X
    Categories: ಅಂಕಣ

26/11ರ ದಾಳಿಯ ವೇಳೆ ಬರೋಬ್ಬರಿ 500ಕ್ಕೂ ಅಧಿಕ ಮಂದಿಯ ಜೀವವನ್ನು ಉಳಿಸಿದ ಈ ಶ್ವಾನದ ರೋಚಕ ಕಥೆ ಗೊತ್ತೇ?!

2008ರ ನವೆಂಬರ್ 26 ಭಾರತದ ಪಾಲಿಗೆ ಒಂದು ಕಪ್ಪುಚುಕ್ಕೆ. ಅದೇ ದಿನ ಪಾಕಿಸ್ತಾನ ಮೂಲದ ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ
ಲಷ್ಕರ್-ಎ-ತೊಯ್ಬಾದ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದಲ್ಲದೆ ಸತತ ಮೂರು ದಿನಗಳ ಕಾಲ
ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬು ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವನ ಹಾಗು ಅಪಾರ ಆಸ್ತಿ-ಪಾಸ್ತಿ ನಷ್ಟಗಳಿಗೆ ಕಾರಣರಾದರು. ಮುಂಬಯಿ ಮಹಾನಗರ ಮೂರು ದಿನಗಳ ಕಾಲ ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಸಿಲುಕಿ ಅಕ್ಷರಶಃ ನರಕ ದರ್ಶನ ಮಾಡಿತು. ದಾಳಿ ಮುಗಿದು ಎಲ್ಲ ಉಗ್ರರನ್ನು ಭಾರತದ ಸೇನೆ ಹಾಗು ದೇಶದ ಆಂತರಿಕ ಪೆÇೀಲಿಸ್ ಪಡೆ ಹತ್ಯೆ ಮಾಡಿತು. ಅದರಲ್ಲಿ ಒಬ್ಬ ಉಗ್ರ ಅಜ್ಮಲ್ ಕಸಬ್‍ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸಫಲವಾಯಿತು.

2008ರ ನವೆಂಬರ್ 26ರಂದು ಆರಂಭವಾದ ದಾಳಿ 29ರ ಶನಿವಾರದವರೆಗೂ ಬಿರುಸಾಗಿ ನಡೆಯಿತು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬಯಿಗೆ ಧಾವಿಸಿ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮೊದಲಾಯಿತು. ದಾಳಿಯ ಫಲವಾಗಿ ಸರ್ಕಾರಿ ಅಧಿಕಾರಿಗಳೂ, ಸಿಪಾಯಿಗಳು, ಸಾರ್ವಜನಿಕರೂ ಸೇರಿದಂತೆ 164 ಜನ ಪ್ರಾಣ ಕಳೆದುಕೊಂಡರು ಹಾಗೂ 400ಕ್ಕೂ ಮಿಗಿಲಾಗಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದರು. ಈ ಮಧ್ಯೆ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ತಾನೇ ಹೊತ್ತುಕೊಂಡಿತು.

ದಕ್ಷಿಣ ಮುಂಬಯಿನ ಎಂಟು ವಿವಿಧ ಸ್ಥಳಗಳಲ್ಲಿ ದಾಳಿಗಳು ನಡೆದವು. ಮುಂಬಯಿ ಹೃದಯ ಭಾಗವಾದ ಛತ್ರಪತಿ ಶಿವಾಜಿ ಟರ್ಮಿನಸ್, ಗಣ್ಯರು ಹಾಗು ವಿದೇಶಿಗಳು ಹೆಚ್ಚಾಗಿ ಇರುವಂತಹ ಒಬೆರಾಯ್ ಟ್ರೈಡೆಂಟ್, ವಿಶ್ವ ವಿಖ್ಯಾತ ತಾಜ್ ಹೋಟೆಲ್, ಲಿಯೋಪೆÇೀಲ್ಡ್ ಕೆಫೆ, ಕಾಮಾ ಹಾಸ್ಪಿಟಲ್, ನಾರಿಮನ್ ಹೌಸ್, ಮೆಟ್ರೋ ಸಿನೆಮಾ, ಸೆಂಟ್ ಕ್ಸೇವಿಯರ್ ಕಾಲೇಜು ದಾಳಿಗೆ ಸಾಕ್ಷಿಯಾದ ಸ್ಥಳಗಳು. ಮೇಜ್‍ಗಾವ್‍ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. 28ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೆÇೀಲಿಸರು ಹಾಗು ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಆದರೆ ತಾಜ್ ಹೋಟೆಲ್ ಒಳಗೆ ಅವಿತುಕೊಂಡು ನಿರಂತರವಾಗಿ ದಾಳಿ ಮಾಡುತ್ತಿದ್ದ ಉಗ್ರರನ್ನು ಸೆದೆ ಬಡಿಯಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ದೇಶದ ಇತರ ಸ್ಥಳಗಳಿಂದ ಮುಂಬಯಿಗೆ ರಾಷ್ಟ್ರೀಯ ಭದ್ರತಾಪಡೆಗಳನ್ನ ರವಾನಿಸಲಾಯಿತು. ನವೆಂಬರ್ 29ರ ದಿನಾಂತ್ಯ ದಷ್ಟರಲ್ಲಿ ಎಲ್ಲ ದಾಳಿಕೋರರನ್ನು ಕೊಂದು ಅಜ್ಮಲ್ ಕಸಬ್‍ನನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಸಫಲವಾಯಿತು. ಕೊನೆಗೆ ಈತನನ್ನು ಗಲ್ಲಿಗೇರಿಸಿ ಮುಗಿಸಲಾಯಿತು.

