಪಡೆಗಳ ಈ ಬೆದರಿಕೆಯಿಂದ ಬೆಚ್ಚಿ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವನ್ನು ಸಡಿಲಗೊಳಿಸಿದ್ದಾರೆ.

ಇಂದು ನಡೆಯಿತು ಸರ್ವ ಪಕ್ಷ ಸಭೆ…

ಇಂದು ಸಂಜೆ ರಾಜ್ಯದ ಸರ್ವ ಪಕ್ಷಗಳ ಸಭೆ ವಿಧಾನ ಸೌಧದಲ್ಲಿ ನಡೆದಿತ್ತು. ಮಹದಾಯಿ ವಿಚಾರವಾಗಿ ನಡೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್. ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಜನತಾ ದಳದ ನಾಯಕರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಹಿತ ಇತರೆ ಪಕ್ಷಗಳ ಮುಖಂಡರೂ ಭಾಗವಹಿಸಿದ್ದರು. ಆದರೆ ಸಭೆಯಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಗೈಲಾಯಿತೇ ವಿನಃ ಯಾವುದೇ ಆರೋಗ್ಯಕರ ಚರ್ಚೆಗಳೇ ನಡೆದಿಲ್ಲ. ಭಾರತೀಯ ಜನತಾ ಪಕ್ಷಗಳ ಆರೋಪಗಳಿಗೆ ಕಾಂಗ್ರೆಸ್ ಬೆಚ್ಚಿಬಿದ್ದಿತ್ತು.

ಗೋವಾ ಕಾಂಗ್ರೆಸ್ ಜೊತೆ ಮಾತನಾಡುತ್ತೇನೆ ಎಂದ ಸಿಎಂ…

ಸರ್ವಪಕ್ಷದ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯರ ಬೆವರಿಳಿಸಿದ್ರು. ಗೋವಾ ಕಾಂಗ್ರೆಸ್ ಜೊತೆ ಮೊದಲು ಮಾತನಾಡಿ ಎಂದು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು. ಇದಕ್ಕೆ ತಲೆ ಬಾಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಕೂಡಲೇ ನಾನು ಗೋವಾ ಕಾಂಗ್ರೆಸ್ ನಾಯಕರ ಜೊತೆ ಮಾತನಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಗೋವಾ ಸಿಎಂ ಕರೆದರೆ ನಾಳೆನೇ ಹೋಗುತ್ತೇನೆ…

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಂಧಾನಕ್ಕೆ ಕರೆದರೆ ನಾಳೆನೇ ಹೋಗಲು ಸಿದ್ಧನಿದ್ದೇನೆ. ಅವರೇ ಕರೆಯಲಿ ಎಂದು ಮತ್ತೆ ತನ್ನ ಮೊಂಡುವಾದವನ್ನು ಮುಂದಿಟ್ಟಿದ್ದಾರೆ. ಗೋವಾ ಕಾಂಗ್ರೆಸ್ ಜೊತೆ ಮಾತನಾಡುತ್ತೇನೆ. ಆದರೆ ಗೋವಾ ಸಿಎಂ ಅವರಾಗಿ ಅವರೇ ನಮ್ಮನ್ನು ಸಂಧಾನಕ್ಕೆ ಕರೆಯಲಿ ಎಂದು ಹೇಳಿದ್ದಾರೆ.

ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತೀಯ ಜನತಾ ಪಕ್ಷದ ಆಕ್ರೋಷಕ್ಕೆ ಮಣಿದಿದ್ದು, ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುವಾಗ ಯಾವುದೇ ಕಿರಿ ಕಿರಿ ಆಗದ ಹಾಗೆ ನೋಡಿಕೊಳ್ಳುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post