X

ಮೋದಿಯ ಉಡುಗೆ ತೊಡುಗೆಗೆ ಸರಕಾರದಿಂದ ಎಷ್ಟು ಹಣ ವೆಚ್ಚವಾಗುತ್ತಿದೆ ಗೊತ್ತೇ?! ಆರ್ ಟಿ ಐ ನಿಂದ ಸ್ಫೋಟಕ ಮಾಹಿತಿ ಬಹಿರಂಗ!

ಹೇಳಲೇಬೇಕೆಂದರೆ, ಯಾರನ್ನು ತಾತ್ವಿಕವಾಗಿ ದೂರಲು ಸಾಧ್ಯವಿಲ್ಲವೋ, ಸಹಜವಾಗಿಯೇ ಅವರ ಉಡುಗೆ ತೊಡುಗೆಗಳ ಮೇಲೆ ಟೀಕೆಗಳು ಪ್ರಾರಂಭವಾಗುತ್ತವೆ! ಅದೇ ರೀತಿ, ಈಗಲೂ ಸಹ ಮೋದಿಗಾಗುತ್ತಿದೆ ಅಷ್ಟೇ!

ಮೊದಲು ಮೋದಿ ಬಂದಾಗಿನಿಂದ ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ ಎಂದರು! ಆದರೆ, ಸ್ವತಃ ಮುಸಲ್ಮಾನರೇ ಮೋದಿಯನ್ನು ಅಪ್ಪಿದರು! ತದನಂತರ, ಕ್ರೈಸ್ತರು ಎಂದರು! ಅದೂ ಫಲಿಸದೇ ಹೋಯಿತು! ಕೊನೆಗೆ, ಜಿಎಸ್ ಟಿ ಯಿಂದ ವ್ಯಾಪಾರಿಗಳ ಬದುಕು ಹಾಳಾಯಿತೆಂದರು! ಉಹೂಂ!
ವ್ಯಾಪಾರಿಗಳು ಮೋದಿಗೆ ಪೂರ್ಣ ಅಂಕ ನೀಡಿದರು! ನೋಟು ನಿಷೇಧದಲ್ಲಂತೂ, ದೇಶದ ಆರ್ಥಿಕತೆ ಕುಸಿದೇ ಹೋಯಿತು ಎಂದು ಬೊಬ್ಬಿರಿದರು! ನೋಡಿದರೆ, ಎಂದಿಗಿಂತ ಜಿಡಿಪಿ ಹೆಚ್ಚಾಯಿತು! ಏನೂ ಇಲ್ಲವೆನ್ನುವಾಗ ಸಿಕ್ಕಿದ್ದೇ ಮೋದಿಯ ಉಡುಗೆ!!!

ಮೋದಿಯ ಸೂಟಿಗೆ ನಾಲ್ಕು ಲಕ್ಷ ಗೊತ್ತಾ ಎಂದರು!! ಮೋದಿ ದೇಶದ ಅಭಿವೃದ್ಧಿ ಮಾಡುವುದಕ್ಕಿಂತ ತಮ್ಮ ವಾರ್ಡ್ ರೋಬಿನ ಅಭಿವೃದ್ಧಿ ಮಾಡುತ್ತಿದ್ದಾರೆಂದರು! ಅಂತಹವರೆಲ್ಲ ಒಮ್ಮೆ ಈ ಲೇಖನವನ್ನು ಓದಲೇ ಬೇಕಿದೆ!

ಸ್ವತಃ ಆರ್ ಟಿಐ ಕಾರ್ಯಕರ್ತನೇ ಬಹಿರಂಗಪಡಿಸಿದ್ದ ಸತ್ಯವನ್ನು!

ಎಲ್ಲಿ ತೀರಾ ಎನ್ನುವಷ್ಟು ಮೋದಿಯ ಸೂಟು ಬೂಟಿನ ಬಗ್ಗೆ ವಿವಾದಗಳು ಪ್ರಾರಂಭವಾಗತೊಡಗಿತೋ, ವಿವಾದಕ್ಕೆ ಇತಿಶ್ರೀ ಹಾಡಲೇಬೇಕೆಂದು, ಆರ್ ಟಿಐ ಕಾರ್ಯಕರ್ತರಾದ ರೋಹಿತ್ ಸಬರ್ವಾಲ್ ಮೋದಿಯ ಸೂಟಿಗೆ ಎಷ್ಡು ಹಣವನ್ನು ಖರ್ಚು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದರು!

