X
    Categories: ಅಂಕಣ

ಹಿಂದೂ ದೇವರನ್ನು ಅವಹೇಳನ ಮಾಡಿದರೆ ಮಾತ್ರ ಜಾತ್ಯಾತೀತ ನಾಯಕರೆನ್ನಿಸಿಕೊಳ್ಳುತ್ತಾರೆಯೇ?! ವಿಚಾರದಲ್ಲಿಯಾಗಲಿ, ಜೀವದಲ್ಲಾಗಲೀ ಬಲವಿಲ್ಲದ ಎಡಪಂಥೀಯರ ವಾದ!!!

ರಾತ್ರಿ ಬೆಳಗಾಗುವುದರೊಳಗೆ ಹೆಸರು ಮಾಡಲು ಏನು ಮಾಡಬೇಕಾದರೂ ಮಾಡುವ ಈ ಸಮಾಜದಲ್ಲಿ, ಹಿಂದೂ ದೇವಾನುದೇವತೆಗಳನ್ನು ಮನಬಂದಂತೆ
ಟೀಕಿಸಿದರೆ ಸಾಕು, ಒಂದೇ ದಿನದಲ್ಲಿ ತುಂಬಾನೇ ಹೆಸರು ಮಾಡಬಹುದು ಎಂದು ತಿಳಿದುಕೊಂಡ ಮಂದಿಗಳ ಸಾಲಿಗೆ ಸೇರಿದ್ದಾರೆ ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ. ಹೌದು ಇತ್ತೀಚೆಗೆ ಟೌನ್‍ಹಾಲ್‍ನಲ್ಲಿ ನಡೆದ ಎಡಪಂಥಿಯರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ “ಕಟ್ಕೊಂಡ ಹೆಂಡ್ತಿಯನ್ನೇ ಕಾಡಿಗಟ್ಟಿದವನನ್ನು ಯಾಕ್ ಪೂಜಿಸ್ತೀರಾ” ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ. ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ಶ್ರೀರಾಮನನ್ನು ಯಾಕೆ ಪೂಜಿಸ್ತಿರಾ, ಮಹಿಳೆಯರೇ ಹುಷಾರಾಗಿ!! ಎಂದು ಹೇಳಿ ವಿವಾದವನ್ನು ಸೃಷ್ಟಿ ಮಾಡಿದ್ದಾರೆ.

ಈ ಮೊದಲೇ ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆಯುಂಟು ಮಾಡುವಂತೆ ಮಾತಾನಾಡಿ ವಿವಾದಕ್ಕೀಡಾಗಿದ್ದ ಪೆÇ್ರ. ಕೆ ಎಸ್ ಭಗವಾನ್, ಶ್ರೀರಾಮ ದೇವರೇ ಅಲ್ಲ. ಬಹುಧರ್ಮೀಯರು ಶ್ರೀರಾಮನನ್ನು ದೇವರೆಂದು ಪೂಜಿಸುತ್ತಾರೆ, ಆದರೆ ಅವನು ದೇವರಲ್ಲ, ಎಲ್ಲರಂತೆ ಮನುಷ್ಯ. ಹಿಂದೂಗಳಲ್ಲಿ ಶ್ರೀರಾಮಚಂದ್ರ ಎಂದರೆ ಮರ್ಯಾದಾ ಪುರುಷೋತ್ತಮ, ಪಿತೃವಾಕ್ಯ ಪರಿಪಾಲಕ, ಏಕಪತ್ನೀವ್ರತಸ್ಥ ಎನ್ನುವ ನಂಬಿಕೆಯಿದೆ. ಆದರೆ ಅದೆಲ್ಲಾ ಸುಳ್ಳು, ಅವನು ಪರಸ್ತ್ರೀಯರ ಸಂಬಂಧ ಇಟ್ಟುಕೊಂಡಿದ್ದ ಎಂದು ವಾಲ್ಮೀಕಿಯೇ ಹೇಳಿದ್ದಾರೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ, ಭಗವದ್ಗೀತೆಯನ್ನು ಸುಡುತ್ತೇನೆಂದಿದ್ದ ಪೆÇ್ರ. ಕೆ ಎಸ್ ಭಗವಾನ್ ಮೇಲ್ನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುತ್ತದೆ. ಭಗವದ್ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರೇನೂ ಇಲ್ಲ. ಭಗವದ್ಗೀತೆಯಲ್ಲಿ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ ಎಂದು ವಿವಾದಕಾರಿ ಹೇಳಿಕೆ ನೀಡಿ, ತುಂಬಾನೇ ಹೆಸರುಗಳಿಸಿರುವ ವಿಷಯ ಗೊತ್ತೇ ಇದೆ..

