X

2018 ರ ಬಜೆಟ್ ಮಂಡಿಸಿದ್ದಾರೆ ಶ್ರೀ ಸಾಮಾನ್ಯರು!! ಈ ಸಲದ ನಿರೀಕ್ಷೆಗಳೇನು ಗೊತ್ತೇ?! ಮೋದಿ ಸರಕಾರ ಈಡೇರಿಸುತ್ತ ಶ್ರೀಸಾಮಾನ್ಯರ ಬೇಡಿಕಗಳನ್ನು?!

ಇನ್ನೇನು 2018 ಪ್ರಾರಂಭವಾಗಿದೆ! 2019ರ ಲೋಕ ಸಭಾ ಚುನಾವಣೆಯೂ ಇನ್ನೇನು ನೋಡ ನೋಡುತ್ತಲೇ ಹತ್ತಿರ ಬಂದೇ ಬಿಡುತ್ತದೆ! ಹೋದ ಸಲಕ್ಕಿಂತ ಜನರ ನಿರೀಕ್ಷೆಗಳು ಇನ್ನೂ ಹೆಚ್ಚಾಗಿವೆ! ನರೇಂದ್ರ ಮೋದಿಯವರ ಮೇಲಿನ ಜವಾಬ್ಧಾರಿ ಇನ್ನೂ ಜಾಸ್ತಿಯಾಗುತ್ತಲಿದೆ! ಬಹುಷಃ ಈ ವರುಷವೊಂದು ಮೋದಿಯ ಪಾಲಿಗೆ ಪರೀಕ್ಷಾ ಕಾಲ! ಅದೇ ರೀತಿ, 2018 ರ ಬಜೆಟ್ಟುಗಳ ಮೇಲೆ ಎಲ್ಲರಿಗಿಂತ ಜಾಸ್ತಿ ಭರವಸೆ ಇರುವುದು ಮಧ್ಯಮ ವರ್ಗದವರಿಗೆ!

ಮೋದಿ ಸರಕಾರ ಪ್ರಸ್ತುತ ಪಡಿಸಿದ ನಾಲ್ಕೂ ಬಜೆಟ್ಟುಗಳು ದೇಶದ ಆರ್ಥಿಕತೆಯನ್ನು ಸರಿಯಾದ ದಿಕ್ಕಿಗೆ ತರುವುದರಲ್ಲಿ ನೆರವಾಯಿತು! ಹೊಸ ಹೊಸ ಯೋಜನೆಗಳ ಮೂಲಕ, ಹೊಸ ಹೊಸ ಪಾಲಿಸಿಗಳ ಮೂಲಕ ಉದ್ಯೋಗವನ್ನು ಸೃಷ್ಟಿಸಿದರು, ದೇಶದಲ್ಲಿ ಬಂಡವಾಳ ಹೂಡಿಕೆಯನ್ನೂ ಮಾಡಲಾಯಿತು! ಮುದ್ರಾ ಯೋಜನಾ, ಜನ್ ಧನ್ ಯೋಜನಾ, ಉಜ್ವಲ ಯೋಜನಾ ಎಂಬಂತಹ ಯೋಜನೆಗಳು ದೇಶದಲ್ಲಿ ಬಹುದೊಡ್ಡ ಯಶಸ್ಸನ್ನೂ ಕಂಡವು! ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದ ಜನರನ್ನು ಮುನ್ನಡೆಯುವಂತೆ ಮಾಡಿತು.

ಮುದ್ರಾ ಯೋಜನೆಯಿಂದ, 10 ಕೋಟಿ ಜನಕ್ಕಿಂತ ಮೇಲೆ ಸಾಲಗಳನ್ನು ನೀಡಲಾದರೆ, ಎರಡೇ ವರ್ಷಗಳಲ್ಲಿ 3 ಕೋಟಿ ಪ್ರಜೆಗಳಿಗೆ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ಕಲ್ಪಿಸಿಕೊಡಲಾಯಿತು! ಮುಂಬರುವ ಒಂದು ವರ್ಷದಲ್ಲಿ 5 ಕೋಟಿ ಜನಕ್ಕೆ ಸಂಪರ್ಕ ಕಲ್ಪಿಸುವಂತಹ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ! ರೈತರಿಗೆ ಬೆಳೆ ಸಾಲ, ನೀರಾವರಿ ಎಂಬೆಲ್ಲದರ ಜೊತೆಗೆ ಮೋದಿ ಸರಕಾರ ನೀಡಿದ್ದು 1.5 ಕೋಟಿ ಜನ ರೈತರಿಗೆ ಇನ್ಶೂರೆನ್ಸ್!!

