X

ಮೋದಿ ಬಗ್ಗೆ ಸುಳ್ಳು ಬಿತ್ತುವ ಗಂಜಿಗಿರಾಕಿಗಳ ಮಧ್ಯೆ ರತನ್ ಟಾಟಾರವರು ಮೋದಿಯವರನ್ನು ಹೊಗಳಿದ್ಯಾಕೆ?!!

ಗಂಜಿಗಿರಾಕಿಗಳಿಗೆ ನಿಜವಾಗಲೂ ನಾಚಿಕೆಯಾಗಬೇಕು… ಮಾತಾಡಲು ಮೈಕ್ ಸಿಗುತ್ತೆ ಅಂತ ಸಿಕ್ಕ ಸಿಕ್ಕಲ್ಲಿ ಮೋದಿಯವರ ಬಗ್ಗೆ ಟೀಕೆ ಮಾಡುತ್ತಾ ಹೊಟ್ಟೆ
ಹೊರೆದುಕೊಳ್ಳುವ ಬುದ್ದಿಜೀವಿಗಳಿಗೆ ದೇಶದ ಬಗ್ಗೆ ಚಿಂತನೆಯೇ ಇಲ್ಲವೆನ್ನುವುದು ಸ್ಪಷ್ಟ. ಮೋದಿಯವರ ಯೋಜನೆಗಳ ಬಗ್ಗೆ ಯಾವುದೇ ಅಧ್ಯಯನ ಮಾಡದೆ ಜನರಲ್ಲಿ ಸುಳ್ಳನ್ನು ಬಿತ್ತುತ್ತಾ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವ ಗಂಜಿಗಿರಾಕಿಗಳಿಗೆ ಭಾರತದ ಯಶಸ್ವೀ ಉದ್ಯಮಿಯೊಬ್ಬರು ಮುಖದ ಮೇಲೆ ಹೊಡೆದಂತೆ ಮಾತಾಡಿದ್ದಾರೆ. ಒಬ್ಬ ಉದ್ಯಮಿಯಾದವನಿಗೆ ಮೋದಿಯವರ ಯೋಜನೆಗಳು ಇಷ್ಟವಾಗಿದೆ ಎಂದರೆ ಆ ಯೋಜನೆಗಳು ಖಂಡಿತಾ ಯಶಸ್ವಿಗೊಂಡು ಭವಿಷ್ಯದಲ್ಲಿ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ರತನ್ ಟಾಟಾ.. ಇವರ್ಯಾರು ಗೊತ್ತೇ? `ಟಾಟಾ ಸನ್ಸ್’ ಸಮೂಹದ ಅಧ್ಯಕ್ಷ. ಸಮಕಾಲೀನ ಭಾರತದ ವಸ್ತುಸ್ಥಿತಿಯನ್ನು ಪ್ರಸ್ತುತಪಡಿಸಿ, ಭವಿಷ್ಯದ ಭಾರತ
ಸ್ತಿತಿಗತಿಯ ಬಗ್ಗೆ ಸ್ಫುಟವಾದ ಮಾತುಗಳಲ್ಲಿ ತನ್ನ ಅಭಿಪ್ರಾಯಗಳನ್ನು ಅಭಿವ್ಯಕ್ತಿಪಡಿಸಿದ ರತನ್ ಟಾಟಾ ಮೋದಿಯ ಆಡಳಿತದ ದೂರದೃಷ್ಟಿಯ ಬಗ್ಗೆ ತುಲನಾತ್ಮಕ ವಿಶ್ಲೇಷಣೆಗಳ ಮೂಲಕ ಕೊಂಡಾಡಿದ್ದಾರೆ. ಭಾರತದ ಹಿಂದಿನ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಕಣ್ಣಾರೆ ಕಂಡಿದ್ದ ರತನ್ ಟಾಟಾ ಅವರಿಗೆ ಭಾರತದ ಮುಂದಿನ ಭವಿಷ್ಯ ಅಮೋಘವಾಗಿರುವ ಬಗ್ಗೆ ವಿಶ್ಲೇಷಿಸಿರುವುದರಿಂದ ಈಗಲೇ ಭಾವೀ ಭಾರತದ ಬಗ್ಗೆ ಅರ್ಥೈಸಿಕೊಳ್ಳಬಹುದು. ರತನ್ ಕಣ್ಣುಗಳಲ್ಲಿ ನರೇಂದ್ರ ಮೋದಿ ಭಾವೀ ಭಾರತದ ನಿರ್ಮಾತೃ ಎಂಬುವುದು ಸ್ಪಷ್ಟವಾಗಿದೆ. ವಿಶ್ವದ ಶ್ರೀಮಂತರ ಪೈಕಿ ಅಗ್ರ ಸ್ಥಾನದಲ್ಲಿರುವ ರತನ್ ಟಾಟಾ ಯಾವುದಾದರೂ ಒಂದು ಮಾತಾಡಿದರೂ ಸಹ ಅದಕ್ಕೆ ತೂಕವಿದೆ. ಗಂಜಿಗಿರಾಕಿಗಳು ಮಾತಾಡುವುದಕ್ಕೂ ಯಶಸ್ವೀ ಪುರುಷರು ಮಾತಾಡುವುದಕ್ಕೂ ವ್ಯತ್ಯಾಸವಿದೆ. ಆದ್ದರಿಂದ ರತನ್ ಜೀ ಅವರಂತಹಾ ಯಶಸ್ವೀ ಪುರುಷನ ಮೋದಿ ಬಗೆಗಿನ ಮಾತುಗಳನ್ನು ಭಾರತದ ಭವಿಷ್ಯವಾಣಿ ಎಂದು ಪರಿಗಣಿಸಬಹುದು.

