X

ರಾಹುಲ್ ಗಾಂಧಿಯನ್ನು ರಶ್ಯಾದ ಪುಟಿನ್ ರೀತಿ ರಮ್ಯಾ ಬಿಂಬಿಸಲು ಹೋಗಿದ್ದೇಕೆ?! ಆಕೆಯ ಮುಂದಿನ ನಡೆ ಏನಿರಬಹುದು ಗೊತ್ತೇ?!

ಬಹುಷಃ ರಾಹುಲ್ ಗಾಂಧಿಯಷ್ಟು ಧನಾತ್ಮಕ ಯೋಚನೆ ಹೊಂದಿರುವ ಬೇರ್ಯಾವ ರಾಜಕಾರಣಿಯನ್ನು ನೀವು ಹುಡುಕಲಾರಿರಿ!! ನಾನ್ಯಾಕೆ ಇದನ್ನು
ಹೇಳುತ್ತಿದ್ದೀನೆಂದರೆ, ರಾಹುಲ್ ನ ನಾಯಕತ್ವದಲ್ಲಿ ಕಾಂಗ್ರೆಸ್ ನಿರಂತರವಾಗಿ ಸೋಲುಪ್ಪುತ್ತ ಬರುತ್ತಲೇ ಇದ್ದರೂ ಸಹ, ಇನ್ನೂ ನಾನು ದೇಶದ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಲೇ ಇರುವುದಕ್ಕೆ ರಾಹುಲ್ ಒಬ್ಬ ಆಶಾವಾದಿ!

ವೈಯುಕ್ತಿಕವಾಗಿ ನಾವು ಮಾತನಾಡಬಾರದು!

ತಮಾಷೆಯ ಸಂಗತಿಯೆಂದರೆ, ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ನಿರ್ವಹಣೆಯನ್ನು ರಮ್ಯಾಗೆ ಕೊಟ್ಟಿದ್ದನ್ನು ಹೀಗೆ ಚರ್ಚೆ ಮಾಡುತ್ತಿದ್ದಾಗ, ಅದೇ ತಂಡದಲ್ಲಿದ್ದ ತಮಿಳುನಾಡಿನ ಸೆಲ್ವಂ ರಾಜು ಎಂಬುವರೊಬ್ಬರು ರಮ್ಯಾಳ ಗಿಮಿಕ್ ಬಗ್ಗೆ ಮಾತನಾಡುತ್ತಾ ಹೋದರು!

ಸೆಲ್ವಂ ರಾಜು ಹೇಳಿದ್ದಿಷ್ಟೇ! “ಯಾರೇ ಆದರೂ ಸಹ, ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಐಐಎಮ್ ನಲ್ಲಿ ಓದಿ ಪರಿಣತಿ ಹೊಂದಿರುವವರನ್ನೇ ನೇಮಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ, ಕೊನೇ ಪಕ್ಷ ರಾಜಕೀಯದಲ್ಲಿ ಪರಿಣತಿ ಇರುವ ಅಥವಾ ವಿಷಯಾಸಕ್ತಿ ಇರುವವರನ್ನಾದರೂ ನಿರ್ವಹಣೆಗೆ ನೇಮಿಸಿಕೊಳ್ಳುತ್ತಾರೆ! ಆದರೆ, ರಾಹುಲ್ ಮಾತ್ರ ಕರ್ನಾಟಕದ ಚಿತ್ರರಂಗದಲ್ಲಿದ್ದ ರಮ್ಯಾರವರಿಗೆ ಆ ಸ್ಥಾನವನ್ನು ಕೊಟ್ಟರು! ಅವರಿಗೆ ರಾಜಕೀಯದ ಬಗ್ಗೆ
ಏನೂ ಗೊತ್ತಿಲ್ಲದಿದ್ದರೂ ಸಹ ಆ ಸ್ಥಾನವನ್ನು ಕೊಟ್ಟಿದ್ದು ದೆಹಲಿಯಲ್ಲಿ ತನ್ನ ಮನೆ ಹತ್ತಿರವೇ ಇರಲಿ ಎಂಬ ಉದ್ದೇಶಕ್ಕಾ?!” ಎಂದ ಸೆಲ್ವಂ ರಾಜು ಉಳಿದ ವಿಷಯಗಳ ಬಗ್ಗೆ ಹೇಳಿದರೂ ಉಹೂಂ! ಅವರವರ ವೈಯುಕ್ತಿಕ ವಿಚಾರವದು! ಹೇಳಿ ನಾವು ಕೆಳಗಿಳಿಯುವುದು ಬೇಡವೆಂಬ ಮಾತ್ರಕ್ಕೆ ಹೇಳುತ್ತಿಲ್ಲವಷ್ಟೇ!

