X

ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಕೂಡ ನೆಲಕ್ಕುರುಳುವ ಮುನ್ನ 5 ಮಂದಿ ಉಗ್ರರ ರುಂಡವನ್ನುರುಳಿಸಿದ ಈ ಯೋಧನಾರು ಗೊತ್ತೇ?? “ಏ ದಿಲ್ ಮಾಂಗೇ ಮೋರ್”!!!

ಗುಂಡಿಗೆ ಎದೆಯೊಡ್ಡುವ ಯೋಧನನ್ನು ಪ್ರಧಾನಮಂತ್ರಿ, ರಕ್ಷಣಾ ಮಂತ್ರಿಗಳು ಸಮರ ಭೂಮಿಯಲ್ಲಿ ಬೆನ್ನು ತಟ್ಟಿದ್ದ ಕಾರ್ಗಿಲ್ ನಲ್ಲಿ, ಅದೆಷ್ಟೋ ಸುದೀರ್ಘ ಸಮಯಗಳ ವರೆಗೆ ನಮ್ಮ ಅದೆಷ್ಟೋ ಯೋಧರು ಅರೆಹೊಟ್ಟೆಯಲ್ಲಿ ಆ ವಾತಾವರಣದೊಂದಿಗೆ ಸೆಣಸಿದರೋ ಗೊತ್ತಿಲ್ಲ. ಆದರೆ ಟೈಗರ್ ಹಿಲ್, ರಾಷ್ಟ್ರೀಯತೆ, ಧರ್ಮಯುದ್ಧ, ಅಂತಿಮವಾಗಿ ವಿಜಯದ ದಿನ ಎಂದು ಕರೆಯುವ ಈ ಕಾರ್ಗಿಲ್ ಯುದ್ದದಲ್ಲಿ ನಮ್ಮ ಖಟ್ಟರ್ ವಿರೋಧಿಗಳಾದ ಪಾಕಿಸ್ತಾನಿಯರೇ ಭಾರತದ ಈ ವೀರ ಯೋಧನಿಗೆ “ಷೇರ್ ಶಾ” ಅಂತ ಬಿರುದು ಕೊಟ್ಟಿದ್ದಾರೆ ಎಂದರೆ ಭಾರತದ ಆ ವೀರ ಯೋಧನಾದರೂ ಯಾರು ಗೊತ್ತೆ?

ಪರದೆಯಾಚೆಗೂ ಹೀರೋಗಳಿರುತ್ತಾರೆ ಎಂದು ಸಾರಿದ ಕಾರ್ಗಿಲ್, ತಿರಂಗಾ ಇಷ್ಟೊಂದು ಎತ್ತರದಲ್ಲೂ ಹಾರಬಹುದು ಎಂದೂ ತಿಳಿಸಿದೆ. ಆದರೆ, “ಒ0ದೋ ನಾನು ತ್ರಿವರ್ಣ ಧ್ವಜವೇರಿಸಿ ಬರುತ್ತೇನೆ, ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊಂದ್ದುಕೊಂಡು ಬರುವೆ ಎಂದು ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬಂದ ವೀರ ಯೋಧನ ಕಥೆಯನ್ನು ಕೇಳಿದರೆ ಎಂಥವರಿಗೂ ನಮ್ಮ ಸೈನಿಕರ ಮೇಲಿರುವ ಗೌರವ ಇಮ್ಮಡಿಯಾಗುವುದಂತೂ ಖಚಿತಾ….