ಈ ಘಟನೆಯಲ್ಲಿ 166 ಮಂದಿ ಸಾವನ್ನಪ್ಪಿರುವುದು ಇಡೀ ದೇಶದ ಅಂತಃಕರಣವನ್ನೇ ಕಲಕಿ ಬಿಟ್ಟಿತು. ಆದರೆ ಈ ದಾಳಿಯಲ್ಲಿ ಇನ್ನಷ್ಟು ಮಂದಿ ಜೀವ ಹೋಗಬಹುದಿತ್ತು. ಸೈನಿಕರು ಹಾಗೂ ಪೊಲೀಸರು ಉಗ್ರರ ಗುಂಡಿಗೆ ಎದೆಯೊಡ್ಡಿ ಉಗ್ರರನ್ನು ಕೊಂದು ನಾಶಪಡಿಸಿ ನೂರಾರು ಮಂದಿಯ ಜೀವ ಉಳಿಸಲು ಹೇಗೆ ಕಾರಣರಾದರೋ ಅದೇ ರೀತಿ ಮಾನವನ ನಂಬಿಕಸ್ಥ ಪ್ರಾಣಿಯಾಗಿರುವ ಆ ಮಿಲಿಟರಿ ನಾಯಿಗಳೂ ಕೂಡಾ ನೂರಾರು ಮಂದಿಯ ಜೀವವನ್ನು ಉಳಿಸಲು ಕಾರಣವಾಯಿತು. ಹೌದು ಅದು ಕಥೆಯೇ ರೋಚಕ.

ಒಂದು ಕಟ್ಟಡವನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಅದರೊಳಗಡೆ ಎಲ್ಲೆಲ್ಲಾ ಬಾಂಬ್ ಹುದುಗಿಸಿಟ್ಟುಕೊಂಡಿದ್ದಾರೆ ಎನ್ನುವುದನ್ನು ಪತ್ತೆಹಚ್ಚುವುದು ಒಂದು ದೊಡ್ಡ ಸವಾಲಿನ ಕೆಲಸ. ಆ ಕೆಲಸಕ್ಕಾಗಿ ಮಿಲಿಟರಿ ಪಡೆಗಳು ಶ್ವಾನಗಳನ್ನು ಬಳಸುತ್ತಾರೆ. ಹೌದು ಈ ಶ್ವಾನ ಇಲ್ಲದೇ ಹೋಗಿದ್ದರೆ ಅದೆಷ್ಟು ಮಂದಿಯ ಜೀವ ಹೋಗುತ್ತಿತ್ತೋ ಏನೋ. ದೇಶದ ಸೈನಿಕನಂತೆಯೇ ತನ್ನ ಪ್ರಾಣದ ಹಂಗುತೊರೆದ ಆ ಮುಗ್ಧ ಜೀವಿ ನಾಯಿ ಪ್ರತಿಫಲಾಪೇಕ್ಷೆ ಇಲ್ಲದೆ ಉಗ್ರರು ಹುದುಗಿಸಿಟ್ಟಿದ್ದ ಬಾಂಬ್‍ಗಳನ್ನು ಪತ್ತೆಹಚ್ಚಿ ನೂರಾರು ಮಂದಿಯ ಜೀವ ಉಳಿಯಲು ಕಾರಣವಾಯಿತು.

