X

ಮೋದಿ ಹೆದರಿಸಿದರು! ಟ್ರಂಪ್ ಎಚ್ಚರಿಸಿದರು! ಭಾರತ ಅಮೇರಿಕ ಜಂಟಿ ಯುದ್ಧಕ್ಕೆ ಒದ್ದೆಯಾದ ಪಾಕಿಸ್ತಾನ!!

ಉಗ್ರರ ಪಾಲಿಗೆ ಸ್ವರ್ಗ ಎಂದೇ ಹೇಳಬಹುದಾದ ಪಾಕಿಸ್ತಾನಕ್ಕೆ ಸಂಕಟದ ಮೇಲೆ ಸಂಕಟ ಬಂದಿದೆ ಎಂದು ಹೇಳಬಹುದು.. ಭಾರತ ಮತ್ತು ಅಮೇರಿಕಾ ಕೊಟ್ಟ ದಿಟ್ಟ ಉತ್ತರಕ್ಕೆ ಪಾಕಿಸ್ತಾನಕ್ಕೆ ಭಯ ಆರಂಭವಾಗಿ ಗಢಗಢ ನಡುಗಲು ಶುರು ಮಾಡಿದೆ..

ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೇರಿಕ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಿರುವುದು ಬಲು ಬೇಗನೆ ಕಾರ್ಯಾಚರಣೆಗೆ ಬಂದ ರೀತಿ ಕಾಣುತ್ತಿದೆ.. “ಪಾಕಿಸ್ತಾನ ಎಲ್ಲಿಯವರೆಗೂ ತನ್ನ ಉಗ್ರರ ಪರ ನಿಲುವನ್ನು ಮುಂದುವರೆಸುತ್ತದೆಯೋ, ಎಲ್ಲಿಯವರೆಗೆ ಉಗ್ರರ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಮುಂದಾಗುವುದಿಲ್ಲವೋ ಅಲ್ಲಿಯವರೆಗೂ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೇರಿಕ ತನ್ನ ಕಠಿಣ ನಿಲುವನ್ನು ಮುಂದುವರೆಸಲಿದೆ ಸ್ಪಷ್ಟನೆ ಪಡಿಸಿತ್ತು.. ಪಾಕಿಸ್ತಾನದಲ್ಲಿ ಬಲವಾಗಿ ಬೇರು ಬಿಟ್ಟಿರುವ ಆಫ್ಘಾನಿಸ್ತಾನ ಮೂಲದ ತಾಲಿಬಾನ್ ಉಗ್ರ ಸಂಘಟನೆ ಮತ್ತು ಹಖ್ಖಾನಿ ನೆಟ್ ವರ್ಕ್ ವಿರುದ್ಧ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು. ಹೀಗಾಗಿ ಪ್ರಸ್ತುತ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಲಾಗುತ್ತದೆ..ಎಂಬ ಸಂದೇಶ ಮುಟ್ಟುತ್ತಿದ್ದಂತೆಯೇ ಪಾಕ್‍ಗೆ ಜ್ವರ ಶುರುವಾದಂತಿದೆ.

