X

ವಿಶೇಷ ಸುದ್ದಿ! ಉದ್ಯಮ ಸ್ನೇಹಿ ರಾಷ್ಟ್ರ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟು ಗೊತ್ತೇ?!

ಮೋದಿಯನ್ನು ಟೀಕೆ ಮಾಡ್ತಾ ಮಾಡ್ತಾ, ಮೋದಿಯ ಯೋಜನೆಗಳನ್ನು ತೆಗಳುತ್ತಾ ತೆಗಳುತ್ತಾ ಬ್ಯುಸಿಯಾಗಿರುವಾಗ ಅತ್ತ ಸರಳ ಉದ್ಯಮ ನೀತಿಗೆ ಸಂಬಂಧಿಸಿದ 190 ದೇಶಗಳ ಪಟ್ಟಿಯಲ್ಲಿ ಒಮ್ಮೆಲೇ 30 ಸ್ಥಾನ ಬಡ್ತಿ ಪಡೆದುಕೊಂಡು 130ರಿಂದ 100ನೇ ಸ್ಥಾನಕ್ಕೇರುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ವಿಚಾರ ಗೊತ್ತೇ ಆಗಲಿಲ್ಲ. ಎಂಥಾ ವಿಪರ್ಯಾಸ ನೋಡಿ ನಾವೆಲ್ಲಾ ಮೋದಿಯ ಹೊಸ ಯೋಜನೆಗಳಾದ ನೋಟು ಅಮಾನ್ಯೀಕರಣ, ಜಿಎಸ್‍ಟಿ ಅನುಷ್ಠಾನದಿಂದ ಭಾರತ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ ಎಂದು ಟೀಕಿಸಿದ್ದೇ ಟೀಕಿಸಿದ್ದು. ಒಂದು ವೇಳೆ ಈ ಯೋಜನೆಗಳಿಂದ ಭಾರತ ನಿಜವಾಗಿಯೂ ಆರ್ಥಿಕ ಹಿನ್ನಡೆ ಅನುಭವಿಸಿದ್ದರೆ ಭಾರತ 30ನೇ ಸ್ಥಾನ ಪಡೆಯಲು ಸಾಧ್ಯವಿತ್ತೇ ಎಂಬ ಸರಳ ಪ್ರಶ್ನೆಯೂ ನಮ್ಮ ತಲೆಯಲ್ಲಿ ಹೊಳೆಯಲೇ ಇಲ್ಲ…

ಹೌದು ಸರಳ ಉದ್ಯಮ ನೀತಿಗೆ ಸಂಬಂಧಿಸಿದ 190 ದೇಶಗಳ ಪಟ್ಟಿಯಲ್ಲಿ ಒಮ್ಮೆಲೇ 30 ಸ್ಥಾನ ಬಡ್ತಿ ಪಡೆದುಕೊಂಡು 130ರಿಂದ 100ನೇ ಸ್ಥಾನಕ್ಕೇರುವ
ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ವಿಶ್ವಬ್ಯಾಂಕ್
ಪ್ರಕಟಿಸಿರುವ 2018ರ ಸಾಲಿನ ರ್ಯಾಂಕಿಂಗಳ ಕುರಿತು ಮಾಹಿತಿ ಹಂಚಿಕೊಂಡರು. ಜೊತೆಗೆ ವಿಶ್ವ ಬ್ಯಾಂಕಿನ ಸ್ಥಾನ ಪಟ್ಟಿಯಲ್ಲಿ ಟಾಪ್ 50ರೊಳಗೆ
ಸೇರಿಕೊಳ್ಳುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದರು. ಇದೊಂದು ಅತ್ಯಂತ ಮಹತ್ವದ ಸುದ್ದಿಯಾಗಿದ್ದರು ಟಿವಿ ಚಾನೆಲ್‍ಗಳೆಲ್ಲಾ ಬ್ರೇಕಿಂಗ್‍ನಲ್ಲೇ ತೃಪ್ತಿಪಟ್ಟುಕೊಂಡವು. ರಾಹುಲ್ ಗಾಂಧಿ ಮೋದಿಯ ಯೋಜನೆಗಳನ್ನು ಟೀಕಿಸುವುದನ್ನೇ ವರದಿ ಮಾಡುತ್ತಾ ಕಾಲಕಳೆದುಕೊಂಡ ಮೀಡಿಯಾಗಳಿಗೆ ಭಾರತ ಮೂವತ್ತನೇ ಸ್ಥಾನ ಪಡೆದುಕೊಂಡಿರುವುದನ್ನು ವರದಿ ಮಾಡಲು ಪುರ್ಸೊತ್ತೇ ಇರಲಿಲ್ಲ.