ಹೌದು…. ಷೇರ್ ಶಾ ಅಂತಲೇ ಪ್ರಸಿದ್ಧಿಯನ್ನು ಪಡೆದ ಆ ಕಾರ್ಗಿಲ್ ಯುದ್ಧದ ಹೀರೋ ಬೇರಾರು ಅಲ್ಲ!! 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ನ ಯೋಧ ಕ್ಯಾ. ವಿಕ್ರಮ್ ಭಾತ್ರಾ!! ಆದರೆ ಆತನಿಗೆ ನಮ್ಮ ಖಟ್ಟರ್ ವಿರೋಧಿಗಳಾದ ಪಾಕಿಸ್ತಾನಿಯರೇ ತನ್ನ 24ನೇ ವಯಸ್ಸಿಗೆ “ಷೇರ್ ಶಾ” ಅಂತ ಬಿರುದು ಕೊಟ್ಟಿದ್ದಾರೆಂದರೆ ಆತನ ಪರಾಕ್ರಮ ಅದಾವ ರೀತಿಯಲ್ಲಿರಬೇಕು ನೀವೇ ಯೋಚಿಸಿ!!

ಅದು ಮಧ್ಯಮವರ್ಗದ ಮನೆ, ಅಲ್ಲಿ ಶಾಲೆಗೆ ಹೋಗುವ ಇಬ್ಬರು ಅವಳಿ ಮಕ್ಕಳು!! ಒಬ್ಬ ಲುವ್ ಮತ್ತೊಬ್ಬ ಖುಶ್. ಆದರೆ ಆ ಮನೆಯಲ್ಲಿ ಟಿವಿ ಇರಲಿಲ್ಲವಾದರೂ ಮಕ್ಕಳಿಗೆ ಟಿವಿ ನೋಡುವ ಹುಚ್ಚು. ಓದುವ ಮಕ್ಕಳು ಟಿವಿ ನೋಡುತ್ತಾ ಕಾಲ ಹರಣ ಮಾಡಬಾರದೆಂದು ಅಪ್ಪ ಅಮ್ಮ ಗದರುತ್ತಿದ್ದರು. ಆದರೆ ಭಾನುವಾರ ಮಾತ್ರ ಪಕ್ಕದ ಮನೆಯ ನಿಶಾ ದೀದಿಯ ಮನೆಗೆ ಟಿವಿ ನೋಡಲು ಹೋಗಲು ಮಾತ್ರ ಅನುಮತಿ ಇತ್ತು. ಮಕ್ಕಳು ಪ್ರತೀ ಭಾನುವಾರ ಹವಾಯಿ ಚಪ್ಪಲಿ ಧರಿಸಿ ನಿಶಾ ದೀದಿ ಮನೆಗೆ ಟಿವಿ ನೋಡಲು ಹೋಗುತ್ತಿದ್ದರು.

ಆದರೆ ಈ ಮಕ್ಕಳು ಪ್ರತಿ ಭಾನುವಾರ ಬೆಳಿಗ್ಗೆ 10 ಗಂಟೆ ಆಗುವುದನ್ನೇ ಕಾಯುತ್ತಿದ್ದರು!! ಏಕೆಂದರೆ ದೂರದರ್ಶನದಲ್ಲಿ ಬೆಳಗ್ಗೆ 10 ಕ್ಕೆ “ಪರಮವೀರ ಚಕ್ರ” ಧಾರಾವಾಹಿ ಪ್ರಸಾರವಾಗುತ್ತಿತ್ತು. ಸೈನಿಕರ ಪರಮವೀರತೆಯ ಕಥೆಗಳನ್ನು ಆ ಮಕ್ಕಳು ತನ್ಮಯತೆಯಿಂದ ನೋಡುತ್ತಿದ್ದರು. ಮನೆಗೆ ಬಂದು ಕಥೆ ಹೇಳುತ್ತಿದ್ದರು. ಆದರೆ ಇಪ್ಪತ್ತು ವರ್ಷಗಳ ನಂತರ ಸೋದರರಲ್ಲೊಬ್ಬನಾದ ಲುವ್ ಗೆ ಪರಮವೀರತೆಗೆ ಸಿಕ್ಕುವ ಅತ್ಯುಚ್ಛ ಗೌರವ “ಪರಮವೀರ ಚಕ್ರ” ಪ್ರಾಪ್ತವಾಯಿತು. ಆ ಲುವ್ ನನ್ನು ಮುಂದೆ ದೇಶ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಎಂದು ಹೆಮ್ಮೆಯಿಂದ ಕರೆಯಿತು.