ಆದರೆ, ಈ ಮೂರು ವರುಷಗಳಾದರೂ ಸಹ ಮಧ್ಯಮ ವರ್ಗದವರು ನಿರೀಕ್ಷಿಸಿದ ಹಾಗೆ ಯಾವ ರೀತಿಯಾದ ಸೌಲಭ್ಯವೂ ಸಹ ಸಿಗಲೇ ಇಲ್ಲ ಎನ್ನುವುದೂ ಅಷ್ಟೇ ಸತ್ಯ! 2016 ರಲ್ಲಿ ನೋಟು ನಿಷೇಧವಾದಾಗ, ಮೋದಿ ಸರಕಾರದ ಬೆಂಬಲಕ್ಕೆ ನಿಂತವರು, ಉದ್ಯೋಗಿಗಳೇ! ಅದಲ್ಲದೇ, ಮಧ್ಯಮ ವರ್ಗದವರ ಕಡೆಯಿಂದ ಬಹಳಷ್ಟು ಬೆಂಬಲ ಮೋದಿಗೆ ಸಿಕ್ಕಿದರೂ ಸಹ, ಪ್ರತಿಫಲವಾಗಿ ಸಿಕ್ಕಿದ್ದು ಅಲ್ಪಸ್ವಲ್ಪ ಎನ್ನುವಷ್ಟು ಸೌಲಭ್ಯಗಳು.

ಆದರೆ, ಈ ಸಲದ 2018 ರಲ್ಲಿ, ಸಾಮಾನ್ಯ ಜನರು ತೆರಿಗೆಯಿಂದ ಮುಕ್ತಿ ಹೊಂದಲು ನಿರೀಕ್ಷಿಸುತ್ತಿದ್ದಾರೆ! ಮಧ್ಯಮ ವರ್ಗದವರಿಗೆ ಸಮಸ್ಯೆಯೇ ಅದು! ದುಪ್ಪಟ್ಟು ತೆರಿಗೆ! ಈಗಾಗಲೇ, ಪ್ರತಿಯೊಬ್ಬ ಉದ್ಯೋಗಿಯಿಂದ ಟಿಡಿಎಸ್ ಹಣವನ್ನು ಕಡಿತಗೊಳಿಸಲಾಗಿದೆ! ಆದರೆ, ಹಣಕಾಸು ಸಚಿವಾಲಯ ಯೋಚಿಸಿರುವಂತೆ, ಸೇವಿಂಗ್ಸ್ ಖಾತೆಯಿಂದ ಬಂದ ಬಡ್ಡಿಯಲ್ಲಿ ತೆರಿಗೆಯೆಂದು ಕಡಿತಗೊಳಿಸುತ್ತಿರುವುದು ಮಧ್ಯಮ ವರ್ಗದವರ ಮಟ್ಟಿಗೆ ಬಹುದೊಡ್ಡ
ನಷ್ಟವೇ ಸರಿ! ಮಧ್ಯಮ ವರ್ಗದವರು ಇದೊಂದೇ ಕಾರಣಕ್ಕೆ ತೆರಿಗೆ ನೀತಿಯನ್ನು ವಿರೋಧಿಸಲು ಪ್ರಾರಂಭಿಸಿರುವುದು!

ಎಕನಾಮಿಕ್ಸ್ ಟೈಮ್ಸ್, ಕೆಲ ದಿನಗಳ ಹಿಂದೆ, ಸಾಮಾನ್ಯ ಜನರು ಏನನ್ನು ಬಯಸುತ್ತಿದ್ದಾರೆ ಎಂಬುದೊಂದಷ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಕಟಿಸಿತ್ತು.!

Jagdish Patel : As a service class tax payer i expect that, once the tax are paid from my salary, there should not be any further tax on my expenses. by present system i had paid a tax at source and after receiving the tax paid amount i have to pay again tax on my any kind of purchase in the market. so here is double tax i have to pay in present system.
Mouli (Chennai):  -12%~15% FD intrest rate for only senior citizen with max investment limit 10Lac & only if they file ITR.-Remove Income Tax & Corporate Tax-Remove all subsities/incentive for corporate-Bring BTT linked to PAN & Aadhar (0% BTT for lower income members like IT slabs)-Reduce Land registration INR100/1000sqft.
Unknown: Salaried class expects FM to reduce tax rates – at least for people below 20 lacs considering current inflation. Also, standard deduction is inadequate and FM may increase it more which will benefit both an employee and the country
Radha K : Dear FM Ji, I am a retired (2013)scientist (ARCI-DST) without pension. I am surviving (with my husband) on the interest of the fixed amount got as retirement benefits. The bank interest has plummetted to it lowest and we are not able to have a decent life with the low interest amounts we are getting at the moment. It is really sad that after all out education and the scientist job we have worked all these years we live a hand to mouth life.