ಅಂದಹಾಗೆ ವಿಶ್ವಬ್ಯಾಂಕ್ ವರದಿಯಲ್ಲೇನಿದೆ ಗೊತ್ತೇ? ನಿಜವಾಗಿಯೂ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ವಿಷಯ. ನಮ್ಮ ಭಾರತ ಪ್ರಪಂಚದ ಅಗ್ರ 10
ಸುಧಾರಣೆಯಲ್ಲಿ ಪ್ರಮುಖ ಪ್ರಾದೇಶಿಕ ಸುಧಾರಕ ರಾಷ್ಟ್ರವಾಗಿದೆ. ಜೊತೆಗೆ ಸುಲಭವಾಗಿ ತೆರಿಗೆ ಪಾವತಿಸುವ, ಸಾಂಸ್ಥಿಕ ತೆರಿಗೆಗೆ ಅನುಗುಣವಾಗಿ ಸಜ್ಜುಗೊಳಿಸುವ ಆಡಳಿತಾತ್ಮಕ ಕ್ರಮಗಳನ್ನು ಭಾರತ ಪರಿಚಯಿಸಿದೆ. ಹೊಸ ಉದ್ಯಮ ಪ್ರಾರಂಭಿಸಲು ಕಾಯಂ ಖಾತೆ ಸಂಖ್ಯೆ (ಪ್ಯಾನ್), ತೆರಿಗೆ ಖಾತೆ ಸಂಖ್ಯೆಗಾಗಿ ಅರ್ಜಿಗಳನ್ನು ವಿಲೀನಗೊಳಿಸುವ ಸೌಲಭ್ಯ ಹೊಂದಿದೆ. ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಗೊತ್ತಾ? ನರೇಂದ್ರ ಮೋದಿಯವರ ನೂತನ ಯೋಜನೆಗಳಿಂದ.

ವಿಶ್ವ ಬ್ಯಾಂಕ್ ಪ್ರಕಟಿಸಿದ `ಡೂಯಿಂಗ್ ಬಿಜಿನೆಸ್ 2018: ರಿಫಾರ್ವಿಂಗ್ ಟು ಕ್ರಿಯೇಟ್ ಜಾಬ್ಸ್’ ವರದಿಯ ಮಾರ್ಗದರ್ಶಿ ಸೂತ್ರದ ಪ್ರಕಾರ 10 ಅಂಶಗಳ ಪೈಕಿ 8ರಲ್ಲಿ ಉತ್ತಮ ಸಾಧನೆ ತೋರಿದ ರಾಷ್ಟ್ರಗಳ ರ್ಯಾಂಕಿಂಗ್ ಪ್ರಕಟವಾಗಿದೆ. 2016ರ ಜೂನ್ 1ರಿಂದ 2017ರ ಜೂನ್ 1ರ ಅವಧಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಕೈಗೊಂಡ ಸುಧಾರಣಾ ಕ್ರಮಗಳನ್ನು ಪರಿಗಣಿಸಿ ಭಾರತಕ್ಕೆ ರ್ಯಾಂಕ್ ನೀಡಲಾಗಿದೆ. 2003ರಿಂದೀಚೆಗೆ ಭಾರತ ಕೈಗೊಂಡ 37 ಸುಧಾರಣಾ ಕ್ರಮಗಳ ಪೈಕಿ ಅರ್ಧದಷ್ಟು ಮತ್ತು ಕಳೆದ ನಾಲ್ಕು ವರ್ಷದಲ್ಲಿ ಅನುಷ್ಠಾನಗೊಂಡ ಸುಧಾರಣಾ ಕ್ರಮಗಳು ಈ ಸಲದ ಸ್ಥಾನ ವರದಿಯಲ್ಲಿ ಪ್ರತಿಫಲನಗೊಂಡಿವೆ. ಅಂದರೆ ಈ ಎಲ್ಲಾ ಸುಧಾರಣಾ ಕ್ರಮಗಳು ಮೋದಿಯವರ ಆಡಳಿತದಲ್ಲಿ ಅನುಷ್ಠಾನಗೊಂಡಿರುವಂಥದ್ದು…!

ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ ಮಾಹಿತಿಗಳ ಮುಖ್ಯಾಂಶಗಳನ್ನು ನೋಡೋಣ…

ಭಾರತ ದಿವಾಳಿತನದ ಪ್ರಕ್ರಿಯೆಯಲ್ಲಿ 136ನೇ ಸ್ಥಾನದಲ್ಲಿತ್ತು. ಆದರೆ ಈ ಸಲದ ಪಟ್ಟಿಯಲ್ಲಿ 33 ಸ್ಥಾನ ಬಡ್ತಿ ಪಡೆದು ಈಗ 103ನೇ ಸ್ಥಾನಕ್ಕೆ ಭಾರತ
ತಲುಪಿದೆ. ಭಾರತ ದಿವಾಳಿ ಹೋಗುವುದನ್ನು ತಪ್ಪಿಸಿ ಭಾರತವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿದ ಕೀರ್ತಿ ಪ್ರಸ್ತುತ ಸರಕಾರಕ್ಕೆ ಸಲ್ಲುತ್ತದೆ.

ತೆರಿಗೆ ವ್ಯವಸ್ಥೆ ಸುಧಾರಣಾ ಕ್ರಮ ಕೈಗೊಂಡಿದ್ದರಿಂದ ರ್ಯಾಂಕಿಂಗ್‍ನಲ್ಲಿ ಭಾರತ ದೊಡ್ಡ ಬಡ್ತಿ ಪಡೆದಿದೆ. ಕಳೆದ ವರ್ಷ 189 ರಾಷ್ಟ್ರಗಳ ಪೈಕಿ 172ನೇ
ಸ್ಥಾನದಲ್ಲಿದ್ದೆವು. ಈ ವರ್ಷ 53 ಸ್ಥಾನ ಮೇಲಕ್ಕೇರಿದ್ದೇವೆ. ಇದೆಲ್ಲಾ ನೂತನವಾಗಿ ಅನುಷ್ಠಾನಗೊಂಡ ಜಿಎಸ್‍ಟಿಯಂಥಾ ತೆರಿಗೆ ವಿಧಾನಗಳಿಂದ ಸಾಧ್ಯವಾಗಿದೆ ಎಂದು ಹೇಳಬಹುದು.

ಭಾರತ ಸ್ಥಾನ ಸೂಚ್ಯಾಂಕ ಇನ್ನೂ ಏರಬಹುದಿತ್ತು ಎಂಬುವುದನ್ನು ಜೇಟ್ಲಿಯವರ ಈ ಮಾತುಗಳಿಂದ ಸ್ಪಷ್ಟವಾಗುತ್ತದೆ. ಅಂದರೆ ನಾವು ತೆಗೆದುಕೊಂಡ
ಸುಧಾರಣಾ ಕ್ರಮಗಳ ಪೈಕಿ 3-4 ಅಂಶಗಳನ್ನು ವಿಶ್ವ ಬ್ಯಾಂಕಿನವರು ಈ ಬಾರಿ ಪರಿಗಣಿಸಿಲ್ಲ. ಅವರು ಅದನ್ನು ಮುಂದಿನ ವರ್ಷದ ದತ್ತಾಂಶದಲ್ಲಿ ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ನವೋದ್ಯಮಗಳು ಶೇಕಡ 100 ಯಶಸ್ವಿಯಾಗಿದ್ದಿಲ್ಲ. ಹೀಗಾಗಿ, ಭಾರತದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹಲವು ನವೋದ್ಯಮಗಳು ಬಾಗಿಲು ಮುಚ್ಚಿದ್ದರಲ್ಲಿ ವಿಶೇಷವೇನಿಲ್ಲ.