ಷೇರ್ ಶಾ ವಿಕ್ರಮ್ ಭಾತ್ರಾ ಹುಟ್ಟಿದ್ದು 9 ಸೆಪ್ಟೆಂಬರ್ 1974 ಹಿಮಾಚಲ್ ಪ್ರದೇಶ್ ನ ಪಲಂಪುರ್ ಹತ್ತಿರದ ಘುಗ್ಗರ್ ಎಂಬ ಹಳ್ಳಿಯಲ್ಲಿ. ವಿಕ್ರಮ್ ನ ತಂದೆ ತಾಯಿ ಇಬ್ಬರೂ ಸರಕಾರಿ ನೌಕರರು!! ವಿಕ್ರಮ್ ನ ತಂದೆ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕ ಮತ್ತು ತಾಯಿ ಶಾಲೆಯೊಂದರ ಶಿಕ್ಷಕಿ. ಹಾಗೆ ನೋಡಿದರೆ ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರು ವಿಕ್ರಮ್ ಕೂಡಾ ಮನಸ್ಸು ಮಾಡಿದ್ದರೆ ಯಾವುದೋ ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಆರಾಮಾಗಿರಬಹುದಿತ್ತು. ಆದರೆ ವಿಕ್ರಮ್ ನ ದೇಶಪ್ರೇಮ ಅವನನ್ನು ಸೇನೆಗೆ ಕರೆದೊಯ್ತು!!

ವಿಕ್ರಮ್ ಪ್ರಾಥಮಿಕ ಶಿಕ್ಷಣವನ್ನು ಓದಿದ್ದು ಪಲಂಪುರಿನ ಡಿಎವಿ ಪವ್ಲಿಕ್ ಸ್ಕೂಲ್ ನಲ್ಲಾದರೆ ತದನಂತರದ ಶಿಕ್ಷಣವನ್ನು ಪಡೆದಿದ್ದು ಸೆಂಟ್ರಲ್ ಸ್ಕೂಲ್ ಪಲಂಪುರ್ ನಲ್ಲಿ!! ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ವಿಕ್ರಮ್ ಬಿಎಸ್ಸಿ ಪದವಿಯನ್ನು ಚಂಡೀಗರ್ ನ ಡಿಎವಿ ಕಾಲೇಜಿನಲ್ಲಿ ಓದಿ ಅದೇ ಕಾಲೇಜಿನಲ್ಲಿ ಎನ್.ಸಿ.ಸಿ(ಏರ್ವಿಂಗ್) ನಲ್ಲಿ ಅತ್ಯುತ್ತಮ ಉಮೇದುವಾರ ಎಂದು ಗುರಿತಿಸಿಕೊಂಡಿದ್ದರು.

ಪದವಿ ಮುಗಿಸಿದ ವಿಕ್ರಮ್ ನಿಗೆ ಸೇನೆ ಸೇರುವ ಕನಸಿತ್ತು. ಅದಕ್ಕೆ ತಕ್ಕಂತೆ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು. ಆತ ಎನ್.ಸಿ.ಸಿಯಲ್ಲಿ ಗುರಿತಿಸಿಕೊಂಡಿದ್ದರಿಂದ ಸೇನೆಗೆ ಸೇರಲು ಅವಕಾಶವೂ ಸಿಕ್ಕಿತು!! ಆತನ ಇಚ್ಛೆಯಂತೆ 1996 ರಲ್ಲಿ ಡೆಹರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಆಯ್ಕೆಯಾದರಲ್ಲದೇ ಅಷ್ಟೇ ಬೇಗ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ನ ಯೋಧ ಕ್ಯಾ.ವಿಕ್ರಮ್ ಭಾತ್ರಾ ಕಾರ್ಗಿಲ್ ಯುದ್ಧದ ಹೀರೋನೂ ಆದರು!!

