X
    Categories: ಅಂಕಣ

ಸಮಾಜವಾದಿ ಅಂತ ಕರೆದುಕೊಳ್ಳೋ ಸಿದ್ಧರಾಮಯ್ಯನಿಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಇಷ್ಟು ಅವಾಂತರಗಳನ್ನು ಮಾಡುವ ಅಗತ್ಯವಿತ್ತೇ?!!!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳ ಆರೋಪ ಪಟ್ಟಿಯನ್ನು ಕೇಳಿದರೆ ನೀವು ದಂಗಾಗುವುದು ಅಂತು ಗ್ಯಾರಂಟಿ!! ಅವರು ಮಾಡಿರುವ ಹಗರಣದ ನಿಮಗೆ ತಿಳಿದಿರಬಹುದು.!! ಆದರೆ ಯಾಕೆ ನಾವು ಅವರು ಮಾಡಿರುವ ಹಗರಣದ ಬಗ್ಗೆ ಮೆಲುಕು ಹಾಕುತ್ತಿದ್ದೇವೆ ಎಂದರೆ… ಅವರನ್ನು ಓಟು ಹಾಕಿ ಗೆಲ್ಲಿಸುವವರು ನೀವೇ ಅಲ್ಲವೇ?.. ಒಂದು ಬಾರಿ ಈ ಲೇಖನಿ ನೋಡಿ ಮುಂದೆ ಇಂತಹವರನ್ನು ಗೆಲ್ಲಿಸಬೇಕೋ ಬೇಡವೋ ಎಂಬೂವುದನ್ನು ಯೋಚಿಸಿ ಅಷ್ಟೆ..!!

ಅರ್ಕಾವತಿ ಡೀನೋಟಿ ಫೈ ಹಗರಣದಲ್ಲಿ ಸುಮಾರು 544 ಎಕರೆ 34 ಗುಂಟೆ ಬಳಸಿಕೊಂಡಿದೆ. ಇದರಲ್ಲಿ 10 ಸಾವಿರ ಕೋಟಿ ಪಡೆದಿರುವ ಆರೋಪ
ಸಿದ್ದರಾಮಯ್ಯನವರದು. ಪ್ರಕರಣ ಸಿಬಿಐಗೆ ಬಿಜೆಪಿ ಒತ್ತಾಯಿಸಿತ್ತು. ಆದರೆ ಸರಕಾರ ತನಿಖಾ ಆಯೋಗದ ರಚನೆ ಮಾಡಿತ್ತು. 44 ದಾಖಲೆಗಳು ಕಳವು ಆಗಿರುವ ಬಗ್ಗೆ ಹಾಗೂ ನಕಲಿ ಸಹಿ ಹಾಕಿರುವ ಬಗ್ಗೆ ಮಾಹಿತಿ ದೊರಕಿದ್ದಂತು ಸತ್ಯ… ಇಂತಹ ಕಪಟ ರಾಜಕಾರಣಿಗಳು ನಮ್ಮ ರಾಜ್ಯವನ್ನು ಆಳಬೇಕೋ?? ನೀವೇ ಉತ್ತರಿಸಿ…

ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣವನ್ನು ಮುಚ್ಚಿಹಾಕಲೆಂದೇ ಮುಖ್ಯಮಂತ್ರಿ ಸಿಐಡಿಯಿಂದ ಆತುರವಾಗಿ “ಬಿ” ರಿಪೋರ್ಟ್ ತರಿಸಿಕೊಂಡಿದ್ದರು. ನಂತರ
ಸಾಕ್ಷ್ಯಾಧಾರದ ಕೊರತೆಯಿಂದ ಮುಚ್ಚಿಹಾಕಿದ್ದರು. ಆದರೆ ಮುಚ್ಚಿಟ್ಟ ಸಾಕ್ಷ್ಯಾಧಾರ ಕೂಡಾ ಬೆಳಕಿಗೆ ಬಂದಿದೆ. ಇಂತಹವರು ರಾಜ್ಯವಾಳಿದರೆ ಮುಂದಿನ ಗತಿ ಅಷ್ಟೆ…

