X

ಭಾರತದ ಸೇನೆಯಲ್ಲಿ ಮುಸಲ್ಮಾನ ಸೈನಿಕರು ಯಾಕಿಲ್ಲ?! ಇದು ಓವೈಸಿಯ ಪ್ರಶ್ನೆ! 4,00,000 ಮುಸಲ್ಮಾನ ಸೈನಿಕರು ಭಾರತೀಯ ಸೈನ್ಯವನ್ನು ಬಿಟ್ಟು ಶತ್ರುದೇಶದ ಸೇನೆಯನ್ನು ಸೇರಿರುವುದು ಇವರಿಗೆ ಗೊತ್ತಿಲ್ಲವೇ?!

ಭಾರತ ವಿಭಜನೆ ಹೊಂದಿತು ಎಂಬ ಕರಾಳ ಇತಿಹಾಸವನ್ನು ಸೃಷ್ಟಿಸಿದ ನಿರ್ಧಾರವೊಂದರ ಪರಿಣಾಮ ಏನೆಲ್ಲವಾಯಿತು ಎಂಬ ಒಂದೇ ಒಂದು ಪ್ರಶ್ನೆಗೆ ಹಲವಾರು ಉತ್ತರ ಸಿಕ್ಕುತ್ತವೆ. ಬರೀ 11 ಮಿಲಿಯನ್ ಜನ ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದರು, ಅರ್ಧ ಮಿಲಿಯನ್ನಿಗೂ ಹೆಚ್ಚು ಉನ ಪ್ರಾಣ
ಕಳೆದುಕೊಳ್ಳಬೇಕಾಯಿತು ಎಂಬುದೆಲ್ಲ ಸತ್ಯವೇ ಆದರೂ ಸಹ ಉತ್ತರ ಇಷ್ಟಕ್ಕೇ ಮುಗಿದು ಹೋಗುತ್ತದೆಯಾ?!

ವಿಭಜನೆಯ ಜವಾಬ್ದಾರಿ ಹೊತ್ತ ಆಯೋಗವೊಂದು ಕೇವಲ ನಕ್ಷೆಯಲ್ಲಿ ಇದು ಭಾರತ, ಇದು ಪಾಕಿಸ್ಥಾನ ಎಂದು ಬಿಟ್ಟರೆ ಸಾಲದಿತ್ತು! ಬದಲಾಗಿ, ವಿಭಜನೆಯ ಹರಿಕಾರರು ಊಹಿಸದಿದ್ದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಹಾಗೂ ಪರಿಹರಿಸಲಾಗಲು ಅಸಾಧ್ಯವೆಂಬಂತಿದ್ದ ತೊಂದರೆಗಳನ್ನೂ ನಿವಾರಿಸಲೇಬೇಕಾದ ಹೊಣೆ ಒದಗಿತ್ತಷ್ಟೇ!

1. ರೈಲ್ವೇ ಅಧ್ಯಕ್ಷನಿಂದ ಹಿಡಿದು ಜ್ಯೂನಿಯರ್ ಬ್ಯೂರೋಕಾಟ್ಸ್ ನ ತನಕವೂ, ಪೌರ ಕಾರ್ಮಿಕನಿಂದ ಗುಮಾಸ್ತನವರೆಗೂ ಸಹ ಅದೆಷ್ಟೋ ಸಾವಿರಾರು ಸರಕಾರೀ ನೌಕರರಿಗೆ ‘ಭಾರತವೋ ಅಥವಾ ಪಾಕಿಸ್ಥಾನವೋ?!’ ಎಂಬ ಆಯ್ಕೆಯನ್ನು ನೀಡಲಾಯಿತು! ಯಾವಾಗ ಸರಕಾರೀ ನೌಕರರು ಬೇಕಾದ ರಾಷ್ಟ್ರವನ್ನಾಯ್ಕೆ ಮಾಡಿಕೊಂಡರೋ, ತದನಂತರ, ಅವರವರವ ಇಷ್ಟಪಟ್ಟ ರಾಷ್ಟ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಯ್ತು!

