X

ಮಾಂಸ ತಿಂದು ಬಂದ ಮುಖ್ಯಮಂತ್ರಿ! ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಪ್ರಧಾನಿ ಮೋದಿ!!

ಮೊನ್ನೆ ಮೊನ್ನೆಯಷ್ಟೇ ಮಾಂಸಾಹಾರ ಸೇವಿಸಿ ಧರ್ಮಸ್ಥಳಕ್ಕೆ ಕಾಲಿಟ್ಟಿದ್ದ ಮಹಾಶಯರಿಂದ ಅಪವಿತ್ರವಾಗಿದ್ದ ಕ್ಷೇತ್ರ ಈಗ ಮತ್ತೆ ಪವಿತ್ರವಾಗಿದೆ!!

ಹೌದು! ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಟಾಚಾರಕ್ಕೆ ಭೇಟಿ ಕೊಟ್ಟರೋ ಅಥವಾ ಹಿಂದೂ ದೇವಾಲಯಗಳಿಗೆ ಅವಮಾನ ಮಾಡಲೆಂದೇ ಮಾಂಸಾಹಾರ ತಿಂದು ಕಾಲಿಟ್ಟರೋ, ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಪೆಟ್ಟು ಕೊಟ್ಟಿದ್ದು ಸುಳ್ಳೇ?!

ತಿಂದಿದ್ದೂ ಅಲ್ಲದೇ, ಹೀನಾಯ ಮಟ್ಟಕ್ಕಿಳಿದು ಸಮರ್ಥನೆ ಮಾಡಿಕೊಂಡಿದ್ದ ಸಿದ್ಧರಾಮಯ್ಯರವರಿಗೆ ಕರ್ನಾಟಕದ ಜನತೆಯೇ ಟೀಕಿಸಿತ್ತಷ್ಟೇ! ಇಂತಹ ನಾಸ್ತಿಕನಿಂದ ಜನತೆ ನೊಂದಿತ್ತಾದರೂ, ಈಗ ಭಕ್ತ ನರೇಂದ್ರ ಮೋದಿಯವರಿಂದ ಇಡೀ ಕ್ಷೇತ್ರ ಪವಿತ್ರವಾಗಿದೆ! ಜನತೆಗೂ ಕೂಡ ಹೊಸ ಚೈತನ್ಯ!

ಉಪವಾಸ ಮಾಡಿದ ನರೇಂದ್ರ ಮೋದಿ!

ಧರ್ಮಸ್ಥಳಕ್ಕೆ ಭೇಟಿ ಕೊಡುವ ಮುಂಚೆ ಉಪವಾಸ ಮಾಡಿದ್ದಾರೆ ಮೋದಿ! ನಿರಾಹಾರಿಯಾಗಿ ದೇವಸ್ಥಾನ ಪ್ರವೇಶಿಸಿದ ಪ್ರಧಾನಿ ಮೋದಿಯವರ ಭಕ್ತಿಗೆ ಧರ್ಮಸ್ಥಳ ಮತ್ತೆ ಕಳೆಭರಿತವಾಗಿದೆ!

ಅಕ್ಟೋಬರ್ 28 ಹಾಗೂ 29 ರಂದು ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ! ಪ್ರಧಾನಿ ಮೋದಿ ಬರುತ್ತಿದ್ದಾರೆಂಬ ಸುದ್ದಿಗೆ ಇಡೀ ಧರ್ಮಸ್ಥಳ ಲವಲವಿಕೆಯಿಂದ ಕೂಡಿತ್ತಾದರೂ ಸಹ, ಮುಖ್ಯ ಮಂತ್ರಿಯಾದ ಸಿದ್ಧರಾಮಯ್ಯ ಮಾತ್ರ, ‘ಮೋದಿಯ ಭಾಷಣ ಕೇಳಲು ನಾ ಹೋಗೋದಿಲ್ಲ’ ಎಂಬ ಅಹಂಕಾರವನ್ನಿಟ್ಟು ಕುಳಿತಿದ್ದು ಬೇಜವಾಬ್ದಾರಿ ವರ್ತನೆಯ ಪ್ರತೀಕವಷ್ಟೇ!

ಕಳೆದೈದು ವರ್ಷಗಳೂ ಕೂಡ ಸಿದ್ಧರಾಮಯ್ಯ ಸರಕಾರದ ಸಾಧನೆ ಇದೇ ಇಲ್ಲವೇ?!