ವಿಶ್ವ ಬ್ಯಾಂಕ್‍ನ ಈ ವರದಿಯು ಉದ್ಯೋಗ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ಜೇಟ್ಲಿ ಅಭಿಮತ. ಯಾಕೆಂದರೆ ವಿಶ್ವಬ್ಯಾಂಕ್‍ನ ಈ ವರದಿ ಜಗತ್ತಿನ ದಿಗ್ಗಜ ರಾಷ್ಟ್ರಗಳ ಗಮನಸೆಳೆಯುತ್ತದೆ. ದೇಶದ ಹೂಡಿಕೆ ಪ್ರಮಾಣ ಇನ್ನೂ ಹೆಚ್ಚಾಗಿ, ಉದ್ಯಮ ಕ್ಷೇತ್ರ ಇನ್ನಷ್ಟು ಚೇತರಿಕೆ ಕಂಡು ಭಾರತ ಆರ್ಥಿಕವಾಗಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಮುಂದುವರಿಯಲಿದೆ ಎಂಬುವುದನ್ನು ಈ ಮಾತು ಉಲ್ಲೇಖಿಸುತ್ತದೆ.

ವಿದೇಶಿ ನೇರ ಹೂಡಿಕೆ ವಿಚಾರದ ಹೊರತಾಗಿಯೂ ಭಾರತದಲ್ಲಿ ಉದ್ಯಮಗಳು ಸ್ಥಾಪನೆಯಾಗಬೇಕು. ಉದ್ಯಮ ನೀತಿ ಸರಳವಾಗಿದ್ದರೆ ಹೂಡಿಕೆಯ ವಾತಾವರಣ ತನ್ನಿಂತಾನೇ ನಿರ್ವಣವಾಗುತ್ತದೆ. ಭಾರತದಲ್ಲಿ ಇನ್ನಷ್ಟು ಉದ್ಯಮಗಳು ಭಾರತೀಯರಿಂದಲೇ ಆರಂಭಗೊಳ್ಳಲಿದೆ. ಈ ಮುಂಚಿನ ಉದ್ಯಮ ನೀತಿ ಕಠಿಣವಾಗಿದ್ದರಿಂದ ಉದ್ಯಮಾರಂಭ ಸವಾಲಿನ ಕೆಲಸವಾಗಿತ್ತು. ಆದರೆ ಮೋದಿ ಸರಕಾರ ಈ ವಿಚಾರದಲ್ಲಿ ಸುಧಾರಣೆ ತಂದಿರುವುದರಿಂದ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ.

ಭಾರತದಲ್ಲಿ ಉದ್ಯಮ ಆರಂಭಿಸುವುದೆದರೆ ಅಲ್ಲಿ ನೂರಾರು ತಾಪತ್ರಯಗಳಿವೆ. ಈ ಹಿನ್ನಲೆ ಅನೇಕರು ಉದ್ಯಮ ಆರಂಭಿಸಲು ಮನಸ್ಸು ಮಾಡುವುದಿಲ್ಲ. ಅದಕ್ಕಾಗಿ ಉದ್ಯಮ ಸ್ಥಾಪಿಸುವ ವಿಭಾಗದಲ್ಲಿ ನೀತಿ ಸರಳಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎನ್ನುವುದನ್ನು ಜೇಟ್ಲಿ ಇದೇ ಸಂದರ್ಭ ಪ್ರಕಟಿಸಿದ್ದಾರೆ. ಆದರೆ ಅನುಷ್ಠಾನ ಮಟ್ಟದಲ್ಲಿ ಈ ನೀತಿಗಳು ಜಾರಿಗೆ ತರುವುದು ಒಂದು ಸವಾಲಿನ ಕೆಲಸ. ಆದ್ದರಿಂದ ಈ ನೀತಿ ಬರಲು ಕೆಲ ತಿಂಗಳುಗಳು ಬೇಕಾದೀತು ಎನ್ನುವುದನ್ನು ಜೇಟ್ಲಿ ಪ್ರಕಟಿಸಿದರು.