ಸಿಎನ್‍ಬಿಸಿ ಟಿವಿ 18 ವಾಣಿಜ್ಯ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರತನ್ ಟಾಟಾ ಅವರು ಅವರು ಮೋದಿಯವನ್ನು ಬಹುವಾಗಿ ಪ್ರಶಂಸಿಸಿದ್ದಾರೆ. ನರೇಂದ್ರ ಮೋದಿ ಅವರಿಗೆ ಭಾರತವನ್ನು ರೂಪಾಂತರಿಸುವ ಅವಕಾಶ ನೀಡಬೇಕು, ಏಕೆಂದರೆ ಅವರು ನವಭಾರತ ನಿರ್ಮಾಣದ ದೃಷ್ಟಾರತೆಯನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಗೆಲ್ಲಿಸಿ ಪ್ರಧಾನಿ ಗದ್ದುಗೆಯಲ್ಲಿ ಕುಳ್ಳಿರಿಸುವಂತೆ ಮಾಡಿದ ವಿನಂತಿ ಎಂದೇ ಅರ್ಥ ಮಾಡಿಕೊಳ್ಳಬಹುದು.

ನರೇಂದ್ರ ಮೋದಿಯವರ ಆಡಳಿತ ದೇಶದ ಉದ್ಯಮಿಗಳಿಗೆ ಪೂರಕವಾಗಿ ಕೆಲಸ ಮಾಡುವುದರಿಂದ ಹೊಸ ಹೊಸ ಉದ್ಯಮಗಳನ್ನು ಮಾಡಲು ಯಾವುದೇ ಅಡೆತಡೆ ಇರುವುದಿಲ್ಲ. ಆದರೆ ಹಿಂದೆ ಭಾರತವನ್ನು ಆಳುತ್ತಿದ್ದ ಕಾಂಗ್ರೆಸ್ ಸರಕಾರ ಉದ್ಯಮಿಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿರಲಿಲ್ಲ. ಭಾರತದಲ್ಲಿ ಉದ್ಯಮವನ್ನು ಸ್ಫಾಪಿಸುವುದೆಂದರೆ ಅದೊಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಇದರ ಹೊಡೆತ ಸ್ವತಃ ರತನ್ ಜೀ ಅವರಿಗೂ ತಟ್ಟಿರಬಹುದು. ಕಾಂಗ್ರೆಸ್ ಸರಕಾರ ಭ್ರಷ್ಟಾಚಾರವನ್ನೇ ನೆಚ್ಚಿಕೊಂಡು ಬರುತ್ತಿದ್ದರಿಂದ ಭಾರತದ ಅಭಿವೃದ್ಧಿ ಸಂಪೂರ್ಣವಾಗಿ ನೆಲಕಚ್ಚಿತ್ತು. ಯಾವುದೇ ಉದ್ಯಮ ಆರಂಭಿಸಬೇಕಿದ್ದರೂ ಅದಕ್ಕೆ ನೂರಾರು ಕಾರ್ಯವಿಧಾನಗಳಿದ್ದವು. ಇವುಗಳನ್ನು ಪೂರೈಸಿ ಉದ್ಯಮ ಆರಂಭಿಸಬೇಕಿದ್ದರೆ ಆ ಉದ್ಯಮಿಗೆ ಆಸಕ್ತಿಯೇ ಹೊರಟುಹೋಗಿ ಉದ್ಯಮದ ಆಸೆಯನ್ನೇ ಬಿಟ್ಟಿರಬಹುದು. ಅಲ್ಲದೆ ದೇಶದಲ್ಲಿ ಲಕ್ಷಾಂತರ ಮಂದಿ ಪ್ರತಿಭಾಶೀಲರಿದ್ದರೂ ಅವರಿಗೆ ಸರಕಾರದ ವತಿಯಿಂದ ಯಾವುದೇ ನೆರವನ್ನು ನೀಡಲಿಲ್ಲ. ಇದರಿಂದಾಗಿ ಭಾರತದ ಲಕ್ಷಾಂತರ ಮಂದಿ ಹೊರದೇಶದಲ್ಲಿ ನೆಲೆನಿಂತು ಆ ದೇಶದ ಉನ್ನತಿಗೆ ದುಡಿದರು. ಮಾನವನ್ನು ಸಂಪನ್ಮೂಲವನ್ನಾಗಿ ಮಾಡದ ಕಾಂಗ್ರೆಸ್ ಸರಕಾರ ಪ್ರತಿಭಾಪಲಾಯನಕ್ಕೆ ಅವಕಾಶ ಮಾಡಿಕೊಟ್ಟಿತು. ಅಂದು ರತನ್ ಟಾಟಾ ಟಾಟಾ ಮೋಟಾರ್ಸ್ ಎಂಬ ಉದ್ಯಮವನ್ನು ಆರಂಭಿಸದೇ ಇದ್ದಿರುತ್ತಿದ್ದರೆ ನಾವೆಲ್ಲಾ ಇಂದಿಗೂ ಪ್ರಮುಖ ವಾಹನಗಳಿಗಾಗಿ ಬೇರೆದೇಶವನ್ನು ಅವಲಂಬಿಸಬೇಕಿತ್ತು.

ನರೇಂದ್ರ ಮೋದಿಯವರು ದೇಶದ ರಫ್ತು ಹೆಚ್ಚಾಗಬೇಕೆಂಬ ಕನಸಲ್ಲಿ ದೇಶೀಯವಾಗಿ ಅನೇಕ ಕೈಗಾರಿಕೆ, ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮೇಕ್ ಇನ್
ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮುಂತಾದ ಯೋಜನೆಗಳ ಮೂಲಕ ಕೈಗಾರಿಕಾ ಕ್ರಾಂತಿ ನಡೆಸಲಾಗುತ್ತಿದೆ. ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆಗಳು ಇಂದು ಯಾವುದೇ ಪ್ರಭಾವ ಬೀರದಿದ್ದರು ಮುಂದಿನ ಐದು ವರ್ಷಗಳ ಬಳಿಕ ಅದರ ಪ್ರತಿಯೊಬ್ಬ ಭಾರತೀಯರೂ ಸಿಗುತ್ತದೆ. ನರೇಂದ್ರ ಮೋದಿಯವರನ್ನು ದೂರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನರೇಂದ್ರ ಮೋದಿಯವರನ್ನು ರತನ್ ಟಾಟಾ ಪ್ರಶಂಸಿಸಲು ಇದೂ ಒಂದು ಕಾರಣ.