ಸೇನೆಗೆ ಸೇರಿ 18 ತಿಂಗಳಾದರೂ ಮನೆಗೆ ಹೋಗಿರಲಿಲ್ಲ. ಹಾಗಾಗಿ ಅದೊಂದು ದಿನ ಹೋಳಿ ಹಬ್ಬವಿರುವುದರಿಂದ ಮನೆಯವರ ಜೊತೆ ಹೋಲಿ ಆಚರಿಸಲು ವಿಕ್ರಮ್ ಮನೆಗೆ ಹೋದನಲ್ಲದೇ, ತಂದೆ-ತಾಯಿ ಬಂಧು-ಬಳಗದೊಂದಿಗೆ ಹೋಲಿ ಹಬ್ಬವನ್ನು ಆಚರಿಸಿದ. ಅದೊಂದು ದಿನ ಪಾಲಂಪುರದ ಒಂದು ಹೋಟೆಲ್ ಗೆ ಹೋಗಿದ್ದಾಗ ಒಂದು ಘಟನೆ ನಡೆಯಿತು. ಹೋಟೆಲ್ ಗೆ ಹೋದಾಗ ಅಲ್ಲಿ ಪರಿಚಯದವರೊಬ್ಬರು ಮಾತನಾಡಿಸಿ ಹಾಗೇ ಯುದ್ಧದ ಬಗ್ಗೆ ಮಾತುಗಳು ಶುರುವಾದವು: “ಯುದ್ಧ ಶುರುವಾಗಿದೆ. ಯಾವಾಗ ಬೇಕಾದರೂ ಮೇಲಿನ ಅಧಿಕಾರಿಗಳಿಂದ ನಿನಗೆ ಕರೆ ಬರಬಹುದು ಎಚ್ಚರಿಕೆಯಿಂದಿರು” ಎಂದು ಹೇಳಿದರು. ಅದಕ್ಕೆ ವಿಕ್ರಮ್ ಕೊಟ್ಟ ಉತ್ತರವೇನು ಗೊತ್ತಾ?- “ಒಂದೋ ಗೆದ್ದು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ, ಇಲ್ಲವೇ ಅದೇ ಧ್ವಜದಲ್ಲಿ ಸುತ್ತಿರುವ ನನ್ನ ಹೆಣ ಬರುತ್ತೆ” ಅಂದು ಬಿಟ್ಟ.

ಆ ಸಂದರ್ಭದಲ್ಲಿ, ನವಾಜ್ ಷರೀಫ್ ಭಾರತದ ಬೆನ್ನಿಗೆ ಚೂರಿ ಇರಿದಿದ್ದರಲ್ಲದೇ, ವಾಜಪೇಯಿಯವರು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ವೃದ್ಧಿಸಲು ಮಾಡಿದ ಎಲ್ಲಾ ಕಾರ್ಯಗಳು ವಿಫಲವಾದಂತಾಗಿದ್ದವು. ಪಾಕಿಸ್ತಾನ ನಮಗೆ ಗೊತ್ತಿಲ್ಲದಂತೆ ಕಾರ್ಗಿಲ್ ನ ಬೆಟ್ಟ ಏರಿ ನಮ್ಮದೇ ಬಂಕರು ವಶ ಪಡಿಸಿಕೊಂಡು ಕೂತು ಬಿಟ್ಟಿತ್ತು. ಇದನ್ನು ತಿಳಿದುಕೊಳ್ಳಲು ಯೋಧ ಸೌರಬ್ ಕಾಲಿಯಾ ನೇತ್ರತ್ವದ ಆರು ಜನರ ತಂಡ ಕಾರ್ಗಿಲ್ ಬೆಟ್ಟವನ್ನೇರಿ ವೈರಿಗಳೊಂದಿಗೆ ಹೋರಾಡಿ ಮರಳಿಯೂ ಬಂದರು!! ಆದರೆ… ಜೀವಾಂತವಾಗಿಯಲ್ಲ!! ಬದಲಿಗೆ ತುಂಡು ತುಂಡಾಗಿ ಮರಳಿದ್ದರು.

