X

ಮುಸಲ್ಮಾನನಾಗಿ ಕೆಲ ವಿಷಯಗಳಲ್ಲಿ ನನಗೂ ಮೋದಿಯ ಕೆಲ ನೀತಿಗಳಿಂದಾಗಿ ಬೇಸರವಿದೆ, ಆದರೂ ನಾನು ಮೋದಿಗೆ ಮತ ಹಾಕುತ್ತೇನೆ!! ಕಾರಣವೇನು ಗೊತ್ತಾ?!

Hangzhou: Prime Minister Narendra Modi at the opening session of G20 Summit in Hangzhou, China on Sunday. PTI Photo by Vijay Verma (PTI9_4_2016_000103B)

ಭಾರತದಲ್ಲಿ ಅನೇಕ ಜನ ಭ್ರಷ್ಟ ರಾಜಕಾರಣಿಗಳ ಮಾತುಗಳನ್ನ ಕೇಳಿ ನರೇಂದ್ರ ಮೋದಿಯವರನ್ನ ವಿರೋಧ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಮಾಡುವುದು, ಸಮರ್ಥನೆ ಮಾಡುವುದು ಅವರವರಿಗೆ ಬಿಟ್ಟ ವಿಷಯ.

ಆದರೆ ಮೋದಿಯನ್ನ ವಿರೋಧಿಸಿ ನೀವು ಯಾರಿಗೆ ಸಪೋರ್ಟ್ ಮಾಡೋಕೆ ಹೊರಟಿದೀರ?

* ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಯಾದವ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಎಡಪಂಥೀಯರೆಲ್ಲ ಮೋದಿಗಿಂತ ಒಳ್ಳೆಯ ಆಡಳಿತ ಕೊಡಬಲ್ಲವರಾ? ಮೋದಿ ಅವರೆಲ್ಲರಿಗಿಂತ ಅಷ್ಟೊಂದು ಕೆಟ್ಟ ಆಡಳಿತ ನೀಡುತ್ತಿದ್ದಾರಾ?

* ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನ ಆಡಳಿತ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಗಿಂತಲೂ ಕೆಟ್ಟ ಆಡಳಿತ ಕೊಟ್ಟವರಾ ಮೋದಿ? ಹಾಗೇನಾದರೂ ಹೋಲಿಕೆ ಮಾಡೋದಿದ್ದರೆ ಗುಜರಾತಿನ ಹಳ್ಳಿಯೊಂದನ್ನ ನೋಡಿ ಬಂದು ಉಳಿದ ರಾಜ್ಯಗಳ ರಾಜಧಾನಿಯ ಜೊತೆ ಹೋಲಿಕೆ ಮಾಡಿ ನೋಡಿ.

* ಒಂದು ಕಾಲದಲ್ಲಿ ಮುಲಾಯಂ, ಲಾಲೂ ರಾಜಕಾರಣ ಪ್ರವೇಶಿಸಿದ್ದಾಗ ಅವರ ಮನೆಯ ಹೇಗಿತ್ತಂದರೆ ಒಂದು ಸೈಕಲ್ ಖರೀದಿ ಮಾಡಲು, ಸೈಕಲ್ ಯಾಕೆ ಮನೇಲಿ ದೀಪ ಹಚ್ಚೋಕೆ ಲಾಟೀನು ಸಹಿತ ಇರಲಿಲ್ಲ. ಆದರೆ ಯಾವಾಗ ಈ ರಾಜಕಾರಣಿಗಳು ಜಾತಿ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದರೋ ಅದ್ಹೇಗೆ ಸಾವಿರಾರು ಕೋಟಿ ಆಸ್ತಿಯ ಒಡೆಯರಾದರು? ರಾಮಗೋಪಾಲ್ ಚಾರ್ಟೆಡ್ ಪ್ಲೇನ್’ನಲ್ಲಿ ಓಡಾಡ್ತಾನೆ, ಶಿವಪಾಲ್ ಯಾದವ್ ಕೋಟಿ ಬೆಲೆ ಇರೋ ಕಾರಿನಲ್ಲಿ ಓಡಾಡ್ತಾನೆ, ಇವರು ಮೋದಿಗಿಂತ ಒಳ್ಳೆಯವರಂತ ಅನಿಸುತ್ತಾ?

* ಸೋನಿಯಾ & ಅವಳ ಮಗ ಮಗಳು ಅಳಿಯ ಈಗಲೂ ಅರಬೋಗಟ್ಟಲೇ ಆಸ್ತಿ ಹೊಂದಿದವರಾಗಿದ್ದಾರೆ. ಹತ್ತು ವರ್ಷ ಅಧಿಕಾರದಲ್ಲಿದ್ದಾಗ ಇಡೀ
ದೇಶವನ್ನೇ ಅನೇಕ ಹಗರಣಗಳ ಮೂಲಕ ಲೂಟಿ ಹೊಡೆದಿದ್ದ ಇವರು ಮೋದಿಗಿಂತ ಉತ್ತಮ ಆಡಳಿತಗಾರರಾ?