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ 28 ಸಚಿವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಲಾತ್ತು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಿದ ಸಿದ್ದರಾಮಯ್ಯ ಮತ್ತೊಂದು ಹಗರಣದಲ್ಲಿ ತಮ್ಮ ಪಾತ್ರವಿದೆ ಎಂದು ಸ್ಪಷ್ಟವಾಗಿ ತೋರಿಸಿಕೊಡಿದ್ದಾರೆ. ಕೇವಲ ಸಿದ್ದರಾಮಯ್ಯವಲ್ಲದೆ ಇಡೀ ತಂಡವೇ ಈ ಹಗರಣದಲ್ಲಿ ಸಿಲುಕಿಕೊಂಡಿದ್ದ ಮಾಹಿತಿ ನಮಗೆಲ್ಲಾ ತಿಳಿದೇ ಇದೆ.

ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಕಚೇರಿಗೆ ತರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಸದಾಶಿವ ನಗರದ ಮನೆ
ಹಾಗೂ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಸೇರಿದಂತೆ ಡಿ.ಕೆ ಶಿವಕುಮಾರ್‍ಗೆ ಸೇರಿದ ಹಲವು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಿತ್ತು. ಅಧಿಕಾರಿಗಳ ದಾಳಿಯಲ್ಲಿ 11.43 ಕೋಟಿ ವಶಕ್ಕೆ ಪಡೆದಿದ್ದರು. ಐಟಿ ಅಧಿಕಾರಿಗಳ ದಾಳಿ ವೇಳೆ ದೆಹಲಿಯಲ್ಲಿ 8.33 ಕೋಟಿ, ಬೆಂಗಳೂರಿನಲ್ಲಿ 2.5 ಕೋಟಿ, ಮೈಸೂರಿನಲ್ಲಿ 60 ಲಕ್ಷ ವಶಕ್ಕೆ ಪಡೆಯಲಾಗಿತ್ತು. ಹಾಗಾದರೆ ಒಟ್ಟು 11.43 ಕೋಟಿ ಅಕ್ರಮ ಆಸ್ತಿ ವಶಕ್ಕೆ ಪಡೆಯಲಾಗಿತ್ತು.

ಸಿಎಂ ಸಿದ್ದರಾಮಯ್ಯರ ದುಬಾರಿ ವಾಚು ಹಗರಣ ತುಂಬಾ ದೊಡ್ಡ ಮುಜುಗರಕ್ಕೆ ಈಡು ಮಾಡುವಂತಾಗಿತ್ತು.!! ಸುಮಾರು 70 ಲಕ್ಷ ಬೆಲೆ ಬಾಳುವ ವಾಚನ್ನು
ಸಿದ್ದರಾಮಯ್ಯ ತನ್ನ ಸ್ನೇಹಿತ ಕೊಟ್ಟಿರುವ ಗಿಫ್ಟ್ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿತ್ತು… ಇದು ಒಂದು ಶ್ರೀಮಂತಿಕೆ ದರ್ಪ ಪ್ರದರ್ಶಿಸುವಂತಿತ್ತು…. ಇತ್ತ
ರಾಜ್ಯದಲ್ಲಿ ಅದೆಷ್ಟೋ ಜನ ಊಟವಿಲ್ಲದೆ ಪರದಾಡುತ್ತಿದ್ದರೆ ಸಿಎಂ ಮಾತ್ರ ದುಬಾರಿ ವಾಚು ಧರಿಸಿ ಶೋಕಿ ತೋರಿಸುತ್ತಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 6,000 ಕೋಟಿಯಷ್ಟು ಅಕ್ರಮ ಮರಳು ದಂಧೆ ನಡೆಯುತ್ತಿದೆ. ಈ ಹಗರಣ
ನಡೆದಿದ್ದರಿಂದ ರಾಜ್ಯದಲ್ಲಿ ಅನೇಕ ಮಂದಿ ಮರಳಿಗಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಉಡುಪಿಯಲ್ಲಿ ಒಂದು ಲೋಡ್ ಮರಳು 5000ಕ್ಕೆ ಸಿಗುತ್ತಿದೆ. ಆದರೆ
ಬೆಳಗಾವಿಯಲ್ಲಿ ಇದೇ ಪ್ರಮಾಣದ ಮರಳಿಗೆ 25 ಸಾವಿರಕ್ಕೆ ಸಿಗುತ್ತಿದೆ. ಬೆಂಗಳೂರಿನಲ್ಲಿ 70 ಸಾವಿರ ವಸೂಲಿ ಮಾಡಲಾಗುತ್ತಿದೆ. ಈ ವ್ಯತ್ಯಾಸದ ಎಲ್ಲಾ ಹಣವು
ಭ್ರಷ್ಟಾಚಾರಕ್ಕೆ ಹೋಗುತ್ತಿದೆ. ಇಲ್ಲೇ ಗೊತ್ತಾಗುತ್ತದೆ ಸಿದ್ದರಾಮಯ್ಯ ಸರಕಾರ ನಮ್ಮಂಥಹ ಬಡಪಾಯಿ ಜನಗಳ ಕಣ್ಣಿಗೆ ಹೇಗೆ ಮಣ್ಣೆರಚುತ್ತಿದ್ದಾರೆ ಅಂತಾ!!!..