ಇನ್ನು ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಭದ್ರತಾ ನೆರವು ಅಮಾನತು ಮಾತ್ರವಲ್ಲ, ಅಂತೆಯೆ ಪಾಕಿಸ್ತಾನವನ್ನು ಅಮೆರಿಕದ ಉಗ್ರ ಪೀಡಿತ ರಾಷ್ಟ್ರಗಳಿರುವ ವಿಶೇಷ ಕಣ್ಗಾವಲು ರಾಷ್ಟ್ರಗಳ ಪಟ್ಟಿಗೂ ಸೇರಿಸಲಾಗಿದೆ. ಆ ಮೂಲಕ ಪಾಕಿಸ್ತಾನ ಪ್ರತಿಯೊಂದು ನಡೆಯನ್ನೂ ಅಮೆರಿಕದ ವಿಶೇಷ ಪಡೆಗಳು ವೀಕ್ಷಣೆ ಮಾಡಲಿವೆ. ಪಾಕಿಸ್ತಾನದಲ್ಲಿ ನಡೆಯುವ ಧಾರ್ಮಿಕ ಹಿಂಸಾಚಾರ, ಧಾರ್ಮಿಕ ಸ್ವಾತಂತ್ರ್ಯ ಹರಣದಂತಹ ಪ್ರಕರಣಗಳ ವರದಿಯನ್ನು ಈ ತಂಡ ಮಾಡಲಿದೆ. ಅಂತೆಯೇ ಅಮೇರಿಕ ಈ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಪಟ್ಟಿಯಲ್ಲಿ ಬರ್ಮಾ, ಚೀನಾ, ಎರಿಟ್ರಿಯಾ, ಇರಾನ್, ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ತಜಕಿಸ್ತಾನ್, ತುರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳ ಹೆಸರುಗಳು ಮುಂದುವರೆದಿವೆ. ಇಷ್ಟು ವರ್ಷಗಳ ಅಮೇರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವು ವ್ಯರ್ಥವಾಗಿದ್ದು, ಉಗ್ರರ ವಿರುದ್ಧ ಆ ದೇಶ ಯಾವುದೇ ಕ್ರಮ ಕೈಗೊಂಡಿರಲಿಲ್ಲ..

 

ಕೇವಲ ಸುಳ್ಳು ಹೇಳಿಕೊಂಡು ನಮ್ಮನ್ನು ಮೂರ್ಖರನ್ನಾಗಿ ಮಾಡಿತ್ತು. ಆದರೆ ಇನ್ನುಮುಂದೆ ಅದು ನಡೆಯುವುದಿಲ್ಲ ಎಂದು ಮೊದಲೇ ಅಮೇರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು.ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಅಮೇರಿಕ ಇದೀಗ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ ಆರ್ಥಿಕ ನೆರವಿಗೆ ಕತ್ತರಿ ಹಾಕಿದೆ. ಪಾಕಿಸ್ತಾನಕ್ಕೆ ಅಮೆರಿಕ ನೀಡಬೇಕಿದ್ದ ಸುಮಾರು 255 ಮಿಲಿಯನ್ ಡಾಲರ್ ಆರ್ಥಿಕ ನೆರವಿಗೆ ಅಮೇರಿಕ ಸರಕಾರ ಬ್ರೇಕ್ ಹಾಕಿದ ಪರಿಣಾಮ ನಿಜಕ್ಕೂ ಪಾಕಿಸ್ತಾನಕ್ಕೆ ದೊಡ್ಡ ತಲೆನೋವಾಗಿದೆ.

ಅದಲ್ಲದೆ ಇದಕ್ಕೆ ಪ್ರತಿಯಾಗಿ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ಗುಂಡಿನ ದಾಳಿ ಹಾಗೂ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಾಟ ನಡೆಯುವುದು ಅಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕ್‍ಗೆ ಖಡಕ್ ಹೇಳಿಕೆ ನೀಡಿದ್ದರು… ಪಾಕ್ ಪ್ರಚೋದಿತ ಗಡಿನಿಯಂತ್ರಿತ ರೇಖೆ ಉಲ್ಲಂಘನೆಯಿಂದಾಗಿ ಕ್ರಿಕೆಟ್ ಆಯೋಜಿಸಲು ವಾತಾವರಣ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ. 2017ರಲ್ಲಿ ಭಾರತ ಪಾಕಿಸ್ತಾನ ನಡುವೆ ಬೂದಿಮುಚ್ಚಿದ ಕೆಂಡದಂತಿದ್ದ ವಾತಾವರಣವು, ಪಾಕ್ ಸೆರೆಯಲ್ಲಿರುವ ಕುಲಭೂಷಣ್ ಜಾದವ್ ಅವರ ತಾಯಿ ಹಾಗೂ ಪತ್ನಿಯನ್ನು ನಡೆಸಿಕೊಂಡ ರೀತಿ, ಹಾಗೂ ಪಾಕ್ ಪಡೆಗಳಿಂದ ಮತ್ತೆ ನಿಯಂತ್ರಣ ರೇಖೆ ಉಲ್ಲಂಘಿಸಿ, ದೇಶದ ಸೈನಿಕರನ್ನು ಹತ್ಯೆ ಮಾಡಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.. ಇದರ ಬೆನ್ನಿಗೆ ಪಾಕಿಸ್ತಾನವನ್ನು ಭಾರತ ಸಾರ್ಕ್ ಸದಸ್ಯ ರಾಷ್ಟ್ರಗಳ ಪಟ್ಟಿಯಿಂದ ಹೆಸರು ತೆಗೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.

