X

ಹಿಂದುತ್ವಕ್ಕೆ ಅವಮಾನ ಮಾಡುತ್ತಾ ಇದ್ದ ಈ ಖ್ಯಾತ ಪತ್ರಕರ್ತ ಇದೀಗ ಭಾರತ ಮಾತೆಯನ್ನೂ ಅವಮಾನ ಮಾಡಿಬಿಟ್ಟರೇ?!

ಹಿಂದೂ ಧರ್ಮೀಯ ಎನ್ನಲು ಮುಜುಗರ, ಸಂಕೋಚವಾಗುತ್ತದೆ. ಹಿಂದೂ ಎನ್ನುವುದು ಧರ್ಮವಾಗಿ ಕಾಣುತ್ತಿಲ್ಲ. ಹಿಂದೂ ಧರ್ಮ ಎನ್ನುವುದು ಭ್ರಮೆ ಎಂದಿರುವ ಪ್ರಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್, ಹಿಂದೂ ಧರ್ಮದ ಬಗ್ಗೆ ಮುಜುಗರ ವ್ಯಕ್ತಪಡಿಸುತ್ತಿದ್ದಂತಹ ವ್ಯಕ್ತಿ ಇಂದು ರಾಷ್ಟ್ರದ್ರೋಹ ಆರೋಪದ ಅಡಿ ಸುದ್ದಿಯಲ್ಲಿದ್ದಾರೆ.

ಪ್ರತೀ ಬಾರಿ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಿರುವ ಖ್ಯಾತ ಪತ್ರಕರ್ತ ಈಗಾಗಲೇ ರವಿ ಬೆಳಗರೆಯನ್ನು ಕನ್ನಡದ ಸನ್ನಿಲಿಯೋನಿಗೆ ಹೋಲಿಸಿ ಸುದ್ದಿಯಾಗಿದ್ದರು. ಒಂದು ಕಾಲದಲ್ಲಿ ರೌಡಿಯಾಗಿದ್ದ ಅಗ್ನಿ ಶ್ರೀಧರ್ ತನ್ನ ಕೈಯಲ್ಲಿ ಖಡ್ಗವನ್ನು ಕೆಳಗಿಟ್ಟು ಲೇಖನಿಯನ್ನು ಹಿಡಿದಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಹಿಂದೂ ಧರ್ಮದ ವಿರುದ್ಧ ಮಾತಾನಾಡುತ್ತಿದ್ದವರು ಇದೀಗ ಭಾರತ ಮಾತೆಯನ್ನು ನಿಂದಿಸಿ ರಾಷ್ಟ್ರದ್ರೋಹಕ್ಕೆ ತುತ್ತಾಗಿದ್ದಾರೆ.

ಹೌದು… ಪದೇ ಪದೇ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇರುವ ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ಮಂಡ್ಯದ ಬಿಜೆಪಿ ಕಾರ್ಯಕರ್ತರು ಸೈಬರ್ ಕ್ರೈಂ ಪೆÇಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ, ಅಗ್ನಿ ಶ್ರೀಧರ್ ವಿರುದ್ದ ರಾಷ್ಟ್ರದ್ರೋಹ ಆರೋಪ ಕುರಿತು ಪೆÇಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ!!

ಅಗ್ನಿ ಶ್ರೀಧರ್ ಒಡೆತನ “ಅಗ್ನಿ ಅಸ್ತ್ರ” ಯೂಟ್ಯೂಬ್ ಚಾನಲ್ ಮತ್ತು ಬ್ಲಾಗ್ ನಲ್ಲಿ ಭಾರತ ಮಾತೆಯ ಮೇಲೆ ಅಶ್ಲೀಲ ಕವಿತೆ ಪೆÇೀಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅಗ್ನಿ ಶ್ರೀಧರ್ ಅಡ್ಮಿನ್ ಆಗಿರೋ ಈ ಬ್ಲಾಗ್’ನಲ್ಲಿ ಭಾರತ ಮಾತೆಯನ್ನು ವೇಶ್ಯೆಗೆ ಹೋಲಿಸಿ ಕವಿತೆಯನ್ನು ಪ್ರಕಟಿಸಲಾಗಿದೆ!! ಈ ಕವಿತೆಯನ್ನು ಯತಿರಾಜ್ ಬ್ಯಾಲಹಳ್ಳಿ ಬರೆದಿದ್ದು, ಈತನ ಕವಿತೆಯಲ್ಲಿ ಭಾರತ ಮಾತೆಯ ಬಗ್ಗೆ ಅಶ್ಲೀಲ ಪದಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.

ಈ ಹಿಂದೆ ‘ಅಗ್ನಿ’ ಪತ್ರಿಕೆಯ ಸಂಪಾದಕರಾಗಿರುವ ಶ್ರೀಧರ್ ಅವರು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಆರೋಪಿಸಿದ್ದರು. ಅಷ್ಟೇ ಅಲ್ಲದೇ, “ನಿಮ್ಮ ಹಾಗೂ ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಅಪಮಾನ ಮಾಡುವಂತಹ ಸಿ.ಡಿಗಳು ನಮ್ಮ ಬಳಿ ಇವೆ. ಕೇಳಿದಷ್ಟು ಹಣ ನೀಡದಿದ್ದರೆ ಅದನ್ನು ಬಹಿರಂಗಗೊಳಿಸುವುದಾಗಿ, ನಮಗೆ ಅಗ್ನಿ ಪತ್ರಿಕೆ ಸಂಪಾದಕ ಶ್ರೀಧರ್ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ” ಎಂದು ಕುಮಾರಸ್ವಾಮಿ ಲೇಔಟ್ ಪೆÇಲೀಸ್ ಠಾಣೆಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ದೂರು ದಾಖಲಿಸಿರುವ ವಿಚಾರ ತಿಳಿದೇ ಇದೆ!!

ಇನ್ನು ಈ ಹಿಂದೆ, “ಕುರಾನ್, ಬೈಬಲ್ ಸೇರಿದಂತೆ ಯಾವ ಧರ್ಮ ಗ್ರಂಥಗಳಲ್ಲೂ ವರ್ಗೀಕರಣದ ಮಾತುಗಳಿಲ್ಲ. ಆದರೆ, ಭಗವದ್ಗೀತೆಯಲ್ಲಿ ಮಾತ್ರ ಈ ವರ್ಣಾಶ್ರಮಗಳಿವೆ. ನಾವು ಜೀತದಾಳುಗಳು ಎಂದು ಒಪ್ಪಿಕೊಳ್ಳಲು ಬಲವಂತ ಮಾಡುತ್ತಿರುವುದು ಅಕ್ಷಮ್ಯ. ಈ ಮನೋಭಾವದ ವೈದಿಕ ಧರ್ಮದ ಹಣೆಗೆ ಗುಂಡು ಹೊಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಇವರು ಹಿಂದೂ ಎನ್ನುವುದು ಧರ್ಮವೇ ಅಲ್ಲ. ಅದೊಂದು ಜೀವನ ಶೈಲಿ ಎಂದ ಅವರು, ಭಗವದ್ಗೀತೆಯನ್ನು ದಹನ ಮಾಡುವುದು ಖಚಿತ. ಬೇಕಿದ್ದರೆ ನಮ್ಮನ್ನು ಬಂಧಿಸಲಿ. ಜತೆಗೆ ನಮ್ಮನ್ನು ಜೀತದಾಳು ಎಂದು ಒಪ್ಪಿಕೊಳ್ಳಲು ಹೇಳುತ್ತಿರುವವರನ್ನೂ ಬಂಧಿಸಲಿ ಎಂದಿದ್ದರು.