ಅಬಕಾರಿ ಸಚಿವ ಎಚ್.ವೈ ಮೇಟಿಯವರು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲೂ ಗುರುತಿಸಿಕೊಂಡಿರುವ ಮೇಟಿ
ಸಂಪುಟದ ಹಿರಿಯ ಸದಸ್ಯರಾಗಿದ್ದು ಬಾಗಲಕೋಟೆಯ ಜಿಲ್ಲಾ ಉಸ್ತುವಾರಿಯನ್ನು ಹೊಂದಿದ್ದರು. ಬಾಗಲಕೋಟದಲ್ಲಿ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ವಿಡೀಯೋ ಬಿಡುಗಡೆ ಮಾಡುತ್ತೇನೆ ಎಂದ ಆರ್‍ಟಿಐ ಕಾರ್ಯಕರ್ತನಿಗೆ ವಿಡಿಯೋ ಬಿಡುಗಡೆ ಮಾಡದಂತೆ ಬೆದರಿಕೆ ಹಾಕಲಾಗಿತ್ತು. ಇದೆಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಂದ ಆಗಿದೆ ಎಂದರೆ ಇವರೆಲ್ಲಾ ಆಡಳಿತ ನಡೆಸೋಕೆ ಎಷ್ಟರ ಮಟ್ಟಿಗೆ ಲಾಯಕ್ಕೂ ಅಂತಾ ನೀವೇ ಒಮ್ಮೆ ಯೋಚಿಸಿ.!! ಇಂತಹವರೆಲ್ಲಾ ದೇಶದ ಹೆಣ್ಣು ಮಕ್ಕಳಿಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ ಎಂಬೂದನ್ನು ಸ್ಪಷ್ಟವಾಗಿ ಅರಿಯಬಹುದು.