ರಾಜ್ಯದ ಅಭಿವೃದ್ಧಿ ಆಗದಿದ್ದರೂ ಸಹ, ಮುಸ್ಲಿಂ ಓಲೈಕೆಯಲ್ಲಂತೂ ಅಭಿವೃದ್ಧಿ ಕಂಡಿದೆ! ದೇವಸ್ಥಾನಗಳ ಅಭಿವೃದ್ಧಿ ಆಯಿತೋ ಇಲ್ಲವೋ, ಆದರೆ ಮಸೀದಿ ಚರ್ಚುಗಳಂತೂ ಅನಾಯಾಸವಾಗಿ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ.

ಪ್ರತೀ ಬಾರಿಯೂ ಸಹ ಹಿಂದೂ ಧರ್ಮದ ವಿಚಾರ ಬಂದಾಗ, ಅವಮಾನವೆಸಗುವಂತಹ ಕಾರ್ಯವನ್ನೇ ಮಾಡುವ ಸಿದ್ಧರಾಮಯ್ಯ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಸಮರ್ಥಿಸುವ ರೀತಿಗೆ ಅಬ್ಬಾ!

ಮೋದಿಯೆಂದರೆ ಹಾಗೇ!

ಅತಿಶಯೋಕ್ತಿ ಅಲ್ಲವೇ ಅಲ್ಲ! ಒಬ್ಬ ಮೋದಿಯನ್ನು ಹೊಗಳುವುದು ಅತಿಶಯೋಕ್ತಿ ಅಲ್ಲವೇ ಅಲ್ಲ! ಅದು ವಾಸ್ತವ! ಪ್ರತಿ ನಡೆಯಲ್ಲಿಯೂ ತನ್ನ ಪರಿಶುದ್ಧ ವ್ಯಕ್ತಿತ್ವವನ್ನು ತೋರುತ್ತಲೇ ಪ್ರಧಾನಿಯ ಮಟ್ಟಕ್ಕೇರಿದ ಮೋದಿಯವರು ಜಾತ್ಯಾತೀತತೆಯ ಹೆಸರಿನಲ್ಲಿ, ಅಹಿಂದ ಎನ್ನುವ ನೆಪದಲ್ಲಿ ಯಾವ ಯಾರ
ಧಾರ್ಮಿಕ ಭಾವನೆಗೂ ಸಹ ಧಕ್ಕೆ ತಂದಿಲ್ಲ. ಯಾರು ಯಾವುದನ್ನು ಹೇಗೆ ಎಲ್ಲಿ ಅನುಷ್ಟಾನಗೊಳಿಸಬೇಕೆಂಬ ಜ್ಞಾನವೊಂದು ಅವರ ಮೂಲಕ ಭಾರತಕ್ಕೆ ಪಸರಿಸುತ್ತಿದೆ ಅಷ್ಟೇ!

ವಯಸ್ಸಾದರೂ ಸಹ ಧಾರ್ಮಿಕ ನಡೆಗೆ ತಕ್ಕುದಾಗಿ ನಡೆದುಕೊಳ್ಳುವ ಪ್ರಧಾನಿ ಮೋದಿ! ಒಬ್ಬ ಹಿಂದೂವಾಗಿದ್ದರೂ ಬೇಜವಾಬ್ದಾರಿ ಯಿಂದ ವರ್ತಿಸುವ ಒಬ್ಬ
ಜಾತ್ಯಾತೀತತೆಯನ್ನು ಪ್ರತಿಪಾದಿಸುತ್ತೇನೆಂದು ಕೊಚ್ಚಿಕೊಳ್ಳುವ ಮುಖ್ಯಮಂತ್ರಿ!

ಯೋಚಿಸಲೇ ಬೇಕಿದೆ!

ಇನ್ನಾದರೂ ಯೋಚಿಸಬೇಕಿದೆ ಜನತೆ! ಇನ್ನಾದರೂ ಜಾತ್ಯಾತೀತತೆಯೆಂಬ ಸೋಗಲಾಡಿತನವನ್ನು ಬಿಟ್ಟು ಹಿಂದೂಸ್ಥಾನ ವನ್ನು ಕಟ್ಟುವ ನಿಟ್ಟಿನಲ್ಲಿ ಯೋಚಿಸಬೇಕಿದೆಯಷ್ಟೇ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post