ಭಾರತದ ಅರ್ಥ ವ್ಯವಸ್ಥೆಯನ್ನು ಧನಾತ್ಮಕವಾಗಿ ಪರಿಣಾಮಕಾರಿಯಾಗಿ ಪರಿವರ್ತಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬದ್ಧರಾಗಿದ್ದಾರೆ ಎನ್ನುವುದನ್ನು ಜೇಟ್ಲಿ ಪ್ರಕಟಿಸಿದ್ದಾರೆ. ಅಂದರೆ ಆರ್ಥಿಕ ಸುಧಾರಣೆಗೆ ಇನ್ನಷ್ಟು ನೂತನ ಕ್ರಮಗಳನ್ನು ಪ್ರಕಟಿಸುವ ಬಗ್ಗೆ ಸಿಕ್ಕ ಸುಳಿವು ಇದೆಂದು ಅರ್ಥ ಮಾಡಿಕೊಳ್ಳಬಹುದು.

ಕಟ್ಟಡ ನಿರ್ಮಾಣ ಪರವಾನಗಿ ವಿಚಾರದಲ್ಲಿ ನಾವು ಹಿಂದುಳಿದ್ದೇವೆ. ನಗರಪಾಲಿಕೆ ವ್ಯಾಪ್ತಿಯಲ್ಲಿ ಪರವಾನಗಿ ನೀಡಿಕೆಯನ್ನು ಚುರುಕುಗೊಳಿಸುವಂತೆ ರಾಜ್ಯಗಳಿಗೆ
ಮನವಿ ಮಾಡುತ್ತೇವೆ. ಮೋದಿ ಸರಕಾರ ಪ್ರತಿಯೊಂದೂ ಕ್ಷೇತ್ರಗಳನ್ನೂ ಕೂಲಂಕುಷವಾಗಿ ಗಮನಿಸುತ್ತಿದೆ ಎನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ವಿಶ್ವ ಬ್ಯಾಂಕ್ ವರದಿಯಲ್ಲಿರುವ ಉಲ್ಲೇಖವಿದು: `ವಿನ್ಯಾಸ ಸುಧಾರಣಾ ಕ್ರಮ ಕೈಗೊಂಡಿರುವ ಒಂದು ದೇಶ ಭಾರತ’. ಮೋದಿ ಸರ್ಕಾರದ ಸಾಧನೆಯ ದತ್ತಾಂಶ ಎಂದು ಪ್ರಕಟಿಸಲಾಗಿದೆ. ಇದರಲ್ಲಿ ವಿದ್ಯುದೀಕರಣಗೊಳ್ಳದ ಗ್ರಾಮಗಳ ಸಂಖ್ಯೆ ಯುಪಿಎ ಅವಧಿಯಲ್ಲಿ ಅಂದರೆ 2014ರ ಮುಂಚೆ 18,452 ಇತ್ತು. ಆದರೆ ಇದೀಗ 2017ರಲ್ಲಿ 3,937ಕ್ಕೆ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಶೂನ್ಯದತ್ತ ತಲುಪಲಿದೆ. ಇದೆಲ್ಲಾ ಸಾಧ್ಯವಾಗಿದ್ದು ಗ್ರಾಮೀಣ ವಿದ್ಯುತೀಕರಣ ಎಂಬ ಯೋಜನೆಯಿಂದ…!

ಹೊಸ ಎಲ್‍ಪಿಜಿ ಸಂಪರ್ಕ ಸಂಖ್ಯೆ 2004ರಿಂದ 2014ರವರೆಗೆ 5.3 ಕೋಟಿ ಇತ್ತು. ಆದರೆ ಮೋದಿ ಅಧಿಕಾರ ವಹಿಸಿದ 2014 ಬಳಿಕ ಬರೇ ಮೂರೇ
ವರ್ಷಗಳಲ್ಲಿ ಬರೋಬ್ಬರಿ 6.95 ಕೋಟಿ ಎಲ್‍ಪಿಜಿ ಸಂಪರ್ಕಗೊಂಡಿದೆ. ಇದು ಇನ್ನೂ ಏರಲಿದೆ. ಇದೆಲ್ಲಾ ಸಾಧ್ಯವಾಗಿದ್ದು, ಮೋದಿ ಸರಕಾರದ ಉಜ್ವಲ
ಯೋಜನೆಯಿಂದ…!!!

