X

ಭಾರತೀಯ ಸೈನಿಕರ ಮತ್ತೊಂದು ಸಾಹಸ!! ಈ ಬಾರಿ ನಮ್ಮ ಸೈನಿಕರು ರಾಷ್ಟ್ರ ಧ್ವಜ ಹಾರಿಸಿದ್ದು ಎಲ್ಲಿ ಗೊತ್ತಾ!!?

ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ದೇಶದ ಸೇನೆಯನ್ನು ಪ್ರೀತಿಸುತ್ತಾರೆ. ಯಾಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕನ ರಕ್ಷಣೆಯನ್ನು ಸೈನಿಕರು ಮಾಡುತ್ತಾರೆ. ದೇಶಸೇವೆಗೆ ಸದಾ ಬದ್ಧವಾಗಿರುವ ಸೈನಿಕರು ದೇಶವನ್ನು ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬಿಟ್ಟು ತನ್ನ ಕುಟುಂಬದಿಂದ ದೂರ ಇದ್ದು ದೇಶವನ್ನು ರಕ್ಷಿಸಲು ಪಣತೊಟ್ಟು ನಿಲ್ಲುತ್ತಾರೆ…!

ಜಗತ್ತಿನ ಎಲ್ಲಾ ಸೇನೆಗಳು ಒಂದೊಂದು ವಿಶೇಷತೆಯನ್ನು ಹೊಂದಿದೆ. ಆದರೆ ಭಾರತೀಯ ಸೇನೆ ಎಲ್ಲದರಲ್ಲೂ ವಿಶೇಷತೆಯನ್ನು ಹೊಂದಿರುವುದರಿಂದಲೇ ಭಾರತೀಯ ಸೈನಿಕರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ.
ಯಾಕೆಂದರೆ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತಲೂ ಕಠಿಣವಾದ ಪ್ರದೇಶಗಳಲ್ಲಿ ಭಾರತೀಯ ಸೈನಿಕರು ಕಾರ್ಯನಿರ್ವಹಿಸುತ್ತಾರೆ.

ಭಾರತದ ಗಡಿ ಭಾಗವಾದ ಹಿಮಾಲಯದ 18000 ಅಡಿಗಳ ಮೇಲೆ ಭಾರತೀಯ ಸೈನಿಕರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ…!ಕೊರೆಯುವ ಚಳಿಯಿದ್ದರೂ ಸೈನಿಕರು ತಮ್ಮ ದೇಶಸೇವೆಯನ್ನು ಮಾಡುತ್ತಲೇ ಇರುತ್ತಾರೆ.
ದೇಶದಲ್ಲಿ ಏನೇ ಹಬ್ಬ ಹರಿದಿನಗಳು ಇದ್ದರೆ ಇಡೀ ದೇಶವೇ ಸಡಗರದಲ್ಲಿ ತೊಡಗಿರುತ್ತದೆ‌, ಆದರೆ ಈ ಭಾಗದಲ್ಲಿ ಇರುವ ಸೈನಿಕರು ಮಾತ್ರ ತಮ್ಮ ಕಾರ್ಯದಲ್ಲಿ ತೊಡಗಿರುತ್ತಾರೆ…!

ಸಿಯಾಚಿನ್ ನಂತಹ ಅತೀ ಸೂಕ್ಷ್ಮ ಪ್ರದೇಶಗಳಲ್ಲೂ ಭಾರತೀಯ ಸೇನೆ ದೇಶ ಕಾಯುವ ನಿಟ್ಟಿನಲ್ಲಿ ತಮ್ಮ ಜೀವ ಒತ್ತೆಯಿಟ್ಟು ಕಾರ್ಯನಿರ್ವಹಿಸುತ್ತದೆ. ಇಂದು ಭಾರತದಲ್ಲಿ ‘ಗಣರಾಜ್ಯೋತ್ಸವದ’ ಸಡಗರ. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೊಡಗಿದೆ. ಭಾರತೀಯರ ಪಾಲಿಗೆ ಗಣರಾಜ್ಯ ದಿನ ಬಹಳ ವಿಶೇಷವಾದ ದಿನ. ಈ ವಿಶೇಷ ದಿನವನ್ನು ಗಡಿಯಲ್ಲಿ ಭಾರತೀಯ ಸೈನಿಕರು ಆಚರಿಸಿದ್ದು ಬಹಳ ವಿಶೇಷವಾಗಿತ್ತು…!

