X

ರೋಲ್ ಕಾಲ್ ಸಂಘಟನೆಯಿಂದ ಹಿಂದೂ ಕಾರ್ಯಕರ್ತನ ಅಪಹರಣ?!

“ಕನ್ನಡವೇ ಸತ್ಯ! ಕನ್ನಡವೇ ನಿತ್ಯ! ” ಎಂದ ಧ್ವನಿಗಳು ಇವತ್ತು ಸಂಘವೊಂದನ್ನು ಕಟ್ಟಿಕೊಂಡು, ತನ್ಮೂಲಕ, ಭಾಷೆಯ ಮೇಲೆ ಗೂಂಡಾಗಿರಿಗೂ ಇಳಿದು ತಾಯಿ ಭುವನೇಶ್ವರಿಯನ್ನೇ ಅವಮಾನಿಸಿಬಿಟ್ಟರಲ್ಲ?! ಅಯ್ಯೋ! ಕನ್ನಡಕ್ಕಿಂತ ಗೂಂಡಾಗಿರಿಯ ಚಟವೇ ಹೆಚ್ಚಾಗಿದ್ದವರಿಗೆ, ಒಂದು ಹೇಳಿಕೊಳ್ಳುವಂತ ಅಸ್ತಿತ್ವ ಬೇಕಿತ್ತು! ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವ ಹಾಗೆ, ‘ಕನ್ನಡ’ ಭಾಷೆಯ ಮೇಲೆ Official ರಾಜಕಾರಣ ಮಾಡಲಾಗದಿದ್ದರೂ, ಭಾಷೆಯನ್ನು ಗುತ್ತಿಗೆ ತೆಗೆದುಕೊಂಡು ‘ಭಾಷಾಕಾರಣ’ ಮಾಡಬಹುದೆಂದುಕೊಂಡ ಒಂದಿಷ್ಟು ‘ನಮ್ಮದು ಕನ್ನಡ ಸಂಘ’ , ಕರ್ನಾಟಕವನ್ನು ರಕ್ಷಣೆ ಮಾಡುವ ಮಹಾನ್ ಕಾರ್ಯ ಸಂಘಟನೆ ಎಂದು ಶುರು ಹಚ್ಚಿದವು! ಇರಲಿ! ಕನ್ನಡಕ್ಕೋಸ್ಕರ ಧ್ವನಿ ಎತ್ತೋ ಎಂದಬ್ಬರಿಸಿದ್ದು ಕನ್ನಡ ಭಾಷೆಯನ್ನು ಸ್ವಲ್ಪವಾದರೂ ಉಳಿಸೀತೇನೋ ಎನ್ನುವಾಗಲೇ, ಹಿನ್ನೆಲೆಯಲ್ಲಿ ದುಡ್ಡು ಹರಿದಾಡತೊಡಗಿತ್ತು! ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಕನ್ನಡವೇ ಸರಿಯಾಗಿ ಬಾರದವರನ್ನು ನೇಮಿಸಿ, ಸಾಹಿತ್ಯ, ಲಿಪಿ, ಸಂಸ್ಕೃತಿಯ ಗಂಧ ಗಾಳಿಯೂ ಗೊತ್ತಿಲ್ಲದೊಬ್ಬನನ್ನು, ‘ಅಧ್ಯಕ್ಷ’ನಾಗೆಂದು, ಹೆಸರನ್ನೂ ಬದಲಿಸಿ
ಪ್ರಚಾರ ಗಿಟ್ಟಿಸತೊಡಗಿತು!

ಆದರೇನು ಗೊತ್ತಾ?!

