X

ಮಲೇಷಿಯಾದಲ್ಲಿ ತನ್ನ ಮಗನ ಶವದೊಂದಿಗೆ ಕುಳಿತ ಭಾರತೀಯ ತಾಯಿಗೆ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದು ಹೀಗೆ!

ಭಾರತದ ವಿದೇಶಾಂಗ ಸಚಿವೆಯಾದ ಸುಷ್ಮಾ ಸ್ವರಾಜ್ ಈಗ ಜಗತ್ಪ್ರಸಿದ್ಧ ಎನ್ನುವುದು ಅತಿಶಯೋಕ್ತಿಯೇನಲ್ಲ! ಜೊತೆ ಜೊತೆಗೆ ವಿದೇಶಾಂಗ ಸಚಿವೆಯಾಗಿದ್ದರೂ ಸಹ ಟ್ಟಿಟ್ಟರ್ ಖಾತೆಯಲ್ಲಿ ತಕ್ಷಣವೇ ಸಂಪರ್ಕಿಸಲು ಅವಕಾಶವಾಗುವಂತಹ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ಸುಷ್ಮಾ ಸ್ವರಾಜ್ ಯಾವುದೇ ಸಮಯದಲ್ಲಿ ಭಾರತೀಯರು ತೊಂದರೆ ಎಂದು ಬಂದಾಗ ಪರಿಹರಿಸುವಂತಹ ಸ್ವರಾಜ್ ಕಾರ್ಯ ವೈಖರಿ ದಿನೇ ದಿನೇ ಪ್ರಸಿದ್ಧತೆಯನ್ನು ಹೆ‌ಚ್ಚಿಸುತ್ತಿದೆ!

ಎರಡು ದಿನಗಳ ಹಿಂದಷ್ಡೇ, ರಮೇಶ್ ಕುಮಾರ್ ಎಂಬುವವರು ಭಾರತದ ವಿದೇಶಾಂಗ ಇಲಾಖೆಯ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ್ದರು!

“ರಮೇಶ್ ಅವರ ಸ್ನೇಹಿತ ಹಾಗೂ ತಾಯಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ, ಕೌಲಾ ಲಾಮ್ಪುರ್ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಹಠಾತ್ತನೆ ಹೃದಯಾಘಾತವಾಗಿ ಸ್ನೇಹಿತ ತೀರಿ ಹೋಗಿದ್ದಾಗಿಯೂ, ಹಾಗು ಮಗನ ಶವವೊಂದಿಗೆ ಒಬ್ಬಳೇ ಇರುವ ತಾಯಿಗೆ ಸಹಾಯ ಮಾಡಬೇಕಾಗಿ ಕೇಳಿಕೊಂಡಿದ್ದರು!”

ಅದಲ್ಲದೇ, “ಮಗನ ಸಾವಿಗೆ ದುಃಖಿತರಾಗರುವುದಲ್ಲದೇ, ಶವವನ್ನು ಹೇಗೆ ಭಾರತಕ್ಕೆ ಸಾಗಿಸಬೇಕೆಂದೂ ಆಕೆಗೆ ಗೊತ್ತಾಗುತ್ತಿಲ್ಲ. ನೀವು, ಈ ಪರಿಸ್ಥಿತಿಯಲ್ಲಿ ಆಕೆಗೆ ಸಹಾಯ ಮಾಡಿದರೆ ಬಹಳ ಉತ್ತಮವಾಗಿರುತ್ತದೆ! ದಯವಿಟ್ಟು ಸಹಾಯ ಮಾಡಿ! ಆಕೆ, ಕೆಎಲ್ ಐ ಎ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದಾರೆ ಹಾಗೂ, ಅವರ ಸಂಖ್ಯೆ, ……………” ಎಂಬುದಾಗಿ ಟ್ವೀಟ್ ಮಾಡಿದ್ದಾರೆ!

ತಕ್ಷಣವೇ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಶವವನ್ನು ಅವರದೇ ಸ್ವಂತ ಖರ್ಚಿನಲ್ಲಿ ಭಾರತಕ್ಕೆ ಸಾಗಿಸುತ್ತಾರೆಂದೂ , Indian high commission ಸ್ವತಃ ಸಹಕರಿಸುತ್ತದೆಂದು ಟ್ವೀಟ್ ಮಾಡಿದ್ದಾರೆ!

ಯಾವಾಗ, ಸುಷ್ಮಾ ಸ್ವರಾಜ್ ಸಹಕರಿಸಿದರೋ, ರಮೇಶ್ ಕುಮಾರ್ ಧನ್ಯವಾದಗಳನ್ನು ಸಲ್ಲಿಸಿದ್ದಲ್ಲದೇ, ಮಲೇಶಿಯಾದಲ್ಲಿ, ಕಲಾಮ್ಪುರದಿಂದ ಶವವನ್ನು ಸಾಗಿಸಲು ಒಂದಷ್ಟು ಜನ ಬಹುಮೊತ್ತದ ಹಣವನ್ನು ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ!

ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿರುವುದಲ್ಲದೇ, ದುಃಖಿತರಾಗಿರುವ ತಾಯಿಗೆ ಸಾಂತ್ವನ ಹೇಳಲು ತಿಳಿಸಿದ್ದಾರೆ!

ಸುಷ್ಮಾ ಸ್ವರಾಜ್ ರ ಈ ನಡೆಗೆ ವ್ಯಾಪಕ ಅಭಿನಂದನೆ ವ್ಯಕ್ತವಾಗಿದ್ದು, ಭಾರತದ ವಿದೇಶಾಂಗ ಇಲಾಖೆಯ ಬಗ್ಗೆ ಮೆಚ್ಚುಗೆಯನ್ನೂ ಟ್ವಿಟ್ಟರಾಯಿಗಳು ವ್ಯಕ್ತಪಡಿಸಿದ್ದಾರೆ!

ಇದೇ ನೋಡಿ! ಮೋದಿಯ ಭಾರತಕ್ಕೂ, ಕಾಂಗಿಗಳ ಉದ್ಧಟತನಕ್ಕೂ ಇರುವ ವ್ಯತ್ಯಾಸ!

ಹಿಂದೆ ಕಾಂಗಿಗಳ ಸರಕಾರದಲ್ಲಿ, ಹೊರದೇಶಕ್ಕೆ ಹೋದವನೊಬ್ಬ ಅವನ ಸ್ವಂತ ಜವಾಬ್ದಾರಿಯ ಮೇಲೆ ಹೋಗಿ ಬರಬೇಕಿತ್ತೇ ವಿನಃ ಹೆಚ್ಚು ಕಡಿಮೆಯಾದರೆ ಭಾರತೀಯ ಸರಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿತ್ತು. ಆದರೆ, ಮೋದಿ ಸರಕಾರದಲ್ಲಿ ಮಾತ್ರ ಹಾಗಲ್ಲವೇ ಅಲ್ಲ! ಟ್ವಿಟ್ಟರ್ ನಲ್ಲಿ.ಸಮಸ್ಯೆ ಹೇಳಿಕೊಂಡರೆ ತಕ್ಷಣವೇ ಪ್ರತಿಕ್ರಿಯೆಯೂ ಬರುತ್ತದೆ., ಜೊತೆಗೆ ಸಹಾಯವೂ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post