2. ಎಲ್ಲದಕ್ಕಿಂತಲೂ ತೀರಾ ಅಮಾನವೀಯವೆನ್ನುವಷ್ಟಾಗಿದ್ದು ಭಾರತೀಯ ಸೇನೆಯ ವಿಭಜನೆ! ಬರೋಬ್ಬರಿ 1.2 ಮಿಲಿಯನ್ನಷ್ಟಿದ್ದ ಸೈನಿಕರು ಅಷ್ಟು ವರ್ಷವೂ ಸಹ ದೇಶಕ್ಕೋಸ್ಕರ ದುಡಿದಿದ್ದರೂ ಸಹ, ಮೂರು ಭಾಗಗಳನ್ನಾಗಿ ವಿಂಗಡಿಸಿ ಎರಡು ಭಾಗ (2/3) ಭಾರತಕ್ಕೆ ಹಾಗೂ ಒಂದು ಭಾಗ (1/3) ಪಾಕಿಸ್ಥಾನಕ್ಕೆ ಎಂದು ವಿಭಜಿಸಲಾಗಿತ್ತು! 1947 ಜುಲೈ ಯಲ್ಲಿ ಪ್ರತೊಯೊಬ್ಬ ಯೋಧನೂ ಸಹ ಅಧಿಕೃತವಾಗಿ ತಾನು ಇಂತಹ ರಾಷ್ಟ್ರಕ್ಕೆ ಕರ್ತವ್ಯಬದ್ಧನಾಗಿರುತ್ತೇನೆಂದು ಘೋಷಣಾಪತ್ರವನ್ನು ಕೊಟ್ಟರು! ಭಾರತವೋ ಪಾಕಿಸ್ಥಾನವೋ ಎಂಬ ನಿರ್ಧಾರ ತೆಗೆದುಕೊಳ್ಳಲು ಹಿಂದೂ ಹಾಗು ಸಿಖ್ಖರಿಗೆ ಸುಲಭವಾಯಿತಾದರೂ ಸಹ, ಮುಸಲ್ಮಾನರಿಗಿದು ಸಂಕಷ್ಟಕ್ಕಿಟ್ಟಿತು! ಏಕೆಂದರೆ, ಧರ್ಮ ಹಾಗೂ ದೇಶವೆಂಬ ಆಯ್ಕೆ ಮುಸಲ್ಮಾನರಿಗೆದುರಾಗಿತ್ತು! ದೇಶವನ್ನು ಆಯ್ಕೆ ಮಾಡಿದರೆ ತಾಯ್ನಾಡಿನ ಋಣ ತೀರಿಸುವ ಅವಕಾಶವಾದರೂ, ಧರ್ಮವನ್ನು ತ್ಯಜಿಸಿದರೆ ಅದು ಮೆಚ್ಚುಗೆಯೇ?! ಎಂಬ ಇಬ್ಬಗೆತನ!

ಕುತೂಹಲಕಾರಿ ವಿಷಯವೇನೆಂದರೆ, ಅದೆಷ್ಟೋ ಮುಸಲ್ಮಾನ ಕುಟುಂಬಗಳಲ್ಲಿ ಸೈನ್ಯಕ್ಕೆ ಸೇರುವುದು ಸಂಪ್ರದಾಯವಾಗಿ ಹೋಗಿತ್ತು! ಪ್ರತಿ ಪೀಳಿಗೆಯವರೂ ಸಹ ಸೈನ್ಯಕ್ಕೆ ಕೊಡುಗೆಯನ್ನು ಕೊಟ್ಟಿದ್ದರು. ಕೊನೆಗೆ, ಯುವ ಮುಸಲ್ಮಾನರು ಪಾಕಿಸ್ಥಾನವನ್ನಾಯ್ದುಕೊಂಡರೆ, ವಯಸ್ಸಾದವರು ಭಾರತೀಯ ಸೇನೆಯನ್ನಾಯ್ದುಕೊಂಡರು! ಪರಿಣಾಮ, ಕುಟುಂಬಗಳೇ ವಿಭಜನೆಯಾಗಿ ಹೋಯಿತು! ಮತ್ತೆಂದೂ ಕೂಡದಂತೆ!

3. ಇದೆಲ್ಲದರ ಹೊರತಾಗಿ, ವಿಶ್ವ ಯುದ್ಧ || ರಲ್ಲಿ ಪತಿಯನ್ನು ಕಳೆದುಕೊಂಡ ವಿಧವಾ ಪತ್ನಿಯರಿಗೆ ಪಿಂಚಣಿ ಕೊಡುವುದರಲ್ಲಿಯೂ ನಿರ್ಧಾರವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಬಂದಿತು! ತೀರಾ ವಿವಾದಕ್ಕೀಡು ಮಾಡಿದರೂ, ಕೊನೆಗೆ ವಿಧವಾ ಪತ್ನಿಯರು ಯಾವ ರಾಷ್ಟ್ರವನ್ನು ಆಯ್ಕೆ ಕಮಾಡುತ್ತಾರೆಂಬ ಬಲದ ಮೇಲೆ ಆಯಾ ರಾಷ್ಟ್ರದವರು ಹೊಣೆಗಾರಿಕೆ ವಹಿಸಬೇಕೆಂದು ನಿರ್ಧಾರಿತವಾಯಿತು! ಹುತಾತ್ಮನಾದ ಪತಿಯ ಅಸ್ಥಿಯ ಜೊತೆಯಲ್ಲಿ ರಾಷ್ಟ್ರಗಳನ್ನು ನಿರ್ಧರಿಸಬೇಕಾದ ಅನಿವಾರ್ಯತೆ!