ಆದರೆ ಇದೀಗ ಕೆ ಎಸ್ ಭಗವಾನ್‍ನ ಸಾಲಿಗೆ ಸೇರಿದ್ದಾರೆ ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ!! ಹಿಂದೂ ಪೂಜಾಪದ್ದತಿ, ದೇವರು, ಗ್ರಂಥಗಳ ಬಗ್ಗೆ ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಹೇಳುತ್ತೆ. ಯಾಕಂದರೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ಮಹಿಳೆಯರೇ ಹುಷಾಗಿರಿ ಎಂದಿದಲ್ಲದೇ, ಜಗತ್ತಿನಲ್ಲಿ ಗಂಡ-ಹೆಂಡಿತಿಗೆ ಜಗಳ ಆಗಿ ಯಾರಾದ್ರೂ ತುಂಬು ಬಸಿರನ್ನು ಕಾಡಿಗಟ್ಟುತ್ತಾರೆಯೇ? ಅವರ ಅಪ್ಪನ ಮನೆಗೆ ಕಳುಹಿಸಿ ಬಳಿಕ ಮತ್ತೆ ಕರೆಸಿಕೊಳ್ಳುತ್ತಾರೆ. ಹೀಗಾಗಿ ತುಂಬು ಬಸಿರಿಯನ್ನು ಕಾಡಿಗಟ್ಟಿದವನ್ನ ನೀವು ಟಿವಿ ಮುಂದೆ ರಾಮ ರಾಮ ಅಂತ ರಂಗೋಲಿ ಹಾಕ್ತೀರಲ್ವ ಇದು ಯಾವ ನ್ಯಾಯ ಎಂದು ಹೇಳಿ ವೀವಾದವನ್ನು ತನ್ನ ಮೇಲೆ ಎಳೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಮತ್ತು ಮೋದಿಯನ್ನು ತೆಗಳುವ ಭರದಲ್ಲಿ ರಾಮನ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ
ವಿವಾದವನ್ನು ಸೃಷ್ಟಿಸಿದ್ದಾರೆ. ಇವರಿಗೆಲ್ಲ ವಿವಾದವನ್ನು ಸೃಷ್ಟಿಮಾಡಲು ಹಿಂದೂ ದೇವರುಗಳೇ ಬೇಕೆ?? ಮಹಾಬಲಿಷ್ಟ ಹಾಗೂ ಗುಣಸಂಪನ್ನನಾದ ರಾಮ, ತನ್ನ
ತೇಜಸ್ಸಿನಿಂದ ಜಗತ್ತನ್ನೇ ಬೆಳಗುತ್ತಾ ಸೂರ್ಯ-ಚಂದ್ರರನ್ನೇ ಮೀರಿಸಿದ್ದು. ಇದು ಮೂರು ಸಾವಿರ ವರ್ಷಗಳಲ್ಲಿ ಬೇರೆ ಬೇರೆ ರೀತಿಯಾಗಿ ಭಾರತೀಯರ ಮನಸುಗಳಲ್ಲಿ ಬೆಳೆದು ಮರವಾದಂಹದು. ಇದನ್ನು ಮುರಿಯಲು ಯಾರಿಂದಲೂ ಸಾಧ್ಯವೇ ಇಲ್ಲ!!

