X

ವಿಶೇಷ ಸುದ್ದಿ! ಕೇಂದ್ರ ಸರಕಾರ ಸಿದ್ಧಪಡಿಸಿದೆ ತ್ರಿವಳಿ ತಲಾಖ್ ನ ಕರಡು ಪ್ರತಿ! ಕಾನೂನು ಉಲ್ಲಂಘಿಸಿದವರಿಗೆ ಲಭಿಸುವ ಶಿಕ್ಷೆಯೇನು ಗೊತ್ತೇ?!

ತ್ರಿವಳಿ ತಲಾಖ್ ಪದ್ಧತಿಯನ್ನು ಶಾಶ್ವತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕರಡು ಪ್ರತಿಯನ್ನು ಸಿದ್ಧಪಡಿಸಿದ್ದು, ಕಾನೂನನ್ನು ಉಲ್ಪಂಘಿಸುವವರಿಗೆ ತಕ್ಕ ಶಿಕ್ಷೆಯನ್ನೇ ನಿಗದಿಗೊಳಿಸಿದೆ! ಹೌದು! ತಲಾಖ್ ಪದ್ಧತಿಯನ್ನು ವೈಯುಕ್ತಿಕ ಹಕ್ಕಿನ ಮೇರೆಗೆ ಮುಂದುವರೆಸಿದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ, ಜಾಮೀನು ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ!

ಕರಡು ಪ್ರತಿಯನ್ನು ರಾಜ್ಯ ಸರಕಾರಗಳಿಗೆ ಕಳುಹಿಸಿಕೊಡಲಾಗಿದ್ದು, ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದೆ! ಸಂಸತ್ತಿನಲ್ಲಿ, ಮಸೂದೆ ಅಂಗೀಕಾರವಾಗಲು ರಾಜ್ಯ ಸರಕಾರಗಳ ಸಮ್ಮತಿಯ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸರಕಾರ, ಜೊತೆಗೆ ಈ ಮಸೂದೆ ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿದೆ.

ರಾಜನಾಥ್ ಸಿಂಗ್ ನೇತೃತ್ವದಲ್ಲಿ, ಸಚಿವರ ಸಮಿತಿಯು ಕರಡು ಪ್ರತಿಯನ್ನು ಸಿದ್ದಗೊಳಿಸಿದ್ದು, ವಿದೇಶಾಂಗ ಇಲಾಖೆ ಸಚಿವೆ ಸುಷ್ಮ ಸ್ವರಾಜ್, ಹಣಕಾಸು ಮಂತ್ರಿ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ಹಾಗೂ ಪಿ.ಪಿ.ಚೌಧರಿ ಸಮಿತಿಯ ಸದಸ್ಯರಾಗಿದ್ದಾರೆ. ಕಾನೂನಿನ ಪ್ರಕಾರ, “ತ್ರಿವಳಿ ತಲಾಖ್ ಸಂತ್ರಸ್ತೆಯು ಆರಕ್ಷಕ ಠಾಣೆಯಲ್ಲಿ ಮೊದಲು ದೂರನ್ನು ದಾಖಲಿಸಬೇಕು. ಕೊನೆಗೆ, ಮ್ಯಾಜಿಸ್ಟ್ರೇಟ್ ಹತ್ತಿರ ಹೋಗಿ, ತನ್ನ ಅಪ್ರಾಪ್ತ ಮಕ್ಕಳು, ಹಾಗೂ ಪತಿಯಿಂದ ನಿರ್ವಹಣಾ ಖರ್ಚನ್ನು ಪಡೆದುಕೊಳ್ಳಬಹುದಾಗಿದೆ.”