ಹೌದು!! ಅಂದಿನ ವಿಷಘಳಿಗೆಯಲ್ಲಿ ಬಾಂಬ್ ಪತ್ತೆ ಹಚ್ಚುವ ಕೆಲವನ್ನು ವಹಿಸಿಕೊಂಡ ಸೇನಾ ಪಡೆ ತಮ್ಮ ತಂಡದಲ್ಲಿ ಶ್ವಾನಗಳನ್ನು ಬಳಸಿಕೊಂಡಿತು. ಈ ಶ್ವಾನ
ತಂಡದಲ್ಲಿ ಟೈಗರ್, ಮ್ಯಾಕ್ಸ್, ಸುಲ್ತಾನ್ ಮತ್ತು ಸೀಸರ್ ಇದ್ದವು. ಈ ನಾಲ್ಕೂ ಶ್ವಾನಗಳು ಬಾಂಬ್ ಪತ್ತೆಹಚ್ಚಿ ಹಲವರ ಜೀವ ಉಳಿಸಿಕೊಂಡವು. ಈ ಪೈಕಿ ಸೀಸರ್ ಎನ್ನುವ ಶ್ವಾನದ ಧೈರ್ಯ, ಸಾಹಸವನ್ನು ಇಡೀ ವಿಶ್ವವೇ ಕೊಂಡಾಡಿತು. ಆದರೆ ಟೈಗರ್, ಮ್ಯಾಕ್ಸ್ ಮತ್ತು ಸುಲ್ತಾನ್ ಮುಂಚೆಯೇ ಮೃತಪಟ್ಟಿದ್ದರೆ ಸೀಸರ್ ಮಾತ್ರ ಕಳೆದ ವರ್ಷ ಅಕ್ಟೋಬರ್‍ವರೆಗೆ ಉಳಿದುಕೊಂಡಿತ್ತು.

ಚಿನ್ನದ ಬಣ್ಣದ ಲಾಬಾರ್ಡರ್ ತಳಿಗೆ ಸೇರಿದ ಸೀಸರ್ ಮನುಷ್ಯನನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಲ್ಲ ಬುದ್ಧಿವಂತ ನಾಯಿ. ಇವನಿಗೆ ಸೀಸರ್ ಎಂದು
ಹೆಸರಿಡಲಾಗಿತ್ತು. ಸಂತೋಷ್ ಎನ್ನುವವರು 2004ರಲ್ಲಿ ಮೂರು ತಿಂಗಳ ಸೀಸರ್‍ನನ್ನು ಖರೀದಿ ಮಾಡಿ ಒಂಬತ್ತು ತಿಂಗಳ ಕಾಲ ತರಬೇತಿ ನೀಡಿದ್ದು, ಮಹಾರಾಷ್ಟ್ರಾದ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಲಾಗಿತ್ತು.

ಮುಂಬೈ ಉಗ್ರರ ದಾಳಿ ನಡೆಸಿದಾಗ ಸೀಸರ್‍ನನ್ನು ಬಾಂಬ್ ಪತ್ತೆಹಚ್ಚಿಕೊಳ್ಳಲು ಬಳಕೆ ಮಾಡಿಕೊಳ್ಳಲಾಯಿತು. ಫೀಲ್ಡಿಗಿಳಿದ ಸೀಸರ್ ಎಲ್ಲವನ್ನೂ ಅರ್ಥ
ಮಾಡಿಕೊಂಡವನಂತೆ ಉಗ್ರರು ಅಡಗಿಸಿಟ್ಟಿದ್ದ 12ಕ್ಕೂ ಹೆಚ್ಚು ಸಜೀವ ಗ್ರೆನೇಡ್ ಹಾಗೂ ಉಗ್ರರ ಬಾಂಬುಗಳನ್ನು ಪ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದ. ಮಹಾರಾಷ್ಟ್ರ
ಪೊಲೀಸ್ ಇಲಾಖೆ ಇತ್ತೀಚೆಗೆ ನೀಡಿದ ಮಾಹಿತಿಯ ಪ್ರಕಾರ ಸೀಸರ್‍ನ ಈ ಕೆಲಸದಿಂದಾಗಿ ಬರೋಬ್ಬರಿ 500 ಮಂದಿಯ ಪ್ರಾಣ ಉಳಿದುಕೊಂಡಿತ್ತು. ದಾದರ್‍ನ ಹೂವಿನ ಮಾರುಕಟ್ಟೆಯಲ್ಲಿರುವ ಸಜೀವ ಬಾಂಬನ್ನು ಪತ್ತೆಹಚ್ಚುವಲ್ಲಿಯೂ ಸೀಸರ್ ಯಶಸ್ವಿಯಾಗಿದ್ದ. ಸೀಸರ್ ಮುಂಬೈನ ಜನನಿಬಿಡ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದಲ್ಲಿ ಎರಡು ಹ್ಯಾಂಡ್ ಗ್ರೆನೇಡ್ ಪತ್ತೆ ಹಚ್ಚಿ ನೂರಾರು ಜನರ ಪ್ರಾಣ ಉಳಿಸಿತ್ತು ಈ ಸೀಸರ್. ಅಷ್ಟೇ ಅಲ್ಲ ನಾರಿಮನ್ ಹೌಸ್‍ನಲ್ಲಿಯೂ ಬಾಂಬ್ ತಪಾಸಣಾ ತಂಡದಲ್ಲಿತ್ತು. 2006ರಲ್ಲಿಯೂ ಬಾಂಬ್ ತಪಾಸಣಾ ತಂಡದಲ್ಲಿ ಸೇವೆ ಸಲ್ಲಿಸಿತ್ತು.

