X

ಬ್ರೇಕಿಂಗ್! ಕೆಪಿಎಮ್ಇ ಕಾಯ್ದೆ ತಿದ್ದುಪಡಿಯ ವಿರುದ್ಧ ಮುಷ್ಕರ ನಿಲ್ಲಿಸಿದ ವೈದ್ಯರು!!

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ವಿರೋಧಿಸಿ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಮುಷ್ಕರವನ್ನು ಸರ್ಕಾರದ ಮನವಿಗೆ ಒಪ್ಪಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ. ನಾಳೆಯಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ(ಹೊರ ರೋಗಿಗಳ ಚಿಕಿತ್ಸೆ) ಸೇವೆ ಲಭ್ಯವಾಗಲಿದ್ದು, ಎಂದಿನಂತೆ ಖಾಸಗಿ ಆಸ್ಪತ್ರೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಫನಾ ಮುಖ್ಯಸ್ಥ ಜಯಣ್ಣ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿರುವ ಐಎಂಎನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಮನವಿಗೆ ಒಪ್ಪಿ, ಕಾನೂನನ್ನು ಗೌರವಿಸಿ ಮುಷ್ಕರವನ್ನು ಕೈ ಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಖಾಸಗಿ ವೈದ್ಯರ ತುರ್ತು ಸಭೆ ಮುಕ್ತಾಯವಾದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಫನಾ ಮುಖ್ಯಸ್ಥ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಎಲ್ಲಾ ವೈದ್ಯರು ನಾಳೆಯಿಂದ ಸೇವೆಗೆ ತೆರಳುವ ನಿರ್ಧಾರವನ್ನು ಇಂದು ಕೈಗೊಂಡಿದ್ದಾರೆ. ಈಗಾಗಲೇ ತುರ್ತು ಸೇವೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ನಾಳೆ ಕೆಲ ಪದಾದಿಕಾರಿಗಳು ಬೆಳಗಾವಿಗೆ ಹೋಗಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ನಾಳೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿನ ಖಾಸಗಿ ವೈದ್ಯರು ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದು, ತಮ್ಮ ಆಸ್ಪತ್ರೆಗಳನ್ನು ಮುಚ್ಚಿ ಹೊರ ರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿದ್ದರು. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಇರುವ ಕೆಲವು ಅಂಶಗಳ ಬಗ್ಗೆ ಅವರಿಗೆ ಆಕ್ಷೇಪ ಇದೆ. ಅದಕ್ಕಿಂತ ಹೆಚ್ಚಾಗಿ ಆತಂಕ ಇದೆ. ಅದನ್ನು ಪರಿಹರಿಸುವ ಪ್ರಯತ್ನ ಸರಕಾರದ ಕಡೆಯಿಂದ ಮೊದಲೇ ಆಗಬೇಕಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಇದನ್ನು ಮಾಡಲು ತಯಾರಾಗಿಲ್ಲ ಅಷ್ಟೇ..

ಸಾವಿಗೆ ಹೊಣೆ ಸರಕಾರವೋ? ಅಥವಾ ವೈದ್ಯರೋ?

ವೈದ್ಯರ ಹಠ ಒಂದು ಕಡೆಯಾದರೆ ಇನ್ನೊಂದು ಕಡೆ ಸರಕಾರದ ಹಠ!! ಆದರೆ ಇದರ ಮಧ್ಯೆ ಸಿಲುಕಿದ್ದು ಮಾತ್ರ ಈ ರೋಗಿಗಳು!!… ಇದರ ಬಗ್ಗೆ ಸಿದ್ದರಾಮಯ್ಯ ಸರಕಾರವೇ ಉತ್ತರ ಹೇಳಬೇಕಾಗಿದೆ.

ಕೊನೆ ಕ್ಷಣದಲ್ಲಿ, ಸೋಮವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಮತ್ತು ಭಾರತೀಯ ವೈದ್ಯಕೀಯ ಪ್ರತಿನಿಧಿಗಳ ಮಧ್ಯೆ ಮಾತುಕತೆ ನಡೆದರೂ ವಿಫಲವಾಯಿತು. ಹೀಗಾಗಿ ವೈದ್ಯರ ಪ್ರತಿಭಟನೆ ಮುಂದುವರಿಯಿತು.. ಇದರ ಪರಿಣಾಮ ಏನು ಎಂಬುವುದು ಎರಡೇ ದಿನಗಳಲ್ಲಿ ಗೊತ್ತಾಗತೊಡಗಿತು.. ಸರಿಯಾದ ಚಿಕಿತ್ಸೆ
ಸಿಗದೆ ಇಲ್ಲಿಯವರೆಗೆ 30 ಜನ ಮೃತಪಟ್ಟಿರುವ ಘಟನೆ ನಡೆದಿದೆ. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಜನರು ಮೃತಪಟ್ಟಿದ್ದು, ಬೆಂಗಳೂರಿನಲ್ಲಿ ಒಬ್ಬರು
ಮೃತಪಟ್ಟಿದ್ದಾರೆ. ಸರಕಾರ – ವೈದ್ಯರ ನಡುವಿನ ಜಟಾಪಟಿ ಇಂದಲ್ಲ ನಾಳೆ ಕೊನೆಗೊಳ್ಳಬಹುದು. ಆದರೆ ಹೋದ ಜೀವ ಬರಲು ಸಾಧ್ಯವೇ?ಇದಕ್ಕೆ ಸಿದ್ದರಾಮಯ್ಯ ಸರಕಾರ ಉತ್ತರ ಕೊಡಬೇಕಾಗಿದೆ.