ರಶ್ಯಾ ಪುಟಿನ್ ಗೆ ಹೋಲಿಸಲು ಉಪಾಯ ಕೊಟ್ಟಿದ್ದೂ ಇದೇ ತಂಡದ ಸದಸ್ಯ!

ಸೆಲ್ವಂ ರಾಜು ಉಳಿದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾಗ ಯಾಕೆ ರಾಹುಲ್ ರನ್ನು ಪುಟಿನ್ ಗೆ ಹೋಲಿಸಲಾಯಿತು ಎಂಬ ವಿಷಯವನ್ನೂ ಹೇಳಿದರು!

“ಚುನಾವಣೆಗೆ ಪೂರ್ವ ತಯಾರಿ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡಲೇ ಬೇಕಾದ ಅನಿವಾರ್ಯತೆಯಿತ್ತು. ಅದಕ್ಕಾಗಿ ಯೋಚಿಸತೊಡಗಿದಾಗ ಒಂದು ಉಪಾಯ ಹೊಳೆಯಿತು. ಈಗ ನೋಡಿ, ಭಾರತದಲ್ಲಿ ಮೋದಿಯನ್ನು ಅಮೇರಿಕಾದ ಟ್ರಂಪ್ ಗೆ ಹೋಲಿಸುತ್ತಾರೆ. ಅದೇ.. ಮೋದಿಯ ವಿರೋಧಿ ರಾಹುಲ್! ಅಮೇರಿಕಾದ ವಿರೋಧಿ ರಶ್ಯಾದ ವ್ಲಾಡಿಮಿರ್ ಪುಟಿನ್! ಸೋ, ಮೋದಿ ಮತ್ತು ರಾಹುಲ್ ವಿರೋಧಿಗಳು! ಅದಕ್ಕೆ ರಶ್ಯಾದ ಪುಟಿನ್ ರವರಿಗೆ ಹೋಲಿಸಲು ಪ್ರಾರಂಭಿಸಿದೆವು! ರಮ್ಯಾರವರೂ ಈ ಉಪಾಯವನ್ನೊಪ್ಪಿಕೊಂಡರು!”

ರಶ್ಯಾದ ವ್ಲಾಡಿಮಿರ್ ಪುಟಿನ್ ರನ್ನೇ ರಾಹುಲ್ ನಕಲು ಹೊಡೆದದ್ದು ಮಾತ್ರ ಭರ್ಜರಿಯಾಗಿಯೇ ಇತ್ತು!

ಕಳೆದೊಂದಷ್ಟು ತಿಂಗಳಿಂದ ಮೋದಿಯನ್ನು ಟ್ರಂಪ್ ಗೆ ಹೋಲಿಸಲು ಶುರು ಮಾಡಿದ್ದರಷ್ಟೇ! ಅದಕ್ಕೆ ಸರಿಯಾಗಿ ಕಾಂಗ್ರೆಸ್ ಕೂಡ 47 ವರ್ಷದ ರಾಹುಲ್ ನನ್ನು ರಶ್ಯಾದ ಅಧ್ಯಕ್ಷ ಪುಟಿನ್ ಜೊತೆ ಹೋಲಿಸಲು ಶುರು ಮಾಡಿದ್ದಕ್ಕೊಂದಿಷ್ಟು ಪುರಾವೆಗಳು ನಿಜಕ್ಕೂ ಅಚ್ಚರಿಗೊಳಿಸುತ್ತದೆ!

