X

ವಿಶೇಷ ಸುದ್ದಿ! ‘ತ್ರಿವಳಿ ತಲಾಖ್’ ನಿಷೇಧದ ನಂತರ ಮುಂದಿನ ಟಾರ್ಗೆಟ್ಸ್ ಯಾವುದು ಗೊತ್ತೇ?! ಇಸ್ಲಾಂ ನ ಪುರುಷ ಪ್ರಾಧಾನ್ಯಕ್ಕೆ ಬೀಳಲಿದೆ ದೊಡ್ಡ ಹೊಡೆತ!

Girls sit in front of women performing Friday prayers during a pro-democracy rally on Siteen Road in Sanaa, April 5, 2013. REUTERS/Mohammed al-Sayaghi (YEMEN - Tags: SOCIETY RELIGION)

ಮುಸ್ಲಿಂ ಸಂಪ್ರದಾಯದ ಮುಖ್ಯ ಕಂದಾಚಾರ ಎಂದೆನಿಸಿದ ತಲಾಖ್, ಅದೆಷ್ಟೂ ಹೆಣ್ಣು ಮಕ್ಕಳ ಜೀವನಕ್ಕೆ ಪೂರ್ಣವಿರಾಮ ಇಟ್ಟಿದಿಯೋ ಗೊತ್ತಿಲ್ಲ!! ಹೆಣ್ಣನ್ನು ಭೋಗದ ವಸ್ತುವೆಂದು ತಿಳಿದು, ಅತೀ ಕೀಳರಿಮೆಯನ್ನು ಪ್ರದರ್ಶಿಸುತ್ತಿದ್ದ ಈ ಸಂಪ್ರಯದಾಯದಲ್ಲಿ ಹೆಣ್ಣುಮಕ್ಕಳಿಗೆ ಅವರ ಧರ್ಮದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಹೆಣ್ಣು ಕೇವಲ ಭೋಗದ ವಸ್ತು ಎಂದೆನಿಸಿಕೊಂಡ ಮುಸ್ಲಿಂ ಸಂಪ್ರದಾಯದಲ್ಲಿ ತಲಾಖ್ ಒಂದು ಮಾರಕ ವಸ್ತುವಾಗಿತ್ತು. ಮೂರು ಸಲ ತಲಾಖ್ ಎಂದರೆ ಸಾಕು ವಿಚ್ಛೇದನೆ ಸಿಗುತ್ತಿದ್ದು ಮಾತ್ರವಲ್ಲದೇ ಇವರ ಕಾನೂನಿನ ಪ್ರಕಾರ ಒಬ್ಬ ಮುಸ್ಲಮಾನ ವ್ಯಕ್ತಿ 4 ಮದುವೆಯಾಗಬಹುದು. ಅಷ್ಟೇ ಅಲ್ಲದೇ ಎಷ್ಟು ಬೇಕಾದರೂ ಕೂಡ ‘ಜನಾನಾ’ವನ್ನು(ಅಕ್ರಮ ಸಂಬಂಧ) ಇಟ್ಟುಕೊಳ್ಳಬಹುದಾಗಿತ್ತು. ಆದರೆ ಭಾರತದಲ್ಲಿ ತ್ರಿವಳಿ ತಲಾಖ್ ಬಿಸಿ ಚರ್ಚೆಗೆ ಕಾರಣವಾಗಿದ್ದಲ್ಲದೇ, ಮುಸ್ಲಿಂ ಸಮುದಾಯದಲ್ಲಿನ ಈ ಪದ್ಧತಿಯನ್ನು ಹಲವು ಪ್ರಮುಖ ಮುಸ್ಲಿಂ ರಾಷ್ಟ್ರಗಳು ಈಗಾಗಲೇ ರದ್ದು ಮಾಡಿದೆ. ಇದೀಗಾ ಭಾರತದಲ್ಲಿ ಈ ತ್ರಿವಳಿ ತಲಾಖ್‍ನ್ನು ನಿಷೇಧಿಸಿದ ಬೆನ್ನಲ್ಲೇ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರವ ಪ್ರಯತ್ನಗಳು ನಡೆಯುತ್ತಿದೆ!!!

ಈ ತಲಾಖ್ ಅಂದರೆ ಏನು?