ನೀಲಿಚಿತ್ರತಾರೆಯನ್ನು ಬಾಲಿವುಡ್ ‘ಅದ್ಭುತ ನಟಿ’ ಎಂದೊಪ್ಪಿಕೊಂಡಿದ್ದೇ, ಅದಾವುದೋ ಕಾರ್ಯಕ್ರಮಕ್ಕೆ ಕರ್ನಾಟಕಕ್ಕೆ ಬರುತ್ತಾಳೆಂಬ ಸುದ್ದಿ ಸಿಕ್ಕಿದ್ದೇ, ಕನ್ನಡ ಸಂಘಟನೆಯೊಂದು ಭೀಕರ ಪ್ರತಿಭಟನೆ ನಡೆಸಿ, ಕರ್ನಾಟಕಕ್ಕೆ ಬಂದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎಂದೆಲ್ಲ ಅಬ್ಬರಿಸಿ ಹೋರಾಡಿದ್ದು ನೋಡಿದರೆ ಅಬ್ಬೋ! ಕರ್ನಾಟಕದ ಸಂಸ್ಕೃತಿ ಉಳಿಸಿಕೊಳ್ಳುತ್ತಿದ್ದಾರೆ ಎಂದು ಕನ್ನಡಿಗರಿಗೆ ಅಭಿಮಾನ ಹೆಚ್ಚಾಗಿ ಹೋಗಿತ್ತು! ಕೊನೆಗೆ ಬಂತು ನೋಡಿ ಸುದ್ದಿ! ಎದುರುಗಡೆ ಸನ್ನಿ ಬೇಡ ಎಂದಿದ್ದವರು, ಹಿಂದೆ 30 ಲಕ್ಷ  ಜೇಬಿಗೆ ಹಾಕಿಸಿಕೊಂಡು ಸನ್ನಿ ಕರೆಸಲು ಒಪ್ಪಿಗೆ ಕೊಟ್ಟಿದ್ದು ಬಯಲಾಗುತ್ತಲೇ, ಕನ್ನಡ ಸಂಘದ ‘ನಾನು ಚೂಟುವಂತೆ ಮಾಡುತ್ತೇನೆ, ನೀನು ಅಳುವಂತೆ ಮಾಡು’ ಎಂಬ ಧ್ಯೇಯವೊಂದು ಗೊತ್ತಾಗಿ ಹೋಯಿತೋ, ಸ್ವಾಭಿಮಾನಿ ಕನ್ನಡಿಗರು ತಿರುಗಿ ಬಿದ್ದರು! ಭಾಷೆ ಇಟ್ಕೊಂಡು ರಾಜಕೀಯ ಮಾಡ್ತೀರೇನ್ರೋ ಎಂದು ಕನ್ನಡ ಸಂಘಟನೆಯ ಅಧ್ಯಕ್ಷರಿಗೆ, ನಾಯಕರಿಗೆ ಮಾತಿನಲ್ಲಿಯೇ ಬಿಸಿ ಕಾಯಿಸತೊಡಗಿದರು!

