X

ವ್ಯಗ್ರವಾದ ಅನಂತ್ ಕುಮಾರ್ ಹೆಗಡೆ!! ಬುದ್ಧಿಜೀವಿಗಳಿಗೆ ಬೆವರಿಳಿಸಿದ ಕೇಂದ್ರ ಕೌಶಲಾಭಿವೃದ್ಧಿ ಸಚಿವರು!

ಏನೇ ಹೇಳಿ! ಇತ್ತೀಚೆಗೆ ಬುದ್ಧಿಜೀವಿಗಳ ಅಟ್ಟಹಾಸಕ್ಕೆ ರಾಜಕೀಯ ನಾಯಕರೂ ಸಹ ವಿರೋಧಿಸುತ್ತಿದ್ದಾರೆ! ಅದರಲ್ಲಿಯೂ ಸಹ, ಒಂದು ಭಾಷೆ ಉಳಿಯಬೇಕಾದರೆ ಸಾಹಿತ್ಯ ಎಷ್ಟು ಮುಖ್ಯವೋ, ಅದೇ ರೀತಿ ಒಂದು ರಾಜ್ಯದ ಸಂಸ್ಕೃತಿಯನ್ನು.ಆಳವಾಗಿ ಬಿಂಬಿಸುವುದೂ ಸಾಹಿತ್ಯವೇ! ಯಾವುದೋ ಒಂದು ಎಳೆಯನ್ನಿಟ್ಟುಕೊಂಡು, ಸೂಕ್ಷ್ಮವಾಗಿಯೇ ವಿಚಾರ ಮಂಡಿಸುವ ಕಲೆ, ಓದುಗನ ವಿಚಾರಧಾರೆಗಳನ್ನು ಬದಲಿಸುವ ಶಕ್ತಿಯಿರುವುದೂ ಸಾಹಿತ್ಯಕ್ಕೇ! ಅಲ್ಲವಾ?!

ವಾಸ್ತವವಾಗಿ, ತಮ್ಮನ್ನು ತಾವು ಬುದ್ಧಿ ಇರುವವರೆಂದು ಘೋಷಿಸಿಕೊಳ್ಳುವ ‘ಬುದ್ಧಿಜೀವಿಗಳು ಅಲಿಯಾಸ್ ಎಡಪಂಥೀಯರು’ ಬರೆಯುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಹೋದರೆ, ನಿಮಗೆ ಸಿಗುವುದು ಶೂನ್ಯ! ಇಲ್ಲವೇ, ಗೊಂದಲಗಳು! ಅದೂ ಇಲ್ಲವೆಂದರೆ, ಭಾರತೀಯ ಸಮಾಜದ ಬಗ್ಗೆ, ಸಂಸ್ಕೃತಿಯ ಬಗ್ಗೆ ಹುಟ್ಟುವ ಅಸಹ್ಯವನ್ನಷ್ಟೇ ದಕ್ಕಿಸಬಲ್ಲ ಸಲುವಾಗಿರುವ ಒಂದಷ್ಟು ಸಾಹಿತ್ಯಗಳ ಸರಮಾಲೆ ಇವತ್ತಿನ ಯುಗ ತರುಣರ ಕೈಗೆ ಸಿಕ್ಕಿದರೆ, ಜೆಎನ್ ಯು ವಿನ ‘ಭಾರತವನ್ನು ಬರ್ಬಾದಿ ಮಾಡಬಯಸುವ’ ಬಳಗದಲ್ಲಿ ಇವರೂ ಒಬ್ಬರಾಗಿ ಹೋಗುತ್ತಾರೆ!

