X

ಈದ್ ನನ್ನು ಎಲ್ಲಿ ಆಚರಿಸುತ್ತೀರಿ ಯೋಗಿಜೀ ಎಂದ ವರದಿಗಾರನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಕಪಾಳ ಮೋಕ್ಷ ಮಾಡಿದ್ದು ಹೇಗೆ ಗೊತ್ತೇ?!

ಇವತ್ತು, ಯೋಗಿ ಆದಿತ್ಯನಾಥ್ ರಿಗೆ ಮತ ಹಾಕಿದ ಪ್ರತೀ ಹಿಂದುವೂ ಕೂಡ ಹೆಮ್ಮೆ ಪಡುವಂತಾಗಿದೆ!! ಇವತ್ತಿನ ತನಕವೂ ಕೂಡಾ , ಚುನಾವಣೆ
ಸಮಯದಲ್ಲಿ ಮತಕ್ಕೋಸ್ಕರ ಭಿಕ್ಷೆ ಬೇಡಿ, ಜಾತ್ಯಾತೀತ ಸರಕಾರ ನೀಡುತ್ತೇವೆಂದೆಲ್ಲ ಪುಂಗಿ ಓದಿ, ಕೊನೆಗೆ ಗೆದ್ದ ಮೇಲೆ ಹಿಂದೂಗಳನ್ನು ಪೂರ್ಣವಾಗಿ ಕಡೆಗಣಿಸಿ, ಕೇವಲ ತುಷ್ಟೀಕರಣಗಳಲ್ಲಿಯೇ ಬಿದ್ದು, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ, ಅವರ ಹಬ್ಬ ಹರಿದಿನಗಳಿಗೆ ಹಿಂದೂಗಳ ದುಡ್ಡನ್ನು ಖರ್ಚು ಮಾಡುತ್ತಾ ಸಂವಿಧಾನಕ್ಕೆ ವಿರುದ್ಧವಾಗಿ ಬದುಕುವವರೇ ಇರುವಾಗ, ಯೋಗಿ ಆದಿತ್ಯನಾತ್ ಭಿನ್ನವಾಗಿ ನಿಲ್ಲುತ್ತಾರೆ!

ಇವತ್ತು ಯೋಗಿ ಆದಿತ್ಯನಾಥ್ ಕೃಷ್ಣ ಜನ್ಮಭೂಮಿಗೆ ತೆರಳಿದ್ದಾಗ, “ಹಿಂದೆ, ನಾವು ಅಯೋಧ್ಯಾದಲ್ಲಿ ದೀಪಾವಳಿಯನ್ನು ಆಚರಿಸಿದ್ದೆವು! ಮತ್ತು, ಇವತ್ತು ಬ್ರಜ್ ಪ್ರದೇಶದಲ್ಲಿ ಹೋಳಿಯನ್ನು ಆಚರಿಸುತ್ತಿದ್ದೇವೆ! ರಾಜ್ಯದಲ್ಲಿ, ಇಂತಹ ಅದೆಷ್ಟೋ ಹಬ್ಬದ ಆಚರಣೆಗಳನ್ನು ನಾವು ಹಮ್ಮಿಕೊಳ್ಳುವುದರ ಮೂಲಕ, ಪ್ರವಾಸೀ ತಾಣಗಳನ್ನು ಆಕರ್ಷಕ ಕೇಂದ್ರಗಳನ್ನಾಗಿಸುತ್ತಿದ್ದೇವೆ” ಎಂದು ಹೇಳಿದ್ದರು!

ಹಿಂದೂಸ್ಥಾನದ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ, ಯೋಗಿಯ ಸರಕಾರ ಬಹಳಷ್ಟು ಶ್ರಮವಹಿಸುತ್ತಿದೆ ಬಿಡಿ! ಆದರೆ,ಯಾವಾಗ ಕೃಷ್ಣ ಜನ್ಮಭೂಮಿಯಾದ ಮಥುರಾದಲ್ಲಿ ಈ ಹೇಳಿಕೆ ನೀಡಿದರೋ, ಆಗ ವರದಿಗಾರನೊಬ್ಬ , “ನೀವು ಹಿಂದೂ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ಹಾಗೆ, ಮುಸಲ್ಮಾನರ ಹಬ್ಬಗಳನ್ನು ಆಚರಿಸೊಲ್ಲವೇನು?! ಈ ಸಲದ ಈದ್ ನನ್ನು ಎಲ್ಲಿ ಆಚರಿಸಲು ಯೋಚಿಸುರಿವಿರಿ?!” ಎಂದು ಅಧಿಕಪ್ರಸಂಗದ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ಉತ್ತರ ಕೊಟ್ಟಿದ್ದೇ ತಲೆ ತಿರುಗಿ ಬಿದ್ದಿದ್ದಾನೆ ವರದಿಗಾರ!

