X

ಮೋದಿ ಇಷ್ಟೊಂದು ಕಲರ್ ಫುಲ್ ಬಟ್ಟೆ ಧರಿಸುತ್ತಾರಲ್ಲ.. ಹಣ ಯಾರು ಕೊಡ್ತಾರೆ ಮೋದೀಜೀ?! ಪ್ರಶ್ನಿಸಲೇ ಬೇಕು….

ನರೇಂದ್ರ ಮೋದಿಯವರ ರಾಜತಾಂತ್ರಿಕೆಯ ಯಶಸ್ಸನ್ನು ಸಹಿಸಲಾಗದಂತಹ ಬುದ್ದಿಜೀವಿಗಳು ಒಂದಲ್ಲ ಒಂದು ವಿಚಾರದಲ್ಲಿ ದೂಷಿಸಲೇ ಇರುತ್ತಿರುವುದು ತಿಳಿದೇ ಇದೆ. ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಾವು ತೊಡುವ ಬಟ್ಟೆಯ ವಿಚಾರದಲ್ಲಿ ಸದಾ ಸುದ್ದಿಯಾಗುತ್ತಿದ್ದು, ಮೋದಿ ಬೆಲೆ ಬಾಳುವ ಬಟ್ಟೆ ಧರಿಸ್ತಾರೆ ಎಂದು ವಿರೋಧ ಪಕ್ಷಗಳು ಆಗಾಗ ಟೀಕೆ ನಡೆಸುತ್ತವೆ. ಆದರೆ ಇದೀಗ ಮೋದಿ ಬಟ್ಟೆಗೆ ಯಾರು ಹಣ ನೀಡ್ತಾರೆ ಎನ್ನುವ ವಿಚಾರ ಬಹಿರಂಗವಾಗಿದೆ.

ಈ ಹಿಂದೆ 2017ರ ಜುಲೈನಲ್ಲಿ ಅರವಿಂದ ಕೇಜ್ರಿವಾಲ್ ಅವರು ನರೇಂದ್ರ ಮೋದಿಯವರ ಉಡುಪಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ್ದು, ತಾವು ಜಾಹೀರಾತಿಗೆ 526 ಕೋಟಿ ರೂ. ಕೊಟ್ಟೆ ಎಂದು ಆಪಾದನೆಗೆ ಸ್ಪಷ್ಟೀಕರಣ ನೀಡುವ ವೇಳೆ ಈ ವೆಚ್ಚವು ಪ್ರಧಾನಿ ನರೇಂದ್ರ ಮೋದಿ ಅವರ ಉಡುಪುಗಳಿಗೆ ಮಾಡುವ ವೆಚ್ಚಕ್ಕಿಂತ ಕಡಿಮೆ ಎಂದು ಕುಟುಕಿದ್ದರು.

ಅಷ್ಟೇ ಅಲ್ಲದೇ, “ಮೋದಿ ಒಮ್ಮೆ ಬಳಸಿದ ಉಡುಪನ್ನು ಮತ್ತೆ ಬಳಸುವುದಿಲ್ಲ. ಅವರ ಪ್ರತಿ ಉಡುಪಿಗೆ 2 ಲಕ್ಷ ರೂ. ವೆಚ್ಚವಾಗುತ್ತದೆ. ನಾನು ಮೋದಿಯವರ ಪ್ರತಿಯೊಂದು ಡ್ರೆಸ್ ಬಗ್ಗೆ ಲೆಕ್ಕ ಕೊಡುತ್ತೇನೆ. ಅವರು ಪ್ರತಿನಿತ್ಯ ಐದು ಬಾರಿ ಡ್ರೆಸ್ ಬದಲಾಯಿಸುತ್ತಾರೆ. ಅದಂರೆ ಪ್ರತಿದಿನ 10 ಲಕ್ಷ ರೂಪಾಯಿಗಳ ಡ್ರೆಸ್ ತೊಡುತ್ತಾರೆ. ಅವರು ಒಮ್ಮೆ ಧರಿಸಿದ ಬಟ್ಟೆಯನ್ನು ಒಗೆದು ಮತ್ತೆ ಹಾಕಿಕೊಳ್ಳುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಗೂಗಲ್‍ಗೆ ಹೋಗಿ ಮೋದಿ ಎಂದು ಟೈಪ್ ಮಾಡಿ. ಮೋದಿ ಭಾವಚಿತ್ರಗಳು ಕಂಡುಬರುತ್ತವೆ. ಯಾವುದೇ ಚಿತ್ರದಲ್ಲಿ ಒಂದು ಬಾರಿ ಹಾಕಿದ ಡ್ರೆಸ್ ಮತ್ತೊಂದು ಬಾರಿ ಕಾಣಿಸುವುದಿಲ್ಲ. ಅದರರ್ಥ 700 ದಿನಗಳ ಅಧಿಕಾರವಧಿಯಲ್ಲಿ 70 ಕೋಟಿ ರೂಪಾಯಿಗಳನ್ನು ಕೇವಲ ಬಟ್ಟೆಗಾಗಿ ಖರ್ಚು ಮಾಡಿದ್ದಾರೆ. ಇತರ ಐದು ಕೋಟಿ ರೂಪಾಯಿಗಳನ್ನು ಬೇರೆ ಬೇರೆ ಬಟ್ಟೆಗಳಿಗಾಗಿ ವೆಚ್ಚ ಮಾಡಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದರು.

