X

ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲಿದೆ ಅಣ್ವಸ್ತ್ರ ಸಾಮಥ್ರ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿ!! ವಿರೋಧಿಗಳಿಗೆ ಶುರುವಾಗಿದೆ ನಡುಕ!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವಹಿಸಿದಾಗಿನಿಂದ ಪ್ರತೀ ಕ್ಷೇತ್ರದಲ್ಲೂ ಗಣನೀಯ ಬದಲಾವಣೆಯನ್ನು ತಂದಿದ್ದಾರೆ!! ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಮೋದಿ ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ ಶ್ರಮಿಸುತ್ತಿರುತ್ತಾರೆ!! ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿರುತ್ತಾರೆ!!

ಅಣ್ವಸ್ತ್ರ ಹೊತ್ತೊಯ್ಯುವ ಸಾಮಥ್ರ್ಯವಿರುವ ಭಾರತದ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ಅಗ್ನಿ-5 ಶೀಘ್ರದಲ್ಲೇ ಸೇನೆಗೆ ಸೇರ್ಪಡೆಯಾಗುತ್ತಿದೆ. ಕಳೆದ ಜನವರಿಯಲ್ಲಿ ನಡೆಸಲಾದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಕೊನೆಯ ಹಂತದ ಪ್ರಯೋಗ ಮಾಸಾಂತ್ಯ ದೊಳಗೆ ನಡೆಯುವ ಸಾಧ್ಯತೆಯಿದೆ. ಈ ಪರೀಕ್ಷೆ ಯಶಸ್ವಿಯಾದರೆ ಭಾರತೀಯ ಸೇನೆಗೆ ಕ್ಷಿಪಣಿ ಸೇರ್ಪಡೆಯಾಗಲಿದೆ. 5 ಸಾವಿರ ಕಿ.ಮೀ ಗುರಿ ತಲುಪುವ ಅಣ್ವಸ್ತ್ರ ಕ್ಷಿಪಣಿ ಹೊಂದಿದ ವಿಶ್ವದ ಬೆರಳೆಣಿಕೆ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೆರಲಿದೆ.

ಪೋಖ್ರಾನ್ ಅಣು ಪರೀಕ್ಷೆಗೆ 20 ವರ್ಷಗಳು ತುಂಬಿದ ಸಮಯದಲ್ಲಿಯೇ ಮಹತ್ವಾಕಾಂಕ್ಷಿ ಕ್ಷಿಪಣಿ ಅಗ್ನಿ-5 ಸೇನೆಗೆ ಸೇರ್ಪಡೆಗೊಳ್ಳಲು ಸಜ್ಜಾಗುತ್ತಿರುವುದು ಭಾರತೀಯ ರಕ್ಷಣಾ ಕ್ಷೇತ್ರದ ಸಂಶೋಧನೆಯ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ. 2012ರ ಏಪ್ರಿಲ್ ಹಾಗೂ ಸೆಪ್ಟೆಂಬರ್, 2015ರ ಜನವರಿ, 2016ರ ಡಿಸೆಂಬರ್‍ನಲ್ಲಿ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು. ಕಳೆದ ಜನವರಿಯಲ್ಲಿ ನಡೆಸಿದ್ದ ಪರೀಕ್ಷೆ ಯಶಸ್ವಿಯಾಗಿತ್ತು. ಜಲಂತರ್ಗಾಮಿಯಿಂದ ಕ್ಷಿಪಣಿ ಹಾರಿಸುವಲ್ಲಿ ಕೆಲ ತಾಂತ್ರಿಕ ತೊಂದರೆ ಎದುರಾಗಿದೆ. ಮುಂದಿನ ಪರೀಕ್ಷೆಯಲ್ಲಿ ಇದು ನಿವಾರಣೆಯಾದರೆ ಅಗ್ನಿ-5 ಸೇನೆಗೆ ಸೇರಿಕೊಳ್ಳಲಿದೆ.

ಅಗ್ನಿ-5 ಕ್ಷಿಪಣಿ ವಿಶೇಷತೆ

5,500 ರಿಂದ 5,800 ಕಿ.ಮೀ ಗುರಿ ತಲುಪುವ ಸಾಮಥ್ರ್ಯ 1500 ಕೆ.ಜಿ. ಅಣ್ವಸ್ತ್ರ ಹೊತ್ತೊಯ್ಯಬಲ್ಲದು ಡಿಆರ್ಡಿಒನಿಂದ ಅಭಿವೃದ್ಧಿಗೊಂಡಿರುವ ಕ್ಷಿಪಣಿ ಭಚೀನಾ, ಆಫ್ರಿಕಾ ಹಾಗೂ ಐರೋಪ್ಯ ದೇಶಗಳ ಮೇಲೆ ದಾಳಿ ಮಾಡಬಹುದಾಗಿದೆ. ಭ5 ಸಾವಿರ ಕಿ.ಮೀಗೂ ಅಧಿಕ ದೂರ ತಲುಪುವ ಕ್ಷಿಪಣಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಚೀನಾ, ಫ್ರಾನ್ಸ್ ಹಾಗೂ ಬ್ರಿಟನ್ ಪಟ್ಟಿಗೆ ಭಾರತ ಸೇರಲಿದೆ.

ಪವಿತ್ರ

Editor Postcard Kannada:
Related Post