ಮಸೂದೆಯ ಕೆಲ ಅಂಶಗಳ ವಿಷಯದಲ್ಲಿ ಸರಕಾರ ದುಡುಕಿದಂತೆ ಕಾಣುಸುತ್ತದೆ. ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‍ಜಿತ್ ಸೇನ್ ಸಮಿತಿಯ ಶಿಫಾರಸಿನಲ್ಲಿ ತನಗೆ ಬೇಕಾದ ಅಂಶಗಳನ್ನಷ್ಟೇ ಆರಿಸಿಕೊಂಡು ಮಸೂದೆ ಸಿದ್ಧಪಡಿಸಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಕೆಂಗಣ್ಣು ಬೀರುವ ಮಸೂದೆಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸೇರಿಸದೆ ಹೊರಗಿಡುವುದು ಸರಿಯಲ್ಲ. ತಪ್ಪು ಮಾಡುವ ವೈದ್ಯರು ಆಸ್ಪತ್ರೆಗಳು ಯಾರೇ ಯಾವುದೇ ಇದ್ದರೂ ಕಾನೂನು ಕ್ರಮ ಎದುರಿಸಬೇಕು. ಅದರಲ್ಲಿ ಸರಕಾರಿ ವೈದ್ಯರಿಗೆ ವಿನಾಯತಿ ಏಕೆ? ಸರಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ, ರೋಗಿಗಳ ಬಗ್ಗೆ ನಿರ್ಲಕ್ಷ್ಯ, ರೋಗಿಗಳನ್ನು ಪೀಡಿಸುವ ಪ್ರವೃತ್ತಿ ಏನು ಕಡಿಮೆ ಇದೆಯೇ? ಅದನ್ನು ನಿಯಂತ್ರಿಸಲು ಸರಕಾರಕ್ಕೆ ಯಾಕೆ ಆಗುತ್ತಿಲ್ಲ.?

ನಮ್ಮ ರಾಜ್ಯದಲ್ಲಿ ಆರೋಗ್ಯ ಸೇವೆಯ ಸೇಕಡಾ 70 ರಷ್ಟನ್ನು ಖಾಸಗಿ ವೈದ್ಯಕೀಯ ವ್ಯವಸ್ಥೆಯೇ ನಿಭಾಯಿಸುತ್ತಿದೆ. ಬಹುಪಾಲು ಸರಕಾರಿ ಆಸ್ಪತ್ರೆಗಳ ಮೇಲೆ
ಜನಸಾಮಾನ್ಯರಿಗೆ ವಿಶ್ವಾಸ ಕಡಿಮೆ ಇದೆ ಎನ್ನುವುದು ವಾಸ್ತವ. ಅದೂ ಹೋಗಲಿ.. ನಮ್ಮ ಜನಪ್ರತಿನಿಧಿಗಳು? ಸರಕಾರಿ ನೌಕರರಿಗಾದರೂ ವಿಶ್ವಾಸ ಇದೆಯಾ?

ಇಲ್ಲ. ಇವರೆಲ್ಲಾ ಮೊದಲು ಧಾವಿಸುವುದೇ ಖಾಸಗಿ ಆಸ್ಪತ್ರೆಗಳ ಕಡೆಗೆ. ಸರಕಾರಿ ಆಸ್ಪತ್ರೆಗಳಲ್ಲಿ ನಿಜವಾಗಿಯೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎನ್ನುವುದಾದರೆ ಮಂತ್ರಿಗಳು , ಶಾಸಕರು ,ಸರಕಾರಿ ಸಿಬ್ಬಂದಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಕಡೆ ಯಾಕೆ ಹೋಗಬೇಕು? ಇವರೆಲ್ಲಾ ಖಾಸಗಿ ಆಸ್ಪತ್ರೆಗಳ್ಲಿ ಚಿಕಿತ್ಸೆ ಪಡೆದರೆ ಆ ವೆಚ್ಚವನ್ನು ಭರಿಸುವುದಿಲ್ಲ ಎಂಬ ದಿಟ್ಟ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬಹುದಲ್ಲ?

ಒಟ್ಟಿನಲ್ಲ ಸರ್ಕಾರ ಮತ್ತು ವೈಧ್ಯರ ನಡುವಿನ ಸಂಘರ್ಷ ಅಂತ್ಯಗೊಂಡಿದೆ. ಆದರೆ ಇದು ಎಷ್ಟು ದಿನ ಎನ್ನುವುದೂ ನಿಗೂಢ. ಇತ್ತ ಮಸೂದೆಯನ್ನು ಮಂಡಿಸಿಯೇ
ಸಿದ್ದ ಎಂದು ಆರ್ಭಟಿಸುತ್ತಿರುವ ಆರೋಗ್ಯ ಸಚಿವ ರಮೇಶ್ ಕುಮಾರ್, ಮತ್ತೊಂದು ಕಡೆ ತನ್ನ ಪಕ್ಷದ ಆರೋಗ್ಯ ಸಚಿವನ ವಿರುದ್ಧವೇ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರು. ಮಧ್ಯೆ ರಾಜನಂತಿದ್ದರೂ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲನಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರ ಜಟಾಪಟಿಯ ನಡುವೆಯೇ ತನ್ನ ಜೀವವನ್ನು ಕಳೆದುಕೊಂಡು ಸರ್ಕಾರಕ್ಕೆ ಕಣ್ಣೀರ ಶಾಪ ಹಾಕುತ್ತಿರುವ ಜನರು.

-ಪವಿತ್ರ

Editor Postcard Kannada:
Related Post