ಮೌಖಿಕ, ಲಿಖಿತ, ಫೋನ್ ಕರೆ, ಸಂದೇಶ, ಈ ಮೇಲ್, ಅಥವಾ ಇನ್ನಿತರ ಯಾವುದೇ ಇಲೆಕ್ಟ್ರಾನಿಕ್ ರೂಪದ ತಲಾಖ್ ನನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಆಗಸ್ಟ್ ನಲ್ಲಿ, ತ್ರಿವಳಿ ತಲಾಖ್ ನನ್ನು ಸರ್ವೋಚ್ಛ ನ್ಯಾಯಾಲಯ ರದ್ದುಗೊಳಿಸಿದ್ದ ಐತಿಹಾಸಿಕ ನಿರ್ಣಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೇ, ಮುಸ್ಲಿಂ ಸಮುದಾಯಕ್ಕೆ ಕಠಿಣ ಎಚ್ಚರಿಕೆಯನ್ನೂ ನೀಡಿತ್ತು. ಆದರೂ, ಸುಮಾರು 67 ತ್ರಿವಳಿ ತಲಾಖ್ ಪ್ರಕರಣಗಳು ದಾಖಲಾಗಿವೆ ಎಂದು ಸರಕಾರ ತಿಳಿಸಿದೆ. ಅದಕ್ಕಾಗಿ, ಸಮಿತಿಯು ಬಹುಬೇಗನೇ ಕರಡು ಪ್ರತಿಯನ್ನು ಸಿದ್ಧಗೊಳಿಸಿದ್ದು, ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಮುಸ್ಲಿಂ ಸಮಾಜದಲ್ಲಿ ಇರುವ ಅದೆಷ್ಟೋ ಅನಿಷ್ಠ ಪದ್ದತಿಗಳಿಗೆ ಕಡಿವಾಣ ಹಾಕಲು ಸತತವಾಗಿ ಸರಕಾರ ಪ್ರಯತ್ನ ನಡೆಸುತ್ತಿದ್ದರೂ ಸಹ, ಕೆಲವು ವೈಯುಕ್ತಿಕ ಹಕ್ಕಿನಡಿಯಲ್ಲಿ ಅಡೆ ತಡೆಗಳುಂಟಾಗುತ್ತಿದೆ ಎಂಬುದು ಸತ್ಯ! ಧಾರ್ಮಿಕ ಹಕ್ಕು – ವೈಯುಕ್ತಿಕ ಹಕ್ಕು ಎಂಬುವುದಕ್ಕೆ ಸಮನಾಗಿರುವ ಇಸ್ಲಾಂ ಸಮಾಜದಲ್ಲಿ, ಮಹಿಳಾ ಸಬಲೀಕರಣ ಎನ್ನುವುದು ಕಷ್ಟಸಾಧ್ಯವಾದರೂ ಸಹ, ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಗೊಳಿಸಿದ ಮೇಲೆ, ಮಹಿಳೆಯರು ಸ್ವಲ್ಪವಾದರೂ ನೆಮ್ಮದಿಯಿಂದ ಬದುಕಲು ವಾತಾವರಣ ನಿರ್ಮಾಣವಾಗಬಹುದೇನೋ.

ನಿಕಾಹ್ ಹಲಾಲ್ ನಂತಹ ಅದೆಷ್ಟೋ ಅನಿಷ್ಟ ಪದ್ದತಿಗಳಿಂದ ಮುಸಲ್ಮಾನ ಹೆಣ್ಣು ಮಕ್ಕಳು ಘನತೆಯನ್ನೇ ಕಳೆದುಕೊಂಡು ಬದುಕುತ್ತಿದ್ದಾರಷ್ಟೇ! ಪುರುಷ
ಪ್ರಧಾನವಾಗಿರುವ ಸಮಾಜದಲ್ಲಿ ಉಸಿರಾಡಲೂ ಕಷ್ಟವಾಗುವಂತಹ ಪರಿಸ್ಥಿತಿಯಲ್ಲಿ, ಬಹುಪತ್ನಿತ್ವವೂ ತೊಡಕಾಗಿಯೇ ಪರಿಣಮಿಸಿದೆ. ಇದಕ್ಕೆಲ್ಲ ಕಡಿವಾಣ ಹಾಕಿದರೆ, ಮುಸ್ಲಿಂ ಸಮುದಾಯದಲ್ಲಿಯೂ ಮಹಿಳಾ ಸಬಲೀಕರಣಕ್ಕೆ ಅವಕಾಶವೊದಗಬಹುದಷ್ಟೇ.

– ಪೃಥು ಅಗ್ನಿಹೋತ್ರಿ

Editor Postcard Kannada:
Related Post