X

ಸರಕಾರದ ಹಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ನೀಡಿದ್ದ ಅಹಂಕಾರದ ಉತ್ತರವೇನು ಗೊತ್ತಾ?!

ಇತ್ತೀಚಿನ ದಿನಗಳಲ್ಲಿ ಸಿ.ಎಂ ಸಿದ್ದರಾಮಯ್ಯನವರು ಮಾತನಾಡುತ್ತಿರಬೇಕಾದರೆ ಬಹಳ ಅಹಂಕಾರದಿಂದನೇ ಮಾತನಾಡುತ್ತಿರುವುದು ಕಂಡು ಬರುತ್ತದೆ.. ಹಗರಣಗಳ ಮೇಲೆ ಹಗರಣ ಮಾಡುತ್ತಿರುವ ಸಿದ್ದರಾಮಯ್ಯನವರಿಗೆ ಸಾಧನಾ ಸಮಾವೇಶ ಎಂದು ಹೆಸರಿಟ್ಟುಕೊಂಡು ಬೇಕಾ ಬಿಟ್ಟಿ ಹಣ ಕರ್ಚು ಮಾಡುತ್ತಿದ್ದು ಅಹಂಕಾರದಿಂದ ಬೀಗುತ್ತಿದ್ದಾರೆ ಎಂದು ಹೇಳಬಹುದು..

ಸರ್ಕಾರದ ಸಾಧನಾ ಸಮಾವೇಶವನ್ನು ಸರ್ಕಾರದ ಹಣದಿಂದಲೇ ಮಾಡೋದು. ಅದು ಬಿಟ್ಟು ನನ್ನ ಹಣದಿಂದ ಮಾಡ್ಲಾ? ಎಂದು ಬಹಳ ದರ್ಪದಿಂದ ಮಾತನಾಡಿರುವುದು ನಿಜವಾಗಿಯೂ ಆಶ್ವರ್ಯಕರ!! ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಅಹಂಕಾರದಿಂದ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ!! ಪ್ರತೀಯೊಂದು ಕಾರ್ಯಕ್ರಮದಲ್ಲೂ ಕಾಂಗ್ರೆಸ್ ಪಕ್ಷವು ಅದರ ಬಾವುಟ ಹಿಡಿದುಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದರೆ ಸರಕಾರದ ಸಾಧನಾ ಸಮಾವೇಶ ಹೇಗಾಗುತ್ತದೆ ಎಂಬುವುದಕ್ಕೆ ಕೂಡಾ ಉತ್ತರಿಸಬೇಕಾಗಿದೆ..

ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಮಾತನಾಡಿದ ಅವರು, ವಿಪಕ್ಷದವರು ತಮ್ಮ ಹಣದಿಂದ ಮಾಡಿದ್ರಾ? ಪ್ರಧಾನಿ ಮೋದಿ ಫಾರಿನ್‍ಗೆ ತಮ್ಮ ಹಣದಿಂದ ಹೋಗಿ ಬರ್ತಾರಾ ಅಂತ ಪ್ರಶ್ನೆ ಮಾಡಿದ್ರು…ಇವರ ಪ್ರಶ್ನೆಗೆ ಸರಿಯಾಗಿ ಗಣನೆಗೆ ತೆಗೆದುಕೊಂಡರೆ ಇಂತಹ ಕಾರ್ಯಕ್ರಮಗಳನ್ನು ಬಜೆಪಿರವರು ಕೂಡಾ ಇಂತಹ ಕಾರ್ಯಕ್ರಮವನ್ನು ಮಾಡಿದ್ದಾರೆ ಆದರೆ ನಿಮ್ಮಂತೆ ಯಾವುದನ್ನೂ ದುಂದುವೆಚ್ಚ ಮಾಡಿದ ಉದಾಹರಣೆಗಳಿಲ್ಲ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ!!