ಕಾಂಗ್ರೆಸ್ ಹೈಕಮಾಂಡ್‍ಗೆ ಕಪ್ಪ ನೀಡಿದ ಡೈರಿ ಆರೋಪಕ್ಕೆ ಸಂಬಂಧಿಸಿದಂತೆ ಗೋವಿಂದ ರಾಜು ಸಿಕ್ಕಿಬಿದ್ದಿದ್ದರು. ಗೋವಿಂದ ರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ನಾಯಕನ ಹೆಸರು ಕೋಡ್ ರೀತಿಯಲ್ಲಿ ಉಲ್ಲೇಖವಾದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಕ್ಕೆ , ಐಟಿ ಅಧಿಕಾರಿಗಳ ಮುಂದೆ ಕೋಡ್ ವರ್ಡ್‍ಗಳಲ್ಲಿದ್ದ ಹೆಸರು ಕಾಂಗ್ರೆಸ್ ನಾಯಕರದ್ದು ಎಂಬ ಸತ್ಯ ಒಪ್ಪಿಕೊಂಡಿದ್ದರು. ಗೋವಿಂದ ರಾಜು ಅವರ ಮನೆ ಮೇಲೆ ನಡೆದ ದಾಳಿಯಲ್ಲಿ ಸಿಕ್ಕಿದ್ದ ಡೈರಿಯಲ್ಲಿ ಕೆಲ ಅಂಶಗಳು ಕಳೆದ ಫೆಬ್ರವರಿಯಲ್ಲಿ ಮಾಧ್ಯಮಗಳಿಗೆ ಲಭ್ಯವಾದಾಗ ಪಕ್ಷದ ವರಿಷ್ಟ ಮುಖಂಡರಿಗೆ ಸುಮಾರು 600 ಕೋಟಿ ರೂರಾಯಿ ಕಪ್ಪ ಸಂದಾಯದ ಬಗ್ಗೆ ಉಲ್ಲೇಖವಿತ್ತು.. ಎಂ.ವೋರಾ, ಎಸ್‍ಜಿ ಆಫೀಸ್, ಆರ್ ಜಿ ಆಫೀಸ್, ಡಿಜಿಎಸ್.. ಎಂಬ ಇತ್ಯಾದಿ ಗೂಢಾಕ್ಷರಗಳಲ್ಲಿ ಹಣ ನಮೂದಾದ ಬಗ್ಗೆ ಮಾಹಿತಿ ಇತ್ತು. ಇನ್ನು ಮಾಧ್ಯಮಗಳಿಗೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ 7 ಕೋಟಿ ನೀಡಿದ ಹಾಗೂ ಸ್ಟೀಲ್ ಬ್ರಿಜ್‍ನಿಂದ 65 ಕೋಟಿ ಸ್ವೀಕರಿಸಿದ ಬಗ್ಗೆ ಮಾಹಿತಿ ಇತ್ತು. ಈ ಸಂಬಂದ ಫೆಬ್ರವರಿ 11,2017 ರಂದು ಆದಾಯ ತೆರಿಗೆ ಇಲಾಖೆಯು ಗೋವಿಂದ ರಾಜು ಅವರನ್ನು ವಿಚಾರಣೆಗೆ ಒಳಪಡಿಸಿತ್ತು.. ಅವರು ನೀಡಿರುವ ಎರಡು ಉತ್ತರಗಳು ಕಾಂಗ್ರೆಸ್ ಪಕ್ಷದವರನ್ನು ನಡುಗಿಸುವಂತೆ ಮಾಡಿದೆ. ಹೈಕಮಾಂಡರ್‍ಗೆ ಕಪ್ಪ ನೀಡಿರುವ ಬಗ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಸರನ್ನು ಸ್ಪಷ್ಟಪಡಿಸಲಾಗಿತ್ತು.