ಜಾವೇದ್ ಹಬೀಬ್ ಎಂಬ ಬಾಲಿವುಡ್ ಸ್ಟೈಲಿಸ್ಟ್ ಅದ್ಹೇಗೆ ಅವಹೇಳನ ಮಾಡಿದ್ದನೆಂದರೆ, ಬಹುಷಃ ತನ್ನ ಹುಟ್ಟಿನ ಸಂಸ್ಕಾರವನ್ನೂ ಆತ ಬಯಲು ಮಾಡಿದ್ದನಷ್ಟೇ!
ಹಿಂದೂ ದೇವರನ್ನು ಅವಹೇಳನ ಮಾಡಿದ್ದ ಜಾವೇದ್ ಬಹುಷಃ ‘ಅಲ್ಲಾಹ್’ ನನ್ನೇನಾದರೂ ಅವಹೇಳನ ಮಾಡಿದ್ದರೆ ಇಷ್ಟೊತ್ತಿಗೆ ಗೋರಿಯೊಳಗಿನ ತನ್ನ ಅಸ್ಥಿ ಪಂಜರಕ್ಕೆ ಆತ ಕೇಶವಿನ್ಯಾಸ ಮಾಡಬೇಕಿತ್ತೇನೋ!

ಪ್ರಜೆಗಳ ಒಳಿತಿಗಾಗಿ ಶ್ರೀರಾಮ ಹಲವಾರು ಯಜ್ಞಗಳನ್ನು ಮಾಡಿಸುತ್ತಿದ್ದ, ಅಲ್ಲದೇ ಪ್ರಜೆಗಳ ಕ್ಷೇಮಾಭ್ಯುದಯಗಳೇ ಶ್ರೀರಾಮನ ಧ್ಯೇಯವಾಗಿತ್ತು. ಹೀಗಿರಬೇಕಾದರೆ ರಾಮನ ಬಗ್ಗೆ ಅವಹೇಳನಕಾರಿ ಭಾಷಣಗಳನ್ನು ಬಿಗಿಯುವ ನೀಚ ವ್ಯಕ್ತಿಗಳಿಗೆ ರಾಮಾಯಣದಲ್ಲಿರುವ, ರಾಮನಲ್ಲಿರುವ ಗುಣಗಳು ಇವರಿಗೆ ಹೇಗೆ ಅರ್ಥವಾಗಬೇಕು ಹೇಳಿ? ಅವಹೇಳನಕಾರಿಯಾಗಿ ಮಾತಾನಾಡಿದರೆ ಬಹು ಬೇಗನೇ ಸುದ್ದಿಯಾಗುತ್ತೇವೆ ಎಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ.. ರಾಮಾಯಣದ ರಾಮನನ್ನು ಪೂಜನೀಯ ಭಾವದಿಂದ ಕಾಣುವ ಅದೆಷ್ಟೋ ಭಕ್ತರ ಮನಸ್ಸಿಗೆ ಘಾಸಿಮಾಡೋದು ಎಷ್ಟರ ಮಟ್ಟಿಗೆ ಸರಿ? ನಾಲಗೆಯಲ್ಲಿ ಎಲುಬಿಲ್ಲವೆಂದು ನೀವು ಮಾತಾನಾಡಿದರೆ ದಯವಿಟ್ಟು ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ… ದೇಶಕ್ಕೇ ಒಳಿತು ಮಾಡುವವರನ್ನು ನಿಮ್ಮ ಕೆಟ್ಟನಾಲಗೆಯಿಂದ ಇಲ್ಲಸಲ್ಲದ ಆರೋಪಗಳನ್ನು ಹೇಳಿಯಾಯಿತು, ಈಗ ಹಿಂದೂಗಳ ‘ಮರ್ಯಾದ ಪುರುಷೋತ್ತಮ’ ಎನಿಸಿದ ಶ್ರೀರಾಮನ ಬಗ್ಗೆ ಮಾತಾನಾಡುವ ಅಧಿಕಾರವನ್ನು ನಿಮಗೆ ಕೊಟ್ಟವರಾರು?? ಹಿಂದೂಗಳ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ, ಚಿತ್ರಿಸುವ ಮಂದಿಗೆ ಯಾವುದೇ ರೀತಿಯ ಶಿಕ್ಷೆ ಕಾನೂನಿನಲ್ಲಿಯೇ ಇಲ್ವೇ?…

 

– ಅಲೋಖಾ

Editor Postcard Kannada:
Related Post