X

ಹಿಂದಿ ಹೇರುವ ಮೊದಲು ಕನ್ನಡಕ್ಕೆ ಗೌರವ ಕೊಡಲು ಕಲಿಯಿರಿ! ಹಿಂದಿಯವರಿಗೆ ರಾಷ್ಟ್ರಪತಿಯವರ ಖಡಕ್ ಎಚ್ಚರಿಕೆ!!

New Delhi: NDA's presidential nominee Ram Nath Kovind arrives to attend an NDA meeting at Parliament in New Delhi on Friday. PTI Photo by Subhav Shukla (PTI6_23_2017_000151B)

ಭಾಷೆಗಳ ನಡುವಿನ ವೈಮನಸ್ಸು ಇವತ್ತಿನದಲ್ಲ ಬಿಡಿ! ಯಾವುದೇ ಸಮಾಜವಾಗಲಿ, ಪ್ರಾಂತವಾಗಲಿ ಅಥವಾ ದೇಶವಾಗಲಿ ಒಂದುಗೂಡುವುದು ಭಾಷೆಯ ಮೇಲೆಯೇ! ಅದೇ ರೀತಿ ಅವರವರ ತಾಯಿ ಭಾಷೆಯ ಮೇಲೆ ಅಭಿಮಾನವಿರುವುದೂ ಹೆಮ್ಮೆಯ ಸಂಗತಿಯೇ! ಆದರೆ, ಇವತ್ತು ಕರ್ನಾಟಕದ ಸ್ಥಿತಿ ಮಾತ್ರ ಈ ವಿಷಯದಲ್ಲಿ ಗಂಭೀರವಾಗಿದೆ ಅಷ್ಟೇ!

ಕರ್ನಾಟಕದ ಬೆಂಗಳೂರೆಂಬ ಮಾಯಾನಗರಿಯಿದೆಯಲ್ಲ, ಕನ್ನಡನಾಡಿನ ಭಾಗವಾದರೂ ಸಹ, ಕನ್ನಡ ಮಾತನಾಡುವವರಿಗಿಂದ ಹೊರ ಪ್ರಾಂತ್ಯದ ಭಾಷೆಯವರೇ ಹೆಚ್ಚಾಗಿ ಕಂಡುಬರುತ್ತಾರೆ ಎಂಬುದು ಸತ್ಯವೇ! ಆದರೆ, ಉತ್ತರ ಭಾರತದ ಹಿಂದಿ ಭಾಷಿಗರ ಅತಿರೇಕತನವೊಂದು ಕನ್ನಡಿಗರನ್ನು ಆಗಾಗ ಆವೇಶಕ್ಕೊಳಪಡಿಸಿದ್ದೂ ತಿಂಗಳ ಹಿಂದಷ್ಟೇ ಅಲ್ಲವೇ?!

ಚಾಟಿ ಬೀಸಿದರು ರಾಷ‌್ಟ್ರಪತಿ ರಾಮನಾಥ ಕೋವಿಂದ್!

ನೆನ್ನೆಯಷ್ಟೇ ದೆಹಲಿಯ ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ‘ಹಿಂದಿ ದಿವಸ್’ ಆಚರಣೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ಕೋವಿಂದ್ ವಿಶೇಷವಾಗಿ ಕನ್ನಡ ಭಾಷೆಯ ಕುರಿತು ಮಾತನಾಡಿದ್ದು ಎಲ್ಲರಿಗೂ ಸೋಜಿಗವೇ! ಬೆಂಗಳೂರಿನ ‘ನಮ್ಮ ಮೆಟ್ರೋ’ ಸೇರಿದಂತೆ ಹಿಂದಿ ಹೇರಿಕೆಯ ವಿರುದ್ಧ ನಡೆದ ಪ್ರತಿಭಟನೆಗಳ ಬಗೆಗೆ ಮಾತನಾಡಿದ ಕೋವಿಂದ್ ‘ಹಿಂದಿಯೇತರ ಭಾಷೆಗಳಿಗೂ ಹಿಂದಿಯಷ್ಟೇ ಸಮಾನ ಗೌರವ ಕೊಡಿ. ಆಗ ತನ್ನಿಂತಾನೆ ಅವರೂ ಹಿಂದಿಗೆ ಗೌರವ ಕೊಡುತ್ತಾರೆ.’ ಎಂಬ ಮಾತು ಅತಿರೇಕದ ಹಿಂದಿ ಭಾಷಿಗರಿಗೆ ಚಾಟಿ ಬೀಸಿದ್ದು ಸತ್ಯವೇ!

“ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡಿದರೆ ಅಪರಾಧವಾಗುತ್ತದೆ. ಹಿಂದಿಯನ್ನು ಅತಿಯಾಗಿ ಉತ್ತೇಜಿಸುವುದು ರಾಷ್ಟ್ರಭಾಷೆಯಾಗಿ ಅನಿವಾರ್ಯವಾದರೂ ಅದರ ಜೊತೆಗೆ ಪ್ರಾಂತೀಯ ಭಾಷೆಗಳನ್ನೂ ಗೌರವಿಸಿ ಉತ್ತೇಜಿಸಿದರೆ, ಹಿಂದಿಗೊಂದು ಸ್ಥಾನಮಾನ ಸಿಗುತ್ತದೆ ಹೊರತು, ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಿದರೆ ರಾಷ್ಟ್ರೀಯ ಭಾಷೆಯ ಮೇಲಿರುವ ಗೌರವವೂ ಉಳಿಯುವುದಿಲ್ಲ. ಹಿಂದಿ ಭಾಷಿಗರು ಬೇರೆ ಭಾಷೆಯನ್ನೂ ಗೌರವಿಸಿ ಅವಕಾಶ ಕೊಡುವುದರ ಜೊತೆಗೆ, ಉಳಿದ ಪ್ರಾಂತೀಯ ಭಾಷೆಗಳನ್ನೂ ಅಳವಡಿಸಿಕೊಳ್ಳುವುದು ಭಾರತೀಯ ಸಮಾಜಕ್ಕೆ ಅನಿವಾರ್ಯ. ಇತರೆ ಪ್ರಾದೇಶಿಕ ಭಾಷೆಯ ಸಂಸ್ಕ್ರತಿಯನ್ನು ಒಪ್ಪಿಕೊಂಡಾಗ ನಮ್ಮ ನಮ್ಮ ನಡುವಿನ ಭಾವೈಕ್ಯತೆ, ಸಾಮರಸ್ಯ ಮತ್ತು ಏಕತೆ ಮತ್ತಷ್ಟು ಗಟ್ಟಿಯಾಗುತ್ತದೆ.”

ಆಹಾ! ಕರ್ನಾಟಕದಲ್ಲಿರುವ ಉತ್ತರ ಭಾರತದ ಜನಗಳಿಗೆ ಕರ್ನಾಟಕದ ನೀರು, ಅನ್ನ, ಗಾಳಿ, ಹೊಟ್ಟೆಪಾಡಿಗೆ ಕೆಲಸ ವೆಲ್ಲ ಕರ್ನಾಟಕದ್ದೇ ಬೇಕಿದ್ದರೂ ಸಹ, ಕನ್ನಡ ಭಾಷೆಯ ಮೇಲಿರುವ ತಿರಸ್ಕಾರ ನೋಡಿದರೆ ಎಂತಹವರಿಗಾದರೂ ‘ಅನ್ಯಾಯ’ ಎಂದೆನಿಸುತ್ತದೆ. ಇತ್ತೀಚೆಗೆ ‘ಕನ್ನಡ್ ಗೊತ್ತಿಲ್ಲ’ ಎಂಬ ಪದಗಳಂತೂ ಅತ್ಯಂತ ಪ್ರಚಲಿತ! ಅದೂ ಕರ್ನಾಟಕದಲ್ಲಿ!

ಫೇಸ್ ಬುಕ್ಕಿನಲ್ಲೂ ‘Best place for those who hates kannada’ ಎಂಬ ಪೇಜನ್ನೂ ಸೃಷ್ಟಿಸಿ ಅದರಿಂದ ಕನ್ನಡ ಭಾಷೆಗಾದ ಅವಮಾನವೊಂದು ಹಿಂದಿ
ಭಾಷಿಗರ ಮೇಲೆಯೇ ತಿರುಗಿದ್ದು ಹೊರತು ಕನ್ನಡಿಗರಿಗ್ಯಾವ ಅವಶ್ಯಕತೆಯೂ ಇರಲಿಲ್ಲ.

‘ನಮ್ಮ ಮೆಟ್ರೋ’ ದಲ್ಲಿಯೂ ಸಹ ಹಿಂದಿ ಬಳಕೆಯನ್ನೇ ಹೆಚ್ಚಾಗಿ ಉತ್ತೇಜಿಸಿದ್ದರ ಪರಿಣಾಮವಾಗಿ, ಹಿಂದಿ ಬರದಿರುವವರು ಕಿರಿಕಿರಿ ಅನುಭವಿಸುವ ಹಾಗಾಗಿತ್ತು. ಎಲ್ಲಾ ಕಡೆಗಳಲ್ಲೂ ಹಿಂದಿಯನ್ನೇ ಬಳಸಿದ್ದರ ಪರಿಣಾಮವಾಗಿ ಕರ್ನಾಟಕ ರಕ್ಷಣಾ ವೇದಿಕೆಯವರೆಲ್ಲ ಪ್ರತಿಭಟನೆ ಮಾಡಿ, ಆಂಗ್ಲ ಹಾಗೂ ಕನ್ನಡವನ್ನು ಮಾತ್ರ ಬಳಸುವಂತೆ ಒತ್ತಡ ಹೇರಿದ್ದರು. ಪರ – ವಿರೋಧಗಳ ಮಧ್ಯೆಯೂ ಸ್ವಲ್ಪ ಸದ್ದಾಗಿದ್ದ ಪ್ರತಿಭಟನೆಯೊಂದಕ್ಕೆ ಕೊನೆಗೂ ಅಂತ್ಯ ಸಿಗದೇ ಹೋಗಿತ್ತಷ್ಟೇ!!!