ಪಾಕಿಸ್ತಾನ ಯೋಧ ಸೌರಬ್ ಕಾಲಿಯಾ ಸೇರಿದಂತೆ ಆರು ಜನ ಯೋಧರನ್ನು ಹಿಂಸಿಸಿ ತುಂಡು ತುಂಡಾಗಿ ಕತ್ತರಿಸಿ ನಮ್ಮ ಸೇನೆಗೆ ಕಳುಹಿಸಿತ್ತು. ಅಲ್ಲಿಗೆ ಸೈನಿಕರ ಮತ್ತು ಪ್ರಧಾನಿ ವಾಜಪೇಯಿಯವರ ತಾಳ್ಮೆಯ ಕಟ್ಟೆ ಒಡೆದಿತ್ತು. ಆಗಲೇ “ಆಪರೇಶನ್ ವಿಜಯ್” ಶುರುವಾಗಿತ್ತು!! ಪಾಲಂಪುರದ ಒಂದು ಹೋಟೆಲ್ ನ ವ್ಯಕ್ತಿ ಹೇಳಿದಂತೆ: ಅದೇ ಸಂದರ್ಭದಲ್ಲಿ ವಿಕ್ರಮ್ ಬಾತ್ರಾರವರಿಗೆ, ಜೂನ್ 1, 1999 ರಂದು ಕಾರ್ಗಿಲ್ ನಲ್ಲಿ ಸೇವೆಗೆ ಹಾಜರಾಗಬೇಕೆಂದು ಸೇನೆಯಿಂದ ಆದೇಶ ಬಂದಿತ್ತು. ತಡಮಾಡದೇ ಮನೆಯಿಂದ ಹೊರಟೇ ಬಿಟ್ಟ ವಿಕ್ರಮ. ಹೋದೊಡನೆ 17 ಸಾವಿರ ಅಡಿ ಎತ್ತರದಲ್ಲಿರುವ ಶಿಖರವದು ಅದರ ಹೆಸರು ಟೈಗರ್ ಹಿಲ್.

ಆ ಶಿಖರವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ 24 ವರ್ಷದ ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಸಂಜೀವ್ ಜಾಮ್ವಾಲ್ ಗೆ ನೀಡಲಾಗಿತ್ತು. ಅದರಂತೆ ವಿಕ್ರಮ್ ಯೋಜನೆ ಹಾಕಿದ. ಆ ಯೋಜನೆಯಂತೆ ಕಡಿದಾದ ಭಾಗದ ಮೂಲಕ ಶಿಖರವನ್ನೇರುವಂತೆ ತಮ್ಮ ಸಂಗಡಿಗರಿಗೆ ನಿರ್ದೇಶನ ನೀಡಿದ ಬಾತ್ರಾ, ತಾನು ಹಿಂದಿನಿಂದ ದಾಳಿ ಮಾಡಲು ನಿರ್ಧರಿಸಿದ.

