X

2019ರ ಲೋಕಸಭಾ ಚುನಾವಣೆಯು 350 ಕ್ಷೇತ್ರಗಳಲ್ಲಿ ಸಾಮಾಜಿಕ ಜಾಲತಾಣ ಮಹತ್ವದ ಪಾತ್ರವಹಿಸಲಿದೆ!!

ಸಾಮಾಜಿಕ ಜಾಲತಾಣ. ಪ್ರಸ್ತುತ ಜಗತ್ತಿನಲ್ಲಿ ಇದೊಂದು ಇಲ್ಲದಿದ್ದರೆ ಬದುಕೇ ಕಷ್ಟ ಕಷ್ಟ. ಪಂಚಭೂತಗಳನ್ನಾದರೂ ಕೃತಕವಾಗಿ ಸೃಷ್ಟಿಸಿ ಬದುಕುವಷ್ಟು ಬಲಿಷ್ಟನಾಗಿರುವ ಮಾನವ, ಸಾಮಾಜಿಕ ಜಾಲತಾಣ ಇಲ್ಲದೆ ಬದುಕುವುದಂತು ಬಹಳ ಕಷ್ಟ. ಸಮಾಜದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಬೇರೂರಿದೆ ಸಾಮಾಜಿಕ ಜಾಲತಾಣಗಳ ಹವಾ…ಇದು ರಾಜಕೀಯವನ್ನೂ ಬಿಟ್ಟಿಲ್ಲ. ಇಂದು ಜಗತ್ತಿನ ಗಣ್ಯಾತಿ ಗಣ್ಯ ರಾಜಕರಣಿಗಳು ಇಂದು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ. ಒಬ್ಬ ರಾಜಕಾರಣಿಯ ರಾಜಕೀಯ ಭವಿಷ್ಯವನ್ನು ಬೆಳೆಸುವಲ್ಲಿಯೂ, ಅಳಿಸುವಲ್ಲಿಯೂ ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಆ ಸಾಮಥ್ರ್ಯವನ್ನು ಸಾಮಾಜಿಕ ಜಾಲತಾಣ ಪಡೆದುಕೊಂಡಿದೆ.

ಭಾರತದ ರಾಜಕೀಯದಲ್ಲೂ ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕಳೆದ ಬಾರಿಯ 2014ರ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿದ್ದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯನ್ನು ಮತ್ತೆ ಅಭೂತವಾಗಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಸಾಮಾಜಿಕ ಜಾಲತಾಣಗಳನ್ನು ಕಡೆಗಣನೆ ಮಾಡಿದ್ದ ಕಾಂಗ್ರೆಸ್ ಪಕ್ಷ ಆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನನುಭವಿಸಿತ್ತು.

2014ರ ಲೋಕಸಭಾ ಚುನಾವಣೆಗೂ, ಮುಂಬರುವ 2019ರ ಲೋಕಸಭಾ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಂತೂ ತುಂಬಾನೆ ವ್ಯತ್ಯಾಸಗಳಿವೆ.

2014ರ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಸೋಷಿಯಲ್ ಮೀಡಿಯಾ ಯಾವ ರೀತಿಯ ಭಿನ್ನತೆಯನ್ನು ಕಾಣಬಹುದು ಎಂದು ನೋಡೋಣ…