* 35 ವರ್ಷ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿ ಇಡೀ ರಾಜ್ಯವನ್ನೇ ಅಭಿವೃದ್ಧಿಯಿಂದ ದೂರವಿಟ್ಟ ಕಮ್ಯುನಿಸ್ಟರು ನರೇಂದ್ರ ಮೋದಿಗಿಂತ ಒಳ್ಳೆಯ ಆಡಳಿತಗಾರರಾ?

* 5 ವರ್ಷ ಕೇಜ್ರಿವಾಲ್ 5 ವರ್ಷ ಕೇಜ್ರೀವಾಲ್ ಅಂತ ಘೋಷಣೆಗಳನ್ನ ಮೊಳಗಿಸಿ ಆಯ್ಕೆಯಾದ ಕೇಜ್ರಿವಾಲ್ ದೆಹಲಿಯಾದ್ಯಂತ ವೈಫೈ ಕೊಡ್ತೇನೆ, ಮಹಿಳೆಯರ ಸುರಕ್ಷೆಗಾಗಿ ಸಾವಿರಾರು ಸಿ.ಸಿ.ಟಿವಿ ಹಾಕಸ್ತೀನಿ, ಅದು ಮಾಡ್ತೇನೆ ಇದು ಮಾಡ್ತೇನೆ ಅಂತ ದೆಹಲಿಯ ಜನರ ಕೈಗೆ ಚಿಪ್ಪು ಕೊಟ್ಟ ಕೇಜ್ರಿವಾಲ್ ಮೋದಿಗಿಂತ ಉತ್ತಮ ಆಡಳಿತಗಾರನಾ?

* ಕಾಂಶೀರಾಮರ ಹೆಸರೇಳಿಕೊಂಡು ರಾಜಕೀಯಕ್ಕೆ ಇಳಿದ ಮಾಯಾವತಿಯ ಹತ್ತಿರ ಅಂದು ಮನೆಯಲ್ಲಿ ಬೆಳಗಿಸೋಕೆ ದೀಪವೂ ಇರಲಿಲ್ಲ, ಸೈಕಲ್ ಮೇಲೆ ರಾಜಕೀಯ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಮಾಯಾವತಿಯ ಹತ್ತಿರ ಈಗ ಸಾವಿರಾರು ಕೋಟಿ ಆಸ್ತಿ, ಆಕೆಯ ಸಹೋದರನೀಗ ಈಗ 497 ಕಂಪೆನಿಗಳ ಒಡೆಯ. ಮಾಯಾವತಿ ಮೋದಿಗಿಂತ ಉತ್ತಮ ಆಡಳಿತಗಾರಳಾ?

ಈಗ ಮೋದಿಯನ್ನ ವಿರೋಧ ಮಾಡುವವರು ಮಾಡಿ, ಯಾರನ್ನ ನೀವು ಸಮರ್ಥನೆ ಮಾಡ್ತಿರ ಅನ್ನೋದನ್ನ ಸ್ವಲ್ಪ ತಿಳಿಸಿ, ಮೋದಿಗಿಂತ ಉತ್ತಮ ಯಾರು ಅನ್ನೋದನ್ನ ತಿಳಿಸಿ!!

ಸ್ವಲ್ಪ ದೇಶದ ಬಗ್ಗೆಯೂ ಯೋಚಿಸಿ, ಇನ್ನೂ ದೇಶವನ್ನ ಅದೆಷ್ಟು ಅಧೋಗತಿಗೆ ತಲುಪುವಂತೆ ಮಾಡುವ ರಾಜಕಾರಣಿಗಳನ್ನ ಬೆಂಬಲಿಸುತ್ತೀರ?

ಜಾತಿ ಜಾತಿಯೆಂಬ ನಿಮ್ಮ ಗರ್ವದಿಂದ ಹೊರಬನ್ನಿ, ಇಲ್ಲವಾದರೆ ಜಾತಿ ರಾಜಕಾರಣದಿಂದ ಈ ಭ್ರಷ್ಟ ರಾಜಕಾರಣಿಗಳು ನಮ್ಮ ಮನೆಯನ್ನೇ ಲೂಟಿ
ಮಾಡಿ ಸರ್ವನಾಶ ಮಾಡಿ ಬಿಡ್ತಾರೆ.

ಈ ಪೊಸ್ಟ್ ಬರೆದ ನನ್ನನ್ನ ನೀವು ಮೋದಿ ಭಕ್ತ ಅನ್ನಬಹುದು ಆದರೆ ಯೋಚಿಸುವ ಶಕ್ತಿಯನ್ನ ದೇವರು ನಿಮಗೂ ಕೊಟ್ಟಿದಾನೆ.