ಮುಂದಿನಿಂದ ವಿಕ್ರಮನ ತಂಡ ದಾಳಿ ಮಾಡಿತು, ಹಿಂದಿನಿಂದ ವಿಕ್ರಮ್ ದಾಳಿ ಮಾಡಿದ. ಬೆಳಗಾಗುವಷ್ಟರಲ್ಲಿ ಶತ್ರುಗಳು ಹೆಣವಾಗಿದ್ದರು. ಆ ಶಿಖರ ನಮ್ಮ ಕೈ ವಶವಾಗಿತ್ತು. ಆ ಬೆಟ್ಟವನ್ನು ವಶಪಡಿಸಿಕೊಂಡು ಕೆಳಗಿಳಿದು ಬಂದ ವಿಕ್ರಮ್ ಭಾತ್ರಾ ಟಿ.ವಿ ಚಾನೆಲ್ ಗಳಲ್ಲಿ ಕಾಣಿಸಿಕೊಂಡ. ಪತ್ರಿಕೆಗಳಲ್ಲಿ ಆತನದ್ದೇ ಗುಣಗಾನ!! ವಿಕ್ರಮ್ ತಾನು ವಶಪಡಿಸಿಕೊಂಡಿರುವ ಬೆಟ್ಟದ ಬಗ್ಗೆ ಹೇಳಲು ತನ್ನ ತಂದೆಗೆ ಕರೆ ಮಾಡಿ, ಅಪ್ಪಾ….!! ಶತ್ರುವಿನ ನೆಲೆಯನ್ನು ವಶಪಡಿಸಿಕೊಂಡಿದ್ದೇನೆ!! ಎಂದಾಗ, ಅದು ತಮ್ಮ ಜೀವಮಾನದ ಅತ್ಯಂತ ಹೆಮ್ಮೆಯ ಕ್ಷಣ ಎಂದು .ಎಲ್.ಬಾತ್ರಾ ಖುಷಿ ಪಟ್ಟಿದ್ದರು.

ಬೆಟ್ಟ ಇಳಿದು ಕೆಳಬಂದ ವಿಕ್ರಮನಿಗೆ ಅಧಿಕಾರಿಗಳಿಂದ ಮತ್ತೆ ಕರೆ ಬಂತು. ಮತ್ತೊಂದು ಕಾರ್ಯಾಚರಣೆ ಮಾಡಲು ಅಧಿಕಾರಿಗಳು ಕರೆ ಮಾಡಿದ್ದರು. ಮತ್ತೆ ವಿಕ್ರಮ್ ಸನ್ನದ್ಧಾದ. ಆಗ ಮಾಧ್ಯಮದವರು “ಮತ್ತೆ ನೀವು ಕಾರ್ಯಾಚರಣೆಗೆ ಹೋಗುತ್ತೀದ್ದೀರಲ್ಲ ಈ ಕ್ಷಣದಲ್ಲಿ ನಿನ್ನ ಮನದಲ್ಲೇನಿದೆ” ಎಂದು ಪ್ರಶ್ನಿಸಿದರು. ಆಗ ವಿಕ್ರಮ್ ಹೇಳಿದ; “ನನಗೆ ಒಂದೇ ಬೆಟ್ಟ ಗೆದ್ದು ಸಾಕಾಗಿಲ್ಲ ಇನ್ನೊಂದಿಷ್ಟು ಬೆಟ್ಟಗಳನ್ನು ಗೆದ್ದು ಬರುವೆ (ಏ ದಿಲ್ ಮಾಂಗೆ ಮೋರ್)” ಎಂದು ಹೊರಟೇಬಿಟ್ಟ. ಆ ಹೊತ್ತಿಗೆ ವಿಕ್ರಮ್ ಪಾಕಿಗಳ ಪಾಲಿಗೆ ಷೇರ್ ಶಾ ಎಂದೇ ಪ್ರಸಿದ್ಧಿಯಾಗಿದ್ದ. ಅವನ ತಾಕತ್ತಿಗೆ ಪಾಕಿಗಳೇ ಷೇರ್ ಶಾ ಎಂದು ಕೋಡ್ ವರ್ಡ್ ಆಗಿ ಕರೆಯುತ್ತಿದ್ದರು. ಅಧಿಕಾರಿಗಳ ಆದೇಶದ ಪ್ರಕಾರ ವಿಕ್ರಮ್ ಗೆ ಮತ್ತೊಂದು ಬೆಟ್ಟವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು.