2014ರ ಲೋಕಸಭಾ ಚುನಾವಣೆ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿಯೇ ಮೇಲುಗೈ ಸಾಧಿಸಿತ್ತು. ಅಂದಿನ ಚುನಾವಣೆಯಲ್ಲಿ ಸಾಮಾಜಿಕ ಜಾಲತಣವು ಮಲ್ಟಿಪ್ಲೇಯರ್ ಆಗಿ ಹೊರ ಹೊಮ್ಮಿತ್ತು. ಪ್ರತಿಯೊಂದು ಸಾಧನದಲ್ಲೂ ಸಾಮಾಜಿಕಮ ಜಾಲತಾಣಗಳನ್ನು ಉಪಯೋಗಿಸಿಕೊಂಡು ಅದರಲ್ಲೇ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು. ಆವಾಗ ತಾನೇ ಸಾಮಾಜಿಕ ಜಾಲತಾಣಗಳ ಹವಾ ಆರಂಭವಾಗಿದ್ದ ಕಾರಣ ಅಷ್ಟೊಂದು ಅಲ್ಲದಿದ್ದರೂ, ಪರಿಣಾಮಕಾರಿಯಾಗಿತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಆದರೆ 2014ರಂದು ಸುಮಾರು 350 ಮಿಲಿಯನ್‍ನಷ್ಟು ಇದ್ದಂತಹಂತ ಸಾಮಾಜಿಕ ಜಾಲತಾಣಗಳ ಉಪಯೋಗಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು, 2019ರ ವೇಳೆಗೆ ಅದು 650 ಮಿಲಿಯನ್‍ನಷ್ಟು ಏರುವ ಸಾಧ್ಯತೆ ಇದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಯ್ಯಲ್ಲಿ ಸ್ಮಾರ್ಟ್ ಫೋನ್‍ಗಳನ್ನು ಇಟ್ಟುಕೊಂಡು ಬಳಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಹೋರಾಡಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

2020ರ ವೇಳೆಗೆ  ಭಾರತದಲ್ಲಿ ತಿಂಗಳಿಗೆ 1704ರಂತೆ ಉಪಯೋಗಿಸುವ ನಿರೀಕ್ಷೆಯಿತ್ತು. ಆದರೆ ಮಿತಿ ಮೀರಿದ ಅಂತರ್ಜಾಲದ ಬಳಕೆಯಿಂದ ಇದು ನಿರೀಕ್ಷೆಗಿಂತ ಅಧಿಕವಾಗಿ ಉಪಯೋಗವಾಗುತ್ತಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇಂದು ಭಾರತದಲ್ಲಿ 220 ಮಿಲಿಯನ್ ಜನರು ಫೇಸ್ ಬುಕ್‍ನ್ನು ಉಪಯೋಗಿಸುತ್ತಿದ್ದು, ಟ್ವಿಟ್ಟರ್‍ನಲ್ಲಿ ಸುಮಾರು 40 ಮಿಲಿಯನ್ ಜನರು ಸಕ್ರಿಯರಾಗಿದ್ದಾರೆ. ಆದರೆ ಏರುತ್ತಿರುವ ಟ್ವಿಟರ್ ಜನಪ್ರಿಯತೆಯು ಫೇಸ್‍ಬುಕ್‍ನಷ್ಟಕ್ಕೆ ತಲುಪುವ ನಿರೀಕ್ಷೆಯಿದೆ.

ಇಂದು ಅನೇಕ ಮಂದಿ ರಾಜಕೀಯ ವಿಷಯವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿರುವುದರಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಇದು ಮಹತ್ತರ ಪಾತ್ರ ವಹಿಸುವುದೆಂದು ಮತ್ತು ಭಾರೀ ಪರಿಣಾಮ ಬೀರುವುದೆಂದೂ ಅಂದಾಜಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಹೆಚ್ಚೂ ಕಡಿಮೆ 350 ಸೀಟುಗಳನ್ನು ಗೆಲ್ಲಸುವಷ್ಟು ಪ್ರಾಬಲ್ಯವನ್ನು ಹೊಂದಿದೆ ಎನ್ನಬಹುದಾಗಿದೆ.