ಬಹುತೇಕ ಜನರು, ಬ್ಯಾಂಕುಗಳಲ್ಲಿ ಬಡ್ಡಿಯನ್ನೂ ಕಡಿಮೆ ಮಾಡಿರುವುದರ ಜೊತೆಗೆ, ಉದ್ಯೋಗಿಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಿರುವುದು!

ಅದಲ್ಲದೇ, ಯುವ ಜನತೆ ಸರಕಾರೀ ನೌಕರಿಯ ಬಗೆಗೂ ಅಸಮಾಧಾನಗೊಂಡಿದ್ದಾರೆ!

ಹಾ! ಉದ್ಯೋಗವನ್ನು ಸೃಷ್ಟಿಸಲು ಅದೆಷ್ಟೋ ಯೋಜನೆಗಳನ್ನು ತಂದರೂ ಸಹ, ಸ್ಟಾರ್ಟಪ್ ಇಂಡಿಯಾ ದಂತಹ ಅದ್ಭುತ ಯೋಜನೆಗಳ ಪಾಲಿಸಿಗಳನ್ನು ಬದಲಾವಣೆ ಮಾಡಬೇಕಿದೆ ಎಂಬುದು ಯುವ ಜನರ ಅಂಬೋಣ! ಅದಲ್ಲದೇ, ಸರಕಾರೀ ನೌಕರಿಗಳಲ್ಲಿರುವ ಮೀಸಲಾತಿಯನ್ನೂ ಕಡಿತಗೊಳಿಸಬೇಕೆಂದು ಇವತ್ತಿನ ಬಹುತೇಕ ಜನರ ಅಭಿಪ್ರಾಯವಾಗಿದೆ!

ಜಿಎಸ್ ಟಿ ತೆರಿಗೆಯ ಪ್ರಸ್ತಾಪಿಸಿರುವ ಪ್ರಜೆಗಳು, ಜಿಎಸ್ ಟಿ ತೆರಿಗೆಯಿಂದ ಅದೆಷ್ಟೋ ಗೃಹೋತ್ಪನ್ನ ವಸ್ತುಗಳು, ಮೂಲಭೂತ ಸೌಕರ್ಯಗಳಿಗೆ ಬೇಕಾಗುವಂತಹ ಉತ್ಪನ್ನಗಳೆಲ್ಲ ತೆರಿಗೆ ವ್ಯಾಪ್ತಿಯಲ್ಲಿ ಒಳಪಟ್ಟಿದ್ದರೂ ಸಹ, ಅದಿನ್ನೂ ಯಶಸ್ವಿಯಾಗಿ ಗ್ರಾಹಕರನ್ನು ಮುಟ್ಟಿಲ್ಲ ಎಂಬುದೂ ಸತ್ಯ ಎಂದಿದ್ದಾರೆ! ದೊಡ್ಡ ದೊಡ್ಡ ಉದ್ಯಮಿಗಳು ಜಿಎಸ್ಟಿ ತೆರಿಗೆಯಿಂದ ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದಿರುವ ಪ್ರಜೆಗಳು, ಹೋಟೆಲ್ ಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಜಿಎಸ್ ಟಿ ನೆಪ ಹೇಳಿ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಸಣ್ಣ ಉದ್ಯಮಿದಾರರಿಗೆ ಜಿಎಸ್ ಟಿಯ ಬಗ್ಗೆ ಅರಿವೂ ಇಲ್ಲದ ಕಾರಣ, ಸರಕಾರ ಜಿಎಸ್ ಟಿ ಎಲ್ಲೆಲ್ಲಿ ದುರುಪಯೋಗವಾಗುತ್ತಿದೆ ಎಂಬುದನ್ನು ಮನಗಂಡು, ಸಮಾಜಕ್ಕೆ ತೆರಿಗೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ!

ರಿಯಲ್ ಎಸ್ಟೇಟ್ ಉದ್ಯಮಿದಾರರ ಲೂಟಿಗಳಿಗೆ ಬಹುದೊಡ್ಡ ಹೊಡೆತ ನೀಡಿದ್ದ ಮೋದಿ ಸರಕಾರ, ಸಂಬಂಧಪಟ್ಟಂತೆ RERA (Real estate regulation and development) ಕಾಯ್ದೆ 2016 ರ ಪ್ರಕಾರ ಮನೆ ಖರೀದಿ ಮಾಡುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಮನೆ ನೀಡುವಂತಹ ವ್ಯವಸ್ಥೆ ಆಗಿದ್ದರೂ, ಕೆಲವು ರಾಜ್ಯಗಳಲ್ಲಿ ಮೋದಿ ಸರಕಾರದ ನೀತಿಗಳು ಸರಿಯಾಗಿ ಜಾರಿಯಾಗಲೇ ಇಲ್ಲ ಎನ್ನುವುದು ನಿಜ!