ವಿಕ್ರಮ್ ಸನ್ನದ್ಧನಾಗಿ ಕಾರ್ಯಾಚರಣೆಗೆ ಯೋಜನೆ ರೂಪಿಸಿ ತನ್ನ ತಂಡದೊಂದಿಗೆ ಹೊರಟೇಬಿಟ್ಟ. ಜುಲೈ 8ರ ರಾತ್ರಿ ವಿಕ್ರಮ್ ಮತ್ತು ಮತ್ತೊಬ್ಬ ಯುವ ಸೇನಾಧಿಕಾರಿ ಅನೂಜ್ ನಯ್ಯರ್ ಶತ್ರುಗಳ ಮೇಲೆ ದಾಳಿ ಆರಂಭಿಸಿದರು. ಶಿಖರದ ಪ್ರತಿ ಹಂತದಲ್ಲೂ ಇದ್ದ ಶತ್ರುಗಳ ಬಂಕರುಗಳನ್ನು ನಾಶಪಡಿಸುತ್ತಲೇ ಸಾಗಿದರು. ಆ ಸಂದರ್ಭದಲ್ಲಿ ಶತ್ರುಗಳು ನಡೆಸಿದ ಸ್ಫೋಟದಲ್ಲಿ ಒಬ್ಬ ಕಿರಿಯ ಅಧಿಕಾರಿಯ ಕಾಲುಗಳಿಗೆ ತೀವ್ರ ಗಾಯಗಳಾದವು. ಆತನನ್ನು ಬಂಕರ್ ಗೆ ಎತ್ತಿಕೊಂಡು ಬರುವೆ ಎಂದು ಸನಿಹದಲ್ಲೇ ಇದ್ದ ಸುಬೇದಾರ್ ಹೇಳಿದರು ಆದರೆ ವಿಕ್ರಮ್ ಒಪ್ಪಲಿಲ್ಲ. ನಿನಗೆ ಮಕ್ಕಳಿದ್ದಾರೆ, ದೂರ ಸರಿ ಎಂದು ತಾನೇ ಹೊರಟುನಿಂತ.

ವಿಕ್ರಮ್ ಭಾತ್ರಾನ ಹಿಂದೆ 25 ಜನರ ಕಂಪನಿ ಇತ್ತು. ಆ ಕಂಪನಿಯ ಗುರಿ ಪಾಯಿಂಟ್ 4875 ಆಗಿತ್ತು!! ಆದರೆ ಶತ್ರುಗಳು ಕೇವಲ 70ಮೀ ದೂರದಲ್ಲಿದ್ದರು. ಲೆ. ಕ್. ಜೋಷಿ ಜುಲೈ 7ರ ಮುಂಜಾನೆ 5.30 ಹೊತ್ತಿಗೆ ಗುರಿಯನ್ನು ಮುಟ್ಟಲು ಆದೇಶ ನೀಡಿದರು. ಶತ್ರುಗಳಿಗೆ ಸಮೀಪ ಮತ್ತು ಗುರಿ ಶತ್ರುಗಳಿಗೆ ನೇರಾ ನೇರಾ ಇತ್ತು. ಶತ್ರುಗಳೊಂದಿಗೆ ಮುಖಾಮುಖಿಯಾಗದೆ ಗುರಿ ಮುಟ್ಟುವಂತಿಲ್ಲ. ವಿಕ್ರಮ್ ಭಾತ್ರಾ ತನ್ನ ಸುರಕ್ಷತೆಯನ್ನು ಲೆಕ್ಕಿಸದೆ ಮುಂದುವರೆದ. ಶತ್ರು ಪಾಳಯದಿಂದ ಗುಂಡುಗಳು ಹಾರಿಬಂದರೂ ಕೈಯಲ್ಲಿದ್ದ ಎ.ಕೆ 47 ಅಬ್ಬರಿಸುತ್ತಲೇ ಇತ್ತು.