“2014, ಮೇ 26 ರಿಂದ ಪ್ರಸ್ತುತ ಸಮಯದವರೆಗೂ, ಮೋದಿಯವರ ಸೂಟಿಗೆ ಕೇಂದ್ರ ಸರಕಾರ ಎಷ್ಟು ಹಣವನ್ನು ಖರ್ಚು ಮಾಡಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿರುವ ರೋಹಿತ್, ಜೊತೆಗೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರ್ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ರವರ ಉಡುಗೆಯ ಖರ್ಚಿನ ಲೆಕ್ಕವನ್ನೂ ನೀಡಿದ್ದಾರೆ! ”

ಇಷ್ಟಲ್ಲದೆ, ಪ್ರಧಾನ ಮಂತ್ರಿಯ ಕಚೇರಿ ‘ಮೋದಿ ತಮ್ಮ ಉಡುಗೆಗೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಾರೆಯೇ ಹೊರತು, ಕೇಂದ್ರ ಸರಕಾರ ಅವರ ಉಡುಗೆ ತೊಡುಗೆಗೆ ವೆಚ್ಚ ಮಾಡುತ್ತಿಲ್ಲ. ಅವರ ಉಡುಗೆಯ ಖರ್ಚುಗಳು ಅವರ ಸಂಬಳದ ಹಣದಿಂದಲೇ ಹೊರತು, ಒಂದು ರೂಪಾಯಿಯನ್ನೂ ಸರಕಾರ ಈವರೆಗೆ ಮೋದಿಯ ಉಡುಗೆಗೆ ಬಳಸಿಲ್ಲ. ತಮ್ಮ ಉಡುಗೆಗೆ ಅವರು ಸರಕಾರವನ್ನು ಅವಲಂಬಿಸಿಲ್ಲ’ ಎಂದು ಧೃಢಪಡಿಸಿದೆ!

ಮೋದಿಯವರ ‘Class’ ಎನ್ನುವಂತಹ ಜೀವನಶೈಲಿಯೊಂದು ವಿಪಕ್ಷಗಳ ಕಣ್ಣು ಕುಕ್ಕಿದ್ದು ಸಹಜವೇ ಆದರೂ ಸಹ, ಮೋದಿಯ ಸೂಟಿನ ಖರ್ಚು ಸರಕಾರ
ಭರಿಸುತ್ತಲಿದೆ ಎಂಬ ಮಿಥ್ಯಾರೋಪವನ್ನು ಮಾಡುತ್ತಲೇ ಕಾಲ ಕಳೆದುಬಿಟ್ಟರು ವಿಪಕ್ಷಿಗಳು!

ಆರ್ ಟಿ ಐ ಕಾರ್ಯಕರ್ತರಾದ ರೋಹಿತ್ ಸಭರ್ವಾಲ್, ಮೋದಿಯವರ ಉಡುಗೆಯ ವರ್ಷದ ಖರ್ಚನ್ನು ಸರಕಾರ ಎಷ್ಟು ಭರಿಸುತ್ತಿದೆ ಎಂದು ಪ್ರಶ್ನೆ ಕೇಳಿ ಅರ್ಜಿ ಸಲ್ಲಿಸಿದ್ದರು. ಅದಲ್ಲದೇ, ಮಾಜಿ ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿಯವರ ಮಾರ್ಚ್ 19, 1998 ರಿಂದ ಮೇ 22, 2004 ರ ವರೆಗಿನ ಖರ್ಚನ್ನು ಹಾಗೂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಮೇ 22, 2004 ರಿಂದ ಮೇ 26, 2014 ರವರೆಗಿನ ಖರ್ಚಿನ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು.

ಮೋದಿಯದು ಸೂಟು ಬೂಟಿನ ಸರಕಾರ!”

ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಸರಕಾರವನ್ನು ‘ಸೂಟು ಬೂಟಿನ ಸರಕಾರ’ ಎಂದು ಹೀಗಳೆದಿದ್ದನ್ನೇ, ರಾಹುಲ್ ರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪಠಿಸಿದ್ದರು! ಮೋದಿಯ ವಿರುದ್ಧ ಮಿಥ್ಯಾರೋಪ ಮಾಡುವವರಿಗೆ ಸ್ವತಃ ರಾಹುಲ್ ರೇ ಅವಕಾಶ ನೀಡಿದಂತಾಗಿತ್ತು!