ಪ್ರಧಾನಿ ನರೇಂದ್ರ ಮೋದಿ ಫಾರಿನ್ ಟೂರ್ ಹೋಗಲು ಸರಕಾರಿ ಹಣ ಬಳಸುತ್ತೀರಿ ಅಂದಿರಲ್ಲವೇ ಸಿದ್ದರಾಮಯ್ಯನವರೇ ಅವರು ವಿದೇಶಕ್ಕೆ ಹೋಗಿರುವುದು ದೇಶ ಸುತ್ತುವುಕ್ಕಲ್ಲ ಬದಲಾಗಿ ನಮ್ಮ ದೇಶದ ಅಭಿವೃದ್ಧಿಗಾಗಿ!!… ನಮ್ಮ ದೇಶವನ್ನು ಯಾವ ರೀತಿಯಾಗಿ ಅಭಿವೃದ್ಧಿಯತ್ತ ತರಬಹುದು ಎಂಬುವುದಕ್ಕೆ ಮಾತ್ರ ಅದೇ ಒಂದು ಉದ್ಧೇಶದಿಂದ ಅಷ್ಟೇ!!… ನಮಗೆ ನಿಮಗೆ ಎಲ್ಲರಿಗೂ ತಿಳಿದಿರುವ ವಿಷಯ..!! ಶತ್ರು ರಾಷ್ಟ್ರವನ್ನು ಬಗ್ಗು ಬಡಿಯಲು ಅದರ ಜೊತೆ ಹೋರಾಟ ಮಾಡಬೇಕೆಂದರೆ ನಮ್ಮ ದೇಶದಲ್ಲಿ ಅದೆಷ್ಟೋ ಶಸ್ತ್ರಾಸ್ತ್ರಗಳ ಕೊರತೆ ಇರುವುದು ತಿಳಿದೇ ಇದೆ.. ಇದರಿಂದ ಕೆಲ ರಾಷ್ಟ್ರಗಳಲ್ಲಿ ನಾವು ಸ್ನೇಹವನ್ನು ಬೆಳೆಸಿ ಆ ದೇಶದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡು ದೇಶವನ್ನು ರಕ್ಷಣೆ ಮಾಡುವ ಉದ್ಧೇಶದಿಂದ ವಿದೇಶಿ ಪ್ರವಾಸವನ್ನು ಮಾಡುತ್ತಾರೆ..ಅದರ ಹೊರತು ಯಾವುದೇ ದುಂದುವೆಚ್ಚವನ್ನು ಮಾಡಿಲ್ಲ ಎಂಬುವುದನ್ನು ಅರಿತಕೊಳ್ಳಬೇಕು ಸಿದ್ದರಾಮಯ್ಯನವರೇ…

ರಾಜ್ಯ ಬಿಜೆಪಿಯು ಶ್ರೀ ಯಡಿಯೂರಪ್ಪನವರ ನೇತ್ರತ್ವದಲ್ಲಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ನಡೆಸಿ ಯಶಸ್ವಿಗೊಳಿಸುತ್ತಿರುವುದನ್ನು ಕಂಡು ಕಂಗಾಲಾಗಿರುವ ಸಿದ್ದರಾಮಯ್ಯನವರು ಬಿಜೆಪಿಗೆ ಸೆಡ್ಡು ಹೊಡೆಯಲು ‘ಜನಾಶಿರ್ವಾದ ಸಮಾವೇಶ’ವನ್ನು ಕೂಡಾ ಆರಂಭಿಸಿದ್ದರು.. ಮುಖ್ಯಮಂತ್ರಿಗಳ ಸಮಾವೇಶಕ್ಕೆ ಜನಸೇರಿಸುವ ಭರದಲ್ಲಿ ಈ ಕಾಂಗ್ರೆಸಿಗರು ಯಾವ ರೀತಿಯ ನಾಟಕಕ್ಕೆ ತಯಾರಾಗಿದ್ದಾರೆ ಎಂದರೆ ಜನರನ್ನು ಸೆಳೆಯುವ ಉದ್ದೇಶದಿಂದ “ಹಕ್ಕುಪತ್ರ ವಿತರಣೆ” ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಮೋಸಗೊಳಿಸಿದ್ದರು.

ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬೂದು ಪ್ರತಿಯೊಬ್ಬ ಪ್ರಜೆಗೂ ಗೊತ್ತಿರುವ ವಿಚಾರ. ಪಕ್ಷದ ಕಾರ್ಯಕ್ರಮವನ್ನು ಸರಕಾರಿ ದುಡ್ಡಿನಿಂದ ಮಾಡುವ ಕಾಂಗ್ರೆಸ್ ತನ್ನ ಸಮಾವೇಶಕ್ಕೆ ಜನರನ್ನು ಸೆಳೆಯಲು ಹಣದ ಜೊತೆಗೆ ಬೆಳ್ಳಿ ನಾಣ್ಯಗಳನ್ನು ಗಿಫ್ಟ್ ಕೊಟ್ಟು ಸರಕಾರದ ಹಣವನ್ನು ವ್ಯರ್ಥ ಮಾಡಿತ್ತು..ಈ ರೀತಿಯಾಗಿ ಸರಕಾರದ ಹಣವನ್ನು ದಂದುವೆಚ್ಚ ಮಾಡುವಾಗ ನಿಮಗೆ ಅಯ್ಯೋ ಎನಿಸಿರಲಿಲ್ಲವೇ?

ಸಿದ್ದರಾಮಯ್ಯನವರ ಭ್ರಷ್ಟ ಆಡಳಿತವನ್ನು ಕಂಡ ರಾಜ್ಯದ ಜನತೆ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕುತ್ತಿದೆ. ಆದರೆ ಇವೆಲ್ಲವನ್ನೂ ತಣ್ಣಗಾಗಿಸಲು ಈ ಷಂಡ ಸರಕಾರ ಜನರಿಗೆ ಹಣ ಹಂಚಿ ಸಮಾವೇಶಕ್ಕೆ ಜನರನ್ನು ಕರೆತರುತ್ತಿದೆ. “ಎಲ್ಲಾ ಬಿಟ್ಟವನು ಊರಿಗೆ ದೊಡ್ಡವನು” ಎಂಬ ಮಾತಿದೆ. ಅದೇ ರೀತಿ ಈ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಬೊಗಳೆ ಬಿಡುತ್ತಾ ಬಂದಿರುವುದು ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ.

ಸಿದ್ದರಾಮಯ್ಯನವರ ಈ ಆಡಳಿತದಿಂದ ಬೇಸತ್ತು ಅದೆಷ್ಟೋ ಅಧಿಕಾರಿಗಳು ಈ ಸರಕಾರದಿಂದ ದೂರ ಸರಿದರು. ಆದರೂ ತಮ್ಮ ಸರಕಾರದ ಭ್ರಷ್ಟ ಅಧಿಕಾರಿಗಳ ಪರ ಬ್ಯಾಟಿಂಗ್ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯನವರು ಇಡೀ ರಾಜ್ಯದ ಅಶಾಂತಿಗೆ ಕಾರಣರಾದವರು. ಹೋದಲ್ಲೆಲ್ಲಾ ನಿದ್ದೆ ಮಾಡುವ ಅಭ್ಯಾಸ ಹೊಂದಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಅವಮಾನ ಮಾಡುತ್ತಿರುವುದು ಖೇದಕರ…! ಯಾಕೆಂದರೆ ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಪಾಲು ಶೂನ್ಯ. ಕೇವಲ ‘ಭಾಗ್ಯ’ ದ ಹೆಸರಿನಲ್ಲಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿರುವುದರಿಂದಲೇ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಹೊಂದುತ್ತಿಲ್ಲ. ಕೇಂದ್ರ ನೀಡಿದ 95% ದುಡ್ಡಿಗೆ 5% ರಾಜ್ಯ ಸರ್ಕಾರದ ವತಿಯಿಂದ ನೀಡಿ ,ಎಲ್ಲವನ್ನೂ ನಾವೇ ಕೊಟ್ಟಿದ್ದೇವೆ ಎಂದು ರಾಜ್ಯದುದ್ದಕ್ಕೂ ಸಾರಿಕೋಂಡು ಬರುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಯಲ್ಲಿ ತನ್ನ ಹಾಗೂ ತನ್ನ ಪಕ್ಷದ ಪಾಲು ಏನೂ ಇಲ್ಲ ಎಂಬುದನ್ನು ಮರೆತಂತಿದೆ. ಸಿದ್ದರಾಮಯ್ಯನವರ ಸಮಾವೇಶಕ್ಕೆ ಜನ ಸೇರುವುದಿಲ್ಲ ಎಂದು ಮೊದಲೇ ಅರಿತಿರುವ ಕಾಂಗ್ರೆಸ್ ಅಧಿಕಾರಿಗಳು ಮಂಡ್ಯದಲ್ಲಿ ಸಾಮಾನ್ಯ ಜನರಿಗೆ ಬೆಳ್ಳಿಯ ನಾಣ್ಯ ಮತ್ತು ಹಣ ಹಂಚಿದ್ದು ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸರಕಾರದ ಹಣದ ಬದಲು ನಿಮ್ಮಲ್ಲಿರುವ ಹಣವನ್ನು ಉಪಯೋಗಿಸಬಹುದಲ್ಲವೇ?

ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ನಾನಾ ಕಡೆ ನಡೆಸುತ್ತಿರುವ ಸಾಧನಾ ಸಮಾವೇಶದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಕೂಡಾ ಪೆÇಲೀಸ್ ಇಲಾಖೆಗೆ ಸೂಚನೆ ಹೊರಡಿಸಿದ್ದರಂತೆ.. ಪ್ರತಿಭಟನೆ ನಡೆದರೂ ಯಾವುದೇ ಮಾಧ್ಯಮಗಳಲ್ಲಿ ಅದು ಬರದಂತೆ ನೋಡಿಕೊಳ್ಳುವ ಹೊಣೆಯನ್ನೂ ಪೆÇಲೀಸ್ ಇಲಾಖೆಗೆ ವಹಿಸಲಾಗಿತ್ತು.. ಈ ವಿಷಯ ಶಿವಮೊಗ್ಗದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಬೆಳಕಿಗೆ ಬಂದಿತ್ತು.

ಸಿದ್ದರಾಮಯ್ಯನವರ ಮಾತನ್ನು ಕೇಳಿ ಕೇವಲ ಶಿವಮೊಗ್ಗದಲ್ಲಿ ಮಾತ್ರ ದರ್ಪ ತೋರಿದ್ದಲ್ಲ ಚಿಕ್ಕಮಗಳೂರಿನಲ್ಲಿನಲ್ಲಿ ಸಿಎಂ ಸಿದ್ಧರಾಮಯ್ಯನವರ ಸಾಧನ ಸಮಾವೇಶದ ವೇಳೆ ತನ್ನ ನೋವು ತೋಡಿಕೊಳ್ಳಲೆಂದು ಬಂದ ವಿಕಲಚೇತನರೊಬ್ಬರನ್ನು ಪೆÇಲೀಸರು ಎಳೆದು ಹೊರಹಾಕಿರೋ ಅಮಾನವೀಯ ಘಟನೆ ಕೂಡಾ ನಡೆದಿತ್ತು.. ಇಷ್ಟೆಲ್ಲಾ ಘಟನೆ ನಡೆದರೂ ಕೂಡಾ ಸಿಎಂ ಸಿದ್ದರಾಮಯ್ಯನವರು ಮಾತ್ರ ಯಾವುದೇ ಸಂಬಂಧವಿಲ್ಲಂತೆ ನಡೆಸಿರುವುದು ನಿಜಕ್ಕೂ ಆಶ್ಚರ್ಯಕರ.. ಈ ವೇಳೆ ಅಲ್ಲಿದ್ದಂತಹ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರು ಹಾಗೂ ಹಿರಿಯ ಮುಖಂಡರು ಇದ್ದರೂ ವಿಕಲಚೇತನರ ಮನವಿಯೇನೆಂದೇ ಕೇಳಲಿಲ್ಲ.. ಎಂಬುವುದು ನಿಜಕ್ಕೂ ವಿಪರ್ಯಾಸವೇ ಸರಿ!! ಅಲ್ಲದೇ ಅವರತ್ತ ತಮ್ಮ ಗಮನವನ್ನೂ ಹರಿಸಿಲ್ಲ.. ಇನ್ನು ಪೆÇೀಲಿಸರು ಮಾನವೀಯತೆ ಮರೆತವರಂತೆ ಅವರನ್ನು ಎಳೆದು ಹೊರಹಾಕಿದ್ದಾರೆ.. ವಿಕಲಚೇತನರು ಅಂದರೆ ಇಷ್ಟು ಕೀಳು ಮಟ್ಟದಲ್ಲಿ ಅವರನ್ನು ನೋಡಿಕೊಳ್ಳುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯಕರವಾಗುತ್ತದೆ.. ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದಲ್ಲಿ ಸ್ಟೇಡಿಯಂನಲ್ಲಿ ಹೆಲಿಕಾಫ್ಟರ್ನಿಂದ ಇಳಿದು ಎದುರಿನ ಸ್ಟೇಜ್‍ಗೆ ಹೋಗುವಾಗ, ದಾರಿ ಮಧ್ಯದಲ್ಲಿ ಆಂಬುಲೆನ್ಸ್‍ನಲ್ಲಿ ಮಹಿಳಾ ರೋಗಿಯೋರ್ವರನ್ನು ಕರೆತರಲಾಗಿತ್ತು. ಆದರೆ ಸಿಎಂ ಭದ್ರತೆ ಹೆಸರಲ್ಲಿ ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆತರುತ್ತಿದ್ದ ಆಂಬುಲೆನ್ಸ್‍ನ್ನು ಅರ್ಧಕ್ಕೆ ತಡೆದಿದ್ದಾರೆ. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಆಸ್ಪತ್ರೆವರೆಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯನ್ನು ನೋಡಿ ಮರುಗಿದ ಜನ ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಹೇಳಬೇಕು ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದರು..ಇದೆಲ್ಲಾ ಸಿಎಂ ಸಿದ್ದರಾಮಯ್ಯನವರು ಅಹಂಕಾರದಿಂದ ಮಾಡುವ ಕೆಲಸ!!.. ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವ ಮಾತಿನಂತೆ ಇವರಿಗೂ ವಿನಾಶ ಕಾಲ ಹತ್ತಿರ ಬರುವ ಹಾಗೆ ತೋರುತ್ತಿದೆ.

ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎನ್ನುವುದು ಜನಸಮಾನ್ಯರಿಗೆ ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ ಜನ ಸರ್ಕಾರದಿಂದ ಯಾವುದನ್ನು ಬಯಸುತ್ತಿದ್ದರೋ ಅದ್ಯಾವುದೂ ಆಗುತ್ತಿಲ್ಲ. ಹಲವಾರು ಆಶ್ವಾಸನೆಗಳನ್ನು ನೀಡುತ್ತಾ ಬಂದಂತಹ ಸರ್ಕಾರದಿಂದ ಜನ ಇನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಆದರೆ ಈಗ ಕರ್ನಾಟಕ ಸರ್ಕಾರ ನಡೆಸಿಕೊಳ್ಳುತ್ತಿರುವ ಈ ರೀತಿಯ ಅಮಾನವೀಯ ಕೃತ್ಯಗಳನ್ನು ನೋಡಿದರೆ ಯಾವ ಸಾಮಾನ್ಯ ಪ್ರಜೆಯೂ ಈ ಸರ್ಕಾರಕ್ಕೆ ಶಾಪ ಹಾಕದೆ ಇರಲಾರ… ಯಾವುದೇ ಸಾಮಾನ್ಯ ಪ್ರಜೆಯನ್ನೂ ತನ್ನ ಭದ್ರತೆಗಿಂತಲೂ ಆತನ ಭದ್ರತೆಯನ್ನು ಮೊದಲು ಮಾಡಬೇಕಾದ ಸರ್ಕಾರ, ತನ್ನ ಭದ್ರತೆಯೇ ಪ್ರಮುಖವಾಗಿರುವ ಮುಖ್ಯಮಂತ್ರಿಗಳ ಈ ರೀತಿಯ ಧೋರಣೆಯು ಸಾಮಾನ್ಯ ಪ್ರಜೆಗಳಲ್ಲಿ ಕೆಂಗಣ್ಣು ಬೀರುವಂತೆ ಮಾಡಿದೆ.

ಪವಿತ್ರ

Editor Postcard Kannada:
Related Post