ಇತ್ತೀಚೆಗಷ್ಟೇ,. ರಾಹುಲ್ ತನ್ನ ನಾಯಿ ಪಿಡಿಯ ಬಗ್ಗೆ ಟ್ವೀಟ್ ಮಾಡಿದ್ದರು! ಜೊತೆಗೆ ತನಗಿಂತ ನನ್ನ ನಾಯಿ ಚುರುಕು ಎಂಬ ಸತ್ಯವನ್ನು ಹೇಳಿ ಸ್ವಪ್ರಶಂಸೆ ಮಾಡಿಕೊಂಡಿದ್ದರು! ಅದೇ ರೀತಿ, ಹಿಂದೊಮ್ಮೆ ಪುಟಿನ್ ಕೂಡ ನಾಯಿಯನ್ನು ಹಿಡಿದುಕೊಂಡ ಫೋಟೋವೊಂದನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು!

ಯಾವಾಗ ಭಾರತದ ಬಾಕ್ಸಿಂಗ್ ಆಟಗಾರ ವಿಜೇಂದರ್ ಸಿಂಗ್ ರಾಹುಲ್ ಗಾಂಧಿಗೆ ಒಂದಷ್ಟು ಪ್ರಶ್ನೆ ಕೇಳಿದರೋ, ಆಗ ಯಾವತ್ತೂ ಇಲ್ಲದ ಮಾರ್ಷಲ್ ಆರ್ಟ್ ಬ್ಲಾಕ್ ಬೆಲ್ಟ್ ವಿಚಾರವೊಂದನ್ನು ಹೇಳಿದ್ದ ರಾಹುಲ್ ಗಾಂಧಿ ಕೊನೆಗೆ ಆಯ್ಕಿಡೋ ಎಂಬ ಜಪಾನೀ ಮಾರ್ಷಲ್ ಆರ್ಟ್ ನಲ್ಲಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದ ರಾಹುಲ್ ಗಾಂಧಿ ಇತ್ತೀಚೆಗೆ ಒಲಿಯದ ಕಲೆಗೆ ಮಣಿದು ಸುಮ್ಮನೇ ಒಂದಷ್ಟು ಫೋಟೋ ಪೋಸ್ ಗಳನ್ನು ಟ್ವೀಟ್ ಮಾಡಿದ್ದಾರೆ!

ಮಜಾ ಅದೇ! ಪುಟಿನ್ ಕೂಡ ಇದೇ ರೀತಿಯ ಫೋಟೋ ವೊಂದನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದರಾದರೂ, ಪುಟಿನ್ ನಿಜಕ್ಕೂ ಬ್ಲಾಕ್ ಬೆಲ್ಟ್ ಪಡೆದವರು!

ಸೆಲ್ಫೀ ಕ್ರೇಜು! ರಾಹುಲಾ ರಾಹುಲಾ!

ಹಾ! ಪುಟಿನ್ ಬಿಂದಾಸ್ ಅಧ್ಯಕ್ಷರು! ಮಹಿಳಾ ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಪುಟಿನ್ ರನ್ನೇ ಕೊನೆಗೂ ಕಾಪಿ ಮಾಡಿದ್ದಾರೆ ರಾಹುಲ್! ಯಾವುದೋ ಕಾಂಗ್ರೆಸ್ ಯಾತ್ರೆಯಲ್ಲಿ ತುಲಿಕಾ ಎಂಬ ಅಭಿಮಾನಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದ ರಾಹುಲ್ ತಾನು ಪುಟಿನ್ ಎಂದು ಬೀಗಿದ್ದರು!

ಮುಂದೇನಿರಬಹುದು?!