ಅಲ್ಲೇ ಆಗಿದ್ದು ನೋಡಿ! ಮುಂಚೆ ಇಂದಲೂ, ಈ ಕನ್ನಡ ಸಂಘಟನೆಗಳ ನಾಯಕರ ‘ಹಿನ್ನೆಲೆ’ ಬಗ್ಗೆ ತಿಳಿದಿದ್ದ ಕನ್ನಡ ಪರ ಸ್ವಾಭಿಮಾನಿ ಯುವಕನೋರ್ವ ಧ್ವನಿ ಎತ್ತಿದ್ದರು! ನಾಯಕರ ಬಣ್ಣವನ್ನೆಲ್ಲ ಬಯಲು ಮಾಡಿದ್ದ ಆ ಕನ್ನಡಿಗನ ಬಗ್ಗೆ ಸ್ವತಃ ಕನ್ನಡ ಸಂಘಟನೆಗೆ ದ್ವೇಷ ಹುಟ್ಟಿಬಿಟ್ಟಿತ್ತು! ಹೀಗೇ ಮುಂದುವರೆದರೆ, ನಮ್ಮ ಭಾಷೆಯ ಹೆಸರಿನಲ್ಲಿ ನಡೆಯುವ ರೋಲ್ ಕಾಲು, ಡೀಲು, ಸುಪಾರಿಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ರಾತ್ರೋರಾತ್ರಿ 20 ಜನ ಕಾರ್ಯಕರ್ತರು ಅಲಿಯಾಸ್ ಗೂಂಡಾಗಳು ನಾಲ್ಕು ಕಾರುಗಳಲ್ಲಿ ಬಂದು ಅಪಹರಣ ಮಾಡಿದ್ದ್ದಾರೆ! ಮೂಲಗಳ ಪ್ರಕಾರ, ಅಷ್ಟಕ್ಕೇ ಬಿಡದ ಅಪಹರಣಕಾರರು, ಎರಡು ತಾಸುಗಳ ಕಾಲ ಅಪಹರಣ ಸಂಘಟನೆಯ ಕಾರ್ಯಾಲಯದಲ್ಲಿಟ್ಟು ಸಿಕ್ಕಿದ್ದರಲ್ಲಿ ಬಡಿದು, ಕತ್ತಿಗೆ ಮಚ್ಚಿಟ್ಟು, ‘ಇನ್ನು ಮುಂದೆ ನಮ್ಮ ಸಂಘಟನೆ ಯ ಬಗ್ಗೆ ಬರೆದರೆ ನೀನೂ ಇರಲ್ಪ, ಜೊತೆಗೆ ನಿನ್ನ ತಂಗಿಯ ಮೇಲೂ ಕಣ್ಣಿಡಬೇಕಾಗುತ್ತೆ” ಎಂದಬ್ಬರಿಸಿ, ಒತ್ತಾಯ ಪೂರ್ವಕವಾಗಿ ಆ ಕನ್ನಡಿಗನ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಪರ ತಾವೇ ಬರೆದು ಫೋಸ್ಟ್ ಹಾಕಿಕೊಳ್ವಷ್ಟರ ಮಟ್ಟಿಗೆ ಕನ್ನಡ ಸಂಘಟನೆಯೊಂದು ಭಾಷೆಯ ಮೇಲಿನ ಪ್ರೀತಿ ಮೆರೆದಿದೆ!

ಆತ ಬೇರೆ ಯಾರೂ ಅಲ್ಲ, ಕಿಶೋರ್ ಡಿ ಎಲ್!

ಕರ್ನಾಟಕವನ್ನು ಅದಮ್ಯವಾಗಿ ಪ್ರೀತಿಸುವ, ಸಂಘದ ಕಾರ್ಯಕರ್ತನಾಗಿರುಗ, ರಾಷ್ಟ್ರದ ಅಭ್ಯುದಕಯಕ್ಕೆ ದುಡಿಯುವ ಅಪ್ಪಟ ಭಾರತೀಯ ಆತ! ಜೊತೆಗೆ, ಭಾಷೆಯ ಮೇಲೆ ರಾಜಕಾರಣ ಮಾಡುವವರನ್ನೂ ಬೆಂಡೆತ್ತುತ್ತಿದ್ದ ನಿರ್ಭಯ ವ್ಯಕ್ತಿ! ಸನ್ನಿ ನೈಟ್ಸ್ ಹಗರಣವೊಂದು ಎಲ್ಲಿ ಬಯಲಾಯಿತೋ, ಕರ್ನಾಟಕದ ಅಪಹರಣ ವೇದಿಕೆಗೆ ಹಿಗ್ಗಾಮುಗ್ಗಾ ಝಾಡಿಸಿದ್ದ ಕಿಶೋರ್ ಡಿ ಎಲ್ ರನ್ನು ಅದೇ ಕನ್ನಡವನ್ನು ರಕ್ಷಣೆ ಮಾಡುತ್ತೇವೆಂದು ಹೊರಟವರು ಒಬ್ನ ಕನ್ನಡಿಗನ ಅಪಹರಣ ಮಾಡಿ, ತಾಯಿ ಭುವನೇಶ್ವರಿಯ ದೀಕ್ಷೆ ತೆಗೆದುಕೊಂಡವರು ‘ಕಿಶೋರ್ ಡಿ ಎಲ್ ಸಹೋದರಿಯ ಮೇಲೂ ಕಣ್ಣಿಡುವಷ್ಟರ’ ಮಟ್ಟಿಗಾದಾಗ, ನಮಗೂ ಕೇಳಬೇಕಿದೆ! ‘ಏನಾಗ್ತಿದೆ ಕರ್ನಾಟಕದಲ್ಲಿ?!’ ಎಂದು!