ಅಷ್ಟೇ ಅಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯ ಇಲ್ಲದ್ದು, ತಾನಾಗಿಯೇ ನಶಿಸಿ ಹೋಗುತ್ತದೆ. ಅದನ್ನು ದಹಿಸುವ ಅಗತ್ಯವೇ ಇಲ್ಲ ಎಂದು ಹೇಳಿರುವ ಇವರು ಭಾರತ ಮಾತೆಯನ್ನು ವೇಶ್ಯೆಗೆ ಹೋಲಿಸಿರುವ ಕವಿತೆಯನ್ನು ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ. ಯತಿರಾಜ್ ಬ್ಯಾಲಹಳ್ಳಿ ಬರೆದಿರುವ ಈ ಕವಿತೆಯಲ್ಲಿ ಭಾರತ ಮಾತೆಯ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿ ಬರೆಯಲಾಗಿದ್ದು, ಇದನ್ನು ಶ್ರೀಧರ್ ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದರೆ ಇವರೆಲ್ಲ ಭಾರತದಲ್ಲಿರುವುದಕ್ಕೆ ಅನರ್ಹರು ಎಂದೆನಿಸುತ್ತೆ!!

ಈ ಹಿಂದೆ ಅಗ್ನಿ ಶ್ರೀಧರ್ ನಿರ್ದೇಶನದ ಚೊಚ್ಚಲ ‘ತಮಸ್ಸು’ ಚಿತ್ರ ಸೆನ್ಸಾರ್ ಸಮಸ್ಯೆಗೆ ಸಿಲುಕಿತ್ತು. ಯಾಕೆಂದರೆ ಈ ಚಿತ್ರದಲ್ಲಿ ಹಿಂದು ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆ ತರುವ ಅವಹೇಳನಕಾರಿ ದೃಶ್ಯಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಂಭಾಷಣೆಗಳು ಚಿತ್ರದಲ್ಲಿವೆ ಎಂದು ಸೆನ್ಸಾರ್ ಮಂಡಳಿಯೇ ಹೇಳಿತ್ತು!! ಆದರೆ ಇದೀಗ ಅಗ್ನಿ ಶ್ರೀಧರ್ ಅಡ್ಮಿನ್ ಆಗಿರೋ ಬ್ಲಾಗ್’ನಲ್ಲಿ ಭಾರತ ಮಾತೆಯನ್ನು ವೇಶ್ಯೆಗೆ ಹೋಲಿಸಿ ಕವಿತೆ ಪ್ರಕಟಿಸಿದ್ದು, ಈ ಬಗ್ಗೆ ಅಗ್ನಿ ಶ್ರೀಧರ್ ವಿರುದ್ದ ಕ್ರಮಕ್ಕೆ ಮತ್ತು ಆತನ ಬ್ಲಾಗ್ ಮತ್ತು ಯೂಟ್ಯೂಬ್ ಚಾನೆಲ್ ನಿಷೇಧಕ್ಕೆ ಬಿಜೆಪಿ ಕಾರ್ಯಕರ್ತರು ಒತ್ತಾಯಪಡಿಸಿದ್ದಾರೆ.

ಪವಿತ್ರವಾದ ಹಿಂದು ಧರ್ಮವನ್ನು ವಿರೋಧಿಸುವ ಇವರು ಭಾರತಾಂಬೆಯನ್ನೂ ಕೂಡ ವೇಶ್ಯೆಗೆ ಹೋಲಿಸಿದ್ದಾರೆ ಎಂದರೆ ಇವರಿಗೆಲ್ಲ ಏನೆನ್ನಬೇಕೋ ಗೊತ್ತಾಗುತ್ತಿಲ್ಲ!! ಭಾರತ ಮಾತೆಯನ್ನು ಅಶ್ಲೀಲ ಪದಗಳನ್ನು ನಿಂದಿಸಿರುವ ಇಂಥವರು ಭಾರತದಲ್ಲಿರುವುದಾದರೂ ಯಾಕೆ ಎನ್ನುವ ಪ್ರಶ್ನೆ ಮೂಡುವುಂದತೂ ಖಂಡಿತಾ!!

source:http://kannada.asianetnews.com/news/complaint-lodge-against-agni-shridhar
– ಅಲೋಖಾ

Editor Postcard Kannada:
Related Post