ಹೆಜ್ಜೆ ಮುಂದೆ ಇಡುವಾಗಲೇ ಶತ್ರುಗಳು ಗುಂಡಿನ ದಾಳಿ ಮಾಡಿದರು ಆಗ ಒಂದು ಗುಂಡು ವಿಕ್ರಮನ ಎದೆಯನ್ನೇ ಹೊಕ್ಕಿತು! ಇನ್ನೊಂದು ಗುಂಡು ಸೊಂಟವನ್ನು ಸೀಳಿತು. ಆದರೂ ನೆಲಕ್ಕುರುಳುವ ಮುನ್ನ ಭಾತ್ರಾನ ಬಂದೂಕು ಐವರು ಭಯೋತ್ಪಾದಕರನ್ನು ಕೊಂದಿತ್ತು. ಬೆಳಗಾಗುವಷ್ಟರಲ್ಲಿ ಶಿಖರವೇನೋ ಕೈವಶವಾಯಿತು. ಆದರೆ ಷೇರ್ ಶಾ ವೀರ ಮರಣವನ್ನು ಹೊಂದಿದ್ದ. ಆದರೆ ಕ್ಯಾ. ವಿಕ್ರಮ್ ಭಾತ್ರಾರ ಯುದ್ಧ ಘೋಷಣೆ ” ಏ ದಿಲ್ ಮಾಂಗೇ ಮೋರ್” ಕಾರ್ಗಿಲ್ ಯುದ್ಧದ ಸಮಯದಿಂದ ಇಂದಿನವರೆಗೂ ಕೋಟ್ಯಂತರ ದೇಶಪ್ರೇಮಿಗಳ ಘೋಷಣೆಯಾಗಿ ಉಳಿದಿದ್ದಂತೂ ಅಕ್ಷರಶಃ ನಿಜ!!

ರಕ್ತದ ಮಡುವಲ್ಲಿ ಬಿದ್ದಿದ್ದ ಭಾತ್ರಾನ ಬಳಿಗೆ ಬಂದ ಸುಭೇದಾರ್ ರಘುನಾಥ್ ಸಿಂಗ್ ಅವರ ಕೊನೆಯ ಕ್ಷಣಗಳನ್ನು ಬಣ್ಣಿಸಿದ್ದು ಹೀಗೆ; “ಅವರು ರಕ್ತದ ಮಡುವಲ್ಲಿ ಬಿದ್ದಿದ್ದರೂ ಕೂಡ ಕೈಯಲ್ಲಿದ್ದ ಎಕೆ47 ಅನ್ನು ಗಟ್ಟಿಯಾಗಿ ಹಿಡಿದಿದ್ದರು. ಅವರು ಆ ಸ್ಥಿತಿಯಲ್ಲಿದ್ದರೂ ಕೂಡಾ ಅವರು ಹೇಳಿದ್ದು ಒಂದೇ…. ನಾವು ಅವರನ್ನು ಸಂಪೂರ್ಣ ಖಾಲಿ ಮಾಡಿಸೋಣ ಎಂದು ಘರ್ಜಿಸಿದಂತೆ ಹೇಳಿದರು” ಎಂದು ಹೇಳಿದ್ದಾರೆ.

ಶತ್ರುಗಳನ್ನು ಸದೆಬಡೆಯುವ ಮೂಲಕ ವೀರ ಮರಣವನ್ನಪ್ಪಿದ ಷೇರ್ ಶಾ ವಿಕ್ರಮ ಭಾತ್ರಾನ ತೇಜಸ್ಸಿಗೆ ಸೇನೆಯ ಪರಮೋಚ್ಛ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ನೀಡಿ ಸರ್ಕಾರ ಗೌರವಿಸಿತು. ಇಂತಹ ವೀರಯೋಧರ ಬಲಿದಾನಗಳಿಂದಲೇ ನಾವಿಂದು ಆರಾಮಾಗಿದ್ದೇವೆ. ಅವರನ್ನು ನೆನಪಿಸಿಕೊಳ್ಳವುದು, ಅವರಿಗೆ ಗೌರವಿಸೋದು ನಮ್ಮ ಕರ್ತವ್ಯವಾಗಿದೆ!!

” ಏ ದಿಲ್ ಮಾಂಗೇ ಮೋರ್”…………!!

ಕೃಪೆ: uk media

– ಅಲೋಖಾ

Editor Postcard Kannada:
Related Post