ತಲಾಖ್ ಎಂದರೆ “ಸ್ವತಂತ್ರರಾಗುವುದು,’ “ಒಪ್ಪಂದ ಅಥವಾ ಹಿಡಿತದಿಂದ ಹೊರಬರುವುದು’ ಎಂದರ್ಥ! ಮುಸ್ಲಿಂ ಕಾನೂನಿನ ಪ್ರಕಾರ, ಮದುವೆಯ ಬಂಧದಿಂದ ಮುಕ್ತರಾಗುವ ಪ್ರಕ್ರಿಯೆಯೇ ತಲಾಖ್. ಅಂದರೆ, ಸೂಕ್ತ ಪದಗಳನ್ನು ಬಳಸಿ ತನ್ನ ವಿವಾಹವನ್ನು ಅನೂರ್ಜಿತಗೊಳಿಸಲು ಪುರುಷನಿಗೆ ಇಸ್ಲಾಂ ನೀಡಿರುವ ಅಧಿಕಾರ. ಇನ್ನು ಪತ್ನಿಯು ತನ್ನ ಪತಿಗೆ ವಿಚ್ಛೇದನ ನೀಡುವ ಪ್ರಕ್ರಿಯೆಯನ್ನು ಇಸ್ಲಾಂ ಧರ್ಮದಲ್ಲಿ “ಖುಲಾ’ ಎನ್ನುತ್ತಾರೆ. ಆದರೆ, ವಿವಾಹದ ದಿನ ಪತಿ ನೀಡಿದ್ದ ಮೆಹರ್(ವಧುದಕ್ಷಿಣೆ) ಅನ್ನು ಪತ್ನಿಯು ವಿಚ್ಛೇದನದ ಸಂದರ್ಭದಲ್ಲಿ ವಾಪಸ್ ನೀಡುವುದು ಕಡ್ಡಾಯವಾಗಿತ್ತು. ಆದರೆ ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಪೂರಕವಾಗಿದೆ, ವಿಚ್ಛೇದನಕ್ಕೂ ಮುನ್ನ ಗಂಡನಿಂದ ಹಿಂಸೆ, ಕೊಲೆಯಂತಹ ಕೃತ್ಯಗಳನ್ನು ತಪ್ಪಿಸಲು ತ್ರಿವಳಿ ತಲಾಖ್‍ನಂತಹ ತ್ವರಿತ ವಿಚ್ಛೇದನ ಪದ್ಧತಿ ನೆರವಾಗಿದೆ ಎಂಬುದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಮ್‍ಪಿಎಲ್‍ಬಿ) ವಾದವಾಗಿದೆ.

ಏನು ವಿಚಿತ್ರ ನೋಡಿ.. ತ್ರಿವಳಿ ತಲಾಖ್ ಮುಸ್ಲಿಂ ರಕ್ಷಣೆಯ ಪೂರಕವಂತೆ. ಅದು ಹೇಗೆ ರಕ್ಷಣೆ ನೀಡುತ್ತೋ ನಾ ಕಾಣೆ! ಎಲ್ಲೋ ಒಂದು ಕಡೆ ರಕ್ಷಣೆ ನೀಡುತ್ತೆ ಎಂದು ಒಪ್ಪಿಕೊಳ್ಳಬಹುದಾದರೂ ಕೂಡ, ವಿಚ್ಛೇದನ ಪಡೆದ ಮಹಿಳೆಯ ಗತಿ ಏನು ಎಂಬುವುದನ್ನು ಮುಸ್ಲಿಂ ಕಾನೂನು ಮಂಡಳಿ ಹೇಳುತ್ತಿಲ್ಲ. ಯಾಕಂದರೆ ಮುಸ್ಲಿಂ ಸಂಪ್ರದಾಯ ಹೆಣ್ಣು ಮಕ್ಕಳಿಗೆ ಮಾರಕ ಕಾನೂನುನನ್ನು ಮಾಡಿದೆ ಹೊರತು ಮಹಿಳೆಯರಿಗೆ ಉನ್ನತ ಸ್ಥಾನಮಾನವನ್ನು ನೀಡಿಲ್ಲ. ಅಲ್ಲದೇ ಮುಸ್ಲಿಂ ಮಹಿಳೆಯರನ್ನು ‘ಮಕ್ಕಳನ್ನು ಹೆರುವ ಮಿಷಿನ್’ ಎಂದು ತಿಳಿದಿಯೋ ಗೊತ್ತಿಲ್ಲ!!