ಯಾವಾಗ, ರಾಷ್ಟ್ರೀಯ ಬ್ಯಾಂಕ್ ನೋಟು ನಿಷೇಧದ ಸಮಯದಲ್ಲಿ 500 ರೂ ಹಾಗೂ 1000 ರೂ ನೋಟುಗಳ ಜಮಾವಣೆಗೆ ಒಂದಷ್ಟು ನಿಯಮಗಳನ್ನು ಪ್ರಸ್ತುತಪಡಿಸಿದವೋ, ರಾಹುಲ್ ಗಾಂಧಿ ಕುದ್ದು ಹೋಗಿದ್ದರು! “ಮೋದಿ ತಮ್ಮ ಸೂಟು ಬದಲಾಯಿಸುವ ಹಾಗೆ, ರಾಷ್ಟ್ರೀಯ ಬ್ಯಾಂಕುಗಳು ತಮ್ಮ ನಿಯಮವನ್ನು ಬದಲಾವಣೆ ಮಾಡುತ್ತ ಹೋಗುತ್ತದೆಂದು” ಟೀಕಿಸಿದ್ದರು. ಆರ್ ಬಿ ಐ ಬ್ಯಾಂಕಿನ ಟ್ವೀಟೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿಗೆ ಭಾರತೀಯರೇ ಮರ್ಯಾದೆ ತೆಗೆದಿದ್ದರು.

ತೀರಾ ಇತ್ತೀಚೆಗೆ, ಮೋದಿಯ ಇನ್ನೊಂದು ಸೂಟು ಬಹಳ ಸದ್ದು ಮಾಡಿತು. ಇಲ್ಲಿಯವರೆಗೂ ಮೋದಿ ಧರಿಸಿದ ಬೆಲೆಬಾಳುವ ಉಡುಪುಗಳಿಗಿಂತ ಇದು ಬಹಳ ಬೆಲೆಯುಳ್ಳದ್ದು ಎನ್ನಲಾಯಿತು! ವಿಶೇಷವಾಗಿದ್ದ ಹಾಗೂ, ‘ನರೇಂದ್ರ ದಾಮೋದರ ದಾಸ್ ಮೋದಿ” ಎಂಬುದನ್ನೂ ವಸ್ತ್ರದಲ್ಲಿ ಕುಸುರಿಯಿಂದ ಬರೆಯಲಾಗಿತ್ತು. ಇದೊಂದೇ ಕಾರಣಕ್ಕೆ ವಿಪಕ್ಷಗಳು ದೊಡ್ಡ ಹೋರಾಟಕ್ಕೇ ಇಳಿದುಬಿಟ್ಟಿದ್ದರು!

ಆದರೆ, ಮೋದಿ ಸರಕಾರದ ಹಣವನ್ನು ದೋಚಿ ತಮ್ಮ ಮನೆಯ ಉದ್ಧಾರ ಮಾಡಲಿಲ್ಲ. ತನ್ನದೇ ಸ್ವಂತ ಸಂಬಳವನ್ನು ಬಳಸುವ ಮೋದಿ ಯಾವ ಸೂಟು
ಹಾಕಿದರೇನು?! ಅದಲ್ಲದೇ, ದೇಶದ ಪ್ರತಿನಿಧಿಯಾಗಿ, ಪ್ರಧಾನ ಮಂತ್ರಿಯಾಗಿ ಸ್ವಲ್ಪವಾದರೂ ‘ಘನತೆ’ ಎಂಬುದನ್ನು ಬೇಡವೆಂದರೂ ಅನುಸರಿಸಬೇಕಾಗಿ ಬಂದಾಗ, ತಪ್ಪೇನಿದೆ?!

ಅಷ್ಟಕ್ಕೂ, ಕಾಂಗ್ರೆಸ್ಸಿಗೆ ಮೋದಿಯ ವಸ್ತ್ರಗಳ ಬಗ್ಗೆ ಯಾಕಷ್ಟು ಕೋಪ?! ‘ಮೋದಿ’ ಯ ಶೈಲಿ ನೋಡಿ ಹೊಟ್ಟೆಯಲ್ಲಿ ಬೆಂಕಿಯೋ ಅಥವಾ, ರಾಹುಲ್
ಗಾಂಧಿಗಿರದ ಜೀವನ ಶೈಲಿಯ ಕೊರತೆಯನ್ನು ನೋಡಿಯೋ?!

ಇದೇ ಸೂಟನ್ನು ಸೂರತ್ ನಲ್ಲಿ ಹರಾಜಿಗಿಡಲಾಗಿತ್ತು! ಮೋದಿಯ ಸೂಟು, ಬರೋಬ್ಬರಿ 43,131,311 ರೂಗಳಿಗೆ ಮಾರಾಟವಾಯಿತು!! ಸೂಟನ್ನು ಕೊಂಡುಕೊಂಡವರು ಲಾಲ್ಜಿಭಾಯ್ ತುಳಸೀಭಾಯ್ ಪಟೇಲ್! ಸೂರತ್ ನ ಪ್ರಸಿದ್ಧ ವ್ಯಾಪಾರಿ! ಹರಾಜಿಗಿಟ್ಟ ಸೂಟಿನಿಂದ ಬಂದ ಹಣವನ್ನು ‘ಸ್ವಚ್ಛ ಭಾರತ್’ ಅಭಿಯಾನಕ್ಕೆ ಬಳಸಿಕೊಳ್ಳಲಾಯಿತು ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಜೀವನ್ ಗುಪ್ತಾ ತಿಳಿಸಿದ್ದರು!