ಹಿಮಾಲಯದಲ್ಲಿ ‘ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ ಪಡೆ’ ಇಂದು ಗಣರಾಜ್ಯ ದಿನವಾದ್ದರಿಂದ ಹಿಮಾಲಯದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಗಣರಾಜ್ಯ ದಿನ ಆಚರಿಸಿದ್ದಾರೆ…!

ಕೊರೆಯುವ ಮೈನಸ್ 30 ಡಿಗ್ರಿ ಚಳಿಯಲ್ಲಿ ಹಿಮಾಲಯದ 18000 ಅಡಿಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿದ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ ಪಡೆಗೆ ದೇಶದಾದ್ಯಂತ ಮೆಚ್ಚುಗೆಗಳ ಮಹಾಪೂರ ಹರಿದು ಬರುತ್ತಿದೆ.

ಗಣರಾಜ್ಯೋತ್ಸವ ಅಂಗವಾಗಿ ಇಂಡೋ ಟಿಬೆಟಿಯನ್ ಗಡಿ ಭಾಗದ ಪೋಲೀಸ್ ಪಡೆಯ ತುಕಡಿಯೊಂದು ನೀರು ಹೆಪ್ಪುಗಟ್ಟುವಷ್ಟು ಚಳಿಯಿದ್ದರೂ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದೆ.

ಗಣರಾಜ್ಯೋತ್ಸವ ಅಂಗವಾಗಿ ಭಾರತೀಯ ಸೇನೆಯು ದೆಹಲಿಯ ಪರೇಡ್ ನಲ್ಲಿ ತನ್ನ ಶಕ್ತಿ, ಸಾಮಾರ್ಥ್ಯ, ವೈವಿಧ್ಯತೆ, ಶಿಸ್ತಿನ ಪ್ರದರ್ಶನ ಮಾಡುತ್ತಿದ್ದರೆ ,ಗಡಿಯಲ್ಲಿ ಸೇನೆಯು ತನ್ನ ಸಾಮಾರ್ಥ್ಯ ಮತ್ತು ದೇಶಪ್ರೇಮವನ್ನು ಇಂಡೋ ಟಿಬೆಟಿಯನ್ ಪೋಲಿಸ್ ಪಡೆ ತೋರಿಸಿದೆ…!

ಐಟಿಬಿಪಿ (ಡೊ ಟಿಬೇಟಿಯನ್ ಗಡಿಯ ಪೊಲೀಸ್ ಪಡೆ)ಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಸಾವಿರಾರು ಜನರು ಲೈಕ್ ಹಾಗೂ ಶೇರ್ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ  ಗಣರಾಜ್ಯೋತ್ಸವ ಪರೇಡ್ ನಲ್ಲಿ ಈ ಬಾರಿ ಮಹಿಳಾ ಸೈನಿಕರ ಶಕ್ತಿ ಸಾಮಾರ್ಥ್ಯ ವಿಶೇಷವಾಗಿ ಗಮನ ಸೆಳೆಯಿತು. ಬಿ ಎಸ್ ಎಫ್ ಪಡೆಯ ‘ಸೀಮಾ ಭವಾನಿ’ ಎಂಬ ಮಹಿಳಾ ಪಡೆಯು ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ್ದು ದೇಶದ ಸೇನೆಯಲ್ಲಿ ಮಹಿಳಾ ಪಡೆಯನ್ನು ಪ್ರತಿನಿಧಿಸಿತ್ತು…!

ಶಿಸ್ತು ಬದ್ಧವಾಗಿ ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿವಿಧ ರಾಜ್ಯಗಳ ವೈವಿಧ್ಯತೆಯನ್ನು ಸಾರುವ ಕೆಲವೊಂದು ಸ್ತಬ್ದ ಚಿತ್ರಗಳು ನೋಡುಗರ ಕಣ್ಮನ ಸೆಳೆಯಿತು.

ಜಗತ್ತಿನಲ್ಲೇ ಅತ್ಯಂತ ಕಠಿಣ ಪ್ರದೇಶಗಳು ಭಾರತದ ಗಡಿ ಭಾಗದಲ್ಲಿರುವುದರಿಂದ ಭಾರತೀಯ ಸೈನಿಕರು ಮೈಯೆಲ್ಲಾ ಕಣ್ಣು ಮಾಡಿಕೊಂಡು ಕಾರ್ಯನಿರ್ವಹಿಸುತ್ತಾರೆ…!
-ಅರ್ಜುನ್

Editor Postcard Kannada:
Related Post