ದಿನಗಳಿಂದ ಕಿಶೋರ್ ನ ಫೋನ್ ಸ್ವಿಚ್ ಆಫ್ ಆಗಿದೆ! ಅವರ ಫೇಸ್ ಬುಕ್ ಖಾತೆ ಮಾತ್ರ ನಿರಾತಂಕವಾಗಿ ಪೋಸ್ಟ್ ಅಪ್ಡೇಟ್ ಮಾಡುತ್ತಲೇ ಇದೆ! ಮೊನ್ನೆ ಮೊನ್ನೆಯವರೆಗೂ, ಕನ್ನಡ ಸಂಘಟನೆಯ ರೋಲ್ ಕಾಲ್ ಗಳ ವಿರುದ್ಧ ವಿದ್ದ ಕಿಶೋರ್ ಡಿ ಎಲ್,ಹಿಂದುತ್ವ ಎಂದರೆ ಪ್ರಾಣವನ್ನೇ ಕೊಡುವಷ್ಟಿದ್ದ ಕಿಶೋರ್ ಡಿ ಎಲ್, ನೆನ್ನೆ ಇದ್ದಕ್ಕಿದ್ದ ಹಾಗೆ, ಹಿಂದುತ್ವದ ವಿರೋಧಿಯಾಗಿ, ಕನ್ನಡ ಸಂಘಟನೆಯ ಪರವಾಗಿ ಅದೂ, ತನ್ನದಲ್ಲದ ಬರವಣಿಗೆಯ ಶೈಲಿಯಲ್ಲಿ ಬರೆಯುತ್ತಾರೆಂದರೆ, ಅನುಮಾನ ಬರುವುದಿಲ್ಲವಾ?!

ಹಾಗೇ ಅನುಮಾನ ಬಂದು ಜಾಡು ಹಿಡಿದು ಹೊರಟವರಿಗೆ, ಕಿಶೋರ್ ಡಿ ಎಲ್ ರವರನ್ನು ಅಪಹರಣಾ ವೇದಿಕೆ ರಾತ್ರೋ ರಾತ್ರಿ ಅಪಹರಿಸಿದೆ ಎಂಬ ಮಾಹಿತಿ ತಿಳಿದುಬಂದಾಗ ಏನಾಗಿರಬೇಡ?! ಕನ್ನಡವನ್ನು ರಕ್ಷಣೆ ಮಾಡುತ್ತೇನೆಂದು ಹೊರಟವರು ಗೂಂಡಾಗಿರಿಗಿಳಿದು ಬಿಡುತ್ತದೆಯೆಂದರೆ ಇಡೀ ಕರ್ನಾಟಕಕ್ಕೇ ಅವಮಾನವಲ್ಲವಾ?! ಕಿಶೋರ್ ಡಿ ಎಲ್ ರ ‘ಬದಲಾದ ಭಾಷೆ, ಬದಲಾದ ನುಡಿ’ ಕಂಡವರು, ‘ಏನೋ ಯಡವಟ್ಟಾಗಿದೆ’ ಎಂದುಕೊಳ್ಳುವ ಇಷ್ಟೊತ್ತಿಗೆ ಕಿಶೋರ್ ಡಿ ಎಲ್ ರ ಅಪಹರಣದ ಸುದ್ದಿ ಬೆಳಕಿಗೆ ಬಂದಿದೆ!

ಇಷ್ಟು ದಿನವೂ ರೋಹಿತ್ ಚಕ್ರತೀರ್ಥರ ಅಭಿಮಾನಿಯಾಗಿದ್ದ, ಬಿಜೆಪಿ ಕಾರ್ಯಕರ್ತರಾಗಿದ್ದ, ಹಿಂದುತ್ವಕ್ಕೆ ಬೆಂಬಲಿಸುತ್ತಿದ್ದ, ಸ್ವಯಂ ಸೇವಕರಾಗಿದ್ದ, ಕನ್ನಡದ ರೋಲ್ ಕಾಲ್ ಸಂಘಟನೆಗೆ ಹುಚ್ಚು ಬಿಡಿಸುತ್ತಿದ್ದ ಕಿಶೋರ್ ಡಿ ಎಲ್ 24 ಗಂಟೆಯೊಳಗೆ ಬದಲಾಗಿ ಹೋಗಲು ಹೇಗೆ ಸಾಧ್ಯ?! ಇದು ಬದಲಾಗಿ, ಬರೆದಿರುವುದಲ್ಲ, ಬದಲು ಬರೆಸಿರುವುದು! ಅಷ್ಟೇ!