4. Partition Commission ಗೆ ಹುಚ್ಚು ಹಿಡಿಸಿದದ್ದೆಂದರೆ ಜೈಲು ಕೈದಿಗಳು! ಬಹುಷಃ ಕೈದಿಗಳನ್ನೂ ವಿಭಜಿಸಬೇಕಾದ ಪರಿಸ್ಥಿತಿ ಬಂದೀತೆಂದು ಎಣಿಸಿರಲಿಲ್ಲವೇನೋ! ರಾಜಕೀಯ ಕೈದಿಗಳಾದರೆ ಯಾವ ದೇಶ ಬೇಕು ಎನ್ನುವಂತೆ ಕೇಳಿ ಇಷ್ಟಪಟ್ಟ ದೇಶಗಳಿಗೆ ಕಳಿಸುವುದೋ ಅಥವಾ ಬಿಡುಗಡೆಗೊಳಿಸುವುದನ್ನೋ ಮಾಡಬಹುದಿತ್ತು! ಆದರೆ., ತೀರಾ ಕ್ರೂರ ಅಪರಾಧವೆಸಗಿದ್ದ ಕೈದಿಗಳನ್ನು ಇಟ್ಟುಕೊಳ್ಳುವ ಹಾಗೂ ಇರಲಿಲ್ಲ, ಬಿಡುವ ಹಾಗೂ ಇರಲಿಲ್ಲ! ಅಕಸ್ಮಾತ್ ಅಂತಹವರಿಗೆ ಆಯ್ಜೆ ಕೊಟ್ಟು ಅವರು ಆಯ್ಕೆ ಮಾಡಿದ ರಾಷ್ಟ್ರಕ್ಕೆ ಕಳುಹಿಸಿಕೊಟ್ಟರೂ ಅವರನ್ನು ಜೈಲಿಗೆ ಸೇರಿಸಿಕೊಂಡೇ ಬಿಡುತ್ತಾರೆ ಎಂಬ ಯಾವ ನಂಬಿಕೆಯೂ ಇರಲಿಲ್ಲ! ಕೊನೆಗೆ ಅಂತೂ ಇಂತೂ ಕಷ್ಟಪಟ್ಟು ಏಳು ವರುಷಗಳವರೆಗೆ ಜೈಲೋ ಇನ್ನೇನೋ ಎಂದು ವಿಂಗಡಿಸಲಾಯಿತು! ವಿಧಿಸಿದಷ್ಟು ವರುಷಗಳನ್ನು ಪೂರೈಸುದ ಮೇಲೆ ಕೈದಿಗಳು ಆಯ್ಕೆ ಮಾಡಿದ ರಾಷ್ಟ್ರಗಳಿಗೆ ಹೋಗಬಹುದೆಂಬ ನಿರ್ಣಯವನ್ನೂ ಮಾಡಲಾಯ್ತು!

5. ಹಾಸ್ಯಾಸ್ಪದವೆಂದರೆ, ಮಾನಸಿಕ ಅಸ್ವಸ್ಥರ ಆಸ್ಪತ್ರೆಯ ರೋಗಿಗಳನ್ನೂ ಸಹ ವಿಭಜಿಸಲಾಗುವ ಹಂತಕ್ಕೆ ಬಂದಿತು ಪರಿಸ್ಥಿತಿ! ಮಾನಸಿಕ ಅಸ್ವಸ್ಥರಾದವರಿಗೆ ನಿರ್ಧಾರಗಳನ್ನೂ ತೆಗೆದುಕೊಳ್ಳಲು ಬರುವುದಿಲ್ಲವಾದ್ದರಿಂದ ಕೊನೆಗೆ ಆಸ್ಪತ್ರೆ ಯಾವ ಭಾಗದಲ್ಲಿತ್ತೋ ಅದರ ಪ್ರಕಾರವಾಗಿ ಆಯಾ ರಾಷ್ಟ್ರಕ್ಕೆ ಅಸ್ವಸ್ಥರೂ ಹಂಚಿಕೆಯಾಗಿ ಹೋದರು!

ಜಿನ್ನಾ ತನ್ನ ದೇಶದ ಸೈನ್ಯಕ್ಕೆ ಇಂತಿತಹವರು ಮಾತ್ರವೇ ಇರಬೇಕೆಂಬ ಪಿತೂರಿ ನಡೆಸಿದ್ದು ಆಗಲೇ! ಪಾಕಿಸ್ಥಾನವಾಗಲೇ ಇಸ್ಲಾಮಿಕ್ ರಾಷ್ಟ್ರವಾಗಿ ಹೋಯಿತು!

1947 ರ ವಿಭಜನೆಯಲ್ಲಿ ಏನಾಯ್ತು ಎನ್ನುವಾಗಿನ ಪ್ರಶ್ನೆಗೆ ಉತ್ತರ ಬಹುಷಃ ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ! ಎರಡು ದೇಶಗಳ ವಿಭಜನೆಯೆಂಬ ಪ್ರಶ್ನೆ ಬಂದ ಹಿನ್ನೆಲೆಯಲ್ಲಿಯೇ ಇಂತಹದ್ದೆಲ್ಲ ಘಟನೆಗಳು ನಡೆದು ಹೋಗುತ್ತದೆಯಷ್ಟೇ.

Source : Freedom At Midnight by Larry Collins and Dominique LaPierre

– ಅಜೇಯ ಶರ್ಮಾ

Editor Postcard Kannada:
Related Post