“ನಾನೊಬ್ಬ ಹಿಂದೂ!!”

ಹಾ! ಯೋಗಿ ಆದಿತ್ಯನಾಥ್ ಹೇಳಿದ್ದಿಷ್ಟೇ! “ನಾನೊಬ್ಬ ಹಿಂದೂ! ಪ್ರತಿ ಧರ್ಮದವನಿಗೂ ಸಹ, ಅವನ ಧರ್ಮದ ಆಚರಣೆಗಳನ್ನು ಮಾಡುವ ಹಕ್ಕಿದೆ!” ಎಂದಿದ್ದಾರೆ!

ಮಥುರಾದಲ್ಲಿ ಲತ್ಮಾರ್ ಹೋಲಿಯನ್ನು ಆಚರಿಸಲು ತೆರಳಿದ್ದ ಯೋಗಿ ಆದಿತ್ಯನಾಥ್ ಜಾಗತಿಕ ಮಟ್ಟದಲ್ಲಿ ಭಾರತವನ್ನು ಆಕರ್ಷಕ ಗೊಳಿಸುತ್ತಿರುವುದಲ್ಲದೇ, ಜಗದ ಮೂಲೆಯಿಂದಲೂ ಸಹ ಪ್ರವಾಸಿಗರು ಉತ್ತರ ಪ್ರದೇಶದ ವೈಭವವನ್ನು ನೋಡಲು ಬರುತ್ತಿದ್ದಾರಷ್ಟೇ! ಆದರೆ, ತನ್ನ ಧರ್ಮದ ಬಗೆಗೆ ಹೆಮ್ಮೆ ಪಟ್ಟುಕೊಳ್ಳುವ ಯಾವ ಮುಖ್ಯಮಂತ್ರಿಯನ್ನಾದರೂ ನೋಡಿದ್ದೀರಾ?! ಮೋದಿಯನ್ನು ಹೊರತು ಪಡಿಸಿ ನೋಡಿದರೆ, ಉಳಿದೆಲ್ಲರೂ ಕೂಡ ಮತಕ್ಕೋಸ್ಕರ ಧರ್ಮವನ್ನು ಕ್ಷಣಿಕ ಕಾಲವಾದರೂ ಮರೆತವರೇ! ಆದರೆ ., ಯೋಗಿ ಹಾಗಲ್ಲ!

“ಕಳೆದ 11 ತಿಂಗಳ ಆಡಳಿತದಲ್ಲಿ, ನಾವು ಯಾರನ್ನೂ ಸಹ ಕ್ರಿಸ್ ಮಸ್ ಆಚರಿಸುವುದರಿಂದ ದೂರವಿಡಲು ನೋಡಿಲ್ಲ! ಮತ್ತು, ಆಚರಿಸುವವರಿಗೆ ಅಡ್ಡಿಯನ್ನೂ ಮಾಡಿಲ್ಲ! ಭವಿಷ್ಯದಲ್ಲಿ, ಚಿತ್ರಕೂಟದಲ್ಲಿ ರಾಮಮೇಳ ದ ಹಾಗೆ ವಿಶೇಷ ಕಾರ್ಯಕ್ರಮಗಳ ನ್ನು ಆಯೋಜಿಸುವವರಿದ್ದೇವೆ! ರಾಜ್ಯ ಸರಕಾರದಿಂದಲೇ, ಪ್ರತಿ ಹಬ್ಬದ ಆಯೋಜನೆಗೊಳ್ಳಲಿದೆ!” ಎಂದಿದ್ದಾರೆ ಯೋಗಿ!

6000 ಲೀಟರ್ ಗಳಷ್ಟು ಬಣ್ಣದೋಕುಳಿಯನ್ನು ರಸೋತ್ಸವಕ್ಕೋಸ್ಲರ ಬಳಸಲಾಗಿದೆ! ಅದಲ್ಲದೇ, ಹೂವಿನ ದಳಗಳಿಂದ ಇಡೀ ಪ್ರದೇಶವನ್ನೇ ಸಾಕ್ಷಾತ್ ಸ್ವರ್ಗವನ್ನಾಗಿಸಿದ್ದ ಕಾರ್ಯಕ್ರಮದಲ್ಲಿ ಕೈಲಾಶ್ ಕೇರ್ ಮತ್ತು ಹೇಮಾ ಮಾಲಿನಿ ಭಾಗವಹಿಸಿ, ನೆರೆದಿದ್ದವರನ್ನು ತಮ್ಮ ನೃತ್ಯ ಸಂಗೀತದ ಮೂಲಕ ರಂಜಿಸಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ!