ರಮ್ಯಾ ಪದೇ ಪದೇ ಈ ರಾಹುಲ್ ಗಾಂಧಿ ಎಂಬ ಜೋಕನ್ನು ಟ್ಬೀಟ್ ಮಾಡುತ್ತಲೇ ಇರುತ್ತಾಳೆನ್ನುವುದು ಎಷ್ಟು ಸತ್ಯವೋ, ಅದೇ ರೀತಿ ಈಕೆಯ ಮುಂದಿನ ಪೋಸ್ಟರ್ ಗಳ ಉಪಾಯ ಹೇಗಿರಬಹುದು?!

ಪುಟಿನ್ ಅಂಗಿ ತೆಗೆದು ಆರಾಮಾಗಿ ಕೂತು ಫೋಸ್ ಕೊಡುತ್ತಿದ್ದರು! ರಾಹುಲ್ ಕೂಡ ಅದೇ ರೀತಿ ಮಾಡಲು ಹೋಗಿ ತನ್ನ ಮರ್ಯಾದೆಯನ್ನು ಕಳೆದುಕೊಳ್ಳಬಹುದೇ?!

ಮೀನು ಹಿಡಿಯಲು ಇಷ್ಟ ಪಡುವ ಪುಟಿನ್ ಫಿಶಿಂಗ್ ಮಾಡಿದ ಫೋಟೋವನ್ನು ನೋಡಿದ ಮೇಲೆ ರಾಹುಲ್ ಕೂಡ ಮೀನು ಹಿಡಿಯಲು ಗಾಳ ಹಾಕಿ ತಾನೇ ಹಳ್ಳಕ್ಕೆ
ಬೀಳಬಹುದೇನೋ?! ಆದರೆ, ಫೋಟೋವಂತೂ ಬರುತ್ತದೆ! ಡೋಟ್ ವರಿ!

ಪುಟಿನ್ ತನ್ನ ದೇಶದ ಒಲಿಂಪಿಕ್ ಆಟಗಾರ್ತಿಯ ಕೈ ಹಿಡಿದು ಚುಂಬಿಸಿದ್ದರು! ಆಕೆ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಈ ವಿಶೇಷ ಅಭಿನಂದನೆ ಎಂದಿದ್ದರು ಪುಟಿನ್! ಅದನ್ನೂ ಕಾಪಿ ಮಾಡಲು ಹೋಗಿ ಕೈ ಚುಂಬಿಸಿ ಇನ್ಯಾವ ಆಟಗಾರ್ತಿಯ ಹತ್ತಿರ ಕಪಾಳ ಮೋಕ್ಷ ಮಾಡಿಕೊಳ್ಳುವರೋ! ರಮ್ಯಾಳಿಗೇ ಗೊತ್ತು!

ಪಾಪ! ಪುಟಿನ್ ಸಾಹಸಿಗರು! ಚಾರಣ ಅಂತೆಲ್ಲ ತೆರಳುವ ಪುಟಿನ್ ರನ್ನೇ ಹೋಲಬೇಕೆಂಬ ಕಾರಣಕ್ಕೆ ರಮ್ಯಾ ಹೇಳಿದಳಂತ ಸಾಹಸ ಮಾಡಲಿಕ್ಕೆ ಹೋಗಿ ಬೆನ್ನು ಮೂಳೆ ಮುರಿದು ಕೊಂಡರೆ ಛೇ!

ಏನೇ ಆಗಲಿ! ಪುಟಿನ್ ಗೆ ತನ್ನನ್ನು ತಾ ಹೋಲಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿ ಆ ಹೆಂಗಸರ ಶೌಚಾಲಯಕ್ಕೆ ನುಗ್ಗುವುದನ್ನು ಎಲ್ಲಿಂದ ನಕಲು ಮಾಡಿದರೋ ರಮ್ಯಾಳನ್ನೇ ಕೇಳಬೇಕಷ್ಟೇ! ಯಾಕೆಂದರೆ, ಪುಟಿನ್ ಇದನ್ನಂತೂ ಮಾಡಿಲ್ಲ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post