X

ರಾಹುಲ್ ಗಾಂಧಿ ಭಾರತೀಯ ಪ್ರಜೆಯಲ್ಲವೇ?!! ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ ಡಾ.ಸುಬ್ರಹ್ಮಣಿಯನ್ ಸ್ವಾಮಿ!

ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬದ ಮೇಲೆ ಸುಬ್ರಹ್ಮಣಿಯನ್ ಸ್ವಾಮಿಗಿರುವಷ್ಟು ಕೋಪ ಬೇರೆ ಯಾರಿಗೂ ಇರಲಿಕ್ಕಿಲ್ಲ! ಅದೇ ರೀತಿ, ಸ್ವಾಮಿಯವರಿಗೆ ಗೊತ್ತಿರುವಷ್ಟು ಕೆಲವೊಂದು ರಹಸ್ಯಗಳೂ ಸಹ ಯಾರಿಗೂ ಗೊತ್ತಿರಲಿಕ್ಕಿಲ್ಲ! ಅದಕ್ಕೇ, ದೇಶವನ್ನು ಇನ್ನೂ ಹಾಳುಗೆಡವುದು ಬೇಡವೆಂದು ಗಾಂಧಿ ಕುಟುಂಬದ ಒಂದೊಂದೇ ಮಾಹಿತಿಗಳನ್ನು ಬಯಲು ಮಾಡುತ್ತಿದ್ದಾರೆ ಡಾ.ಸುಬ್ರಹ್ಮಣಿಯನ್ ಸ್ವಾಮಿ!

ಈಗ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ!

ಹಾ! ಈ ಸಲ ಸುಬ್ರಹ್ಮಣಿಯನ್ ಸ್ವಾಮಿಯವರು ರಾಹುಲ್ ಗಾಂಧಿಯ ಬುಡಕ್ಕೇ ಕೈ ಹಾಕಿದ್ದಾರೆ! ಗೃಹ ಸಚಿವಾಲಯಕ್ಕೆ ದೂರು ಕೊಟ್ಟಿರುವ ಸ್ವಾಮಿ, ರಾಹುಲ್ ಗಾಂಧಿ ಹೊಂದಿರುವ ಬ್ರಿಟಿಷ್ ಕಂಪೆನಿಯನ್ನು ಸಂಪೂರ್ಣವಾಗಿ ತನಿಖೆ ಮಾಡುವಂತೆ ವಿನಂತಿಸಿದ್ದಾರೆ!

2003 ರಲ್ಲಿ Backops Limited ಎಂಬ ಬ್ರಿಟಿಷ್ ಕಂಪೆನಿಯನ್ನು ರಾಹುಲ್ ಲಂಡನ್ ನಲ್ಲಿ ಸ್ಥಾಪಿಸಿದ್ದರು., ಲಂಡನ್ನಿನಲ್ಲಿ ಕಂಪೆನಿ ಸ್ಥಾಪಿಸುವುದಕ್ಕಿಂತ ಮುಂಚೆ, ಲಂಡನ್ನಿನ ಸರಕಾರಕ್ಕೆ ಕಂಪೆನಿ ಅಧ್ಯಕ್ಷರ ದಾಖಲೆಗಳನ್ನು ನೀಡುವಾಗ, ‘ಬ್ರಿಟಿಷ್ ಪ್ರಜಾಪ್ರಭುತ್ವ’ ಇರುವುದಾಗಿ ಸ್ವತಃ ರಾಹುಲ್ ಗಾಂಧಿ ಘೋಷಿಸಿಕೊಂಡಿದ್ದರು. ಕಂಪೆನಿಯ ದಾಖಲೆಗಳನ್ನು ತೆಗೆದಿರುವ ಸ್ವಾಮಿಯವರು ಈಗ ರಾಹುಲ್ ಒಡೆತನದ ಕಂಪೆನಿಯ ದಾಖಲೆಗಳನ್ನು ಪೂರ್ಣವಾಗಿ ತನಿಖೆ ನಡೆಸಬೇಕೆಂದು ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ!

ಭಾರತೀಯ ರಾಷ್ಟ್ರೀಯತೆಯ ಕಾನೂನಿನ, ಪರಿಚ್ಛೇಧ 9 ರ ಪ್ರಕಾರ, “ಭಾರತದಲ್ಲಿರುವುದು ಏಕಪೌರತ್ವ ನೀತಿ. ಅಂದರೆ, ಭಾರತೀಯನಾದವನು ಅಕಸ್ಮಾತ್ ಬೇರೆ ದೇಶಗಳ ಪೌರತ್ವವನ್ನು ಹೊಂದಿದ್ದರೆ, ಆತ ಭಾರತದ ಪೌರತ್ವವನ್ನು ಕಳೆದುಕೊಳ್ಳುತ್ತಾನೆ. ಅದಲ್ಲದೇ, ತನ್ನ ಭಾರತದ ಪೌರತ್ವಕ್ಕೆ ಸಂಬಂಧಪಟ್ಟ ಪಾಸ್ ಪೋರ್ಟ್, ವೋಟರ್ ಐಡಿ, ಹಾಗೂ ಇತರೆ ಐಡಿ ಕಾರ್ಡ್ ಗಳನ್ನು ಭಾರತದ ಪೌರತ್ವವನ್ನು ಕಳೆದುಕೊಂಡ ನಂತರ ಬಳಸುವಂತಿಲ್ಲ! ಬಳಸಿದ್ದಾದರೆ ಶಿಕ್ಷಾರ್ಹ ಅಪರಾಧವೂ ಕೂಡ! ”