ಎಲೆಕ್ಟ್ರಾನಿಕ್ಸ್ ಉತ್ಪಾದನೆ ಪ್ರಮಾಣವನ್ನು ಗಮನಿಸಿದಾಗ ಯುಪಿಎ ಸರಕಾರವಿದ್ದಾಗ ಅಂದರೆ 2014ರ ತನಕ ಇದ್ದಿದ್ದು ರೂ. 11,198 ಕೋಟಿ. ಆದರೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಕೇವಲ ಮೂರು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಪ್ರಮಾಣ ಬರೋಬ್ಬರಿ ರೂ. 1,43,000 ಕೋಟಿ. ನಿಜಕ್ಕೂ ಹೆಮ್ಮೆಯ ವಿಷಯ. ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಗೊತ್ತೇ? ಸರಕಾರದ ನೂತನ ಯೋಜನೆ `ಮೇಕ್ ಇನ್ ಇಂಡಿಯಾ’ದಿಂದ…

ಇನ್ನು ಮೊಬೈಲ್ ಬ್ಯಾಂಕಿಂಗ್ ವಿಷಯಕ್ಕೆ ಬರುವುದಾದರೆ ಯುಪಿಎ ಅವಧಿಯಲ್ಲಿ ಇದ್ದದ್ದು ಬರೀ ರೂ. 9.47 ಕೋಟಿ. ಆದರೆ ಮೋದಿ ಸರಕಾರದ ಅವಧಿಯಲ್ಲಿ ಇದರ ಮೊತ್ತ ಬರೋಬ್ಬರಿ ರೂ. 72.22 ಕೋಟಿ. ಇದೆಲ್ಲಾ ಸಾಧ್ಯವಾಗಿದ್ದು ಸರಕಾರದ ನೂತನ ಯೋಜನೆ ಡಿಜಿಟಲ್ ಇಂಡಿಯಾದಿಂದ…

ಭಾರತ ಸ್ವಚ್ಛಗೊಂಡಿಲ್ಲ ಎಂದು ಸರಕಾರವನ್ನು ಅಪಹಾಸ್ಯ ಮಾಡುವವರು ನೈರ್ಮಲ್ಯ ಸಾಧನೆಯ ಬಗ್ಗೆ ಗಮನವಹಿಸಲೇಬೇಕಾಗಿದೆ. ಯಾಕೆಂದರೆ 2014ರ ಮುಂಚೆ ನೈರ್ಮಲ್ಯ ಸಾಧನೆಯಾಗಿದ್ದು 42%. ಆದರೆ ಇಂದು ಅದು 64%ಕ್ಕೆ ಬಂದು ತಲುಪಿದೆ. ಇದೆಲ್ಲಾ ಸಾಧ್ಯವಾಗಿದ್ದೇ `ಸ್ವಚ್ಛ ಭಾರತ ಯೋಜನೆ’ ಅಭಿಯಾನದಿಂದ..

ಇನ್ನು ಸರಳ ಉದ್ಯಮ ನೀತಿಯಲ್ಲಿ ವಿಶ್ವ ಬ್ಯಾಂಕ್ ರ್ಯಾಂಕಿಂಗ್ ಪಟ್ಟಿಯನ್ನು ನೋಡುವುದಾದದರೆ… 2014ರಿಂದ 15ರವೆಗೆ 142 ನೇ ರ್ಯಾಂಕ್ ಇತ್ತು. ಆದರೆ
2017ರಲ್ಲಿ 130ನೇ ರ್ಯಾಂಕಿಗೆ ಬಂದು ತಲುಪಿದೆ. ಡಬ್ಲ್ಯುಇಎಫ್‍ಸ್ ಟ್ರಾವೆಲ್ ಆಂಡ್ ಟೂರಿಸಂ ರ್ಯಾಂಕಿಂಗ್‍ನಲ್ಲಿ 2014 ರಲ್ಲಿ 65ನೇ ರ್ಯಾಂಕಿದ್ದರೆ,
2017ರಲ್ಲಿ 40ನೇ ರ್ಯಾಂಕಿಂಗ್‍ಗೆ ಬಂದು ತಲುಪಿದೆ. ಇದೆಲ್ಲಾ ಇನ್‍ಕ್ರೆಡಿಬಲ್ ಇಂಡಿಯಾದಿಂದ ಸಾಧ್ಯವಾಯಿತು.