ಸಮಾರಂಭದಲ್ಲಿ, ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಕೂಡ ಭಾಗವಹಿಸಿ ಇನ್ನೂ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಏಕತೆಯ ರಂಗೇರಿಸಲಿದ್ದಾರೆ!

‘ನಾನು ಹಿಂದೂ” ಎನ್ನುವ ಯೋಗಿಯ ಉತ್ತರವೊಂದು ದಶದಿಕ್ಕುಗಳಲ್ಲಿಯೂ ಪ್ರಶಂಸೆಗೆ ಒಳಪಟ್ಡಿದೆ!

  • Journalist to Yogi: You celebrated Diwali in Ayodhya & now Holi in Braj-Vrindavan. Where you’re going to celebrate Eid?
  • Yogi: I’m a Hindu.
  • Will Media ask such questions to Owaisi, John Dayal, Yasin Malik: Where they’ll celebrate Holi, Diwali, Janmashtami, Navaratri, Shivaratri

ಈ ಹಿಂದೆಯೂ ಕೂಡ ಯೋಗಿ ಆದಿತ್ಯನಾಥ್ ತಾನೊಬ್ಬ ಹಿಂದೂ ಎಂಬುವುದನ್ನು ಸಾರಿ ಹೇಳಿದ್ದರು!

“ಈದ್ ಸಮಯದಲ್ಲಿ ರಸ್ತೆ ಮಧ್ಯದಲ್ಲಿಯೂ ನಡೆಯುವ ನಮಾಜನ್ನು ನನಗೆ ನಿಲ್ಲಿಸಲಾಗುವುದಿಲ್ಲವೆಂದಾದರೆ, ಪೋಲಿಸ್ ಠಾಣೆಗಳಲ್ಲಿ ನಡೆಯುವ ಜನ್ಮಾಷ್ಟಮಿಯನ್ನೂ ತಡೆಯಲು ಸಾಧ್ಯವಿಲ್ಲ!”

“ನಾನು ಇದು ಕನ್ವಾರ್ ಯಾತ್ರೆಯಾ ಅಥವಾ ಸ್ಮಶಾನದ ಅಂತಿಮ ಯಾತ್ರೆಯೋ ಎಂದು ಕೇಳಿದ್ದೇನೆ! ಅಕಸ್ಮಾತ್, ಭಕ್ತಾದಿಗಳು ಭಜನೆ ಮಾಡದೇ ಇದ್ದರೆ, ವಾದ್ಯಗಳನ್ನು ನುಡಿಸದೇ ಇದ್ದರೆ, ನೃತ್ಯ ಮಾಡದೇ ಇದ್ದರೆ, ಹಾಲನ್ನು ಬಳಸದೇ ಇದ್ದರೆ, ಅದು ಕನ್ವಾರ್ ಯಾತ್ರೆ ಹೇಗಾದೀತು?! ”

“ನಾನು ಪ್ರತಿಯೊಬ್ಬರ ಪರವಾಗಿ ಮಾತನಾಡುತ್ತೇನೆ! ನಿಮಗೆ ಕ್ರಿಸ್ ಮಸ್, ಅಥವಾ ಈದ್ ನನ್ನು ಆಚರಿಸಲು ಯಾರೂ ತಡೆಯೊಡ್ಡುವುದಿಲ್ಲ! ಆದರೆ,
ಸಂವಿಧಾನ ಬದ್ಧವಾದ ಮತ್ತು ಕಾನೂನಿನ.ಪ್ರಕಾರ ಮಾತ್ರ ನಿಮಗೆ ಆಚರಿಸಲು ಅನುವು ಮಾಡಿಕೊಡುತ್ತೇವೆ! ಅಷ್ಟೇ!”

  • If I cannot put curbs on offering namaz on roads during Eid, then I have no rights to stop Janmashtami celebrations in police stations.
  • I asked if this was a Kanwar yatra or a funeral procession. If they don’t play music and drums, don’t dance and sing, don’t use the mike, how will it be a Kanwar yatra.
  • I will speak for everyone. You have all rights to celebrate Christmas or Eid, no one will stop you in this country, provided you do it within the limits of law and order.

ಇದು ಯೋಗಿ ಆದಿತ್ಯನಾಥ್ ರ ದಿಟ್ಟ ಮಾತುಗಳು!!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post