ಇತ್ತೀಚೆಗೆ ಬಡವರಿಗೆ ಅಗ್ಗದ ದರದಲ್ಲಿ ಊಟ ನೀಡುವ ಯೋಜನೆಯನ್ನು ಕಾಂಗ್ರೆಸ್ ಸರಕಾರ ಇಂದಿರಾ ಕ್ಯಾಂಟೀನನ್ನು ನಿರ್ಮಾಣ ಮಾಡಿತ್ತು. ಬೆಂಗಳೂರು ಯಾರೂ ಊಟವಿಲ್ಲದೆ ಪರದಾಡುವಂತಾಗಬಾರದು ಎಂಬ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್‍ಗೆ ಬರುತ್ತಿದ್ದ ಊಟ ಮದುವೆ ಮನೆಯಲ್ಲಿ ಉಳಿದ ಊಟವನ್ನು ಇಂದಿರಾ ಕ್ಯಾಂಟಿನ್‍ನಲ್ಲಿ ಬಡಜನರಿಗೆ ನೀಡಲಾಗಿತ್ತು ಎಂಬೂದು ಬಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಡಿ.ಕೆ ರವಿ ಅಸಹಜ ಸಾವಾಗಿದ್ದು, ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸತ್ಯ ಕೆಲವರಿಗಷ್ಟೇ ಗೊತ್ತು.. ಆದೆರೆ ಇವರ ಸಾವನ್ನು ಕೆಲವರು ಕೊಲೆ ಎಂದು ಸಂಶಯ ಪಡುವ ಸಂಗತಿ ಬಂದಿತ್ತು. ಡಿ.ಕೆ ರವಿ ಸಾವಿನ ತನಿಖೆಯನ್ನು ಸಿಐಡಿ ನಡೆಸುತ್ತಿದ್ದರು. ಆದರೆ ಬಹುತೇಕ ಜನ ವಿಚಾರಣೆಯನ್ನು ಸಿಬಿಐಗೆ ಒಪ್ಪಿಸ ಬೇಕು ಎಂದಾಗ ಸಿದ್ದರಾಮಯ್ಯ ಸರಕಾರ ತನಿಖೆ ಮಾಡುವಲ್ಲಿ ಸೋತು ಹೋಯಿತು.

ಇತ್ತೀಚೆಗೆ ಶಶಿಕಲಾ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಕರ್ಮಕಾಂಡವನ್ನು ಬಯಲು ಮಾಡಿದ ಡಿಐಜಿ ರೂಪ ಅವರನ್ನು ಸಿದ್ದರಾಮಯ್ಯ ಸರಕಾರ ಎತ್ತಂಗಡಿ
ಮಾಡಿಸಿದೆ. ನಿಷ್ಟಾವಂತ ಅಧಿಕಾರಿಗಳಿಗೆ ಇಷ್ಟೇನಾ ಗೌರವ ಸಿ.ಎಂ ಸಿದ್ದರಾಮಯ್ಯನವರೇ??

ಹಾಗೇ ಬಂಟ್ವಾಳದಲ್ಲಿ ನಡೆದ ಶರತ್ ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಕಾಂಗ್ರೆಸ್ ಸಮಾವೇಶವಿದ್ದ ದಿನವೇ ಕೊನೆಯುಸಿರೆಳೆದಿದ್ದರು. ಆದರೆ ಕಾಂಗ್ರೆಸ್ ಸರಕಾರ ಮಾತ್ರ ಸಮಾವೇಶಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ಧೇಶವನ್ನಿಟ್ಟುಕೊಂಡು ಮರುದಿನ ಕೊನೆಯುಸಿರೆಳೆದರು ಎಂಬ ಸುಳ್ಳು ಸುದ್ಧಿ ಹಬ್ಬಿಸಿದ್ದು ಇದೇ ಸಿದ್ದರಾಮಯ್ಯ ಸರಕಾರ.,

ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸದಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಮಂಜುನಾಥ್ ಎನ್ನುವವರು ಅರ್ಜಿ ಸಲ್ಲಿಸಿದ್ದರು…. ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ? ಟಿಪ್ಪು ಜಯಂತಿ ಏಕೆ ಆಚರಿಸಬೇಕು? ಎಂದು ಹೈಕೋರ್ಟ್ ಪ್ರಶ್ನಿಸಿದ್ದಕ್ಕೆ ವ್ಯಂಗ್ಯವಾಗಿ ತಿರುಗೇಟು ನೀಡಿದ ಕಾಂಗ್ರೆಸ್ ಮುಖಂಡ, ಮುಖ್ಯ ನ್ಯಾಯ ಮೂರ್ತಿಗಳಿಗೆ ಇತಿಹಾಸದ ಪುಸ್ತಕ ಕಳುಹಿಸಿಕೊಡುತ್ತೇನೆ, ಟಿಪ್ಪು ಇಲ್ಲದಿದ್ದರೆ ಹಿಂದೂ ದೇವಾಲಯವು ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದರು. ಹೀಗೆ ಟಿಪ್ಪು ಜಯಂತಿ ಆಚರಿಸಬಾರದು ಎಂದರೂ ಆಚರಿಸಿ ಕೊಡಗಿನಲ್ಲಿ ಮಾರಣಹೋಮ ನಡೆಯುವಂತಾಯಿತು… ಇಂಥ ಕಾಂಗ್ರೆಸ್ ಪಕ್ಷಕ್ಕೆ ನಾವೇನೂ ಹೇಳೋಣ??