ಇನ್ನು ಬಿಜೆಪಿ ರಾಕ್ಷಸರನ್ನು ಪ್ರೋತ್ಸಾಹಿಸುವ ಪಕ್ಷ ಮತ್ತು ಬಿಜೆಪಿ ವಿರೋಧಿಗಳನ್ನು ಮಟ್ಟಹಾಕುತ್ತಿವೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಜಾಲತಾಣವು ಪ್ರವಚನವನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ. ಇದು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ತಮ್ಮ ಹಕ್ಕುಗಳನ್ನು ಬಿತ್ತರಿಸಲು ಇರುವ ಮಾರ್ಗವಾಗಿದೆ. ಕಲೆ, ಸಂಸ್ಕøತಿ, ಇತಿಹಾಸ, ರಾಜಕೀಯ ಇವುಗಳೆಲ್ಲ ಕೇವಲ ಕೆಲವು ಸಂಸ್ಥೆಗಳಿಗೆ ಮತ್ತು ಶಿಕ್ಷಣ ನೀಡುವವರಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಲು ಮತ್ತು ಕೌಂಟರ್ ಚರ್ಚೆಗಳಿಗೆ ಅವಕಾಶವಿದೆ. ಸ್ವಾತಂತ್ರ್ಯದ ಧ್ವನಿಗಳು, ಸಂಶೋದಕರು, ಹವ್ಯಾಸಿ ಇತಿಹಾಸಕಾರರು ಮತ್ತು ಬ್ಲಾಗಿಂಗ್ ಉತ್ಸಾಹಿಗಳು ಹಠಾತ್ ಏರಿಕೆಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಅವರ ಆಲೋಚನೆಗಳು ಮತ್ತು ಬರಹಗಳು ಅವರದೇ ಆದ ಓದುಗರನ್ನು ಗಳಿಸುತ್ತಿದೆ ಮತ್ತು ಅದು ವೇಗವಾಗಿ ಬೆಳೆಯುತ್ತಿದೆ. ಹಿಂದಿನ ವರ್ಷಗಳಲ್ಲಿ ಪತ್ರಿಕೆಗಳಲ್ಲಿ ಮಾತ್ರ ಬರಹಗಳು ಬರುತ್ತಿದ್ದುದು ಈಗ ಸಾಮಾಜಿಕ ಜಾಲತಾಣಗಳಲ್ಲೂ ಬರುತ್ತಿರುವುದು ಎಲ್ಲರೂ ಓದುವಂತಾಗಿದೆ. ಇಂಟರ್‍ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಎಲ್ಲವನ್ನೂ ಬದಲಾಯಿಸಿದೆ.

ಇಷ್ಟು ಮಾತ್ರವಲ್ಲದೆ ಇಂದು ತಮ್ಮ ಕೆಲಸಗಳನ್ನೂ ವ್ಯಾಪಕವಾಗಿ ಪ್ರಕಟಿಸಬಹುದಾಗಿದೆ. ಸಾಮಾನ್ಯ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ವಿಧ್ಯಾಭ್ಯಾಸ, ಅರ್ಹತೆಗಳು ಅನಿವಾರ್ಯವಾಗುತ್ತದೆ. ಒಂದು ಜವಬ್ಧಾರಿಯುತ ಪಕ್ಷವಾಗಿ ಬಿಜೆಪಿ ಇದನ್ನು ಮೊದಲೇ ಅರಿತುಕೊಂಡು ಒಳ್ಳೆಯ ಸಾಮಾಜಿಕ ಕಾರ್ಯಕ್ಕಾಗಿ ಮಾರ್ಗಸೂಚಿಯನ್ನು ಹೊರಡಿಸಿತ್ತು. ಬಿಜೆಪಿ ಸಾಮಾಜಿಕ ಮಾಧ್ಯಮದ ನಿರೂಪಣೆಯನ್ನ ಆಚರಿಸುವುದರಿಂದ ವಿರೋಧಿಗಳಿಗೆ ಇದು ತುಂಬಾನೆ ಭಾರವಾಗಿದೆ. ಕೆಲವರಿಗಂತೂ ಇದು ಅಸಹಿಷ್ಣುತೆ ಎಂದೇ ಭಾಸವಾಗುತ್ತದೆ.

ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಬಿಜೆಪಿ ಕಮಾತ್ರವೇ ಮೇಲುಗೈ ಸಾಧಿಸುತ್ತಿದ್ದು, ಈವಾಗ ಕಾಂಗ್ರೆಸ್ ಪಕ್ಷ ಕೂಡಾ ಟ್ವಿಟರ್‍ನಲ್ಲಿ ಮುಂದಿರುವುದನ್ನು ನೀವು ಒಪ್ಪುತ್ತೀರಾ ಎಂಬ ಪ್ರಶ್ನೆಗೆ, ಸಾಮಾಜಿಕ ಮಾಧ್ಯಮವು ಪಕ್ಷಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಗಮನ ಕೊಡುತ್ತದೆ. ಅದು ನಿರಂತರವಾಗಿ ಸಂವಹನ ಮಾಡುವ ಮಾಧ್ಯಮ. ಅದು ಅಂತ್ಯಗೊಳ್ಳವುದೂ ಇಲ್ಲ. ಇದನ್ನು ಬಿಜೆಪಿ ಯಥಾವತ್ತಾಗಿ ಅನುಸರಿಸಿಕೊಂಡು ಬಂದಿದೆ. ತಮ್ಮ ಪಕ್ಷದ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಹಂಚಿಕೊಳ್ಳಲು ಮಾತ್ರವೇ ಬಿಜೆಪಿ ಬಯಸುತ್ತದೆ. ಸಮಾಜದ ಎಲ್ಲಾ ವಿಭಾಗಗಳ ನಡುವೆಯೂ ಕೇಡರ್ ಬೇಸ್ ಮತ್ತು ಆಳವಾದ ಕಾರ್ಯಕ್ರಮಗಳು ನಮ್ಮ ಸಾಮಾಜಿಕ ಮಾಧ್ಯಮದ ಪ್ರಚಾರದ ಶಕ್ತಿಯನ್ನು ನೀಡುತ್ತದೆ.
ಬಿಜೆಪಿ ಟ್ವಿಟರ್ ನಿರ್ವಾಹಕರಿಗೆ ಯಾವ ರೀತಿ ಪ್ರಾಮುಖ್ಯತೆಯನ್ನು ನೀಡಲಾಗಿದೆ? ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಯಶಸ್ಸು ಇದು ಎರಡು ರೀತಿಯಲ್ಲಿ ಸಂವಹನ ಮಾಧ್ಯಮವಾಗಿದೆ. ನಾವು ನಿರಂತರವಾಗಿ ಹೇಳುತ್ತಿರುವುದನ್ನು ಕೇಳುತ್ತೇವೆ. ಪ್ರದಾನ ಮಂತ್ರಿಯ ಮನ್‍ಕೀ ಬಾತ್‍ನ ಹಲವು ಸಲಹೆಗಳನ್ನು ಸಾಮಾಜಿಕ ಮಾಧ್ಯಮದಿಂದ ಪಡೆಯಲಾಗಿದೆ. ಕೇವಲ ಇದಲ್ಲದೆ ನೋಟು ಅಪನಗದೀಕರಣ ಮತ್ತು ಜಿಎಸ್‍ಟಿಗಳ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಮಾಜಿಕ ಮಾಧ್ಯಮ ಸಹಕಾರಿಯಾಗಿದೆ. ಇದು ಮುಕ್ತ ಮತ್ತು ಸೂಕ್ಷ್ಮ ಸರಕಾರದ ಮುಖ್ಯ ಲಕ್ಷಣವಾಗಿದೆ.

