X

ಮೋದಿ ಕೆಳ ಜಾತಿಯಲ್ಲಿ ಹುಟ್ಟಿದ್ದೇ ತಪ್ಪಾ?! ನೀಚ ಜಾತಿಯವನೆಂದು ಜರಿಯುವುದು ಸರಿನಾ ಕಾಂಗ್ರೆಸ್ಸಿಗರೇ?!

ಕಾಂಗ್ರೆಸ್ಸಿನವರ ಮಾನಸಿಕ ದಿವಾಳಿತನದ ಪರಮಾವಧಿ!!

“ಮೋದಿಯೊಬ್ಬ ನೀಚ ವ್ಯಕ್ತಿ, ಈತನಲ್ಲಿ ಸಭ್ಯತೆಯಿಲ್ಲ, ಇಂಥ ಸಂದರ್ಭದಲ್ಲಿ ಇಂಥ ಹೊಲಸ್ಸು ರಾಜಕೀಯ ಮಾಡೋ ಅವಶ್ಯಕತೆಯಾದರೂ ಏನಿದೆ?”
ಹೀಗೆ ಹೇಳಿ ಮತ್ತೆ ಇರುವೆ ಬಿಟ್ಟುಕೊಂಡ ಅಯ್ಯರ್!!!

ಯಾರನ್ನ ನೀಚ ಅಂತ ಕರೀಬೇಕಾಗಿತ್ತೋ ಅವರನ್ನ ನೀಚ ಅನ್ನೋಕೆ ಕಾಂಗ್ರೆಸ್ಸಿನವರಿಗೆ ಮನಸ್ಸಾಕ್ಷಿ ಒಪ್ಪಲ್ಲ ಅನ್ಸತ್ತೆ, ಬಾಯಿಗೆ ಬಂದಂತೆ ಬೊಗಳೋದು ಕಾಂಗ್ರೆಸ್ಸಿನವರ ಮಾನಸಿಕ ದಿವಾಳಿತನದ ಪರಮಾವಧಿಯನ್ನ ತೋರಿಸುತ್ತೆ.

ಅಂತಹ ಮಾನಸಿಕ ದಿವಾಳಿತನದಿಂದ ಬಳಲುತ್ತಿರೋ ವ್ಯಕ್ತಿಗಳಲ್ಲಿ ಮೊದಲನೇ ಸಾಲಲ್ಲಿ ನಿಲ್ಲೋನೇ ಮಣಿಶಂಕರ್ ಅಯ್ಯರ್ ಅನ್ನೋ ಹೊಲಸ್ಸು ಬಾಯಿಯ ಮನುಷ್ಯ.

ಬಾಯಿ ಬಿಟ್ಟರೆ ಸಾಕು ಒಂದಿಲ್ಲೊಂದು ಕಚಡಾ ಮಾತುಗಳನ್ನಾಡೋದೇ ಈ ಮಣಿಶಂಕರನ ಚಾಳಿ.

ಈತ ಕಾಂಗ್ರೆಸ್ಸನ್ನ ಗೆಲ್ಲಿಸೋಕೆ ಇವನನ್ನ ಕಾಂಗ್ರೆಸ್ ತಮ್ಮ ಪಕ್ಷದಲ್ಲಿಟ್ಟುಕೊಂಡಿದೆಯೋ ಅಥವ ಮೋದಿ ಹಾಗು ಬಿಜೆಪಿಯನ್ನ ಗೆಲ್ಲಿಸೋಕೋ ಅನ್ನೋದು ಸ್ವತಃ ಕಾಂಗ್ರೆಸ್ ಗೇ ಅರ್ಥವಾಗ್ತಿಲ್ಲ ಅನ್ಸತ್ತೆ.

ಮೊದಲೇ ಹೋದಲ್ಲಿ ಬಂದಲ್ಲಿ ಚುನಾವಣೆ ಸೋಲುತ್ತ ಕಂಗೆಟ್ಟುಹೋಗಿರೋ ಕಾಂಗ್ರೆಸ್ಸಿಗೆ ಮಣಿಶಂಕರ್ ಅಯ್ಯರ್ ನೀಡೋ ಹೇಳಿಕೆಗಳು ಮತ್ತಷ್ಟು ಸಂಕಷ್ಟದ ಸುಳಿಯಲ್ಲಿ ಸಿಲುಕಿಸುತ್ತಿರೋದಂತೂ ಸುಳ್ಳಲ್ಲ.

ಮಾತಾಡ್ತಾ ಮಾತಾಡ್ತಾ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಮಣಿಶಂಕರ್ ಅಯ್ಯರ್ ಹೇಳ್ತಾನೆ “ಈ(ಮೋದಿ) ಮನುಷ್ಯ ನೀಚ ವ್ಯಕ್ತಿ, ಈತನಲ್ಲಿ ಸಭ್ಯತೆಯಿಲ್ಲ, ಇಂಥ ಸಂದರ್ಭದಲ್ಲಿ ಇಂಥ ಹೊಲಸ್ಸು ರಾಜಕೀಯ ಮಾಡೋ ಅವಶ್ಯಕತೆಯಾದರೂ ಏನಿದೆ?”