ನಾನ್ಯಾಕೆ ಮೋದಿಯನ್ನ ಇಷ್ಟು ಇಷಟಪಡ್ತೀನಿ ಅನ್ನೋದು ನನಗೆ ಗೊತ್ತಿಲ್ಲ ಆದರೆ ಕಾಂಗ್ರೆಸ್ ಆದಿಯಾಗಿ ವಿರೋಧಪಕ್ಷಗಳಲ್ಲಿರುವ ಪಕ್ಷಗಳನ್ನ ಇಷ್ಟಪಡದಿರೋದಕ್ಕೆ ನನ್ನಲ್ಲಿ ಹಲವು ಕಾರಣಗಳಿವೆ.

ಅಚ್ಛೇ ದಿನ್ ಬರುತ್ವೋ ಇಲ್ವೋ ನಂಗೆ ಗೊತ್ತಿಲ್ಲ ಆದರೆ ಮೋದಿಯ ಹಾಗೆ ದೂರದೃಷ್ಟಿಯುಳ್ಳ ನಾಯಕ ಹಾಗು ಅಚ್ಛೇ ದಿನ್ ಗಳನ್ನ ತರಬಲ್ಲ ಯಾವ ನಾಯಕನೂ ನನ್ನ ಕಣ್ಣಿಗೆ ಉಳಿದ ಪಕ್ಷಗಳಲ್ಲಿ ಕಂಡಿಲ್ಲ.

ಮೋದಿ ಈ ದೇಶವನ್ನ ಹಿಂದೂರಾಷ್ಟ್ರ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ ಅದರೆ ತನ್ನ ಉಸಿರಿರೋವರೆಗೂ ಈ ದೇಶವನ್ನ ವಿಶ್ವಗುರು ಮಾಡೋಕೆ ಮಾತ್ರ ಅವಿರತ ಶ್ರಮ ಪಡುತ್ತಾರೆ ಅನ್ನೋ ಭರವಸೆಯಂತೂ ಇದೆ.

ಮೋದಿಯದ್ದು 56 ಇಂಚಿನ ಎದೆಯಿದೆಯೋ ಇಲ್ವೋ ಗೊತ್ತಿಲ್ಲ ಆದರೆ ಆ ಮನುಷ್ಯನಲ್ಲಿ ಭ್ರಷ್ಟರನ್ನ ಸದೆಬಡಿಯುವ ಗುಂಡಿಗೆಯಂತೂ ಇದೆ.

ಎಷ್ಟು ಬುದ್ಧಿಜೀವಿಗಳು, ವಿಚಾರವಾದಿಗಳು ಮೋದಿಯಿಂದ ಮುನಿಕೊಂಡಿದ್ದಾರೆ ಅನ್ನೋದರ ಪರಿವಿಲ್ಲ ನನಗೆ, ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಯುವಜನತೆಯಂತೂ ಖುಷಿಯಾಗಿದ್ದಾರೆ.

ಮೋದಿ ದೇಶದ ಅಭಿವೃದ್ಧಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಆದರೆ ದೇಶವನ್ನ ಜಗತ್ತಿನ ರಾಷ್ಟ್ರಗಳಲ್ಲಿ ನಂಬರ್ ಒನ್ ಸ್ಥಾನಕ್ಕೊಯ್ಯುವ ಶ್ರಮವನ್ನಂತೂ ಮಾಡೇ ಮಾಡ್ತಾರೆ.

ಮೋದಿಯವರಿಗೆ ಇತಿಹಾಸದ ಬಗ್ಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಭಾರತದ ಭವಿಷ್ಯದ ಬಗ್ಗೆ ಮಾತ್ರ ಅವರಿಗೆ ಸ್ಪಷ್ಟ ಅರಿವಿದೆ.

ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲುತ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಈ ದೇಶ ಮಾತ್ರ ಗೆಲ್ಲಲೇಬೇಕು!!

ಮೋದಿಯನ್ನ ವಿರೋಧ ಮಾಡಿ ಆದರೆ ತನ್ನ ಇಳಿವಯಸ್ಸಿನಲ್ಲೂ ನಿಸ್ವಾರ್ಥವಾಗಿ ದೇಶಕ್ಕಾಗಿ 18 ಗಂಟೆ ದುಡಿಯುತ್ತಿರುವ ಆ ವ್ಯಕ್ತಿಯನ್ನ ವಿರೋಧ ಮಾಡುವುದಕ್ಕೂ ನಿಮ್ಮಲ್ಲಿ ಕಾರಣಗಳಿರಲಿ.

ವಿರೋಧಿಸುವ ಮುನ್ನ ಯಾಕೆ ವಿರೋಧ ಮಾಡುತ್ತಿದ್ದೇನೆ ಅನ್ನೋವುದನ್ನ ಒಮ್ಮೆ ಆಲೊಚಿಸಿ ನೋಡಿ!!

 

-ಆಶ್ರಫ್ ಅಬ್ಬಾಸ್

Editor Postcard Kannada:
Related Post