ಅಮೇರಿಕಾ ಒಂದು ಕಡೆಯಲ್ಲಿ ಆರ್ಥಿಕ ನೆರವಿಗೆ ಕಡಿವಾಣ ಹಾಕಿದರೆ ಇತ್ತ ಭಾರತ ಪಾಕಿಸ್ತಾನವನ್ನು ಸಾರ್ಕ್ ಸದಸ್ಯ ರಾಷ್ಟ್ರಗಳ ಪಟ್ಟಿಯಿಂದ ಹೊರಹಾಕಿದೆ.. ಅದರೊಂದಿಗೆ ಸರಕಾರದ ರಾಷ್ಟ್ರೀಯ ವೈಜ್ಞಾನಿಕ ಸುಧಾರಿತ ಸಂಶೋಧನೆಯನ್ನು ಇತರ ದೇಶಗಳೊಂದಿಗೆ ಸಹಕರಿಸುವ ವ್ಯವಸ್ಥೆಯಿಂದ ಪಾಕಿಸ್ಥಾನವನ್ನು ಹೊರ ಇಡಲಾಗಿದೆ..

ಟೆಲಿಕಾಂ ಕಂಪನಿಯ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಪ್ರಾರಂಭಿಸಿದೆ. ಇದು ಆರು ದಕ್ಷಿಣ ಏಷ್ಯಾದ ದೇಶಗಳಾದ ಮತ್ತು ಸಾರ್ಕ್ ಸದಸ್ಯ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾಗಳಿಗೆ ಸಂಶೋಧನೆ ಮತ್ತು ಶಿಕ್ಷಣ ಜಾಲಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತದ ಈ ಯೋಜನೆಯಿಂದ ಏಕೈಕ ಸಾರ್ಕ್ ದೇಶವಾದ ಪಾಕಿಸ್ತಾನವನ್ನು ಹೊರಹಾಕಿರುವುದು ನಿಜಕ್ಕೂ ಪಾಕ್ ತಡೆಯಲಾರದ ಅವಮಾನವಾಗಿರಬಹುದು..

ಮೋದಿ ಸರಕಾರ ತನ್ನ ಅಧಿಕಾರದ ಆರಂಭದಿಂದಲೇ ಪಾಕಿಸ್ತಾನದ ವಿರುದ್ದ ಕಠಿಣ ನೀತಿಯನ್ನು ಹೊಂದಿದ್ದು. ಭಾರತೀಯ ಸೈನಿಕರ ನೆಲೆಯ ಮೇಲಿನ ಪಾಕ್ ಭಯೋತ್ಪಾದನಾ ದಾಳಿಗೆ ಗಡಿ ದಾಟಿ ಉಗ್ರರನ್ನು ತಟಸ್ಥಗೊಳಿಸುವ ಮೂಲಕ ಪ್ರತಿಕ್ರಿಯಿಸಿತ್ತು… ಇಡೀ ವಿಶ್ವದಲ್ಲಿಯೇ ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೇರಿಕಾವೇ ಪಾಕಿಸ್ತಾನದ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿರುವಾಗ ಇನ್ನೂ ಇದರ ಶಕ್ತಿ ಕುಂದುತ್ತದೆ ಎಂಬುವುದು ಖಂಡಿತಾ…

71 ಉಗ್ರ ಸಂಘಟನೆಗಳು ಕಪ್ಪುಪಟ್ಟಿಗೆ!!