ಸೌರ ಶಕ್ತಿ ಉತ್ಪಾದನೆ 2014ರಲ್ಲಿ 2,621 ಮೆ.ವ್ಯಾಟ್ ಇತ್ತು. ಆದರೆ ಇಂದದು 12,277 ಮೆ.ವ್ಯಾಟ್‍ಗೆ ಬಂದು ತಲುಪಿದೆ. ಇದೆಲ್ಲಾ ಸಾಧ್ಯವಾಗಿದ್ದು
ನವೀಕರಿಸಬಹುದಾದ ಇಂಧನ ಎಂಬ ಯೋಜನೆಯಿಂದ. ಆಪ್ಟಿಕಲ್ ಫೈಬರ್ ನೆಟ್‍ವರ್ಕ್(ಗ್ರಾಮೀಣ ಪ್ರದೇಶ ಸೇರಿ) 2013-14ರವೆಗೆ 358 ಕಿ.ಮೀ. ಇತ್ತು. ಆದರೆ ಇಂದು ಅದು 2,05,404 ಕಿ.ಮೀ.ಗೆ ಬಂದು ತಲುಪಿದೆ. ಗ್ರಾಮೀಣ ರಸ್ತೆ ನಿರ್ಮಾಣದಲ್ಲಿ 2011ರಿಂದ 2014ವರೆಗೆ 81,095 ಕಿ.ಮೀ. ಇತ್ತು. ಆದರೆ ಮೋದಿ ಸರಕಾರ ಬಂದ ಬಳಿಕ 2014ರಿಂದ 17ರತನಕ 1,20,233 ಕಿ.ಮೀ ರಸ್ತೆ ನಿರ್ಮಾಣವಾಗಿದೆ. ಇದೆಲ್ಲಾ ತ್ವರಿತ ರಸ್ತೆ ನಿರ್ಮಾಣದಿಂದಾಗಿದೆ.

ಕಲ್ಲಿದ್ದಲು ಉತ್ಪಾದನೆ 2013-14ವರೆಗೆ 462 ದಶಲಕ್ಷ ಟನ್ ಇತ್ತು. ಆದರೆ 2016-17ರವರೆಗೆ 554 ದಶ ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದೆ.

2013ರಿಂದ 14ರವರೆಗೆ 49.76 ಲಕ್ಷ ಹೊಸ ಶೌಚಾಲಯಗಳ ನಿರ್ಮಾಣವಾಗಿತ್ತು. ಆದರೆ 2016ರಿಂದ 17ವರೆಗೆ 2.09 ಕೋಟಿ ಶೌಚಾಲಯಗಳ ನಿರ್ಮಾಣಗೊಂಡಿದೆ. ಇದೂ ಕೂಡಾ ಸ್ವಚ್ಛ ಭಾರತ ಅಭಿಯಾನದಿಂದ ಸಾಧ್ಯವಾಗಿದೆ.

ವಿದೇಶಿ ನೇರ ಹೂಡಿಕೆ 2014ರಲ್ಲಿ 24.2 ದಶಲಕ್ಷ ಡಾಲರ್ ಇತ್ತು. ಆದರೆ 2017ರಲ್ಲಿ 56.3 ದಶಲಕ್ಷ ಡಾಲರ್‍ಗೆ ಏರಿದೆ. ಇದೆಲ್ಲಾ ಸುಧಾರಣಾವಾದಿ ಮತ್ತು
ಮುಕ್ತ ಆರ್ಥಿಕತೆಯಿಂದ ಸಾಧ್ಯವಾಗಿದೆ.