ಅದಕ್ಕೇ, ಹಿಂದುತ್ವದ ಸಿದ್ಧಾಂತಗಳನ್ನು ಅನುಸರಿಸುವವರು ಇಂತಹ ಪ್ರಗತಿಪರ ಚಿಂತಕರೆಂದು ಹೇಳಿಕೊಳ್ಳುವವರನ್ನು ಆದರಿಸುವುದೇ ಇಲ್ಲ! ಸ್ವಾಭಿಮಾನಿ ಭಾರತೀಯನೂ ಇಂತಹ ವಿಚಾರವಾದಿಗಳನ್ನು ಬೆಂಬಲಿಸುವುದೂ ಇಲ್ಲ! ತಪ್ಪೇನಿದೆ ಹೇಳಿ?! ದೇಶವನ್ನು ಅದಮ್ಯವಾಗಿ ಪ್ರೀತಿಸುವವನೊಬ್ಬ ಸಮಾಜದ ದೋಷಗಳನ್ನು ತನ್ನ ಪರಿಧಿಯಲ್ಲಿ ಸರಿ ಮಾಡುತ್ತಾ ಹೋಗುತ್ತಾನಷ್ಟೇ! ದೇಶವನ್ನು ಹರಾಜಿಗಿಡ ಬಯಸುವವರು ಬೈದುಕೊಂಡು ಊರು ತಿರುಗಿ ಗಂಜಿ ಸಂಪಾದಿಸುತ್ತಾರೆ ಅಷ್ಟೇ!

ಇವತ್ತೂ ಅದನ್ನೇ ಹೇಳಿರುವುದು ಅನಂತ ಕುಮಾರ್ ಹೆಗಡೆ!

“ಯಾವಾಗಲೂ, ಬುದ್ಧಿಜೀವಿಗಳು ‘ಮಾನವರಾಗಿ’ ಎನ್ನುತ್ತಾರೆ! ಹಾಗಾದರೆ ನಾವೇನು ದನವಾ?! ಹುಟ್ಟಿದ್ದು ಮನುಷ್ಯರಾಗೇ! ಪ್ರಾಣಿಗಳಾಗಾ ಹುಟ್ಟಿದ್ದು?! ಬುದ್ಧಿಜೀವಿಗಳು ಬರೆಯುವ ಸಾಹಿತ್ಯಕ್ಕೆ ತಲೆ ಬುಡ ಯಾವುದೂ ಇರುವುದಿಲ್ಲ. ಸರಕಾರದಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳಲು, ಸೈಟು ಗಿಟ್ಟಿಸಿಕೊಳ್ಳಲು ಬರೆಯುವ ಬುದ್ಧಿ ಜೀವಿಗಳಿಗೆ ಯಾವ ಸಿದ್ಧಾಂತವಿದೆ?!’

ಇಷ್ಟನ್ನೇ ಕೇಳಿರುವುದು ಅನಂತ ಕುಮಾರ್ ಹೆಗಡೆ! ಅಷ್ಟಕ್ಕೇ, ಸಾಹಿತಿಗಳಿಗೆಲ್ಲ ಉರಿಬಿದ್ದು ಮೇಲಿಂದ ಮೇಲೆ ಕರೆ ಮಾಡಿ, ಮಾಧ್ಯಮದಲ್ಲಿ ಅರಚುತ್ತಿದ್ದಾರೆ ಅಷ್ಟೇ! ಇಡೀ ಸಾಹಿತಿಗಳಿಗೇ ಅವಮಾನವೆಂದು ವಿವಾದ ಎಬ್ಬಿಸುತ್ತಿರುವವರು ತಮ್ಮನ್ನು ತಾವೊಮ್ಮೆ ನೋಡಿಕೊಳ್ಳಬೇಕಾಗಿದೆ! ಇಡೀ ಸಾಹಿತ್ಯವಲಯಕ್ಕೆ ಅವಮಾನವೆಸಗಿದ್ದರೆ, ಕರ್ನಾಟಕದ ಪ್ರತಿಯೊಬ್ಬ ಸಾಹಿತಿಗಳೂ ಖಂಡಿಸಲೇಬೇಕಿತ್ತಲ್ಲವೇ?! ಆದರೆ.. .?!

‘ಬೂದುಗುಂಬಳ ಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿ ನೋಡಿಕೊಂಡ’ ಎನ್ನುವ ಹಾಗೆ, ಒಂದಷ್ಟು ಬುದ್ಧಿಜೀವಿಗಳ ಸಾಹಿತಿಗಳು ಅರಚುತ್ತಿರುವುದನ್ನು ನೋಡಿದರೆ, ನಿಜಕ್ಕೂ ಬುದ್ಧಿಜೀವಿಗಳಿಗೆ ಬರ್ನಾಲ್ ನ ತುರ್ತು ಅವಶ್ಯಕತೆ ಉಂಟಾಗಿದೆ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post