ಹೋಗಲಿ! ರಾಹುಲ್ ಗಾಂಧಿಯ ಖರ್ಚೆಷ್ಟು ಗೊತ್ತಾ?!

ರಾಹುಲ್ ಗಾಂಧಿಯ ಕಾರುಗಳು ಬುಲೆಟ್ ಪ್ರೂಫ್! ಆಧುನಿಕ ತಂತ್ರಜ್ಞಾನವನ್ನು ಹೊಂದಿವೆ.. ರಾಹುಲ್ ಪ್ರಯಾಣಿಸುವ ಕಾರಿನ ಹಿಂದೆ ಮುಂದೆ ಎರಡೆರಡು ಕಾರುಗಳು ಇರುತ್ತವೆ. ಸ್ಫೋಟವಾದರೂ ಸಹ ತಡೆದುಕೊಳ್ಳುವ ಸಾಮರ್ಥ್ಯವಿರುವ ಕಾರುಗಳು! ಜಿಪಿಎಸ್ ಸೌಲಭ್ಯವನ್ನೂ ಹೊಂದಿರುವ ಕಾರುಗಳ ಕ್ಷಣಕ್ಷಣದ ಮಾಹಿತಿ ಮುಖ್ಯ ಕಚೇರಿಗೆ ಲಭ್ಯವಾಗುತ್ತಿರುತ್ತದೆ!

ರಾಹುಲ್ ಗಾಂಧಿಯ ಪ್ರತಿ ಕಾವಲು ಸಿಬ್ಬಂದಿಯ ಹತ್ತಿರ ಆಧುನಿಕ ಶಸ್ತ್ರಾಸ್ತ್ರಗಳಿವೆ. ರೈಫಲ್ಸ್, ಪಿಸ್ತೂಲುಗಳೆಲ್ಲ ಹೊರದೇಶಗಳಿಂದ ಆಮದು ಮಾಡಿಸಿಕೊಂಡಿರುವುದೇ! ರಿಂಗ್ ರೌಂಡ್ ತಂಡ, ಐಸೋಲೇಚನ್ ಕಾರ್ಡೋನ್ಸ್, ಸ್ಟೆರಿಲ್ ಝೋನ್, ಜಾಮ್ಮರ್ಸ್, ಮೆಡಿಕಲ್ ಯುನಿಟ್ಸ್ ಮತ್ತು ಎಮರ್ಜೆನ್ಸಿ ಹೆಲಿಕಾಪ್ಟರ್ಸ್ಗಳು ರಾಹುಲ್ ಗಾಂಧಿಯ ಭದ್ರತಾ ಸೌಲಭ್ಯಗಳು! ಕೇವಲ ಎಸ್ ಪಿ ಜಿ ಭದ್ರತೆಗೆ ವರ್ಷಕ್ಕೆ ಅದೆಷ್ಟೋ ಕೋಟಿ ರೂಗಳನ್ನು ಸುರಿಯಲಾಗುತ್ತದೆ!

ದೆಹಲಿಯಲ್ಲಿ, ಹಾಗೂ ವಿದೇಶಗಳಲ್ಲಿ ಹಲವಾರು ಬಂಗಲೆಗಳಿವೆ! ದೆಹಲಿಯಲ್ಲಿ ಸ್ವತಃ ಸರಕಾರ ಕೊಟ್ಟ ಇನ್ನೊಂದು ಬಂಗಲೆಯಿದೆ! ಇದಕ್ಕೆಲ್ಲ ಎಲ್ಲಿಂದ ಬಂದಿತು ಹಣ?! ಸಾರ್ವಜನಿಕರ ಹಿತಾಸಕ್ತಿಗೆ ಮೀಸಲಿಟ್ಟಿದ್ದ ಹಣವನ್ನು ಸ್ವ ಹಿತಾಸಕ್ತಿಗೆ ಬಳಸಿಕೊಂಡ ಇಂತಹ ಕಾಂಗಿಗಳ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ ಬಿಡಿ! ಸ್ವತಃ ಕೇಜ್ರೀವಾಲ್ ಕೂಡ ಉಸಿರೆತ್ತುವುದಿಲ್ಲ!

ಈಗ ಹೇಳಿ! ದೇಶಕ್ಕೆ ಬೇಕಾಗಿರುವುದು ಎಂತಹ ನಾಯಕರು?! ಮೋದಿ ಅಥವಾ ರಾಹುಲ್ ಗಾಂಧಿ?!

– ಅಜೇಯ ಶರ್ಮಾ

Editor Postcard Kannada:
Related Post