ವಿಶ್ವದ ಅತೀದೊಡ್ಡ ರಾಜಕೀಯ ಪಕ್ಷದ ಐಟಿ ತಂಡವನ್ನು ಮುನ್ನಡೆಸುವ ದೊಡ್ಡ ಸವಾಲು ಯಾವುದು?
ಸಾಮಾಜಿಕ ಮಾಧ್ಯಮವು ನಮ್ಮ ಸಂವಹನ ಸಾಮಥ್ರ್ಯವನ್ನು ವಿಸ್ತರಿಸಿದೆಯಾದರೂ, ಹಲವಾರು ಸಮನಾಂತರ ಮಾತುಕತೆಗಳು ಕೆಲವೊಮ್ಮೆ ಅಸಂಬದ್ಧವಾಗಿದ್ದು, ಜನರಿಗೆ ಕೇಳಲು ಕಷ್ಟವಾಗುತ್ತದೆ. ಇಂತಹ ವಿಷಗಳನ್ನು ನಾವು ಸರಿ ಮಾಡಬೇಕಿದೆ ಎಂದಿದ್ದಾರೆ. ವಿಶ್ವದ ಅತೀ ದೊಡ್ಡ ಪಕ್ಷದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಾಹಿತಿಯ ಗುಣಮಟ್ಟವನ್ನು, ವೈವಿದ್ಯತೆಯ ಸುಧಾರಣೆಯನ್ನು ತರಲು ನೋಡುತ್ತೇನೆ ಎಂದು ಹೇಳುತ್ತಾರೆ. ನಮ್ಮ ಪ್ರಯತ್ನದಿಂದ ನಾವು ಸಾಕಷ್ಟು ಯಶಸ್ಸನ್ನು ಪಡೆದಿದ್ದೇವೆ ನಮ್ಮ ಸಾಮಾಜಿಕ ವಾಹಿನಿಗಳು ಕಳೆದ ಎರಡು ವರ್ಷಗಳಲ್ಲಿ ಚಂದಾದಾರಿಕೆಯಲ್ಲಿ ಘಾತೀಯ ಏರಿಕೆ ಕಂಡಿದೆ. ನಾವು ಸುಮಾರು 1.4 ಕೋಟಿ ಸದಸ್ಯರ ಪ್ರಬಲ ಫೇಸ್‍ಬುಕ್ ಸಮುದಾಯವನ್ನು ಹೊಂದಿದ್ದೇವೆ ಮತ್ತು ಟ್ವಿಟರ್‍ನಲ್ಲಿ 70 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದೇವೆ. ಬಿಜೆಪಿ ಲೈವ್, ಅಂತರ್ಜಾಲ ಟಿವಿ ಪ್ರತೀವರ್ಷ ಸುಮಾರು 8 ಕೋಟಿ ವೀಕ್ಷಣೆಗಳನ್ನು ಹೊಂದಿದ್ದೇವೆ ಇದು ಗಮನಾರ್ಹ ಸಂಖ್ಯೆಯಲ್ಲಿವೆ.

2014 ಸಾರ್ವತ್ರಿಕ ಚುನಾವಣೆಯಲ್ಲಿ ಏನಾಯಿತು ಎಂಬುವುದನ್ನು ಪುನರಾವರ್ತಿಸಲು ಐಟಿ ಸೆಲ್ ಅನ್ನು ಹೇಗೆ ಬಳಸುವುದು ಎಂಬುವುದರ ಕುರಿತು ನಿಮ್ಮ ಭವಿಷ್ಯದ ಯೋಜನೆ ಏನು? 2014 ರಲ್ಲಿ ಬಳಸಿದ ಸಾಮಾಜಿಕ ಮಾಧ್ಯಮ , ವ್ಯಾಟ್ಸಾಪ್ ಮತ್ತು ಫೇಸ್ಬುಕ್ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಪ್ರಚಾರಕ್ಕಾಗಿ ವ್ಯಾಪಕವಾಗಿ ಬಳಸಲ್ಪಟ್ಟಾಗ ಬದಲಾಯಿಸಲ್ಪಟ್ಟ ಅಥವಾ ಮಾರ್ಪಾಡಿಸಬೇಕಾಗಿತ್ತು ಎಂದು ನೀವು ಭಾವಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದು
2019ರ ನಮ್ಮ ತಂತ್ರಗಾರಿಕೆಯ ಯಾವುದೇ ವಿಷಯವನ್ನು ಬಹಿರಂಗಪಡಿಸಲು ನಾವು ಇಚ್ಚಿಸುದಿಲ್ಲ. 2014ರ ವಿಷಯ ಮತ್ತು ವಿತರಣೆಯ ವಿಷಯದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಇದೆ ಎಂಬುವುದನ್ನು ಮಾತ್ರ ಬಹಿರಂಗಪಡಿಸಿದರು. ಪ್ರಧಾನ ಮಂತ್ರಿಯವರ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನವನ್ನು ಪಡೆಯುದಕ್ಕೋಸ್ಕರ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮುಖಾಂತರ ಭಾರತವನ್ನು ಅಭಿವೃದ್ಧಿ ತರಲು ಶ್ರಮಿಸುತ್ತಿದ್ದಾರೆ.

source:http://www.sundayguardianlive.com/news/11348-social-media-will-impact-around-350-ls-seats-2019-bjp-s-malviya

-ಪವಿತ್ರ

Editor Postcard Kannada:
Related Post