2013ರವರೆಗೆ ಸೇವೆ ಸಲ್ಲಿಸಿದ್ದ ಸೀಸರ್ 2013ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ. ಆದರೆ ಟೈಗರ್, ಮ್ಯಾಕ್ಸ್ ಮತ್ತು ಸುಲ್ತಾನ್ ಅಗಲಿಕೆಯ ನೋವಿನಿಂದ
ಸೀಸರ್ ಕಂಗಾಲಾಗಿದ್ದ. ಕಾಲುಗಂಟು ನೋವಿಗೊಳಗಾಗಿದ್ದ ಸೀಸರ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿದ್ದರೂ ಫಲನೀಡಿರಲಿಲ್ಲ. ಜೊತೆಗೆ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸೀಸರ್ ಹೃದಯಾಘಾತದಿಂದ ಮುಂಬೈನ ವಿರಾರ್ ಫಾರ್ಮ್‍ನಲ್ಲಿ 2016ರ ಅಕ್ಟೋಬರ್ 16ರಂದು ಮೃತಪಟ್ಟಿದ್ದ.

ಈತನ ಪಾರ್ಥೀವ ಶರೀರಕ್ಕೆ ಸಕಲ ಸರಕಾರಿ ಮರ್ಯಾದೆಗಳಿಂದ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಹೀರೋ ಸೀಸರ್ ಸಾವಿನ ಸುದ್ದಿಯನ್ನು ಮುಂಬೈ ಪೆÇಲೀಸ್ ಕಮಿಷನರ್ ಟ್ವೀಟ್ ಮಾಡಿದ್ದು, ಸೀಸರ್‍ಗೆ ತ್ರಿವರ್ಣ ಧ್ವಜ ಸುತ್ತಿ ಸಕಲ ಗೌರವದೊಂದಿಗೆ ಭಾವಪೂರ್ಣ ವಿದಾಯವನ್ನು ಸಲ್ಲಿಸಲಾಯಿತು. ಸೀಸರ್‍ನ ಗೌರವಾರ್ಥ ಶೋಕಾಚರಣೆ ಹೊರಡಿಸಲಾಗಿತ್ತು. ಈ ವೇಳೆ ನೆರೆದಿದ್ದ ಸೈನಿಕರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸೀಸರ್ ಹೃದಯಾಘಾತದಿಂದ ಮುಂಬೈನ ವಿರಾರ್ ಫಾರ್ಮ್‍ನಲ್ಲಿ ಸಾವನ್ನಪ್ಪಿರುವುದಾಗಿ ಟ್ವೀಟ್‍ನಲ್ಲಿ ತಿಳಿಸಿದ್ದರು.

ಸೀಸರ್‍ನ ಸಮಯೋಚಿತ ಬುದ್ಧಿವಂತಿಕೆಯಿಂದಾಗಿ ನೂರಾರು ಮಂದಿಯ ಪ್ರಾಣ ಉಳಿದುಕೊಂಡಿತು. ಹೇಳಿದ ಕೆಲಸವನ್ನು ಚಾಚೂ ತಪ್ಪದಂತೆ ಸ್ವತಃ ತಾನೇ ಎಲ್ಲವನ್ನೂ ಅರ್ಥೈಸಿಕೊಂಡಂತೆ ಮನುಷ್ಯನಂತೆಯೇ ಕೆಲಸ ಮಾಡುತ್ತಿತ್ತು. ಮಾತೊಂದು ಬಿಟ್ಟರೆ ಥೇಟ್ ಮನುಷ್ಯನಂತೆಯೇ ಭಾವನೆಗಳನ್ನು ಹೊಂದಿದ್ದ ಸೀಸರ್ ಸೇನಾಪಡೆಯಲ್ಲಿ ಅಚ್ಚುಮೆಚ್ಚಿನ ನಾಯಿಯಾಗಿತ್ತು. ಇಂದು ಸೀಸರ್‍ನಂತೆಯೇ ಹಲವಾರು ಶ್ವಾನಗಳು ಸೇನಾಪಡೆ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಇದೆ. ಇಂಥಹಾ ಮೂಖಜೀವಿಗಳು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟಿವೆ.

ಸೀಸರ್, ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಶ್ವಾನಗಳಿಗೆ ನಾವೆಲ್ಲರೂ ಕೃತಜ್ಞರಾಗಿರೋಣ!!

-ಚೇಕಿತಾನ

Editor Postcard Kannada:
Related Post