ಆದರೆ ಇದೀಗಾ ತ್ರಿವಳಿ ತಲಾಖ್ ನಿಷೇಧದ ನಂತರ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರವ ಪ್ರಯತ್ನಗಳಾಗುತ್ತಿವೆ. ಭಾರತೀಯ
ಮಹಿಳಾ ಮುಸ್ಲಿಮ್ ಸಂಘಟನೆಯೊಂದು ಮುಸ್ಲಿಂ ಕೌಟುಂಬಿಕ ಕಾನೂನಿನ ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಬಹುಪತ್ನಿತ್ವ, ನಿಕಾಹ್ ಹಲಾಲ ಮೊದಲಾದ ಆಚರಣೆ ಮತ್ತು ಸಂಪ್ರದಾಯಗಳಿಗೆ ತಿಲಾಂಜಲಿ ಹಾಡಬೇಕೆಂದು ಮನವಿ ಮಾಡಿಕೊಂಡಿದೆ.

ವಿಪರ್ಯಾಸ ಏನಂದರೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ರೂಪಿಸಿರುವ ಮುಸ್ಲಿಮರ ಕೌಟುಂಬಿಕ ಕಾನೂನುಗಳು ಮಹಿಳೆಯರಿಗೆ
ವಿರುದ್ಧವಾಗಿಯೇ ಇದ್ದಂತಿವೆ. ಯಾಕಂದರೆ, ಪುರುಷಪ್ರಧಾನ ವ್ಯವಸ್ಥೆಗೆ ತಕ್ಕಂತೆ ಮುಸ್ಲಿಂಮರ ಕಾನೂನುಗಳಿದ್ದು, ಹೆಣ್ಣನ್ನು ತುಚ್ಛವಾಗಿ ಕಾಣುವ ಉದ್ದೇಶವೇ
ಆಗಿರಬಹುದು. ಒಂದು ವೇಳೆ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಸುಧಾರಣೆಯಾಗದಿದ್ದರೆ ಮುಸ್ಲಿಂ ಮಹಿಳೆಯರ ಶೋಷಣೆ ಎಗ್ಗಿಲ್ಲದೇ ಮುಂದುವರಿಯುತ್ತದೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆಯ(ಬಿಎಂಎಂಎ) ಸಹ-ಸಂಸ್ಥಾಪಕಿ ಜಾಕಿಯಾ ಸೋಮನ್ ಈಗಾಗಲೇ ತಮ್ಮ ಆತಂಕವನ್ನು
ವ್ಯಕ್ತಪಡಿಸಿದ್ದಾರೆ!!!

ಭಾರತೀಯ ಮುಸ್ಲಿಂ ಮಹಿಳೆಯರು ಹೋರಾಡಿದ ಫಲವಾಗಿ ತ್ರಿವಳಿ ತಲಾಖ್ ಇದೀಗಾ ನಿಷೇಧಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗಾ ಬಹುಪತ್ನಿತ್ವ, ನಿಕಾ ಹಲಾಲ, ಖುಲಾ, ಮುಟಾ ಮೊದಲಾದ ವಿವಾಹ ಸಂಬಂಧಿತ ಸಂಪ್ರದಾಯ ಅಥವಾ ಕಾನೂನುಗಳನ್ನು ನಿಷೇಧಿಸಬೇಕು ಎಂದು ಮುಸ್ಲಿಮ್ ಮಹಿಳೆಯರು ತಮ್ಮ ಪ್ರಸ್ತಾನವನೆಗಳಲ್ಲಿ ಕೋರಿದ್ದಾರೆ. ಮಹಿಳೆಯರ ವಿವಾಹಕ್ಕೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಪುರುಷರ ವಿವಾಹಕ್ಕೆ 21 ವರ್ಷ ನಿಗದಿ ಮಾಡಬೇಕು; ವಿವಾಹವಾಗುವಾಗ ನೀಡಲಾಗುವ ವಧುದಕ್ಷಿಣೆಯ ಪ್ರಮಾಣದಲ್ಲಿ ಹೆಚ್ಚಳವಾಗಬೇಕು ಎಂಬಿತ್ಯಾದಿ ಸುಧಾರಣೆಗಳಿಗೂ ಕೋರಿಕೆ ಸಲ್ಲಿಸಲಾಗಿದೆ.
ಈ ಬಹುಪತ್ನಿತ್ವ, ನಿಕಾ ಹಲಾಲ, ಖುಲಾ, ಮುಟಾ ಮುಂತಾದ ಬಹುತೇಕ ಸಂಪ್ರದಾಯಗಳು ಅನೇಕ ಮುಸ್ಲಿಂ ರಾಷ್ಟ್ರಗಳಲ್ಲೇ ನಿಷೇಧಿತವಾಗಿವೆ. ಆದರೆ ಭಾರತದಲ್ಲಿ ಎಲ್ಲಾ ಧರ್ಮಸ್ಥರ ಕೌಟುಂಬಿಕ ಕಾನೂನುಗಳಲ್ಲಿ ಸುಧಾರಣೆ ತರಲಾಗಿದ್ದರೂ ಮುಸ್ಲಿಮರ ಕಾನೂನಿನಲ್ಲಿ ಎಂದಿಗೂ ತಿದ್ದುಪಡಿಯಾಗಿಲ್ಲ. ಅಲ್ಲದೇ, ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಮಂಡಳಿಯೊಂದು ಇರುವುದು ಭಾರತದಲ್ಲಿ ಮಾತ್ರವೇ ಎನ್ನಲಾಗಿದೆ.