ರತನ್ ಅವರು ನರೇಂದ್ರ ಮೋದಿ ಅವರ ಅತ್ಯಂತ ತ್ವರಿತಗತಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬಹುವಾಗಿ ಪ್ರಶಂಸಿಸಿದ್ದಾರೆ.
ಉದ್ಯಮಿಯಾದವನು ಯೋಚಿಸುವುದೂ ಇದನ್ನೇ. ಕಾಲಹರಣ ಮಾಡುವುದು ಉದ್ಯಮಿಗಳಿಗೆ ಪೂರಕವಲ್ಲ. ಇನ್ನೊಂದು ಕಡೆ ಟಾಟಾ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ನಾನು ಅವರ ಕಾರ್ಯ ವೈಖರಿ, ಆಡಳಿತ ದಕ್ಷತೆಗಳನ್ನು ಗಮನಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿ ಉದಾಹರಣೆಯೊಂದನ್ನು ನೀಡಿದ್ದಾರೆ. ಟಾಟಾ ನ್ಯಾನೋ ಕಾರ್ ಫ್ಯಾಕ್ಟರಿಯನ್ನು ಪಶ್ಚಿಮ ಬಂಗಾಲದಿಂದ ಗುಜರಾತ್‍ಗೆ ಸ್ಥಳಾಂತರಿಸುವುದಕ್ಕೆ ಕೇವಲ ಮೂರು ದಿನಗಳಲ್ಲಿ ಅಗತ್ಯವಿದ್ದ ಭೂಮಿಯನ್ನು ನೀಡಿ ನೆರವಾದ ಮೋದಿಯನ್ನು ರತನ್ ಟಾಟಾ ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಪಶ್ವಿಮ ಬಂಗಾಳದಲ್ಲಿ ಕಂಪನಿ ನಿರ್ಮಿಸಬೇಕೆಂದು ನಿರ್ಧರಿಸಿದಾಗ ಅಲ್ಲಿನ ಕಮ್ಯುನಿಸ್ಟ್ ಸರಕಾರದಿಂದ ಸಾಕಷ್ಟು ಅಡೆತಡೆ ಎದುರಾಗಿತ್ತು. ಅದಕ್ಕಾಗಿ ಅವರು ಕಂಪನಿಯನ್ನು ಸ್ಥಳಾಂತರಿಸಲು ನಿರ್ಧರಿಸಿದ್ದರು. ಕರ್ನಾಟಕದಲ್ಲಿ ಆರಂಭಿಸುವ ಮಾತುಗಳೂ ಕೇಳಿಬಂದಿದ್ದವು. ಆದರೆ ಇಲ್ಲಿನ ಕಾಂಗ್ರೆಸ್ ಸರಕಾರ ಅದಕ್ಕೆ ಸೂಕ್ತ ಸ್ಥಳಾವಕಾಶ ಕೊಡಲು ವಿಳಂಬಿಸಿತು. ಕೊನೆಗೆ ಆ ಕಂಪನಿ ಶಿಫ್ಟ್ ಆಗಿದ್ದು ಗುಜರಾತ್‍ಗೆ. ಈ ಘಟನೆಯನ್ನು ನೆನಪಿಸುವ ರತನ್ ಟಾಟಾ ಮೋದಿಯವರ ಕಾರ್ಯದಕ್ಷತೆಯನ್ನು ಹೊಗಳಿದ್ದಾರೆ.

ಪ್ರಧಾನಿ ಮೋದಿ ಅವರು ಭಾರತಕ್ಕೆ ಮತ್ತು ಭಾರತದ ಜನರಿಗೆ “ನವಭಾರತ’ದ ಕೊಡುಗೆ ನೀಡಲು ಅವರಿಗೊಂದು ಅವಕಾಶ ನೀಡಬೇಕು. ಮೋದಿ ಭಾರತವನ್ನು
ಹೊಸದಾಗಿ ಕಾಣುವ ಸಾಮರ್ಥ್ಯ ಮತ್ತು ನವೋನ್ಮ್ಪೆಷತೆಯನ್ನು ಹೊಂದಿದ್ದಾರೆ. ಮೋದಿ ನಾಯಕತ್ವದಲ್ಲಿ ಭಾರತವು ನವಭಾರತವಾಗಿ ರೂಪುಗೊಳ್ಳುವ ವಿಶ್ವಾಸ ಮತ್ತು ಆಶಾವಾದವನ್ನು ನಾನು ಹೊಂದಿದ್ದೇನೆ’ ಎಂದು ರತನ್ ಟಾಟಾ ಹೇಳಿರುವುದು ಮೋದಿಯವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

ಸ್ವತಃ ಜಗತ್ತಿನ ಶ್ರೇಷ್ಠ ಉದ್ಯಮಿಯಾಗಿರುವ ರತನ್ ಟಾಟಾ ಅವರು ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂಥವರ ಬಾಯಲ್ಲಿ ನರೇಂದ್ರ ಮೋದಿ ಹೊಗಳಿಸಿಕೊಂಡಿದ್ದಾರೆಂದರೆ ಅದು ಸಾಮಾನ್ಯ ವಿಷಯವಲ್ಲ.

-ಚೇಕಿತಾನ

Editor Postcard Kannada:
Related Post