ಕಪ್ಪು ಹಣವನ್ನು ಹೊರಕ್ಕೆಳೆಯಲೇಬೇಕು ಎಂದು ನಿರ್ಧರಿಸಿದ್ದ ಮೋದಿ ಸರಕಾರ, ಸಂಪೂರ್ಣವಾಹಿ ಯಶಸ್ವಿಯಾಗಿಲ್ಲ ಎನ್ನುವುದನ್ನೂ ಒಪ್ಪಲೇಬೇಕಿದೆ!

ಎಲ್ಲದಕ್ಕಿಂತ ಮೊದಲು ಗಮನ ನೀಡಬೇಕಾಗಿರುವುದು ರೈತಾಪಿ ವರ್ಗದವರಿಗೆ! ಕರ್ನಾಟಕವೊಂದರಲ್ಲಿಯೇ 1000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಮೋದಿ ಸರಕಾರದ ಬಹುನಿರೀಕ್ಷಿತ ಯೋಜನೆಯಾದ ಫಸಲ್ ಭಿಮಾ ಯೋಜನೆ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಯಾದರೂ ಸಹ, ಒಂದಷ್ಟು ರಾಜ್ಯಗಳಲ್ಲಿ ಯಾವ ಯೋಜನೆಯನ್ನೂ ಸರಿಯಾಗಿ ರಾಜ್ಯ ಸರಕಾರಗಳು ಜಾರಿಗೊಳಿಸಲಿಲ್ಲ. ಬೆಳೆಗಳನ್ನು ಮಾರುಕಟ್ಟೆಗೆ ತರುವುದರಿಂದ ಹಿಡಿದು, ಬೆಳೆಗಳನ್ನು ಶೇಖರಿಸಲು ಬೇಕಾದ ಸೌಲಭ್ಯಗಳ ತನಕವೂ ರೈತರಿಗೆ ಕಷ್ಟವಿದೆ! ಅದರ ಬಗೆಗೆ ಮೋದಿ ಸರಕಾರ ಯೋಚಿಸಬೇಕಾದ ಅಗತ್ಯವಿದೆ ಎಂದು ಸಾಮಾನ್ಯ ಜನರು ಅಭಿಪ್ರಾಯ ಪಟ್ಟಿದ್ದಾರೆ!

ಇದಲ್ಲದೇ ಇನ್ನೇನು?!

ಶಿಕ್ಷಣ ಕ್ಷೇತ್ರದಲ್ಲಿ, ವೈದ್ಯಕೀಯ ಸೌಲಭ್ಯಗಳಲ್ಲಿ, ಮತ್ತು ರೈತ ವರ್ಗದ ಕ್ಷೇತ್ರಗಳಲ್ಲಿ ಬಹುದೊಡ್ಡ ಬದಲಾವಣೆ ಬೇಕಿದೆ ಎಂದು ಶ್ರೀಸಾಮಾನ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಸತ್ಯವೇ! ಈ ಸಲ ಮಧ್ಯಮ ವರ್ಗದವರಿಗೂ ಸಹ, ಸೌಲಭ್ಯಗಳನ್ನು ನೀಡುವಂತಾಗಬೇಕೆಂಬುದು ನಿರೀಕ್ಷೆಯಾದರೆ, ಮೋದಿ ಸರಕಾರದ ಪ್ರತಿ ಯೋಜನೆಗಳನ್ನೂ ಜನರಿಗೆ ಸಂಪೂರ್ಣವಾಗಿ ತಲುಪಿಸುವ ವ್ಯವಸ್ಥೆಯಾಗಬೇಕು ಎಂದು ಪ್ರಜೆಗಳು ಅಭಿಪ್ರಾಯಪಟ್ಟಿದ್ದಾರೆ!

Source :https://economictimes.indiatimes.com/news/politics-and-nation/budget-2018-suggestions-to-fm-arun-jaitley?utm_source=twitter.com&utm_medium=Social&utm_campaign=ETTWMain

– ಪೃಥು ಅಗ್ನಿಹೋತ್ರಿ

Editor Postcard Kannada:
Related Post