ಹೀಗಾಗಿ ಭಾರತದಲ್ಲಿಯೂ ಮುಸ್ಲಿಂ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ದೇಶದ 15 ರಾಜ್ಯಗಳ ಮುಸ್ಲಿಂ ಮಹಿಳೆಯರು 9 ವರ್ಷ ನಿರಂತರವಾಗಿ ಕೆಲಸ ಮಾಡಿ “ಮುಸ್ಲಿಂ ಫ್ಯಾಮಿಲಿ ಲಾ 2017” ಕರಡು ಪ್ರತಿಯನ್ನು ರಚಿಸಿದ್ದಾರೆ. ಈ ಎಲ್ಲಾ ಪಕ್ಷಗಳಲ್ಲಿರುವ ಮಹಿಳಾ ಸಂಸದರ ಮೂಲಕ ಸಂಸತ್’ನಲ್ಲಿ ಈ ಕುರಿತು ಹೋರಾಟ ನಡೆಸಲು ಈಗಾಗಲೇ ಬಿಎಂಎಂಎ ಉದ್ದೇಶಿಸಿದೆ.

ಖುಲಾ ಎಂದರೇನು?

ಮುಸ್ಲಿಮ್ ಕೌಟುಂಬಿಕ ಕಾನೂನಾಗಿರುವ ಖುಲಾದ ಪ್ರಕಾರ ಪುರುಷನಿಂದ ತಲಾಖ್(ವಿಚ್ಛೇದನ) ಹೊಂದಿದ ಮಹಿಳೆಯು ಮಹರ್’ನ್ನು ವಾಪಸ್ ಕೊಡಬೇಕು.
ಮದುವೆಯಾಗುವಾಗ ಹುಡುಗ ನೀಡುವ ವಧುದಕ್ಷಿಣೆಯನ್ನು ಮಹರ್ ಎಂದು ಕರೆಯುತ್ತಾರೆ. ತಲಾಖ್ ಆದ ಬಳಿಕ ಮಹಿಳೆಯು ಈ ವಧುದಕ್ಷಿಣೆಯ ಒಂದು ಪೈಸೆಯನ್ನೂ ಉಳಿಸಿಕೊಳ್ಳದೇ ವಾಪಸ್ ಕೊಡಬೇಕು ಎಂದಿದೆ. ಇದೀಗ, ಈ ಖುಲಾವನ್ನು ರದ್ದು ಮಾಡಬೇಕೆಂಬ ಪ್ರಸ್ತಾವನೆ ಇದೆ.

ನಿಕಾ ಹಲಾಲ ಎಂದರೇನು?