ಇನ್ನು ಕಳೆದ ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಹದಿನಾರು ಬಾರಿ ಬಟ್ಟೆ ಬದಲಾಯಿಸಿದ್ದಾರೆಂದು ಕಾಂಗ್ರೆಸ್ ನ ಅಧ್ಯಕ್ಷರಾದ ರಾಹುಲ್ ಗಾಂಧಿ ಬಿಹಾರದಲ್ಲಿ ಲೆಕ್ಕ ಹೇಳಿದ್ದರು. ಅಷ್ಟೇ ಅಲ್ಲದೇ, ಮೋದಿ ಅಧಿಕಾರಕ್ಕೆ ಬಂದ ನಂತರ ತಮ್ಮ ವಿದೇಶ ಪ್ರವಾಸ ಹಾಗೂ ಆ ವೇಳೆ ತಾನು ತೊಡುವ ಬಟ್ಟೆಯ ಬಗ್ಗೆಯೇ ಯೋಚಿಸುವ ‘ಶೋಕಿ’ ಅವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಮೋದಿಗೆ ಬಟ್ಟೆಗಳ ಶೋಕಿ….. ಮೋದಿಗೆ ಬಣ್ಣದ, ಬಟ್ಟೆಗಳ ಶೋಕಿ ಜಾಸ್ತಿ. ಅವರ ಸುತ್ತ ಕಾಪೆರ್Çೀರೇಟ್ ದಿಗ್ಗಜರೇ ಇರುವುದನ್ನು ಮಾತ್ರ ನೀವು ನೋಡಿದ್ದೀರಿ. ರೈತರ ಜೊತೆ ಇರುವುದನ್ನು ನೋಡಿಲ್ಲ. ತನ್ನ ಡ್ರೆಸ್ ಕೋಡಿನ ಬಗ್ಗೆ ಮೋದಿಗೆ ಶೋಕಿ ಜಾಸ್ತಿ ಎಂದೆಲ್ಲಾ ಬೊಗಳೆ ಬಿಟ್ಟಿದ್ದರು.

ನರೇಂದ್ರ ಮೋದಿಯವರು ದಿನದಲ್ಲಿ ಹಲವು ಬಾರಿ ಬಟ್ಟೆ ಬದಲಾಯಿಸುವ ಬಗ್ಗೆ ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ ಅಲ್ಲದೇ ಸಾಕಷ್ಟು ಮಂದಿ ಕುಹಕವಾಡಿದ್ದರು. ಅಷ್ಟೇ ಅಲ್ಲದೇ ಇಷ್ಟೊಂದು ಬಟ್ಟೆಗಳಿಗೆ ಸರ್ಕಾರದ ಹಣ ವೆಚ್ಚವಾಗುತ್ತಿದೆ ಎಂಬರ್ಥದ ಮಾತುಗಳೂ ಕೇಳಿ ಬರುತ್ತಿರುತ್ತವೆ. ಆದರೆ ಇತ್ತೀಚಿನ ಆರ್ ಟಿಐ ಅರ್ಜಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರ ಬಟ್ಟೆಗಳಿಗೆ ಸ್ವತಃ ಅವರೇ ವ್ಯಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಹೌದು…. ಪ್ರಧಾನಿ ನರೇಂದ್ರ ಮೋದಿಯವರು ತಾವು ತೊಡುವ ಬಟ್ಟೆಯ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದಾರಲ್ಲದೇ ಈ ಬಟ್ಟೆಗಳಿಗೆ ಸರ್ಕಾರದ ಹಣ ವೆಚ್ಚವಾಗುತ್ತಿದೆ ಎಂಬ ಅರ್ಥಗಳಲ್ಲಿ ಬುದ್ದಜೀವಿಗಳು ಕೊಂಕು ಮಾತುಗಳಾನ್ನಾಡುತ್ತಿದ್ದು, ಇದೀಗ ಈ ವಿಚಾರಕ್ಕೆ ಪೂರ್ಣವಿರಾಮ ಇಟ್ಟಂದಾಗಿದೆ.

ಆದರೆ ಇತ್ತೀಚಿನ ಆರ್ ಟಿಐ ಅರ್ಜಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರ ಬಟ್ಟೆಗಳಿಗೆ ಸ್ವತಃ ಅವರೇ ವ್ಯಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆರ್‍ಟಿಐ ಕಾರ್ಯಕರ್ತ ರೋಹಿತ್ ಸಭರ್ವಾಲ್ ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ಪ್ರಧಾನಿ ಸಚಿವಾಲಯ ಸ್ಪಷ್ಟಪಡಿಸಿದ್ದು, ಪ್ರಧಾನಿಯವರ ಬಟ್ಟೆ ಬರೆಗಳಿಗೆ ಸರ್ಕಾರದಿಂದ ಪಾವತಿಸುವುದಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ, ಮೋದಿ ತಮ್ಮ ಸಂಬಳದಲ್ಲಿ ಬಟ್ಟೆ ಖರೀದಿ ಮಾಡುತ್ತಾರೆಂದು ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೋಹಿತ್ ಈ ಹಿಂದೆ ಕೂಡ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ವೈಯಕ್ತಿಕ ಖರ್ಚಿನ ಬಗ್ಗೆ ಪ್ರಶ್ನೆ ಮಾಡಿದ್ದರು. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ವರ್ಷಕ್ಕೆ ಎಷ್ಟು ಖರ್ಚು ಮಾಡ್ತಾರೆ ಎಂಬ ಬಗ್ಗೆಯೂ ರೋಹಿತ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯ ಉತ್ತರ ನೀಡಿದೆ. ಪಿಎಂ ಬಟ್ಟೆ ಖರ್ಚನ್ನು ತಾವೇ ನೀಡುತ್ತಾರೆಂದು ಅಧಿಕಾರಿಗಳು ಹೇಳಿದ್ದಾರಲ್ಲದೇ ಈ ವೇಳೆ ಸರ್ಕಾರದಿಂದ ಯಾವುದೇ ಹಣ ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

– ಅಲೋಖಾ

Editor Postcard Kannada:
Related Post