ಭಾರತ ಮತ್ತು ಅಮೇರಿಕ ಇಂತಹ ದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕಾದರೆ ಇನ್ನು ಪಾಕ್‍ಗೆ ಉಳಿಗಾಳವಿಲ್ಲ ಎನ್ನುವ ಭಯ ಆರಂಭಿಸಿಯೇ ಬಿಟ್ಟಿದೆ ಅನ್ನುವಂತಿದೆ.. ಮುಂಬೈ ಮೇಲಿನ ಉಗ್ರರ ದಾಳಿಯ ಸಂಚುಕೋರ ಹಫೀಜ್ ಸಯೀದ್‍ನ ಉಗ್ರ ಸಂಘಟನೆ ಜಮಾತ್ ಉದ್‍ದವ (ಜೆಯುಡಿ) ಸೇರಿ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ 71 ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿಸಿದೆ.!! ಧನಸಹಾಯವನ್ನು ಸ್ಥಗಿತಗೊಳಿಸುವ ಅಮೆರಿಕದ ಬೆದರಿಕೆ ತಂತ್ರಕ್ಕೆ ಮಣಿದು ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಜೆಯುಡಿಯ ಸಹಸಂಘಟನೆ ಲ್ಹಾ ಎ ಇನ್ಸಾನಿಯತ್ ಕೂಡ ಇದರಲ್ಲಿ ಸೇರಿದೆ. ಸರಕಾರದ ಈ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಲ್ಹಾ ಸಂಘಟನೆಯ ಬ್ಯಾನರ್‍ಗಳನ್ನು ಅಳವಡಿಸಲು ಯತ್ನಿಸಿದ ಆರೋಪದಲ್ಲಿ ಮೂವರ ವಿರುದ್ಧ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಕಪ್ಪು ಪಟ್ಟಿಯಲ್ಲಿ ಇರುವ ಉಗ್ರ ಸಂಘಟನೆಗಳಿಗೆ ದೇಣಿಗೆ ನೀಡಿದರೆ, ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ಪಾಕ್ ಗೃಹ ಸಚಿವಾಲಯ ಎಚ್ಚರಿಸಿದೆ. ಲಷ್ಕರ್ ಎ ತೊಯ್ಬ, ಜೆಯುಡಿ ಮತ್ತು ಲ್ಹಾ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ, ಅವನ್ನು ರಾಜಕೀಯ ಮುಖ್ಯವಾಹಿನಿಗೆ ತರಲು ಸರ್ಕಾರ ಯತ್ನಿಸುತ್ತಿದೆ ಎಂದು ಪಾಕ್ ಪತ್ರಿಕೆಗಳು ಆರೋಪಿಸಿವೆ. ರಾಷ್ಟ್ರದ ಹಿತಾಸಕ್ತಿಗೆ ಬದಿಗೊತ್ತಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿವೆ.

ಕಡೆಗೂ ಭಾರತ ಮತ್ತು ಅಮೇರಿಕದ ಈ ನಿಲವೂ ನಿಜಕ್ಕೂ ಪಾಕ್‍ಗೆ ತಡೆಯಲಾರದ ತಲೆನೋವು ಆಗಿ ಪರಿಣಮಿಸಿದೆ.. ಭಯೋತ್ಪಾದನೆಗೆ ಸ್ವರ್ಗವಾಗಿದ್ದ ಪಾಕಿಸ್ತಾನಕ್ಕೆ ಒಂದು ಕಡೆಯಲ್ಲಿ ಚಿಂತೆಯಾಗಿದೆ ಭಯೋತ್ಪಾದಕರಿಗೆ ಇನ್ನೊಂದು ಚಿಂತೆಯಾಗಿ ಕಾಡುತ್ತಿದೆ… ಕಡೆಗೂ ಭಾರತ ಮತ್ತು ಅಮೇರಿಕ ಬಿಟ್ಟ ಬಾಣಕ್ಕೆ ಪಾಕ್ ತಲೆತಗ್ಗುವಂತೆ ಮಾಡಿದೆ..

-ಪವಿತ್ರ

Editor Postcard Kannada:
Related Post