ಇದು ಪುನರ್‍ವಿವಾಹಕ್ಕೆ ಸಂಬಂಧಿಸಿದ ಕಾನೂನಾಗಿದೆ. ತಲಾಖ್ ಪಡೆದ ಮಹಿಳೆಯು ತನ್ನ ಮೊದಲ ಪತಿಯನ್ನು ಮತ್ತೆ ವಿವಾಹವಾಗಲು ಕೆಲ ನಿಯಮಗಳನ್ನು
ರೂಪಿಸಲಾಗಿದೆ. ತಲಾಖ್ ಪಡೆದ ಬಳಿಕ ಇನ್ನೊಬ್ಬರೊಂದಿಗೆ ವಿವಾಹವಾಗಿ ದಾಂಪತ್ಯವನ್ನು ಅಂತ್ಯಗೊಳಿಸಬೇಕು. ಅಂದರೆ, ಆ ಎರಡನೇ ಮದುವೆಯನ್ನು
ಮುರಿದುಕೊಂಡಾಗ ಅಥವಾ ಎರಡನೇ ಪತಿ ಮೃತಪಟ್ಟಾಗ ಮಾತ್ರ ಮೊದಲ ಪತ್ನಿಯನ್ನು ಮಹಿಳೆಯು ಪುನರ್‍ವಿವಾಹವಾಗಬಹುದು. ಇದನ್ನೇ ನಿಕಾ ಹಲಾಲ ಎಂದು ಕರೆಯುತ್ತಾರೆ.

ಮುಟಾ ಮದುವೆ:
ನಿಕಾ ಅಲ್ ಮುಟಾ ಎಂಬುದು ತಾತ್ಕಾಲಿಕ ಮದುವೆ ವ್ಯವಸ್ಥೆಯಾಗಿದೆ. ಇಲ್ಲಿ ಬಾಯಿ ಮಾತಿನಲ್ಲೇ ಮದುವೆ ಒಪ್ಪಂದವಾಗಿಬಿಡುತ್ತದೆ. ಎಷ್ಟು ಅವಧಿಯವರೆಗೆ ಮದುವೆ ಮತ್ತು ಎಷ್ಟು ವಧುದಕ್ಷಿಣೆ ಇತ್ಯಾದಿಗಳನ್ನು ಪುರುಷನೇ ನಿಶ್ಚಯಿಸಬಹುದು. ಇಸ್ಲಾಂ ಧರ್ಮ ಅಸ್ತಿತ್ವಕ್ಕೆ ಬರುವ ಮುನ್ನವೇ ಅರಬ್ ನಾಡಿನಲ್ಲಿ ಇದು ಚಾಲ್ತಿಯಲ್ಲಿತ್ತು. ಇಸ್ಲಾಂ ಸ್ಥಾಪನೆಯಾದ ಬಳಿಕವೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿದೆ. ಶಿಯಾ ಮುಸ್ಲಿಮರ ಕಾನೂನಿನಲ್ಲಿ ಇದನ್ನು ಅಳವಡಿಸಲಾಗಿದೆ.

ಈ ಖುಲಾ, ನಿಕಾ ಹಲಾಲ್, ಮುಟಾ ಮಾತ್ರವಲ್ಲದೆ, ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿರುವ ಅನೇಕ ಅಂಶಗಳನ್ನು ನಿಷೇಧಿಸುವ ಅಥವಾ
ಸುಧಾರಣೆಗಳನ್ನು ತರುವ ಪ್ರಸ್ತಾವನೆಗಳು ಈ ಕರಡು ಪ್ರತಿಯಲ್ಲಿವೆ. ಪುರುಷ ಪ್ರಧಾನ ಸಂಪ್ರದಾಯವಾದ ಮುಸ್ಲಿಂ ಧರ್ಮದಲ್ಲಿ ಹೆಣ್ಣನ್ನು ಯಾಕಿಷ್ಟು ತುಚ್ಛವಾಗಿ
ಕಾಣುತ್ತಾರೋ ನಾ ಕಾಣೆ! ಭಾರತೀಯರಾದ ನಾವುಗಳು ಹೆಣ್ಣನ್ನು ಪೂಜಿಸಬೇಕೆ ವಿನಃ ಕೀಳರಿಮೆಯಿಂದ ಕಂಡು ಆಕೆಯನ್ನು ಒಂದು ಭೋಗದ ವಸ್ತು, ಹೆರುವ ಮಿಷಿನ್ ಎಂದು ತಿಳಿದರೆ, ನೀವು ನಿಮ್ಮ ಸಂಪ್ರದಾಯವನ್ನು ಎಷ್ಟು ಚೆನ್ನಾಗಿ ಪಾಲಿಸುತ್ತೀರಾ ಎಂಬುವುದನ್ನು ನೀವೇ ಹೇಳಿ!!!!

ಮೂಲ: Next Targets of Central!

-ಅಲೋಖಾ

Editor Postcard Kannada:
Related Post