ಜಿಡಿಪಿ ಬೆಳವಣಿಗೆಯನ್ನು ನೋಡುವುದಾದದರೆ 2014ರಲ್ಲಿ 6.6% ಇತ್ತು. ಆದರೆ 2017ರಲ್ಲಿ 5.7 %ಗೆ ತಲುಪಿದೆ. ಆದರೆ ಇದೆಲ್ಲಾ ತಾತ್ಕಾಲಿಕವಷ್ಟೆ. ಆರ್ಥಿಕ ಸುಧಾರಣೆ ಕಂಡುಕೊಳ್ಳುವಾಗ ಈ ರೀತಿ ಆಗುವುದು ಸಹಜ.

ವಿತ್ತೀಯ ಕೊರತೆ 2013-14ರ ತನಕ 4.6%ವಿತ್ತು. ಆದರೆ 2017ರಲ್ಲಿ 3.2%ಕ್ಕೆ ಇಳಿದಿದೆ. ಇದೆಲ್ಲಾ ಇನ್‍ಕ್ರೆಡಿಬಲ್ ಇಂಡಿಯಾದಿಂದ ಸಾಧ್ಯವಾಗಿದೆ.

ಹಣದುಬ್ಬರ ದರ 2014ರವರಗೆ 11%ವಿತ್ತು. ಆದರೆ 2017ರಲ್ಲಿ ಅದು 4%ಕ್ಕೆ ಇಳಿದಿದೆ. ಇದು ನೋಟ್‍ಬ್ಯಾನ್‍ನಿಂದ ಸಾಧ್ಯವಾಗಿದೆ ಎಂದು ಅರ್ಥ
ಮಾಡಿಕೊಳ್ಳಬಹುದು.

ರೈಲ್ವೆ ವೇಗವರ್ಧನೆಗೆ ವಿದ್ಯುದೀಕರಣ, ಸೂಪರ್ ಸ್ಪೀಡ್ ರೈಲುಗಳಿಗೆ ಚಾಲನೆ, ಉಚಿತ ಇಂಟರ್‍ನೆಟ್, ನಿಲ್ದಾಣಗಳ ಮೇಲ್ದರ್ಜೆ, ಸ್ವಚ್ಛತೆ ಇತ್ಯಾದಿ ಕ್ರಮಗಳನ್ನು ಸರಕಾರ ರೂಪಿಸಿದೆ. ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಯೋಜನೆಗಳನ್ನು ಸರಕಾರ ಜಾರಿಗೆ ತರಲಿದೆ. ಇನ್ನೊಂದು ಅವಧಿಗೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದೇ ಆದರೆ ಭಾರತದ ಆರ್ಥವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಾಂಗ್ರೆಸ್, ಅದರ ಮಿತ್ರ ಪಕ್ಷಗಳು ಹಾಗೂ ಮುಖ್ಯವಾಗಿ ರಾಹುಲ್ ಗಾಂಧಿ ಇದುವರೆಗೆ ನರೇಂದ್ರ ಮೋದಿ ಸರಕಾರದ ಯೋಜನೆಯನ್ನು ದೂರುತ್ತಾ ಕಾಲ ಕಳೆದದ್ದೇ ಬಂದಿತು. ಆದರೆ ಕೇವಲ ಮೂರೇ ವರ್ಷದ ಅವಧಿಯಲ್ಲಿ ಯುಪಿಎ ಸರಕಾರ ಹತ್ತು ವರ್ಷಗಳಲ್ಲಿ ಮಾಡದ ಸಾಧನೆಯನ್ನು ಮಾಡಿ ತೋರಿಸಿತು. ಸರಕಾರವನ್ನು ತೆಗಳುತ್ತಾ ಇರುವಾಗ ಭಾರತ ಅಭಿವೃದ್ಧಿ ಹೊಂದಿರುವುದು ಗೊತ್ತೇ ಆಗಲಿಲ್ಲ….

source:Original Link – Vijayavani

-ಚೇಕಿತಾನ

Editor Postcard Kannada:
Related Post