ಅಯ್ಯರ್ ಅಷ್ಟೇ ಈ ನೀಚ ಅನ್ನೋ ಪದ ಬಳಕೆ ಮಾಡಿದ್ದ ಅಂತೇನಿಲ್ಲ.

ಇದಕ್ಕೂ ಮೊದಲು ಅಂದರೆ 2014 ರ ಚುನಾವಣಾ ಪ್ರಚಾರ ಭಾಷಣದ ವೇಳೆ ಸೋನಿಯಾ ಗಾಂಧಿ ಕೂಡ “ಮೋದಿ ನೀಚ ವಿಚಾರಗಳು ಅವರಿಗೆ ಶೋಭೆ ತರಲ್ಲ” ಅನ್ನೋ ಹೇಳಿಕೆ ಕೊಟ್ಟಿದ್ದಳು.

ಪ್ರಿಯಾಂಕಾ ವಾದ್ರಾ ಗಾಂಧಿ “ಮೋದಿಯದ್ದು ನೀಚ ರಾಜನೀತಿ” ಅಂತ ಮೋದಿಯನ್ನ ನೀಚ ಅನ್ನೋ ಕೀಳುಮಟ್ಟದ ಶಬ್ದದಿಂದ ನಿಂದಿಸಿದ್ದಳು.

ಅಯ್ಯರ್, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಡಿ ಕಾಂಗ್ರೆಸ್ ಪಕ್ಷದ ದಾಮಾದ್(ಅಳಿಯ) ರಾಬರ್ಟ್ ವಾದ್ರಾ ಕೂಡ ಮೋದಿಯನ್ನ ನೀಚ ಅನ್ನೋಕೆ ಹಿಂದೆ ಬಿದ್ದಿಲ್ಲ.

ಅಯ್ಯರ್ ಈ ತರಹ ಹೇಳಿಕೆ ನೀಡಲು ಕಾರಣ ಪ್ರಧಾನಿ ಮೋದಿ ಕಾಂಗ್ರೆಸ್ಸನ್ನ ಪ್ರಶ್ನಿಸುತ್ತ ” ಕಾಂಗ್ರೆಸ್ಸಿಗೆ ಈಗ ಬಾಬಾಸಾಹೇಬರಿಗಿಂತ ಜಾಸ್ತಿ ಬಾಬಾ ಭೋಲೆನಾಥನ ಮೇಲೆ ಪ್ರೀತಿ ಜಾಸ್ತಿಯಾಗಿದೆ” ಅಂತ ಹೇಳಿದ್ದಾಗಿತ್ತು.

ಕಾಂಗ್ರೆಸ್ಸಿನವರು ಅಂಬೇಡ್ಕರ್ ರವರನ್ನ ಗುತ್ತಿಗೆ ತಗೊಂಡು ಬಿಟ್ಟಿದೀವಿ ಅಂತಂದುಕೊಂಡಿದ್ದಾರೆ ಅನ್ಸತ್ತೆ.

ಪ್ರಧಾನಿ ಮೋದಿ ಬಗ್ಗೆ ತುಚ್ಛವಾಗಿ ಈ ತರಹದ ಹೇಳಿಕೆ ನೀಡೋ ಮುನ್ನ ಅಯ್ಯರ್ ಹೇಳಿರೋ ಮುಂಚಿನ ಮಾತುಗಳನ್ನ ಕೇಳಿದ್ರೆ ನಗು ಬರುತ್ತೆ.

“ಅಂಬೇಡ್ಕರ್ ಜೀ ಗೆ ಹೆಗಲು ಕೊಟ್ಟು ನಿಂತಿದ್ದು ಯಾರು ಗೊತ್ತಾ? ಅದು ನಮ್ಮ ನೆಹರು”

ಈತ ಹೇಳಿದ್ದು ನಿಜವಾ? ನಿಜವಾಗಿಯೂ ನೆಹರು ಅಂಬೇಡ್ಕರ್ ರವರ ಬೆಂಬಲಕ್ಕೆ ನಿಂತಿದ್ದರಾ?

ಜಮ್ಮು ಕಾಶ್ಮೀರಕ್ಕೆ ಸಂವಿಧಾನದ ಆರ್ಟಿಕಲ್ 370 ವಿಧಿಯಡಿ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ರೀತಿಯ ಕಾನೂನು ಸಚಿವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಖಡಾಖಂಡಿತವಾಗಿ ವಿರೋಧಿಸಿದರೂ ಅದನ್ನೊಪ್ಪದೆ ಕಾಶ್ಮೀರಕ್ಕೆ 370 ನೆ ಕಲಂ ನೀಡಿದ ಮಹಾಶಯನ್ಯಾರು?

ಅಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಡಾ. ಅಂಬೇಡ್ಕರ್‍ರನ್ನು ಕಾಂಗ್ರೆಸ್ ಅಧ್ಯಕ್ಷರಾಗುವುದರಿಂದ ತಡೆದಿದ್ಯಾರು?

ಸ್ವಾತಂತ್ರ್ಯಾನಂತರ ನೆಹರು ಮಂತ್ರಿಮಂಡಲದಿಂದ ಅಂಬೇಡ್ಕರ್ ರಾಜಿನಾಮೆ ನೀಡಿ ಹೊರಹೋಗಿದ್ದೇಕೆ?

1952 ರ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ರವರ ವಿರುದ್ಧ ಪ್ರಚಾರ ಮಾಡಿ ಹೀನಾಯವಾಗಿ ಸೋಲಿಸಿದ್ಯಾರು?

1954 ರಲ್ಲಿ ಲೋಕಸಭೆಗೆ ಭಂಡಾರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಎರಡನೇ ಪ್ರಯತ್ನದಲ್ಲಿ ಅಂಬೇಡ್ಕರ್ ಮತ್ತೆ ಸೋಲಲು ಕಾರಣವಾದರೂ ಯಾರು?

ಯೆಸ್ ಈಗ ಅಯ್ಯರ್ ಪುಂಖಾನುಪುಂಖವಾಗಿ ಹೊಗಳುತ್ತಿರೋ ಅದೇ ನೆಹರು ಅಂಬೇಡ್ಕರ್ ರ ವಿರುದ್ಧವಾಗಿ ಪ್ರಚಾರ ಮಾಡಿ ಅಂದು ಅವರನ್ನ ಸೋಲಿಸಿದ್ದ.

“Joining Congress will be suicidal” ಅಂತ ಅಂಬೇಡ್ಕರ್ ಹೇಳಿದ್ದು,

ಹೀಗೆ ಹತ್ತು ಹಲವು ಇತಿಹಾಸಗಳ, ತಮ್ಮ ನಾಯಕನ, ಪಕ್ಷದ ಬಗ್ಗೆಯೇ ಇತಿಹಾಸದ ಅರಿವಿರದ ಅರೆಬೆಂದ ಬುದ್ಧಿಯ ಕಾಂಗ್ರೆಸ್ಸಿಗರು ಇತಿಹಾಸವನ್ನ ತಮಗೆ ಬೇಕಾದ ರೀತಿಯಲ್ಲಿ ತಿರುಚಿಯೇ 65 ವರ್ಷಗಳ ಕಾಲ ದೇಶದ ಜನರನ್ನ ಮೂರ್ಖರನ್ನಾಗಿಸಿದ್ದು. ಆದರೆ ಈಗ ಇವರ ಆಟ ನಡೆಯೊಲ್ಲ.

ಜನ ಜಾಗೃತರಾಗಿದಾರೆ, ಅದು ಗೊತ್ತಿದ್ದೂ ಕಾಂಗ್ರೆಸ್ಸಿಗರು ಮತ್ತೆ ತಮ್ಮ ಹಳೆ ಚಾಳಿಯನ್ನೇ ಮುಂದುವರೆಸಿಕೊಂಡು ಹೋಗ್ತಿದಾರೆ.

ಈಗ ಪ್ರಧಾನಿ ಮೋದಿಯನ್ನ ನೀಚ ಅಂತ ಕರೆದು ಇರುವೆ ಬಿಟ್ಟುಕೊಂಡಿರೊ ಈ ಮಣಿಶಂಕರ್ ಅಯ್ಯರ್ ಮುಂಚೆಯೂ ಇಂತಹ ಹೇಳಿಕೆ ನೀಡಿದ್ದ

* ಎಲೆಕ್ಷನ್(2014) ಮುಗೀಲಿ ಅದಾದ್ಮೇಲೆ ಕಾಂಗ್ರೆಸ್ ಕಛೇರಿಗ್ ಬಂದು ಮೋದಿ ಟೀ ಮಾರಲಿ

* ಮೋದಿ ‘ಚಾಯ್ ವಾಲಾ’

* ನೀವು(ಪಾಕಿಸ್ತಾನದ) ಬೆಂಬಲ ನೀಡದ್ರೆ ಮೋದಿಯನ್ನ ಸೋಲಿಸಬಹುದು (ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಹೇಳಿಕೆ ನೀಡಿದ್ದು)

ಬಹುಶಃ ತಮ್ಮ ನಾಯಕರನ್ನ ನೀಚರು ಅಂತ ಕರೆಯೋಕೆ ಭಯವಾಗಿ ಅವರ ಮೇಲಿನ ಕೋಪವನ್ನ ತೀರಿಸಿಕೊಳ್ಳೋಕೆ ಅಯ್ಯರ್ ಈ ರೀತಿಯ ರಿವೇಂಜ್ ತಗೋಂತಿದಾನೇನೋ ಪಾಪ!!

– Vinod Hindu Nationalist

Editor Postcard Kannada:
Related Post