ಸಾಹಿತ್ಯ – ಸಂಸ್ಕ್ರತಿಯ ಬೀಡು!!

2500 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಗೆ ಸಿಗುವ ಮರ್ಯಾದೆ ನೋಡಿದರೆ ಯಾರಿಗೆ ಮರ್ಯಾದೆ ಇಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ! 1900 ವರ್ಷಗಳ ಹಿಂದೆ ಕನ್ನಡ ಲಿಪಿಯು ಬಳಕೆಗೆ ಬಂದಿತು! ಅದಾದ ನಂತರದ ವರ್ಷಗಳಲ್ಲಿ ಅದೆಷ್ಟು ಸಾಹಿತ್ಯಗಳು, ತಾತ್ವಿಕ ಕರಡು ಪ್ರತಿಗಳು, ಕಾದಂಬರಿಗಳು ಕನ್ನಡಕ್ಕೆ ಪರಿಚಯವಾಗಿರಬಹುದು?!

ಆದರೆ, ಕರ್ನಾಟಕದಲ್ಲಿನ ಭಾಷಾ ಅಭಿಮಾನ ಕಡಿಮೆ ಎನ್ನುವ ಹಾಗೆ ಇವತ್ತು ಯಾವುದೇ ಪ್ರಾಚೀನವಾದ ಗ್ರಂಥಗಳು ಸಿಗದೇ ಇರುವುದು ನಮ್ಮ ದುರಾದೃಷ್ಟ!
ಕನ್ನಡವನ್ನು ಬೆಳೆಸುವ ಯಾವ ಪ್ರಯತ್ನಗಳು ನಡೆಯುತ್ತಿವೆ ಇವತ್ತು ನಮ್ಮಲ್ಲಿ?! ‘ಕನ್ನಡದವರು ಉದಾರ ಮನಸ್ಸಿನವರು! ಕನ್ನಡ ಭಾಷೆಯನ್ನು ಬಿಟ್ಟು ಬೇರೆಲ್ಲ
ಭಾಷೆಯನ್ನೂ ನಾಚಿಕೆಯಿಲ್ಲದೇ ಮಾತನಾಡುತ್ತಾರೆ.’ ಎನ್ನುವ ಮಾತು ಅಕ್ಷರಶಃ ಸತ್ಯ!

ಇರವತಮ್ ಮಹಾದೇವನ್ ಪರಿಚಯಿಸಿದ ಈ ಕನ್ನಡ ಭಾಷೆಯನ್ನು ಇವತ್ತು ಉಳಿಸುವ ಅಗತ್ಯವಿದೆ ಎಂಬುದು ಎಷ್ಟು ಸತ್ಯವೋ,.ಅದೇ ರೀತಿ ವ್ಯಾವಹಾರಿಕ
ಭಾಷೆಯಾಗಿ ಕರ್ನಾಟಕದಲ್ಲಿ ಕನ್ನಡವನ್ನೇ ಕಡ್ಡಾಯ ಮಾಡಬೇಕಾದ ಅನಿವಾರ್ಯವಿದೆ.

ಸದಾಕಾಲವೂ ಅಧಿಕಾರದ ಆಸೆಯಲ್ಲಿಯೇ ಮುಳುಗುವ ಕರ್ನಾಟಕ ಸರಕಾರಕ್ಕೆ ಮುಂಬರುವ ದಿನಗಳಲ್ಲಾದರೂ ಅರಿವಾಗುವುದೋ ಇಲ್ಲವೋ ಎಂದು ಕಾದು
ನೋಡಬೇಕು. ಆದರೆ, ಹಿಂದಿ ಭಾಷಿಗರಿಗೆ ತಕ್ಕನಾದ ಮಾತಿನ ಏಟನ್ನೇ ಕೊಟ್ಟಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್!!! ಆಗಲಿ! ಇಷ್ಟು ದಿನದ ಮೇಲಾದರೂ, ರಾಷ್ಟ್ರಪತಿಯೊಬ್ಬರು ಕನ್ನಡದ ಬಗ್ಗೆ ವಿಶೇಷವಾಗಿ ಮಾತನಾಡಿರುವುದು ಸಮಾಧಾನದ ಸಂಗತಿ.

– ಪೃಥ ಅಗ್ನಿಹೋತ್ರಿ

Editor Postcard Kannada:
Related Post