ನಮ್ಮ ಪೂರ್ವಜರು ಗೋ ಮಾತೆಯನ್ನು ಪೂಜ್ಯ ಸ್ಥಾನದಲ್ಲಿ ಪೂಜಿಸುತ್ತಿದ್ದು, ಅದರಲ್ಲಿ ಕೋಟಿ ದೇವರನ್ನು ಕಾಣು ಎನ್ನುತ್ತಾರೆ. ಸಂವಿಧಾನದ 48ನೇ ಕಾನೂನು
ಅಡಿಯಲ್ಲಿ ಗೋ ಹತ್ಯೆ ಮಾಡಬಾರದು ಎಂದು ಉಲ್ಲೇಖವಿದೆ. ಆದರೆ ಸಂವಿಧಾನಕ್ಕೆ ಅಪಮಾನ ಮಾಡುವುದರೊಂದಿಗೆ ಕಾಂಗ್ರೆಸ್‍ನವರು ನಮ್ಮ ದೇಶದ ಕಾನೂನನ್ನು ಗಾಳಿಗೆ ತೂರಿದ್ದಾರೆ.

ಲಿಂಗಾಯತ ಮತ್ತು ಹಿಂದೂ ಧರ್ಮವನ್ನು ಪ್ರತ್ಯೇಕ ಮಾಡಿ ಅವರಲ್ಲಿ ಕಿಚ್ಚು ಮೂಡಿಸುವಂತೆ ಮಾಡಿದ್ದು ಇದೇ ಸಿದ್ದರಾಮಯ್ಯ ಸರಕಾರ…
ಕೋತಿ ತಾನು ಕೆಟ್ಟಿದ್ದಲ್ಲದೆ… ವನವನ್ನೆಲ್ಲಾ ಕೆಡಿಸಿತಂತೆ ಆ ಜಾತಿ ಜನ ಈ ಸಿದ್ದರಾಮಯ್ಯನವರು… ಇದು ಕೇವಲ ಕೆಲ ಹಗರಣ ಮಾತ್ರ ನಿಮ್ಮ ಮುಂದಿಟ್ಟಿದ್ದೇವೆ.. ಅಷ್ಟೇ!!!

ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಖಾಸಗಿ ಸಂಸ್ಥೆಯ ಸಮೀಕ್ಷೆ ಸುಳ್ಳಾಗಲಿದೆ. ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ ಸಮಯವಿದೆ.
ಮತದಾರರು ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬೂವುದನ್ನು ನಿರ್ಧರಿಸಲು ಸಮಯಾವಕಾಶವಿದೆ. ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಸಂಪೂರ್ಣ
ಅಧಿಕಾರ ನಿಮಗಿದೆ. ಸುಳ್ಳು, ಪೊಳ್ಳು ಆಶ್ವಾಸನೆಗೆ ಮರುಳಾಗದಿರಿ….ರಾಜ್ಯಕ್ಕೆ ಒಂದು ಒಳ್ಳೆ ನಾಯಕನನ್ನು ಆಯ್ಕೆ ಮಾಡುವಲ್ಲಿ ಮುಂದಾಗಿ…

-ಶೃಜನ್ಯಾ

Editor Postcard Kannada:
Related Post