ಆದರೆ, ರಾಹುಲ್ ಗಾಂಧಿ ಮಾತ್ರ ಎರಡೂ ದೇಶಗಳ ಪೌರತ್ವವನ್ನು ಹೊಂದಿ ಕಾನೂನು ಉಲ್ಲಂಘನೆ ಮಾಡಿದ್ದಾರೆಯೇ?! ಅಥವಾ, ಭಾರತದ ಪೌರತ್ವವೇ ಇಲ್ಲವೋ?!

The companies Act.. Page 1

Page 2

Page 3

Page 4

Page 5

Page 6 – BRITISH CITIZENSHIP

Page 7

Page 8

Page 9

Page 10

Page 11 – Company DISSOLVED!

“ನೀವು ನೋಡಬಹುದು! ಕಂಪೆನಿಯ ವಾರ್ಷಿಕ ಆದಾಯದ ದಾಖಲೆಗಳಲ್ಲಿ, ರಾಹುಲ್ ಗಾಂಧಿ ತನ್ನ ಜನ್ಮದಿನಾಂಕವನ್ನು ಸರಿಯಾಗಿ ನಮೂದಿಸಿದ್ದಾರಾದರೂ, ತನ್ನ ಪ್ರಜಾಪ್ರಭುತ್ವದಲ್ಲಿ ಘೋಷಿಸಿಕೊಂಡಿರುವುದು ‘ಬ್ರಿಟಿಷ್’ ಎಂದು! ಅದಲ್ಲದೇ., ತನ್ನ ವಿಳಾಸವನ್ನು ನಮೂದಿಸಿರುವುದು 51 ಸೌತ್ ಗೇಟ್ ಸ್ಟ್ರೀಟ್, ವಿಂನ್ಚೆಸ್ಟರ್, ಹಾಂಮ್ಸ್ ಪೈರ್ S023 9EH. || On page 6 bottom of the enclosed document||.”

2009 ರಲ್ಲಿಯೇ ಕಂಪೆನಿಯ ಬಾಗಿಲು ಹಾಕಿದ್ದರೂ ಸಹ, ರಾಹುಲ್ ಗಾಂಧಿ ತನ್ನ ದಾಖಲೆಗಳಲ್ಲಿ ಬ್ರಿಟಿಷ್ ಪ್ರಜೆ ಎಂದೇ ಘೋಷಿಸಿಕೊಂಡಿದ್ದಾರೆ!

2015 ರಲ್ಲಿಯೇ, ಸುಬ್ರಹ್ಮಣಿಯನ್ ಸ್ವಾಮಿ ಈ ವಿಚಾರದ ಬಗ್ಗೆ ಲೋಕಸಭಾ ವಕ್ತಾರರಾದ ಸುಮಿತ್ರಾ ಮಹಾಜನ್ ರ ಎದುರು ಪ್ರಸ್ತಾಪಿಸಿದಾಗ, ಸುಮಿತ್ರಾ ಮಹಾಜನ್ ‘ಎಥಿಕ್ಸ್ ಕಮಿಟಿ’ಯವರಿಗೆ ಈ ವಿಚಾರವನ್ನು ಸಂಪೂರ್ಣವಾಗಿ ತನಿಖೆ ಮಾಡಿ ವರದಿ ಸಲ್ಲಿಸಿ ಎಂದು ಆಜ್ಞಾಪಿಸಿದ್ದರಲ್ಲದೇ, ರಾಹುಲ್ ಗಾಂಧಿಯಿಂದ ಪ್ರತಿಕ್ರಿಯೆ ನಿರೀಕ್ಷಿಸಿದ್ದರು. ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರಿಸದೇ, ‘ನಾನೊಬ್ಬ ಭಾರತೀಯ ಹಾಗೂ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ’ ಎಂದು ಹೇಳಿ ಜಾರಿಕೊಂಡಿದ್ದರು.

ಈ ಮಾಹಿತಿ ಯೊಂದಿದೆಯಲ್ಲವಾ?! ಅದು ರಾಹುಲ್ ಗಾಂಧಿಯನ್ನು ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವೇ ಇಲ್ಲದಂತೆ ಮಾಡುತ್ತದೆ. ಅದಲ್ಲದೇ, ಸೋನಿಯಾ ಗಾಂಧಿಗೂ ಕೂಡ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಅಡ್ಡಿಯಾಗಿದ್ದು ಇದೇ ಪೌರತ್ವ!

ಈಗಲಾದರೂ ಯೋಚಿಸಬೇಕಿದೆ ! ಭಾರತದ ಪೌರತ್ವ ಹೊಂದಿರುವವನು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದಷ್ಟೇ! ರಾಜಕಾರಣಿಗೆ ಬೇಕಾಗಿರುವ ಮೊದಲ ಅರ್ಹತೆಯೇ ಭಾರತೀಯ ಪೌರತ್ವ! ಅದೇ ಇಲ್ಲವೆಂದಾದರೆ. . . .?!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post