ಶ್!!! ಕನ್ನಡದ ಮಾಧ್ಯಮಗಳು ಮಾತ್ರ ನಿಶ್ಯಬ್ಧ!!!

ಹೇಳಿ ಕೇಳಿ ಕನ್ನಡದ ಸಂಘಟನೆ! ಅಪಹರಣ ನಡೆದು 24 ಗಂಟೆ ಕಳೆದರೂ, ಉಹೂಂ! ಸ್ಫೋಟಕ ಸುದ್ದಿ ಎಂದು ಕೋಳಿ ನಾಯಿ ಜಗಳವಾಡಿದ್ದನ್ನೂ ಬ್ರೇಕಿಂಗ್ ಆಗಿ ತೋರಿಸುವ ಮಾಧ್ಯಮಗಳು ಇದರ ಬಗ್ಗೆ ತುಟಿಪಿಟಿಕ್ ಎಂದಿಲ್ಲ! ಫೇಸ್ ಬುಕ್ಕಿನಲ್ಲಿ ಕಿಶೋರ್ ಡಿ ಎಲ್ ರದ್ದೇ ಸುದ್ದಿ ಹರಿದಾಡುವಾಗ, ಉಹೂಂ! ವಿಷಯವೇ ಗೊತ್ತಿಲ್ಲ ಎಂದು ಸುಮ್ಮನುಳಿದಿದ್ದಾರೆ! ಯಾಕೆ?! ಮಾತನಾಡಿದರೆ, ಗೂಂಡಾಗಳು ಬರುತ್ತಾರೆಂದು ಉಗುಳು ನುಂಗಿ ಕುಳಿತುಬಿಟ್ಟರಾ?! ಛೇ!

ಈ ಹಿಂದೆ, ಭಾಷೆಯ ರಾಜಕಾರಣ ಮಾಡುವಾಗಲೂ, ಮುಂಬೈನಲ್ಲಿಯೂ ಹೀಗೇ ಆಗಿತ್ತು! ಭಾಷೆ ಎನ್ನುತ್ತಲೇ ಮುಂಬೈ ಡಾನ್ ಆಗಿದ್ದವನನ್ನು ಕಂಡು , ಸ್ವತಃ ಅಲ್ಲಿನ ಸರಕಾರವೇ ಬೆಚ್ಚಿತ್ತು! ಕರ್ನಾಟಕ ಸಂಘದ ಮುಖಂಡನ ದಬ್ಬಾಳಿಕೆ, ಗೂಂಡಾಗಿರಿ ಕಂಡಾಗ ಅದೇ ನೆನಪಾಗುತ್ತದೆ

ಈಗಲಾದರೂ, ಯೋಚಿಸಬೇಕಿದೆ! ಹೀಗೇ ಬಿಟ್ಟರೆ, ಮುಂದೊಂದು ದಿನ ನಮ್ಮ ದೇಶದವನಾಗಿದ್ದರೂ, ಪಾಕ್ ನಲ್ಲಿ ಕೂತ್ಕೊಂಡು ಗೂಂಡಾಗಿರಿ
ಮಾಡುವವನಿಗಿಂತ ಈ ಕನ್ನಡ ಸಂಘಟನೆಯ ಮುಖಂಡ ದೊಡ್ಡ ಗೂಂಡಾ ಆಗುವುದರಲ್ಲಿ ಸಂಶಯವೇ ಇಲ್ಲ ಬಿಡಿ!!

– ನಿಹಾರಿಕಾ ಶರ್ಮಾ

Editor Postcard Kannada:
Related Post